ಆಯುಷ್ಮಾನ್ ಖುರಾನ:  ನಮಸ್ಕಾರ ಸದ್ಗುರೂಜಿ. ನಾನು ಆಯುಷ್ಮಾನ್ ಖುರಾನ. ನಾನು ರಾಜಕೀಯ ಆಗುಹೋಗುಗಳ ಬಗ್ಗೆ ಬಹಳ ಗಮನವನ್ನು ಕೊಡುತ್ತೇನೆ. ಭಾರತವು ಹಲವಾರು ಸಂಸ್ಕೃತಿ, ಧರ್ಮ, ಪ್ರಾಂತ್ಯ, ಜಾತಿ, ವರ್ಣ, ಮತಗಳಿರುವ ಬಹುಮುಖಿ ಸಮಾಜವಾದ ಕಾರಣ, ರಾಜಕೀಯವಾಗಿ ಅದು ಬಹಳ ಸೂಕ್ಷವಾದ ಸ್ಥಿತಿಯಲ್ಲಿದೆ. ತೀವ್ರತರ ಎಡಪಂಥ ಮತ್ತು ಬಲಪಂಥೀಯ ನಿಲುವು, ಇವೆರಡೂ ಅಪಾಯಕಾರಿ ಎಂದು ನನ್ನ ದೃಢವಾದ ನಂಬಿಕೆ. ನನ್ನ ರಾಜಕೀಯ ನಿಲುವು ಪ್ರಾಯಶಃ ಇವೆರಡರ ಮಧ್ಯದ್ದು. ನಿಮ್ಮ ಪ್ರಕಾರ ಸರಿಯಾದ ನಿಲುವು ಯಾವುದು? ನಾವಿವಾಗ ಒಂದು ಕ್ಲಿಷ್ಟವಾದ ಪರಿಸ್ಥಿತಿಯಲ್ಲಿದ್ದೀವಿ - ಇಲ್ಲಿಂದ ನಾವು ಯಾವ ಕಡೆಗೆ ಹೋಗಬೇಕು? 

ಸದ್ಗುರು: ಆಯುಷ್ಮಾನ್ - ಧೀರ್ಘಾಯು ಇರುವವನು! ಯಾವುದೇ ರೀತಿಯ ನಿಲುವನ್ನು ಎಂದಿಗೂ ನೀವು ತೆಗದುಕೊಳ್ಳದಿರುವುದೇ ಜೀವಂತ ಪ್ರಜಾಪ್ರಭುತ್ವದ ಅರ್ಥ. ಅಮೇರಿಕಾದಲ್ಲಿ ಇದು ಪ್ರಬಲವಾದ ರೀತಿಯಲ್ಲಿ ನಡೆಯಿತು. ಅಲ್ಲಿನ ಎರಡು ಪ್ರಮುಖ ರಾಜಕೀಯ ಪಕ್ಷಗಳು ಎರಡು ಧರ್ಮಗಳ ತರಹವೇ ಆಗಿ ಬಿಟ್ಟಿತು - ನೀವು ಡೆಮೋಕ್ರಾಟ್ಸ್ ಪಕ್ಷದವರ ಅಥವಾ ರಿಪಬ್ಲಿಕನ್ಸ್ ಪಕ್ಷದವರ ಎಂದು. ಇದು ಯಾವ ತರಹ ಆಯಿತೆಂದರೆ: "ನನ್ನ ತಾತ ರಿಪಬ್ಲಿಕನ್, ನನ್ನ ತಂದೆ ರಿಪಬ್ಲಿಕನ್, ಹಾಗಾಗಿ ನಾನು ಕೂಡ ರಿಪಬ್ಲಿಕನ್!"

ಒಮ್ಮೆ ಏನಾಯಿತೆಂದರೆ: ಡೆಮಾಕ್ರಾಟ್‌ಗಳು "ಕೆಂಪು ರಾಜ್ಯ" ಗಳಲ್ಲಿ ಚುನಾವಣಾ ಪ್ರಚಾರವನ್ನು ಮಾಡುತ್ತಿದ್ದರು - ಕೆಂಪು ರಾಜ್ಯಗಳಲ್ಲಿ ಜನರು ಯಾವಾಗಲೂ ರಿಪಬ್ಲಿಕನ್ ಪಕ್ಷದ ಪರ ಮತ ಹಾಕುತ್ತಾರೆ. ಡೆಮಾಕ್ರಾಟ್ ಪಕ್ಷದವರೊಬ್ಬರು ಯಾರನ್ನೋ ಕೇಳಿದರು, "ನೀವು ಯಾಕೆ ಡೆಮಾಕ್ರಾಟ್‌ಗಳ ಪರ ಮತ ಹಾಕುವುದಿಲ್ಲ?" ಅವನಂದ, "ನನ್ನ ತಾತ ರಿಪಬ್ಲಿಕನ್, ನನ್ನ ತಂದೆ ರಿಪಬ್ಲಿಕನ್, ಹಾಗಾಗಿ ನಾನು ಕೂಡ ರಿಪಬ್ಲಿಕನ್!" ಈ ಡೆಮಾಕ್ರಾಟ್ ಪಕ್ಷದವನಿಗೆ ಕಿರಿಕಿರಿಯಾಯಿತು. ಅವನಂದ, "ಒಂದು ವೇಳೆ ನಿಮ್ಮ ತಾತ ಹೆಡ್ಡರಾಗಿದ್ದರು, ನಿಮ್ಮ ತಂದೆ ಕೂಡ ಹೆಡ್ಡರಾಗಿದ್ದರು ಎಂದು ಎಣಿಸೋಣ. ಆವಾಗ ನೀವೇನಾಗಿರುತ್ತಿದ್ದಿರಿ?" ಆ ವ್ಯಕ್ತಿ ಉತ್ತರಿಸಿದ, "ನಾನೊಬ್ಬ ಡೆಮೋಕ್ರಾಟ್ ಆಗಿರುತ್ತಿದ್ದೆ"
 

ಎಡ, ಬಲ, ಮಧ್ಯ - ನಾನು ಯಾವ ಪಂಥದವನು? ಆ ನಿಲುವನ್ನು ನೀವು ತೆಗದುಕೊಂಡ ತಕ್ಷಣ ಪ್ರಜಾಪ್ರಭುತ್ವವನ್ನು ನಾಶಗೊಳಿಸಿ, ಸಮಾಜವನ್ನು ಮರಳಿ ಜೀತ ಪದ್ಧತಿಗೆ ಕರೆದೊಯ್ಯುತ್ತಿದ್ದೀರಿ.

ಅವರ ಲಾಂಛನವನ್ನು ನೀವು ನೋಡಿದ್ದೀರ? ಒಂದು ಜೀವಂತ ಪ್ರಜಾಪ್ರಭುತ್ವದಲ್ಲಿ, ಯಾವುದೇ ರೀತಿಯ ನಿಲುವನ್ನು ಎಂದಿಗೂ ನೀವು ತೆಗದುಕೊಳ್ಳಬಾರದು. ನಾವಿದನ್ನು ಮರೆತಂತಿದೆ. ನಮ್ಮ ದೇಶವೂ ಅದೇ ದಿಕ್ಕಿನೆಡೆ ಹೋಗುತ್ತಿದೆ: "ನೀವು ಈ ಕಡೆಯವರೋ, ಇಲ್ಲ ಆ ಕಡೆಯವರೋ?". ಅರೆ! ಮುಂದಿನ ಚುನಾವಣೆಗೆ ನಾನಿನ್ನೂ ನನ್ನ ನಿಲುವನ್ನು ನಿರ್ಧರಿಸಿಲ್ಲ. ಯಾರು ಹೇಗೆ ಕೆಲಸ ಮಾಡುತ್ತಾರೆ, ಯಾರು ಎಷ್ಟು ಸಮರ್ಥರು, ಎಂದು ನೋಡೋಣ.

ಎಡ, ಬಲ, ಮಧ್ಯ - ನಾನು ಯಾವ ಪಂಥದವನು? ಆ ನಿಲುವನ್ನು ನೀವು ತೆಗದುಕೊಂಡ ತಕ್ಷಣ  ಪ್ರಜಾಪ್ರಭುತ್ವವನ್ನು ನಾಶಗೊಳಿಸಿ, ಸಮಾಜವನ್ನು ಮರಳಿ ಜೀತ ಪದ್ಧತಿಗೆ ಕರೆದೊಯ್ಯುತ್ತಿದ್ದೀರಿ: "ನಾನು ಈ ಪಂಥದವನು, ಆದ್ದರಿಂದ ನಾನು ಈ ಪಂಥದವರಿಗೇ ನಾನು ಮತ ಹಾಕುವುದು!" ಹೀಗಾದಾಗ, ಪ್ರಜಾಪ್ರಭುತ್ವ ಉಳಿಯುವುದಿಲ್ಲ.

ಒಂದು ಜೀವಂತ ಪ್ರಜಾಪ್ರಭುತ್ವದಲ್ಲಿ, ಯಾವುದೇ ರೀತಿಯ ನಿಲುವನ್ನು ಎಂದಿಗೂ ನೀವು ತೆಗದುಕೊಳ್ಳಬಾರದು. ನಾವಿದನ್ನು ಮರೆತಂತಿದೆ.

ನೀವು ತೆಗದುಕೊಳ್ಳುವ ನಿಲುವನ್ನು ನೀವು ಪ್ರತಿಬಾರಿಯೂ ಪರಿಶೀಲಿಸುವುದೇ ಪ್ರಜಾಪ್ರಭುತ್ವದ ಅರ್ಥ. ಅದೊಂದು ಖಾಯಂ ನಿಲುವಲ್ಲ. ಈಗ, ಅಮೇರಿಕಾದಲ್ಲಿ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುವುದು ಕೇವಲ ನಾಲ್ಕರಿಂದ ಐದು ಪ್ರತಿಶತದಷ್ಟು ಜನರು ಮಾತ್ರ ಎಂದು ನನ್ನ ಅನಿಸಿಕೆ. ಉಳಿದಷ್ಟೂ ಜನರ ವೋಟ್ ಮುಂಚೆಯೇ ನಿಶ್ಚಯ ಆಗಿಬಿಟ್ಟಿರುತ್ತದೆ.

ಭಾರತದಲ್ಲಿ, ಈ ಶೇಕಡಾವಾರು ಬಹುಶಃ ಹತ್ತರಿಂದ ಹನ್ನೆರಡು,  ಹೆಚ್ಚೆಂದರೆ ಹದಿನೈದು ಪ್ರತಿಶತದಷ್ಟು ಇರಬಹುದು. ಆದರೆ, ಮುಂದಿನ ಚುನಾವಣೆಯ ನಂತರ, ನಮ್ಮ ಶೇಕಡಾವಾರು ಲೆಕ್ಕವೂ ಅಮೇರಿಕಾದ ತರಹವೇ ಆಗಿಬಿಡುವುದು ಎಂದು ನನ್ನ ಅನಿಸಿಕೆ. ಯಾಕೆಂದರೆ ಇಲ್ಲಿಯ ಪರಿಸ್ಥಿತಿಯೂ ಹಾಳಾಗುತ್ತಿದೆ. ನೀವು, ಒಂದೋ, ಆ ಕಡೆ ಅಥವಾ ಈ ಕಡೆ ಇರಲೇಬೇಕು. ನೀವು ಯಾರನ್ನೂ ಬೆಂಬಲಿಸುವುದಿಲ್ಲವೆಂದು ಹೇಳಲಿಕ್ಕಾಗುವುದಿಲ್ಲ.  
 

ರಕ್ತಪಾತವಿಲ್ಲದೆಯೇ ಅಧಿಕಾರ ಹಸ್ತಾಂತರವಾಗುವುದು ಪ್ರಜಾಪ್ರಭುತ್ವ ಪ್ರಕ್ರಿಯೆಯ ಅಸಾಮಾನ್ಯ ಸಾಧನೆ.

ರಕ್ತಪಾತವಿಲ್ಲದೆಯೇ ಅಧಿಕಾರ ಹಸ್ತಾಂತರವಾಗುವುದು ಪ್ರಜಾಪ್ರಭುತ್ವ ಪ್ರಕ್ರಿಯೆಯ ಅಸಾಮಾನ್ಯ ಸಾಧನೆ. ಒಂದು ಪರಿವಾರದೊಳಗೂ, ಅಪಾರ ಪ್ರಮಾಣದ ಸಂಪತ್ತಿದ್ದರೆ, ರಕ್ತಪಾತವಿಲ್ಲದೆಯೆ ಅಧಿಕಾರದ ಬದಲಾವಣೆಯು ನಡೆಯುವುದಿಲ್ಲ. ಆದರಿಂದು, ದೊಡ್ಡ ರಾಷ್ಟ್ರಗಳಲ್ಲಿ, ಒಂದು ಹನಿ ರಕ್ತವನ್ನೂ ಚೆಲ್ಲದೇ, ಅಧಿಕಾರವನ್ನು ಒಂದು ಗುಂಪಿನಿಂದ ಇನ್ನೊಂದು ಗುಂಪಿಗೆ ಹಸ್ತಾಂತರಿಸುತ್ತೇವೆ.

ಆದರೆ, ನೀವು ಬುಡಕಟ್ಟು ಮನಸ್ಥಿತಿಗೆ ಜಾರಿದರೆ, ಪ್ರತಿಬಾರಿ ಅಧಿಕಾರ ಹಸ್ತಾಂತರದ ಸಮಯದಲ್ಲಿ ಬುಡಕಟ್ಟು ಯುದ್ಧಗಳು ನಡೆಯುತ್ತಿದಂತಹ ಕಾಲಕ್ಕೆ ಸಮಾಜವನ್ನು ಪುನಃ ಕರೆದೊಯ್ಯುವಿರಿ. ಸದ್ಯದ ಪರಿಸ್ಥಿತಿಯಲ್ಲಿ, ಸಾಮಾಜಿಕ ಮಾಧ್ಯಮದಲ್ಲೂ, ಡಿಜಿಟಲ್ ಗುಂಪುಗಳು ಕೊನೆಯಿಲ್ಲದ ಹಾಗೆ ಪರಸ್ಪರರೊಂದಿಗೆ ಕಚ್ಚಾಡುತ್ತಿದ್ದಾರೆ. ಇದು ಬುಡಕಟ್ಟಿನ ಯುದ್ಧವೇ ತಾನೆ?

ಇದನ್ನು ಹೇಳಿದರೆ ಹೆಚ್ಚಿನವರಿಗೆ ಇಷ್ಟ ಆಗಲ್ಲ ಅಂತ ಗೊತ್ತಿದೆ - ಆದರೆ, ನನ್ನ ಪ್ರಕಾರ, ಪಕ್ಷ ಸದಸ್ಯತ್ವ ಪದ್ಧತಿಯನ್ನು ನಿಲ್ಲಿಸಬೇಕು. ಏಕೆಂದರೆ, ಇದು ಬುಡಕಟ್ಟೇ ಆಗಿಬಿಡುತ್ತಾ ಇದೆ. ನಾವು ಒಂದು ಪ್ರಬುದ್ಧ ಪ್ರಜಾಪ್ರಭುತ್ವವಾಗಬೇಕು.

ನಿಂದನೆ, ಅವಾಚ್ಯ ಮಾತುಗಳು - ಹೀಗೆಯೇ ಮುಂದುವರೆದರೆ,  ಯಾರಾದರೂ ಮಚ್ಚು, ಗನ್‌ಗಳನ್ನು ಹಿಡಿದು ಹೊರಬಂದು ಜನರನ್ನು ಕೊಲ್ಲಲು ಶುರುಮಾಡುವ ಸಮಯ ದೂರವೇನೂ ಇಲ್ಲ. ಈಗಾಗಲೇ WhatsApp ಅನ್ನು ಉಪಯೋಗಿಸಿ, ಸಾಮೂಹಿಕವಾಗಿ ಯಾರನ್ನಾದರೂ ಥಳಿಸುವುದನ್ನು ಅಥವಾ ಒಂದು ಸಮುದಾಯದ ವಿರುದ್ಧ ಹಿಂಸಾಚಾರವನ್ನು ನೀವು ಉಂಟುಮಾಡಬಹುದಾಗಿದೆ.

 

ಇದನ್ನು ಹೇಳಿದರೆ ಹೆಚ್ಚಿನವರಿಗೆ ಇಷ್ಟ ಆಗಲ್ಲ ಅಂತ ಗೊತ್ತಿದೆ - ಆದರೆ, ನನ್ನ ಪ್ರಕಾರ, ಪಕ್ಷ ಸದಸ್ಯತ್ವ ಪದ್ಧತಿಯನ್ನು ನಿಲ್ಲಿಸಬೇಕು. ಏಕೆಂದರೆ, ಇದು ಬುಡಕಟ್ಟೇ ಆಗಿಬಿಡುತ್ತಾ ಇದೆ. ನಾವು ಒಂದು ಪ್ರಬುದ್ಧ ಪ್ರಜಾಪ್ರಭುತ್ವವಾಗಬೇಕು. ಹಾಗಾಗಿ, ಆಯುಷ್ಮಾನ್ ಅವರೇ, ನೀವು ಯಾವುದೇ ನಿಲುವನ್ನೂ ತೆಗೆದುಕೊಳ್ಳಬಾರದು. ನಾಲ್ಕೂವರೆ ವರ್ಷದ ಕೊನೆಯಲ್ಲಿ, ದೇಶದಲ್ಲಿ ನಡೆದುದನ್ನು ಮೌಲ್ಯಮಾಪನವನ್ನು ಮಾಡಲು, ನಾಲ್ಕರಿಂದ ಆರು ತಿಂಗಳು ಕಾಲವನ್ನು ತೆಗೆದುಕೊಳ್ಳಿ - ಅವರಿಗೇ ಇನ್ನೊಂದು ಅವಕಾಶವನ್ನು ಕೊಡಬಹುದೇ ಅಥವಾ ಬೇರೊಬ್ಬರು ಅದಕ್ಕಿಂತ ಚೆನ್ನಾಗಿ ಕೆಲಸ ಮಾಡಬಲ್ಲರೇ? ಪ್ರತಿಯೊಬ್ಬ ಪ್ರಜೆಯೂ, ಕೊನೆಯ ಮೂರರಿಂದ ಆರು ತಿಂಗಳಲ್ಲಿ, ಈ ನಿರ್ಧಾರವನ್ನು ಮಾಡಬೇಕು.
 

ಸಂಪಾದಕರ ಟಿಪ್ಪಣಿ: ನೀವು ಯಾವುದಾದರು ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.

Youth and Truth Banner Image