ಪ್ರಶಾಂತತೆಯಿಂದ ಇರಬೇಕಾದರೆ ಅದಕ್ಕೆ ಬೇಕಾಗಿರುವ ದೈಹಿಕ ರಸಾಯನಶಾಸ್ತ್ರವನ್ನು ಸದ್ಗುರು ತಿಳಿಸಿದ್ದಾರೆ. ಹಾಗೂ ಯೋಗವು ಈ ದಾರಿಯಲ್ಲಿ ನಡೆಯುವುದಕ್ಕೆ ಒಂದು ವೈಜ್ಞಾನಿಕ ರೀತಿ ಎಂಬುವುದನ್ನು ವಿವರಿಸಿದ್ದಾರೆ.

ಪ್ರಶ್ನೆ: ಬಹಳಷ್ಟು ಸಾರಿ ನಾವು ಗೊಂದಲಮಯ ಪರಿಸ್ಥಿತಿಗಳನ್ನು ವ್ಯವಹರಿಸಬೇಕಾಗುತ್ತದೆ? ಅಂತಹ ಪರಿಸ್ಥಿತಿಗಳಲ್ಲಿ ನಾವು ಶಾಂತಿಯಿಂದ ಇರುವುದು ಹೇಗೆ?

ಸದ್ಗುರು: ನಮ್ಮೆಲ್ಲರಿಗೂ ತಮ್ಮತಮ್ಮ ಜೀವನದಲ್ಲಿ ಶಾಂತಿ ಬೇಕು; ಅದೆ ನಮ್ಮ ಆಸೆ. ನೀವು ಶಾಂತಿಯಿಂದ ಇರಬೇಕೆಂದು ಆಶಿಸುತ್ತೀರಿ, ಆದರೆ ನಿಮ್ಮ ಮನಸ್ಸು ಉದ್ವಿಗ್ನಗೊಂಡಿದೆ, ಆದ್ದರಿಂದ ನಿಮಗೆ ಮಾನಸಿಕವಾಗಿ ನೆಮ್ಮದಿ ಇಲ್ಲ. ನೀವು ನಿಮ್ಮ ನೆಮ್ಮದಿಯನ್ನು ಕಳೆದುಕೊಂಡಿದ್ದೀರಿ ಎಂದು ತಿಳಿದುಕೊಳ್ಳೋಣ, ಮೊದಮೊದಲು ಸಹಜವಾಗಿ ನೀವು ನಿಮ್ಮ ಗಂಡ ಅಥವಾ ಹೆಂಡತಿಯ ಜೊತೆಯಲ್ಲಿ ಜಗಳವಾಡುತ್ತೀರಿ. ಅದು ಜಾಸ್ತಿಯಾದ ಹಾಗೆ ನೀವು ನಿಮ್ಮ ನೆರೆಮನೆಯವರ ಮೇಲೆ ಕೂಗಾಡುತ್ತೀರಿ. ಅದು ಇನ್ನು ಜಾಸ್ತಿಯಾದ ಹಾಗೆ ನೀವು ನಿಮ್ಮ ಮೇಲಾಧಿಕಾರಿಯ ಮೇಲೆ ರೇಗುತ್ತೀರಿ. ನೀವು ನಿಮ್ಮ ಮೇಲಾಧಿಕಾರಿಯ ಮೇಲೆ ರೇಗಿದ ದಿನ ನಿಮಗೆ ವೈದ್ಯರ ಸಹಾಯ ಬೇಕಿದೆಯೆಂದು ಎಲ್ಲರಿಗೂ ಅರ್ಥವಾಗುತ್ತದೆ. ನಿಮ್ಮ ಗಂಡ, ಹೆಂಡತಿ ಅಥವಾ ನೆರೆಮನೆಯವರ ಮೇಲೆ ರೇಗುವುದು ಪರವಾಗಿಲ್ಲ ಏಕೆಂದರೆ ಎಲ್ಲರೂ ಅದನ್ನು ಮಾಡುತ್ತಿರುವರು, ಆದರೆ ಅದು ನಿಮ್ಮ ಮೇಲಧಿಕಾರಿಯವರೆಗೂ ಹೋದರೆ ತುಂಬ ಅತಿಯಾಯಿತೆಂದೇ ಅರ್ಥ.

ಸೂಕ್ತವಾದ ಅಭ್ಯಾಸಗಳಿಂದ ನಾವು ನಮ್ಮ ಆಂತರ್ಯದಲ್ಲಿ ಒಂದು ಮಾರ್ಪಾಡನ್ನು ತರಬಹುದು ಮತ್ತು ಅದನ್ನು ಒಂದು ನಿರ್ದಿಷ್ಟ ಹಂತಕ್ಕೆ ತೆಗೆದುಕೊಂಡು ಹೋದರೆ, ಪರಿಸ್ಥಿತಿ ಹೇಗೇಯಿರಲಿ, ನಾವು ಸದಾ ಶಾಂತವಾಗಿ ಇರಬಹುದು.

ಈಗ ನಿಮ್ಮ ಪರಿಸ್ಥಿತಿ ಹೇಗಿದೆಯೆಂದರೆ ನೀವು ಡಾಕ್ಟರ್ ಹತ್ತಿರ ಹೋಗಬೇಕು ಅವರ ನಿಮಗೆ ಮಾತ್ರೆಗಳನ್ನು ಕೊಡುತ್ತಾರೆ. ಆ ಮಾತ್ರೆ ನಿಮ್ಮ ದೇಹದೊಳಗೆ ಹೋದ ಮೇಲೆ - ನೀವು ಶಾಂತಿಯಿಂದ ಇರುವಿರಿ, ಸ್ವಲ್ಪ ಸಮಯವಾದರೂ ಸರಿ. ಯಾವುದೊ ಒಂದು ರಾಸಾಯನಿಕ ನಿಮ್ಮ ದೇಹದೊಳಗೆ ಹಾಕಿದರೆ - ನಿಮ್ಮ ದೇಹ ಮತ್ತು ಮನಸ್ಸಿನಲ್ಲಿ ತಳಮಳ ಕಡಿಮೆಯಾಗಿ ಶಾಂತಿ ಸಿಗುತ್ತದೆ. ಹಾಗಾಗಿ ಶಾಂತಿ ನಿಮ್ಮ ದೇಹದೊಳಗೆ ಒಂದು ರಾಸಾಯನಿಕ ಪ್ರಕ್ರಿಯೆ . ಅದೇ ರೀತಿಯಲ್ಲಿ ನಿಮ್ಮ ಒಂದೊಂದು ಭಾವನೆ ನಿಮಲ್ಲಿ ಒಂದು ರಾಸಾಯನಿಕ ಪ್ರಕ್ರಿಯೆ. ಅದು ಯಾವುದೇ ಭಾವನೆಯಾಗಿರಲಿ ಅದಕ್ಕೆ ಒಂದು ಪ್ರತ್ಯೇಕ ರಾಸಾಯನಿಕ ವ್ಯವಸ್ಥೆ ಇರುತ್ತದೆ ಅದು ಆ ಭಾವನೆಗೆ ಸರಿತೂಗುತ್ತದೆ. ನಾವು ಶಾಂತಿಯಿಂದ ಇದ್ದೇವೆಂದರೆ ನಮಲ್ಲಿ ಶಾಂತಿಯ ರಾಸಾಯನಿಕ ಇದೆ ಎಂದು. ಅಥವಾ ನಾವು ಸರಿಯಾದ ರಾಸಾಯನಿಕವನ್ನು ತಯಾರು ಮಾಡಿದರೆ ತಂತನಾಗಿಯೇ ಪ್ರಶಾಂತತೆ ನಿಮ್ಮಲ್ಲಿ ಇರುತ್ತದೆ. ಯೋಗದಲ್ಲಿ ನಾವು ಎರಡು ರೀತಿಯಲ್ಲೂ ಸಮೀಪಿಸುತ್ತೇವೆ.

ಸೂಕ್ತವಾದ ಅಭ್ಯಾಸಗಳಿಂದ ನಾವು ನಮ್ಮ ಆಂತರ್ಯದಲ್ಲಿ ಒಂದು ಮಾರ್ಪಾಡನ್ನು ತರಬಹುದು ಮತ್ತು ಅದನ್ನು ಒಂದು ನಿರ್ದಿಷ್ಟ ಹಂತಕ್ಕೆ ತೆಗೆದುಕೊಂಡು ಹೋದರೆ, ಪರಿಸ್ಥಿತಿ ಹೇಗೇಯಿರಲಿ, ನಾವು ಸದಾ ಶಾಂತವಾಗಿ ಇರಬಹುದು. ಪ್ರಸ್ತುತ ನಿಮ್ಮ ಶಾಂತಿ ಹೊರಗಿನ ಪರಿಸ್ಥಿತಿಗಳಿಗೆ ಗುಲಾಮನಾಗಿದೆ. ಪರಿಸ್ಥಿತಿಗಳು ನಿಮಗೆ ಅನುಕೂಲವಾಗಿದ್ದಲ್ಲಿ, ನೀವು ಶಾಂತಿಯಿಂದಿರುವಿರಿ. ಪರಿಸ್ಥಿತಿಗಳು ಚೆನ್ನಾಗಿಲ್ಲದಿದ್ದರೆ ಆಗ ಸಮಸ್ಯೆ. ನಿಮ್ಮ ಶಾಂತಿ ಹೊರಗಿನ ಪರಿಸ್ಥಿತಿಗಳಿಗೆ ಗುಲಾಮನಾಗಿರದಿದ್ದಲ್ಲಿ, ಹೊರಗಿನ ಪರಿಸ್ಥಿತಿಗಳಿಗೆ ಸಂಬಂಧವಿಲ್ಲದೆ, ನಿಮ್ಮ ಆಂತರ್ಯವು ಸದಾ ಒಂದೇ ರೀತಿಯಲ್ಲಿದ್ದರೆ, ಆಗ ಅದನ್ನು ಯೋಗವೆಂದು ಕರೆಯುತ್ತೇವೆ. ಇನ್ನೊಂದರ್ಥದಲ್ಲಿ ಯೋಗವೆಂದರೆ ನಿಮ್ಮಲ್ಲಿ ಸರಿಯಾದ ರಾಸಾಯನ ಕ್ರಿಯೆಯನ್ನು ಸೃಷ್ಠಿಸುವ ವಿಜ್ಞಾನ.

IEO

 

ನಿಮ್ಮಲ್ಲಿ ಸರಿಯಾದ ರಾಸಾಯನಿಕ ಮಿಶ್ರಣವಿದ್ದರೆ, ಪ್ರಶಾಂತವಾಗಿ ಮತ್ತು ಖುಷಿಯಾಗಿ ಇರುವುದೊಂದೇ ದಾರಿ. ಬೇರಾವ ದಾರಿಯೂ ಇಲ್ಲ. ಶಾಂತಿಯಿಂದ ಮತ್ತು ಖುಷಿಯಾಗಿ ಇರುವುದೊಂದೇ ಜೀವನದ ಕೊನೆಯಲ್ಲ, ಅದು ಬದುಕಿನ ಆರಂಭ. ನೀವು ಶಾಂತಿಯಿಂದಲೂ ಇರದೆ ನಿಮ್ಮ ಮಾನಸಿಕ ಅಸಂಬದ್ಧತೆಯಲ್ಲೇ ನೀವು ಸಿಕ್ಕಿಹಾಕಿಕೊಂಡಿದ್ದರೆ, ನೀವು ಬದುಕಲು ಇನ್ನೂ ಶುರು ಮಾಡಿಲ್ಲವೆಂದರ್ಥ. ಶಾಂತಿಯಿಂದ ಮತ್ತು ಸಂತೋಷದಿಂದ ಇರುವುದೇ ಬದುಕುವುದಕ್ಕೆ ಬೇಕಾದ ಮೂಲ ಅವಶ್ಯಕತೆ. ನಿಮ್ಮ ತಿಂಡಿಯನ್ನು ಅಥವಾ ಊಟವನ್ನು ಆಸ್ವಾದಿಸಬೇಕೆಂದರೆ ನಿಮಗೆ ಪ್ರಶಾಂತತೆ ಬೇಕು. ನಿಮಲ್ಲಿ ತಳಮಳವಿದ್ದರೆ ನೀವು ನಿಮ್ಮ ಊಟವನ್ನು ಆಸ್ವಾದಿಸಬಲ್ಲಿರಾ? ಇಲ್ಲ, ಪ್ರಶಾಂತತೆಯಿಂದಿರುವುದೇ ಆರಂಭ. ಆದರೆ ಈ ದಿನಗಳಲ್ಲಿ ಮಾನಸಿಕ ಶಾಂತಿಯೇ ಜೀವನದ ಪರಮ ಧ್ಯೇಯವೆಂದು ಜನರು ಪ್ರಚಾರ ಮಾಡುತ್ತಿದ್ದಾರೆ

ದುರಾದೃಷ್ಟವೇನೆಂದರೆ ಪ್ರಪಂಚದ ಬಹಳಷ್ಟು ಜನಾಂಗ ಇನ್ನೂ ಈ ಆರಂಭವನ್ನು ಮಾಡಿಲ್ಲ, ಕೆಲವು ಜನರಿದ್ದಾರೆ ಅವರು ಅದೇ ಪರಮ ಅವಸ್ಥೆಯೆಂದು ಪ್ರಚಾರ ಮಾಡುತ್ತಿದ್ದಾರೆ. ದುರಾದೃಷ್ಟವೇನೆಂದರೆ ಆಧ್ಯಾತ್ಮಿಕ ಗುರುಗಳೆಂದು ಹೇಳಿಕೊಳ್ಳುತ್ತಿರುವರೇ ಶಾಂತಿಯಿಂದ ಇರುವುದೇ ಜೀವನದ ಪರಮ ಧ್ಯೇಯವೆಂದು ಪ್ರಚಾರ ಮಾಡುತ್ತಿದ್ದಾರೆ. ಶಾಂತಿಯಿಂದಿರುವುದು ಮೂಲಭೂತವಾದದ್ದು. ಇದು ಸಾಕ್ಷಾತ್ಕಾರವೋ ಅಥವಾ ದೇವರೋ ಅಲ್ಲ. ಇದು ಜೀವನದ ಅಆಇಈ, ಯರಲವ ಅಲ್ಲ. ಇದೇ ಎಲ್ಲದಕ್ಕೂ ಆರಂಭ.

ಸಂಪಾದಕರ ಟಿಪ್ಪಣಿ: ’ಇನ್ನರ್ ಇಂಜಿನಿಯರಿಂಗ್ ಆನ್ ಲೈನ್’ ಅನ್ನು ಸವಾಲಿನ ಸಮಯಕ್ಕಾಗಿ ಸದ್ಗುರುಗಳು 50%ಗೆ ಅರ್ಪಿಸಲಾಗುತ್ತಿದೆ. ಸದ್ಗುರುಗಳು ರೂಪಿಸಿದ 7 ಶಕ್ತಿಶಾಲಿ ಸೆಷನ್ ಗಳು. ನೋಂದಾಯಿಸಿ: kannada.sadhguru.org/ieo

 

 

IEO

 

Check out the 5-minute tools of transformation that Sadhguru has created for Yoga Day, that anyone can practice. You can also join or host a workshop, or train to become a facilitator.