ಇನ್ನರ್ ಇಂಜಿನಿಯರಿಂಗ್‌ನ ನಿಮ್ಮ ಅನುಭವವನ್ನು ಗಾಢವಾಗಿಸಲು ಮತ್ತು ನಿಮ್ಮ ಅಭ್ಯಾಸಗಳನ್ನು ಸರಿಪಡಿಸಿಕೊಳ್ಳಲು ನಿಮಗೊಂದು ಅವಕಾಶ.
7:30 AM IST, ಜನವರಿ 5, 2025
(ಪ್ರತಿ ತಿಂಗಳ ಮೊದಲ ಭಾನುವಾರ)
ಆನ್‌ಲೈನ್ ನಲ್ಲಿ ಅಥವಾ ಖುದ್ದಾಗಿ ಬಂದು ಭಾಗವಹಿಸುವ ಸೌಲಭ್ಯವಿದೆ
ಯಾವುದೇ ಶುಲ್ಕವಿಲ್ಲ
"ಸತ್ಸಂಗ ಎಂದರೆ ಸತ್ಯದೊಂದಿಗೆ ಸಂಪರ್ಕದಲ್ಲಿರುವುದು. ನಮ್ಮ ಮೂಲದೊಂದಿಗೆ ಸಂಪರ್ಕಕ್ಕೆ ಬರಲು ಇದು ಒಂದು ಉತ್ತಮ ಅವಕಾಶವಾಗಿದೆ"
ಮುಖ್ಯಾಂಶಗಳು
ಈಶಾಂಗ ಮಾರ್ಗದರ್ಶನದಲ್ಲಿ ಶಾಂಭವಿ ಮಹಾಮುದ್ರಾ ಕ್ರಿಯೆಯನ್ನು ಅಭ್ಯಾಸ ಮಾಡಿ
ನಿಮ್ಮ ಅಭ್ಯಾಸ-ಸಂಬಂಧಿತ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಿರಿ
ಸದ್ಗುರುಗಳ ಮಾರ್ಗದರ್ಶನದಲ್ಲಿ ಶಕ್ತಿಯುತವಾದ ಧ್ಯಾನಗಳನ್ನು ಅನುಭವಿಸಿ
ಸದ್ಗುರುಗಳ ಸ್ಪೂರ್ತಿದಾಯಕ ಸತ್ಸಂಗಗಳನ್ನು ವೀಕ್ಷಿಸಿ
ಸತ್ಸಂಗಕ್ಕೆ ಹಾಜರಾಗುವ ವಿಧಾನಗಳು
ಮಾರ್ಗಸೂಚಿಗಳು
ಶಾಂಭವಿ ಮಹಾಮುದ್ರ ಕ್ರಿಯಾ ದೀಕ್ಷೆ ಪಡೆದವರಿಗೆ ಮಾತ್ರ ಸತ್ಸಂಗಕ್ಕೆ ಪ್ರವೇಶ.
ಖಾಲಿ ಹೊಟ್ಟೆಯ ಸ್ಥಿತಿಯನ್ನು ಕಾಯ್ದುಕೊಳ್ಳಿ.
ದಯವಿಟ್ಟು ಸಮಯಕ್ಕಿಂತ ಕನಿಷ್ಠ 15 ನಿಮಿಷಗಳ ಮುಂಚಿತವಾಗಿ ಕುಳಿತುಕೊಳ್ಳಿ.
ಖುದ್ದಾಗಿ ಹಾಜರಾಗುವ ಸತ್ಸಂಗದಂತೆಯೇ, ಶಾಂಭವಿ ಮಹಾಮುದ್ರ ಕ್ರಿಯಾ ದೀಕ್ಷೆ ಪಡೆದವರಿಗೆ ಮಾತ್ರ ಆನ್‌ಲೈನ್ ಸತ್ಸಂಗಕ್ಕೆ ಪ್ರವೇಶ.
ನಿಮ್ಮ ಕುಟುಂಬದ ಸದಸ್ಯರಾಗಿದ್ದರೂ, ದೀಕ್ಷೆ ಪಡೆಯದೇ ಯಾರೂ ಸತ್ಸಂಗದಲ್ಲಿ ಭಾಗವಹಿಸಲು ಅವಕಾಶವಿಲ್ಲ.
ಖಾಲಿ ಹೊಟ್ಟೆಯ ಸ್ಥಿತಿಯನ್ನು ಕಾಯ್ದುಕೊಳ್ಳಿ.
ಸದ್ಗುರುಗಳ ಛಾಯಾಚಿತ್ರ ಮತ್ತು ಅದರ ಮುಂದೆ ಬೆಳಗಿದ ದೀಪವನ್ನು ಇರಿಸುವ ಮೂಲಕ ನಿಮ್ಮ ಜಾಗದಲ್ಲಿ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿಕೊಳ್ಳಿ. ನೆಲದ ಮೇಲೆ ಕುಳಿತುಕೊಳ್ಳುವುದು ಉತ್ತಮ.
ಈ ಸಮಯವನ್ನು ಸತ್ಸಂಗಕ್ಕಾಗಿ ಪ್ರತ್ಯೇಕವಾಗಿ ಮೀಸಲಿಡಿ, ಮತ್ತು ಸಂಪೂರ್ಣ ಅವಧಿಯವರೆಗೆ ಯಾವುದೇ ಅಡಚಣೆ (ರೆಸ್ಟ್ ರೂಂ ಅನ್ನು ಬಳಸುವುದು, ಕರೆಗಳಿಗೆ ಉತ್ತರಿಸುವುದು ಅಥವಾ ಸಂದೇಶಗಳನ್ನು ಪರಿಶೀಲಿಸುವುದು) ಇಲ್ಲದಂತೆ ಖಚಿತಪಡಿಸಿಕೊಳ್ಳಿ.
ಸ್ಥಿರವಾದ ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವುದಾಗಿ ಖಚಿತಪಡಿಸಿಕೊಳ್ಳಿ.
ಲ್ಯಾಪ್‌ಟಾಪ್ ಮೂಲಕ ಹಾಜರಾಗುವುದು ಮತ್ತು ನಿಮ್ಮ ಫೋನ್ ಅನ್ನು ಸ್ವಿಚ್ ಆಫ್ ಮಾಡುವುದು ಉತ್ತಮ.
ಯಾವುದೇ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಲು ಕನಿಷ್ಠ 15 ನಿಮಿಷಗಳ ಮುಂಚಿತವಾಗಿ ಲಾಗ್ ಇನ್ ಮಾಡಲು ನಾವು ಶಿಫಾರಸು ಮಾಡುತ್ತೇವೆ, ಏಕೆಂದರೆ ಅಧಿವೇಶನವು ಸರಿಯಾಗಿ ಬೆಳಿಗ್ಗೆ 7:30ಕ್ಕೆ ಪ್ರಾರಂಭವಾಗುತ್ತದೆ.