ಲಿಂಗ ಭೈರವಿಯೊಂದಿಗೆ ಚಾಂದ್ರಮಾನ/ಹಿಂದೂ ನವ ಸಂವತ್ಸರ ಸಂಭ್ರಮಾಚರಣೆ

ಏಪ್ರಿಲ್ 13,14 ಮತ್ತು 15 ರಂದು ಅರ್ಪಣೆಗಳನ್ನು ಸಲ್ಲಿಸಿ
ಏಪ್ರಿಲ್ 14 ಸಂಜೆ 7 ಗಂಟೆಗೆ ವೆಬ್ ನೇರಪ್ರಸಾರವನ್ನು ವೀಕ್ಷಿಸಿ
 

ಲಿಂಗ ಭೈರವಿಯೊಂದಿಗೆ ಚಾಂದ್ರಮಾನ/ಹಿಂದೂ ನವ ಸಂವತ್ಸರ ಸಂಭ್ರಮಾಚರಣೆ

ಏಪ್ರಿಲ್ 13,14 ಮತ್ತು 15 ರಂದು ಅರ್ಪಣೆಗಳನ್ನು ಸಲ್ಲಿಸಿ
ಏಪ್ರಿಲ್ 14 ಸಂಜೆ 7 ಗಂಟೆಗೆ ವೆಬ್ ನೇರಪ್ರಸಾರವನ್ನು ವೀಕ್ಷಿಸಿ
seperator
 

“ಚಾಂದ್ರಮಾನ ಪಂಚಾಂಗದ ಹೊಸ ವರ್ಷವನ್ನು ಜೀವನ ಚಕ್ರದ ಪುನರಾರಂಭ ಎಂದು ಪರಿಗಣಿಸಲಾಗುತ್ತದೆ. ನಮ್ಮಲ್ಲಿ ಸಮರ್ಪಣಾ ಭಾವ ಇದ್ದರೆ, ಜೀವನವನ್ನು ಹೊಸದಾದ ಚೈತನ್ಯ ಮತ್ತು ಹುರುಪಿನೊಂದಿಗೆ ಮುನ್ನಡೆಸಿಕೊಂಡು ಹೋಗುವುದು ಸುಲಭವಾಗುತ್ತದೆ. ವಸಂತದ ವಿಷುವತ್ಸಂಕ್ರಾಂತಿಯ ನಂತರದ ಅವಧಿಯು ದೇವಿ ಮತ್ತು ಅವಳ ಅನುಗ್ರಹವನ್ನು ಕಂಡುಕೊಳ್ಳಲು ಸೂಕ್ತವಾದ ಸಮಯವಾಗಿದೆ.
– ಸದ್ಗುರು

ಏಪ್ರಿಲ್ 14 ಸಂಜೆ 7 ಗಂಟೆಗೆ ವೆಬ್ ನೇರಪ್ರಸಾರವನ್ನು ವೀಕ್ಷಿಸಿವಿಶೇಷ ಅರ್ಪಣೆ ಮತ್ತು ದೇವಿ ಅಭಿಷೇಕದ ವೆಬ್ ನೇರಪ್ರಸಾರವನ್ನು ವೀಕ್ಷಿಸುವ ಮೂಲಕ ನಿಮ್ಮ ಸಮಗ್ರ ಯೋಗಕ್ಷೇಮಕ್ಕಾಗಿ ದೇವಿಯ ಅನುಗ್ರಹವನ್ನು ಕೋರುತ್ತಾ ಹೊಸ ವರ್ಷವನ್ನು ಆರಂಭಿಸಿ

ಚಾಂದ್ರಮಾನ/ಹಿಂದೂ ನವ ಸಂವತ್ಸರ ಆಚರಿಸಲಾಗುವ ಹೊಸವರ್ಷ ಕೇವಲ ಸಾಂಸ್ಕೃತಿಕ ನಿಟ್ಟಿನಲ್ಲಿ ಮಾತ್ರವಲ್ಲದೆ ವೈಜ್ಞಾನಿಕವಾಗಿಯೂ ಸಹ ಪ್ರಾಮುಖ್ಯತೆ ಹೊಂದಿದೆ. ಏಕೆಂದರೆ, ಇಲ್ಲಿ ಗ್ರಹಗಳು, ಸೂರ್ಯ ಮತ್ತು ಚಂದ್ರನ ಚಲನಗಳು ಮತ್ತ ಮಾನವ ವ್ಯವಸ್ಥೆಯ ಮೇಲೆ ಅವುಗಳ ಪರಿಣಾಮವನ್ನು ಪರಿಗಣನೆಗೆ ತಗೆದುಕೊಳ್ಳಲಾಗಿದೆ. ಈ ಮೂಲಕ, ಹೊಸ ವರ್ಷದ ದಿನಾಂಕವನ್ನು ವಸಂತ ಋತುವನ್ನು ಸ್ವಾಗತಿಸುವ ಮೂಲಕ ಆರಿಸಲಾಗಿದೆಯೇ ಹೊರತು ಜನವರಿ 1 ಅನ್ನು ಹೊಸ ವರ್ಷವಾಗಿ ಆಯ್ಕೆ ಮಾಡಲಾಗಿಲ್ಲ.

ಲಿಂಗ ಭೈರವಿಯಲ್ಲಿ ಸಾಂಪ್ರದಾಯಿಕ ಹೊಸ ವರ್ಷದ ಆಚರಣೆಯ ಅಂಗವಾಗಿ ಭಾರತದ ವಿವಿಧ ಭಾಗದ ಜನರು ದೇವಿಗೆ ಅರ್ಪಣೆಗಳನ್ನು ಸಲ್ಲಿಸುವ ಮೂಲಕ ಅವಳ ಅನುಗ್ರಹವನ್ನು ಪಡೆಯಬಹುದು. ಹಬ್ಬದ ಮೂರೂ ದಿನಗಳ ಕಾಲ (ಏಪ್ರಿಲ್ 13, 14 ಮತ್ತು 15) ಭಕ್ತರಿಗೆ ಈ ಅವಕಾಶವನ್ನು ಮಾಡಿಕೊಡಲಾಗಿದೆ.

ಹೊಸ ವರ್ಷದ ಪ್ರಯುಕ್ತ ಮಾಡಬಹುದಾದ ಅರ್ಪಣೆಗಳು

ಈ ಅರ್ಪಣೆಗಳನ್ನು ಮಾಡಲು ಭಾರತೀಯರಿಗೆ ಮಾತ್ರ ಅವಕಾಶ ನೀಡಲಾಗಿದೆ
seperator
abishekam

ಅಭಿಷೇಕ

ಹನ್ನೊಂದು ವಿಧದ ಅರ್ಪಣೆಗಳ ಮೂಲಕ ದೇವಿಯ ಅನಗ್ರಹವನ್ನು ಕೋರುವುದು.
Suphala Arpanam

ಸುಫಲ ಅರ್ಪಣೆ

ಹಣ್ಣುಗಳು ಪೂರ್ಣ ಜೀವನದ ಸಂಕೇತ. ದೇವಿಯ ಅನಗ್ರಹಕ್ಕಾಗಿ ಹಣ್ಣಿನ ಅರ್ಪಣೆ ಮಾಡುವುದು.
deepam-arpanam

ದೀಪದ ಅರ್ಪಣೆ

ಹನ್ನೊಂದು ತುಪ್ಪದ ದೀಪಗಳನ್ನು ಅರ್ಪಿಸುವ ಮೂಲಕ ದೇವಿಯ ಅನುಗ್ರಹದೊಂದಿಗೆ ಹೊಸ ವರ್ಷವನ್ನು ಬೆಳಗಿರಿ.
ಈ ಹೊಸ ವರ್ಷಕ್ಕೆ ನೀವು ವೈಯಕ್ತಿಕವಾಗಿ ಅಥವಾ ನಿಮ್ಮ ಕುಟುಂಬದ ಪರವಾಗಿ ವಿಶೇಷ ಅರ್ಪಣೆಗಳನ್ನು ನಿಮ್ಮ ಸ್ಥಳದಿಂದಲೇ ನಿವೇದಿಸಬಹುದು.
ಈ ಅರ್ಪಣೆಗಳ ಜೊತೆಜೊತೆಗೆ, ದೇವಿಯ ಅನುಗ್ರಹಕ್ಕಾಗಿ ನಿಮ್ಮ ಮತ್ತು ನಿಮ್ಮ ಕುಟುಂಬದವರ ಹೆಸರು, ಜನ್ಮ ನಕ್ಷತ್ರವನ್ನು ತಾಳೆಯ ಎಲೆಯ ಮೇಲೆ ಬರೆದು ಅದನ್ನು ದೇವಿಯ ಪಾದದಡಿಯಲ್ಲಿ ಇರಿಸಲಾಗುವುದು.

ದೇವಿಯ ಅನುಗ್ರಹಕ್ಕೆ ಮಾರ್ಗ

seperator
ದೇವಿಯ ಕೃಪೆಗೆ ಪಾತ್ರರಾಗಲು, ಹೊಸ ವರ್ಷದ ಪ್ರಯುಕ್ತ ಲಿಂಗ ಭೈರವಿಯಲ್ಲಿ ನಡೆಸಲಾಗುವ ವಿಶೇಷ ದೇವಿ ಅಭಿಷೇಕದ (ಏಪ್ರಿಲ್ 14, ಮಧ್ಯಾಹ್ನ 7-8 PM IST) ನೇರ ಪ್ರಸಾರದಲ್ಲಿ ಪಾಲ್ಗೊಳ್ಳಿರಿ. ಅಭಿಷೇಕದ ನಂತರ, ಈಶಾ ಸಂಸ್ಕೃತಿ ತಂಡದಿಂದ ಉತ್ಸಾಹಭರಿತ ಸಂಗೀತ ಮತ್ತು ನೃತ್ಯ ಕಾರ್ಯಕ್ರಮವಿರುತ್ತದೆ.
Register to watch the Livestream and/or make your offerings.