ಸದ್ಗುರುಗಳು ಯೋಗಾಭ್ಯಾಸದ ಸಮಯದಲ್ಲಿ ಸರಿಯಾದ ರೀತಿಯ ಬಟ್ಟೆಯನ್ನು ಧರಿಸುವ ಪ್ರಾಮುಖ್ಯತೆಯನ್ನು ಮತ್ತು ಆ ಸಮಯದಲ್ಲಿ ದೇಹದ ಮೇಲೆ ಲೋಹದ ವಸ್ತುಗಳನ್ನು ಏಕೆ ಧರಿಸಬಾರದು ಎಂಬುದನ್ನು ವಿವರಿಸುತ್ತಾರೆ.

ಸದ್ಗುರು: ನಾನು ಚಿಕ್ಕ ವಯಸ್ಸಿನಲ್ಲಿ ಹಠಯೋಗವನ್ನು ಅಭ್ಯಾಸ ಮಾಡುವಾಗ, ಸಣ್ಣ ಲಂಗೋಟಿಯನ್ನು ಬಿಟ್ಟರೆ ನಮಗೆ ಬೇರಾವ ಬಟ್ಟೆಯನ್ನೂ ಧರಿಸಲು ಅವಕಾಶವಿರಲಿಲ್ಲ. ಇದರ ಹಿಂದಿನ ಉದ್ದೇಶವೆಂದರೆ ನಾವು ಅಭ್ಯಾಸ ಮಾಡುವ ಸಮಯದಲ್ಲಿ ಸಾಧ್ಯವಾದಷ್ಟು ಕಡಿಮೆ ಅಡಚಣೆ ಇರಬೇಕು ಎಂಬುದಾಗಿತ್ತು. ಭಾರತದಲ್ಲಿ ಜನರು ಸಾಂಪ್ರದಾಯಿಕವಾಗಿ ಹೊಲಿದ ಬಟ್ಟೆಗಳನ್ನು ಧರಿಸುತ್ತಿರಲಿಲ್ಲ. ಪುರುಷರ ಪಂಚೆ ಮತ್ತು ಮಹಿಳೆಯರ ಸೀರೆ, ಎರಡೂ ಯಾವ ರೀತಿಯೂ ಹೊಲಿಯದ ಬಟ್ಟೆಗಳು. ಬಟ್ಟೆಗಳನ್ನು ಹೊಲಿದಾಗ, ಶಕ್ತಿಯ ಚಲನೆಯನ್ನು ಸ್ವಲ್ಪ ಮಟ್ಟಿಗೆ ನಿರ್ಬಂಧಿಸಲಾಗುತ್ತದೆ - ಆದ್ದರಿಂದ ಸಾಧನೆ ಮಾಡುವಾಗ ನೀವು ಅದನ್ನು ಕಡಿಮೆ ಮಾಡಲು ಬಯಸುತ್ತೀರಿ. ಹಾಗೆಂದು ನೀವು ಲಂಗೋಟಿಯನ್ನು ಧರಿಸಲು ಪ್ರಾರಂಭಿಸಬೇಕು ಅಂದು ಅರ್ಥವಲ್ಲ, ಆದರೆ ಯೋಗಾಭ್ಯಾಸ ಮಾಡುವವರು ಕ್ರೀಡಾಪಟುಗಳು ಧರಿಸುವಂತಹ ಕೃತಕವಾಗಿ ಸಂಶ್ಲೇಷಿತ(ಸಿಂಥೆಟಿಕ್) ಉಡುಪುಗಳನ್ನು ಧರಿಸಬಾರದು. ನಿಮ್ಮ ಉಡುಪು ಹತ್ತಿ ಅಥವಾ ಕಚ್ಚಾ ರೇಷ್ಮೆಯಂತೆ ಸಾವಯವವಾಗಿದ್ದರೆ ಅದು ಉತ್ತಮ. ಸಾವಯವ ಕಚ್ಚಾ ರೇಷ್ಮೆ ತುಂಬಾ ದುಬಾರಿಯಾಗಬಹುದು ಮತ್ತು ಪಡೆಯಲು ಕಷ್ಟವಾಗಬಹುದು, ಸಾವಯವ ಹತ್ತಿ ಅತ್ಯುತ್ತಮ ಆಯ್ಕೆಯಾಗಿದೆ. ಉಣ್ಣೆ ಕೂಡ ಧರಿಸಬಹುದು.

ನಿಮ್ಮ ಯೋಗಸಾಧನೆಯನ್ನು ಪ್ರಾರಂಭಿಸುವ ಮೊದಲು, ನಿಮ್ಮ ದೇಹದಲ್ಲಿ ಧರಿಸಿದಂತಹ ಯಾವುದೇ ವಸ್ತುಗಳನ್ನು, ವಿಶೇಷವಾಗಿ ಲೋಹದ ವಸ್ತುವನ್ನು ತೆಗೆದುಹಾಕಬೇಕು. ನೀವು ವಿದ್ಯುತ್ಕಾಂತೀಯ ತರಂಗಗಳ ಚಿತ್ರವನ್ನು ತೆಗೆದು ನೋಡಿದರೆ, ಒಂದು ಸಣ್ಣ ವಸ್ತುವೂ ಸಹ ತನ್ನ ಸುತ್ತಲೂ ಒಂದು ನಿರ್ದಿಷ್ಟ ಪರಿಚಲನೆಯನ್ನು ಸೃಷ್ಟಿಸುತ್ತದೆ. ನಿಮ್ಮ ದೇಹದ ಮೇಲೆ ನೀವು ಯಾವುದಾದರೂ ವಸ್ತುವನ್ನು ಧರಿಸಿದ್ದರೆ, ಅದು ಶಕ್ತಿಯ ಮುಕ್ತ ಚಲನೆಯಲ್ಲಿ ತೊಂದರೆಯುಂಟು ಮಾಡುತ್ತದೆ. ಕಿವಿಯೆಲುಬಿನಂತಹ ಸುಪ್ತವಾಗಿರುವ ದೇಹದ ಕೆಲವು ಭಾಗಗಳನ್ನು ಹೊರತುಪಡಿಸಿ, ಯಾವುದೇ ರೀತಿಯ ಲೋಹವನ್ನು ತೆಗೆದುಹಾಕಬೇಕು – ಮೂಗುತಿಯನ್ನೂ ಸಹ. ನಿಮ್ಮ ರುದ್ರಾಕ್ಷ ಮಾಲೆ ಮತ್ತು ಈಶಾದ ಹಾವಿನ ಉಂಗುರ ಮಾತ್ರ ನೀವು ಧರಿಸಬಹುದು. ರುದ್ರಾಕ್ಷ ಉತ್ತಮ ಬೆಂಬಲವಾಗಿದ್ದು ಅದು ನಿಮ್ಮ ಸ್ವಂತ ಶಕ್ತಿಯ ಒಂದು ಗೂಡನ್ನು ರಚಿಸುತ್ತದೆ ಮತ್ತು ನಿಮ್ಮನ್ನು ಅನುಗ್ರಹಕ್ಕೆ ಲಭ್ಯವಾಗಿಸುತ್ತದೆ. ಹಾವಿನ ಉಂಗುರ ಏಕೆಂದರೆ ನೀವು ಕೆಲವು ಸಾಧನೆ ಮಾಡುವಾಗ ಆಕಸ್ಮಿಕವಾಗಿ(ಲಕ್ಷದಲ್ಲಿ ಒಂದು) ನಿಮ್ಮ ದೇಹದಿಂದ ಜಾರಿಹೋಗುವ ಸಾಧ್ಯತೆಯನ್ನು ಇದು ತಡೆಯುತ್ತದೆ. ಮಹಿಳೆಯರು, ನಿಮ್ಮ ಬೆನ್ನುಮೂಳೆಯ ಮೇಲೆ ನೀವು ಯಾವುದೇ ರೀತಿಯ ಲೋಹದ ಕ್ಲಿಪ್ ಗಳನ್ನು ಬಳಸುತ್ತಿದ್ದರೆ, ಅದನ್ನು ತೆಗೆಯಬೇಕು. ಶಕ್ತಿಯ ದೃಷ್ಟಿಯಿಂದ ನೋಡಿದರೆ, ಲೋಹಕ್ಕಿಂತ ಪ್ಲಾಸ್ಟಿಕ್ ಬಳಕೆ ಉತ್ತಮ.

ಅಭ್ಯಾಸ ಮಾಡುವ ಸಮಯದಲ್ಲಿ, ನಿಮ್ಮ ಕನ್ನಡಕವನ್ನು ಸಹ ನೀವು ತೆಗೆಯಬೇಕು. ಸರಿಯಾದ ಯೋಗಾಭ್ಯಾಸದ ಮೂಲಕ ಅನೇಕ ಜನರು ತಮ್ಮ ಕನ್ನಡಕದ ಅವಶ್ಯಕತೆಯನ್ನು ತೊಡೆದುಹಾಕಿದ್ದಾರೆ. ನಿಮ್ಮ ದೃಷ್ಟಿ ತನ್ನಿಂತಾನೇ ಸರಿಹೊಂದಲು, ನೀವು ಸ್ವಲ್ಪ ಸಮಯದವರೆಗೆ ಕನ್ನಡಕ ಅಥವಾ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸುವುದನ್ನು ತಪ್ಪಿಸಬೇಕು. ನೀವು ಕನ್ನಡಕ ಅಥವಾ ಕಾಂಟ್ಯಾಕ್ಟ್ ಲೆನ್ಸ್ ಇಲ್ಲದೆಯೂ ನಿರ್ವಹಿಸಬಹುದಾದರೆ, ಹಾಗೆ ಮಾಡಲು ಪ್ರಯತ್ನಿಸಿ. ನಿಮಗೆ ತಲೆನೋವು ಬಂದರೆ, ಕಣ್ಣು ಮುಚ್ಚಿ ಹೆಚ್ಚು ಸಮಯ ಕಳೆಯಿರಿ. ನೀವು ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಬಳಸುತ್ತಿದ್ದರೆ, ಕನಿಷ್ಠ ನಿಮ್ಮ ಬೆಳಿಗಿನ ಸಾಧನೆಯಲ್ಲಿ ಅದನ್ನು ತೆಗೆದು ಅಭ್ಯಾಸ ಮಾಡಿರಿ. ಆ ರೀತಿಯಲ್ಲಿ, ಸ್ವಲ್ಪ ಸಮಯದವರೆಗೆ ಸಣ್ಣ ಪ್ರಮಾಣದ ದೃಷ್ಟಿ ಸಮಸ್ಯೆಗಳು ಸುಧಾರಿಸಬಹುದು.

Editor’s Note: Isha Hatha Yoga programs are an extensive exploration of classical hatha yoga, which revive various dimensions of this ancient science that are largely absent in the world today. These programs offer an unparalleled opportunity to explore Upa-yoga, Angamardana, Surya Kriya, Surya Shakti, Yogasanas and Bhuta Shuddhi, among other potent yogic practices.

Find Hatha Yoga Program Near You