Main Centers
International Centers
India
USA
Wisdom
FILTERS:
SORT BY:
ನಿಮ್ಮ ಸ್ವಾಸ್ಥ್ಯ ಮತ್ತು ಅಸ್ವಾಸ್ಥ್ಯ, ನಿಮ್ಮ ಸಂತೋಷ ಮತ್ತು ತೊಳಲಾಟ, ಎಲ್ಲವೂ ಉಂಟಾಗುವುದು ಒಳಗಿನಿಂದ. ನಿಮಗೆ ಒಳಿತು ಬೇಕಿದ್ದರೆ ನೀವು ಅಂತರ್ಮುಖರಾಗಬೇಕು.
ಒಮ್ಮೆ ನೀವು ನಿಮ್ಮ ಚೇತನದ ಆಂತರ್ಯದ ಆನಂದವನ್ನು ಅನುಭವಿಸಿದರೆ, ಬಾಹ್ಯ ಸುಖಗಳು ಕ್ಷುಲ್ಲಕವೆನಿಸುತ್ತವೆ.
ನೀವು ಈ ವಿಶ್ವದಲ್ಲಿ ಒಂದು ಸಣ್ಣ ಕಣವಷ್ಟೆ.ಆದರೆ ಈ ಸಣ್ಣ ಕಣಕ್ಕೆ ಸಮಸ್ತ ಬ್ರಹ್ಮಾಂಡವನ್ನೇ ಒಳಗೂಡಿಸಿಕೊಳ್ಳುವ ಸಾಮರ್ಥ್ಯವಿದೆ.
ನಿಚ್ಚಳ ಸ್ಪಷ್ಟತೆಯಿದ್ದರೆ ಧೈರ್ಯದ ಅವಶ್ಯಕತೆಯಿಲ್ಲ. ಏಕೆಂದರೆ ಸ್ಪಷ್ಟತೆಯೇ ನಿಮ್ಮನ್ನು ಮುಂದೆ ಸಾಗಿಸುತ್ತದೆ.
ಜೀವನದಲ್ಲಿ ನಿಮಗೆ ಸಿಗಬಹುದಾದ ಅತ್ಯಂತ ದೊಡ್ಡ ಸಾರ್ಥಕತೆಯೆಂದರೆ ನಿಮಗಿಂತ ಎಷ್ಟೋ ಮಿಗಿಲಾದ ಒಂದು ವಿಷಯವನ್ನು ಮಾಡುವುದು.
ನಿಮ್ಮ ಸುತ್ತಲಿನ ಎಲ್ಲದರೊಂದಿಗೂ ನೀವು ಆಳವಾಗಿ, ಪ್ರಜ್ಞಾಪೂರ್ವಕವಾಗಿ ತೊಡಗಿದಾಗ, ಅದರಲ್ಲಿ ಯಾವ ರೀತಿಯ ಬಂಧನವೂ ಇರುವುದಿಲ್ಲ; ಕೇವಲ ಆನಂದವಷ್ಟೆ ಇರುತ್ತದೆ.
ಸಂತೋಷವನ್ನು ಹೊರಗಡೆ ಅರಸಬೇಕಾಗಿಲ್ಲ. ಅದು ಅಂತರ್ಗತವಾದುದು. ನೀವು ನಿಮ್ಮ ಮನಸ್ಸನ್ನು ಫಜೀತಿ ಮಾಡಿಕೊಳ್ಳದಿದ್ದರೆ, ನೀವು ಸ್ವಭಾವತಃ ಸಂತೋಷಭರಿತರಾಗಿರುತ್ತೀರಿ.
ಅಧ್ಯಾತ್ಮ ಎಂದರೆ ಬದುಕಿನಿಂದ ದೂರ ಸರಿಯುವುದಲ್ಲ. ಆಧ್ಯಾತ್ಮಿಕ ಪ್ರಕ್ರಿಯೆ ಎಂದರೆ ಬದುಕಿನ ಎಲ್ಲ ವಿಷಯಗಳನ್ನೂ ನಿಮ್ಮನ್ನು ಬಂಧಿಸಿಕೊಳ್ಳುವ ಬದಲಿಗೆ ನಿಮ್ಮನ್ನು ಮುಕ್ತಗೊಳಿಸಿಕೊಳ್ಳಲು ಬಳಸುವುದು.
ಕರ್ಮಸಂಚಯವಾಗುವುದು ನೀವು ಮಾಡುವ ಕಾರ್ಯದಿಂದಲ್ಲ, ಬದಲಿಗೆ ನಿಮ್ಮ ಸಂಕಲ್ಪಗಳಿಂದ. ಕರ್ಮವನ್ನು ಉಂಟುಮಾಡುವುದು ನೀವು ಏನು ಮಾಡುತ್ತೀರಿ ಎಂಬುದಲ್ಲ, ಬದಲಿಗೆ ಅದನ್ನು ಹೇಗೆ ಮಾಡುತ್ತೀರಿ ಎಂಬುದು.
ನೀವು ನಿಮ್ಮ ದೇಹ, ಮನಸ್ಸು, ಪ್ರಾಣಶಕ್ತಿ, ಮತ್ತು ಭಾವನೆಗಳನ್ನು ಒಂದು ಮಟ್ಟದ ಪ್ರಬುದ್ಧತೆಗೆ ತಂದರೆ, ಧ್ಯಾನವು ಸಹಜವಾಗಿಯೇ ಅರಳುತ್ತದೆ.
ಜೀವನದ ಸಂಪೂರ್ಣ ಆಳ ಮತ್ತು ಆಯಾಮಗಳನ್ನು ಅನುಭವಿಸುವುದೇ ಜೀವನದ ಉದ್ದೇಶ.
ಮನಸ್ಸಿನಲ್ಲಿ ನೀವು ಹುಟ್ಟಿಸುವ ಪ್ರತಿಯೊಂದು ಯೋಚನೆ, ಪ್ರತಿಯೊಂದು ಅನುರಣನೆಯೂ ನಿಮ್ಮ ದೇಹದ ರಾಸಾಯನಿಕ ಸ್ಥಿತಿಗತಿಯನ್ನು ಬದಲಿಸುತ್ತದೆ.