Login | Sign Up
logo
Donate
search
Login|Sign Up
Country
  • Sadhguru Exclusive

ಅನುಗ್ರಹ

Want to get a fresh perspective on ಅನುಗ್ರಹ? Explore Sadhguru’s wisdom and insights through articles, videos, quotes, podcasts and more.

video  
ಇದು ನೀವು ಸಾವನ್ನು ನೋಡುವ ರೀತಿಯನ್ನೇ ಬದಲಿಸಬಹುದು | ಸದ್ಗುರು ಕನ್ನಡ | Sadhguru Kannada
Nov 15, 2022
Loading...
Loading...
video  
ಸದ್ಗುರುಗಳು ಇಲ್ಲಿ ಶ್ರೀರಾಮ ಮತ್ತು ಯೇಸುವಿನ ಗುಣಗಳಲ್ಲಿರುವ ಸಾಮ್ಯತೆಯನ್ನೂ, ಅವರುಗಳು ಯಾಕೆ ಇಂದಿಗೂ ಅತ್ಯಂತ ಸಂಗತರಾಗಿದ್ದಾರೆ ಎಂಬುದನ್ನೂ ತೋರಿಸುತ್ತಾರೆ. ನಾವು ಇವರನ್ನು ಮಹಾನ್ ಎಂದು ಪರಿಗಣಿಸಿ ಪೂಜಿಸುವುದು ಅವರು ಅಂದಿನ ಮಹಾ ಯಶಸ್ವೀ ವ್ಯಕ್ತಿಗಳು ಎಂದೇನೂ ಅಲ್ಲ, ಆದರೆ ಅವರು ತಮ್ಮ ಜೀವನದಲ್ಲಿ ದುರಂತಗಳ ಮೇಲೆ ದುರಂತಗಳು ಬಂದರೂ ಅವನ್ನು ಮೀರಿ ನಿಂತಿದ್ದರು, ಮತ್ತು ತಮ್ಮ ಸ್ಥಿರತೆಯನ್ನು, ಸಮತ್ವವನ್ನು ಕಳೆದುಕೊಳ್ಳಲಿಲ್ಲ ಎಂಬುದಕ್ಕಾಗಿ. ಆದ್ದರಿಂದ ಅವರು ನಿಜವಾಗಿ ಇದ್ದರೋ ಇಲ್ಲವೋ ಎಂಬ ಇತಿಹಾಸಕಾರರ ಗೋಜಲಿಗೆ ಬೀಳದೆ ಅವರ ಜೀವನವನ್ನು ನಮಗೆ ಒಂದು ಪ್ರೇರಣೆಯನ್ನಾಗಿ ಮಾಡಿಕೊಂಡು ಅವರ ಗುಣಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಬೇಕು, ನಮಗೆ ಮುಖ್ಯವಾಗುವುದು ಅದಷ್ಟೆ ಎಂದು ಕಿವಿಮಾತು ಹೇಳುತ್ತಾರೆ.
Jul 10, 2022
Loading...
Loading...
video  
ಮುಂಬರುವ ಶಿವಾಂಗ ಸಾಧನೆಗೆ ದೀಕ್ಷೆ ಪಡೆದುಕೊಳ್ಳಿ ಮತ್ತು ಶಿವನ ಒಂದು ’ಅಂಗ’ವಾಗಿ. ಸರಳವೂ ಶಕ್ತಿಯುತವೂ ಆದ 42 ದಿನಗಳ ಸಾಧನೆ ಅಸ್ಥಿತ್ವದ ಆಂತರ್ಯವನ್ನೇ ಪರಿವರ್ತಿಸುತ್ತದೆ. ಜನವರಿ 10ರಂದು ದೀಕ್ಷೆ ಪಡೆದುಕೊಳ್ಳಿ ಮತ್ತು ಫೆಬ್ರವರಿ 21ರಂದು (ಮಹಾಶಿವರಾತ್ರಿ) ಸಮಾಪಣೆಯಲ್ಲಿ ನಮ್ಮೊಂದಿಗೆ ಕೂಡಿಕೊಳ್ಳಿ. ನೋಂದಾಯಿಸಲು http://isha.co/mN4A5B ಗೆ ಭೇಟಿ ನೀಡಿ. ಶಿವಾಂಗ ಎನ್ನುವುದು 42-ದಿನಗಳ ತೀವ್ರತರವಾದ ಸಾಧನೆಯ ಸಮಯವಾಗಿದ್ದು, ದೇಹ, ಮನಸ್ಸು ಮತ್ತು ಪ್ರಾಣಶಕ್ತಿಗಳಲ್ಲಿ ಹೆಚ್ಚಿನ ಮಟ್ಟದ ಅನುಭವವನ್ನು ಕಂಡುಕೊಳ್ಳುವ ಸಲುವಾಗಿ ರೂಪಿಸಲಾಗಿದೆ. ಈ ಸಾಧನೆಯು ಪೌರ್ಣಮಿಯಂದು ಪ್ರಾರಂಭಗೊಂಡು, ಶಿವರಾತ್ರಿಯ ದಿನದಂದು ದಕ್ಷಿಣ ಕೈಲಾಸವಾದ ’ವೆಳ್ಳಿಯಂಗಿರಿ’ ಬೆಟ್ಟದ ಯಾತ್ರೆಯಿಂದ ಹಿಂದುರುಗಿದ ನಂತರ ಸಮರ್ಪಣೆಯೊಂದಿಗೆ ಧ್ಯಾನಲಿಂಗದ ಸಮ್ಮುಖದಲ್ಲಿ ಸಮಾಪ್ತಿಯಾಗುವುದು.
Jul 7, 2022
Loading...
Loading...
video  
ಇಲ್ಲಿ ಸದ್ಗುರುಗಳು ವಿವರಿಸುವುದೇನೆಂದರೆ, ದೈವೀಕೃಪೆಯು ಎಲ್ಲಾ ಕಡೆ ಇದೆ. ಸಂಪೂರ್ಣವಾಗಿ ಗ್ರಹಣಶೀಲರಾಗಿರುವವರು ಅದನ್ನು ಅವರು ಎಲ್ಲಿದ್ದರೂ ಪಡೆದುಕೊಳ್ಳುವರು. ಅವರಿಗೆ ಒಂದು ಕಲ್ಲು ಕೂಡ ಗುರುವಾಗಬಹುದು. ಅಂತಹವರು ಅಪರೂಪ. ಆದರೆ ತಮ್ಮದೇ ಮನಸ್ಸಿನಿಂದ ತುಂಬಿ ಹೋಗಿರುವ ಹೆಚ್ಚಿನವರಿಗೆ ಈ ಸರ್ವವ್ಯಾಪೀ ದೈವತ್ವವು ಅನುಭವಕ್ಕೆ ಬರದಿರಬಹುದು. ಅವರಿಗೆ ಅನುಭವಕ್ಕೆ ಬರುವಂತೆ ಮಾಡಲು ಒಂದು ರೀತಿಯ ಶಕ್ತಿಸ್ಥಿತಿಯನ್ನು ಏರ್ಪಡಿಸಬೇಕಾಗುತ್ತದೆ. ಆದ್ದರಿಂದ ದೇವಸ್ಥಾನ, ಧ್ಯಾನ, ಜೀವಂತ ಗುರು ಇತ್ಯಾದಿಗಳು ಅವರಿಗೆ ಬೇಕಾಗುತ್ತವೆ. ಅದೂ ಅಲ್ಲದೆ ತಮ್ಮದೇ ಮನಸ್ಸಿನಿಂದ ತುಂಬಿಹೋಗಿರುವವರಿಗೆ ಅವರನ್ನು ಸತತವಾಗಿ ಸರಿದಾರಿಯಲ್ಲಿಡಲು ಅವರಿಗಿಂತ ಜಾಣ ಮನಸ್ಸು ಬೇಕು. ದೇಹತ್ಯಾಗ ಮಾಡಿರುವ ಗುರುವಿನೊಂದಿಗೆ ಅದು ಸಾಧ್ಯವಿಲ್ಲ. ಆದ್ದರಿಂದ ದೇಹತ್ಯಾಗ ಮಾಡಿದಂತಹ ಗುರುಗಳು ಅವರಿಗೆ ಒಂದು ಪ್ರೇರಣೆಯಾಗಬಹುದಷ್ಟೆ ಹೊರತು ಮಾರ್ಗದರ್ಶಕರಲ್ಲ.
Jul 5, 2022
Loading...
Loading...
 
Close