Sadhguru: ಸದ್ಗುರು: ಯಾವ ಕ್ಷಣ ನೀವು ನೀವಲ್ಲದಿರುವ ಸಂಗತಿಗಳೊಂದಿಗೆ ಗುರುತಿಸಿಕೊಳ್ಳುವಿರೋ, ಆ ಕ್ಷಣವೇ ಮನಸ್ಸಿನ ಚಟುವಟಿಕೆ ಆರಂಭವಾಗುತ್ತದೆ. ನಿಮಗೆ ಅದನ್ನು ನಿಲ್ಲಿಸಲಾಗುವುದಿಲ್ಲ. ನೀವು ಪ್ರಯತ್ನಿಸಿರುವಿರೇ? ಒಂದಿಷ್ಟು ಮನರಂಜನೆ ಪಡೆದು, ಜೀವನ ಸಾಗಿಸುತ್ತೀರಷ್ಟೇ. ನಿಮಗೆ ನೀವೇ ಮನರಂಜಿಸಿಕೊಳ್ಳಬೇಡಿ. 24 ಗಂಟೆಗಳ ಕಾಲ ಸುಮ್ಮನೆ ಕುಳಿತು, ಮನಸ್ಸನ್ನು ನಿಲ್ಲಿಸಲು ಶತಪ್ರಯತ್ನ ಮಾಡಿ. ಅದನ್ನು ನಿಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋಗುವುದು ಎಂದು ನಿಮಗೇ ತಿಳಿಯುತ್ತದೆ. ಮೂರೇ ದಿನಗಳಲ್ಲಿ ನೀವು ಹುಚ್ಚರಾಗುವಿರಿ. ಇದು ಹೇಗೆ ಎಂದರೆ - ನೀವು ಕೆಟ್ಟ ಆಹಾರ ತಿಂದು, ನಿಮಗೆ ಗ್ಯಾಸ್ ಉಂಟಾಗಿದೆ. ನೀವದನ್ನು ತಡೆದಿಟ್ಟುಕೊಳ್ಳಲು ಪ್ರಯತ್ನಿಸಿದರೆ, ಏನೂ ಪ್ರಯೋಜನವಿಲ್ಲ. ನೀವು ಕೆಟ್ಟ ಆಹಾರ ತಿನ್ನುವುದನ್ನು ನಿಲ್ಲಿಸಬೇಕಷ್ಟೇ.

ನೀವು ನಿಮ್ಮನ್ನು ತಪ್ಪು ಸಂಗತಿಗಳೊಂದಿಗೆ ಗುರುತಿಸಿಕೊಂಡಿರುವಿರಿ. ಹಾಗೂ ಒಮ್ಮೆ ಈ ತಪ್ಪಾದ ಗುರುತಿಸಿಕೊಳ್ಳುವಿಕೆ ಆಯಿತೆಂದರೆ, ಮನಸ್ಸಿನ ಚಟುವಟಿಕೆ ತಡೆಯಿಲ್ಲದಂತೆ ನಡೆಯುತ್ತದೆ. ನಿಮಗೆ ಅದನ್ನು ಏನೇ ಮಾಡಿದರೂ ನಿಲ್ಲಿಸಲಾಗುವುದಿಲ್ಲ. ಅದು ಒಂದು ನಿರ್ದಿಷ್ಟ ಮಿತಿಯಲ್ಲಿದ್ದರೆ, ನೀವು ಅದು ಸಹಜ ಎಂದುಕೊಳ್ಳುವಿರಿ. ಅದು ಸಹಜವಲ್ಲ. ನೀವು ಸಮಾಜ ಒಪ್ಪಿಕೊಳ್ಳುವ ಹಂತದ ಹುಚ್ಚುತನದಲ್ಲಿರುವಿರಿ. ಎಲ್ಲರೂ ಹಾಗೆಯೇ ಇದ್ದಾರೆ, ಆದ್ದರಿಂದ ನೀವು ಇದು ಪರವಾಗಿಲ್ಲ ಎಂದುಕೊಳ್ಳುವಿರಿ. ಆದರೆ ನಿಮಗೆ, ಮನಸ್ಸಿನಲ್ಲಿ ಒಂದು ಆಲೋಚನೆಯೂ ಇಲ್ಲದಂತೆ ಸುಮ್ಮನೆ ಇಲ್ಲಿ ಕುಳಿತುಕೊಂಡಿರುವ ಆನಂದ ತಿಳಿದಿಲ್ಲ. ನಾನು ನಾಲ್ಕೈದು ದಿನಗಳ ಕಾಲ ಒಂಟಿಯಾಗಿದ್ದರೆ, ಆ ನಾಲ್ಕೈದು ದಿನಗಳಲ್ಲಿ ನನ್ನಲ್ಲಿ ಒಂದು ಆಲೋಚನೆಯೂ ಇರುವುದಿಲ್ಲ. ನಾನು ಏನನ್ನೂ ಓದುವುದಿಲ್ಲ ಅಥವಾ ಕಿಟಕಿಯ ಹೊರಗೂ ನೋಡುವುದಿಲ್ಲ. ಒಂದು ಆಲೋಚನೆಯೂ ಇಲ್ಲದಂತೆ ಸುಮ್ಮನೆ ಕುಳಿತುಕೊಳ್ಳುತ್ತೇನೆ.

 

ನೀವೊಂದು ಅದ್ಭುತವಾದ ಸೂರ್ಯೋದಯವನ್ನು ನೋಡುತ್ತಿದ್ದರೆ, ನಿಮ್ಮ ಆಲೋಚನೆಗಳು ಸ್ವಲ್ಪ ಕಾಲ ಕಣ್ಮರೆಯಾಗುತ್ತವೆ - ಏಕೆಂದರೆ ಅವುಗಳಿಗಿಂತ ಬಹಳ ಮಹತ್ತರವಾದದ್ದೊಂದು ಸಂಭವಿಸುತ್ತಿತ್ತು. ಅಥವಾ ನಿಮಗೆ ಮುಖ್ಯವಾದ ಯಾವುದೋ ಕೆಲಸದಲ್ಲಿ ತೊಡಗಿಕೊಂಡಿರೆಂದರೆ, ಆಗಲೂ ಆಲೋಚನೆಗಳು ಸ್ವಲ್ಪ ಕಾಲ ಕಣ್ಮರೆಯಾಗುತ್ತವೆ. ಈ ಕ್ಷಣಗಳೇ ನಿಮ್ಮ ಜೀವನದ ಅತ್ಯಂತ ಸುಂದರ ಕ್ಷಣಗಳಾಗಿವೆ.

ನಿಮ್ಮೊಳಗೆ ಕಾರ್ಯನಿರತವಾಗಿರುವ ಜೀವದ ಮೂಲ, ಆಲೋಚನಾ ಪ್ರಕ್ರಿಯೆಗಿಂತ ಬಹಳ ದೊಡ್ದದು.

ನೀವು ಮಹತ್ತರವಾದುದೊಂದರ ಸಂಪರ್ಕಕ್ಕೆ ಬಂದರೆ, ಚಿಕ್ಕ ಸಂಗತಿಗಳು ಸ್ವಾಭಾವಿಕವಾಗಿಯೇ ಕಣ್ಮರೆಯಾಗಿ ಹೋಗುತ್ತವೆ. ನಿಮ್ಮೊಳಗೆ ಕಾರ್ಯನಿರತವಾಗಿರುವ ಜೀವದ ಮೂಲ, ಆಲೋಚನಾ ಪ್ರಕ್ರಿಯೆಗಿಂತ ಬಹಳ ದೊಡ್ದದು. ನೀವು ಅದರ ಸಂಪರ್ಕಕ್ಕೆ ಎಂದೂ ಬಂದಿಲ್ಲವಾದ್ದರಿಂದ, ಆಲೋಚನೆಗಳು ಅಷ್ಟೊಂದು ಮುಖ್ಯವಾಗಿವೆ. ಅಥವಾ ಇದನ್ನು ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ನಿಮ್ಮ ಆಲೋಚನೆಗಳು ಬಹಳ ಮುಖ್ಯವಾಗಿವೆ ಎಂದರೆ, ಎಲ್ಲೋ ಒಂದು ಕಡೆ ನಿಮ್ಮ ವಿಕೃತಗೊಂಡ ಗ್ರಹಿಕೆಯಲ್ಲಿ, ಸೃಷ್ಟಿಕರ್ತನ ಸೃಷ್ಟಿ ಮುಖ್ಯವಾಗಿಲ್ಲ ಎಂದರ್ಥ. ನಿಮ್ಮ ಸೃಷ್ಟಿಯೇ ಅತ್ಯಂತ ಮುಖ್ಯವಾಗಿದೆ. ನೀವು ನಿಮ್ಮೊಳಗಿರುವ ಸೃಷ್ಟಿಕರ್ತ ಅಥವಾ ಸೃಷ್ಟಿಯ ಕುರಿತಾಗಲೀ ಗಮನ ಹರಿಸುವುದಿಲ್ಲ. ಆದರೆ ನಿಮ್ಮದೇ ಸೃಷ್ಟಿಯಲ್ಲಿ ಮುಳುಗಿಹೋಗಿರುವಿರಿ. ಇದು ಸೃಷ್ಟಿಕರ್ತನಿಗೆ ಮಾಡುವ ಅತಿದೊಡ್ಡ ಅಪಚಾರವಲ್ಲವೇ? ಒಂದು ಕ್ಷಣವೂ, ನಿಮ್ಮೊಳಗಿರುವ ಸೃಷ್ಟಿಯ ಮೂಲದೆಡೆಗೆ ನಿಮ್ಮ ಗಮನ ಹರಿಯಲಿಲ್ಲ. ಏನನ್ನೂ ಯೋಚಿಸದೇ ಅಥವಾ ಮಾಡದೇ, ಕೇವಲ ಒಂದು ಜೀವವಾಗಿ ಇಲ್ಲಿ ಸುಮ್ಮನೆ ಕುಳಿತಿರುವ ಆನಂದ ನಿಮಗೆ ತಿಳಿದರೆ, ಆಗ ಜೀವನ ಬೇರೆಯದೇ ರೀತಿಯಲ್ಲಿರುತ್ತದೆ.

ಸೃಷ್ಟಿಯ ಮೂಲದೊಂದಿಗೆ ಸಂಪರ್ಕ ಹೊಂದುವುದು

ಹೊರಗಿನ ಜಗತ್ತನ್ನು ತೆಗೆದುಕೊಂಡರೆ, ಬೇರೆ ಬೇರೆ ಮನುಷ್ಯರು ಬೇರೆ ಬೇರೆ ರೀತಿಯಲ್ಲಿ ಸಮರ್ಥರಾಗಿರುತ್ತಾರೆ. ಆದರೆ ಅಂತರಂಗದ ವಿಷಯಕ್ಕೆ ಬಂದರೆ, ನಾವೆಲ್ಲರೂ ಸಮಾನವಾಗಿ ಸಮರ್ಥರಾಗಿದ್ದೇವೆ. ಅದು ಯಾಕೆ ಸಾಧ್ಯವಾಗಿಲ್ಲ ಎಂದರೆ ನೀವು ಎಂದೂ ಗಮನ ನೀಡದಿರುವುದು ಕಾರಣವೇ ಹೊರತು, ಅದು ಕಷ್ಟ ಎಂದಾಗಲೀ, ಕೈಗೆಟಕದ್ದು ಎಂದಾಗಲೀ, ಅಥವಾ ನೀವು ಅನರ್ಹರು ಎಂದಾಗಲೀ ಅಲ್ಲ. ಆಂತರಿಕ ಸ್ವಭಾವದ ವಿಷಯದಲ್ಲಿ ಎಲ್ಲರೂ ಒಂದೇ ರೀತಿಯಲ್ಲಿ ಅರ್ಹರು. ಹೊರಗಿನ ಕೆಲಸಗಳಲ್ಲಿ, ನಿಮಗೆ ಒಂದು ಕಟ್ಟಡ ಕಟ್ಟಬೇಕೋ, ಅಡುಗೆ ಮಾಡಬೇಕೋ, ಅಥವಾ ಇನ್ನೇನನ್ನೋ ಮಾಡಬೇಕೋ, ನಮ್ಮಲ್ಲಿ ಪ್ರತಿಯೊಬ್ಬರೂ ಬೇರೆ ಬೇರೆ ರೀತಿಯಲ್ಲಿ ಸಮರ್ಥರು. ಆದರೆ ಅಂತರಂಗದ ವಾಸ್ತವಗಳಿಗೆ ಬಂದಾಗ, ನಾವೆಲ್ಲರೂ ಒಂದೇ ರೀತಿಯಲ್ಲಿ ಸಮರ್ಥರು. ಅದು ಒಬ್ಬರಿಗೆ ಸಾಧ್ಯವಾಗಿದೆ ಹಾಗೂ ಇನ್ನೊಬ್ಬರಿಗೆ ಇಲ್ಲ ಎಂದರೆ, ಇನ್ನೊಬ್ಬರು ಸಾಕಷ್ಟು ಗಮನ ಕೊಟ್ಟಿಲ್ಲ ಎಂಬುದಷ್ಟೇ ಕಾರಣ.

ನಿಮ್ಮ ಒಳಗೆ ಏನಿದೆಯೋ, ಅದನ್ನು ನಿಮ್ಮ ಬಿಟ್ಟು ಇನ್ಯಾರೂ ನಿಮಗೆ ನಿರಾಕರಿಸಲಾರರು.

ಜನರು ಆಧ್ಯಾತ್ಮಿಕ ಪ್ರಕ್ರಿಯೆ ಬಹಳ ಕಷ್ಟಕರವಾದುದೆಂಬ ನಿರ್ಧಾರಕ್ಕೆ ಬಂದಿದ್ದಾರೆ, ಏಕೆಂದರೆ ಅವರು ತಪ್ಪಾದ ಸಂಗತಿಗಳನ್ನು ಮಾಡುತ್ತಿದ್ದಾರೆ. ಹೊರಜಗತ್ತಿನಲ್ಲಿ ನೀವು ಸರಿಯಾದ ಸಂಗತಿಗಳನ್ನು ಮಾಡದ ಹೊರತು ಕೆಲಸವಾಗುವುದಿಲ್ಲ ಎಂಬುದು ನಿಮಗೆ ಅರಿವಾಗಿದೆ. ಅದು ಅಂತರಂಗದ ವಿಷಯದಲ್ಲೂ ಸತ್ಯ. ಒಂದು ದಿನ, ಇಲ್ಲೇ ಹತ್ತಿರದ ಹಳ್ಳಿಗೆ ಪ್ರವಾಸಿಯೊಬ್ಬ ಬಂದು, “ಈಶಾ ಯೋಗ ಕೇಂದ್ರ ಇಲ್ಲಿಂದ ಎಷ್ಟು ದೂರ?” ಎಂದು ಕೇಳಿದ.

ಅದಕ್ಕೆ ಹಳ್ಳಿಯ ಹುಡುಗ ಹೇಳಿದ, “24,996 ಮೈಲುಗಳು”.

ಅದಕ್ಕೆ ಪ್ರವಾಸಿ, “ಏನು! ಅಷ್ಟೊಂದು ದೂರವೇ?”

ಹುಡುಗ ಹೇಳಿದ, “ಹೌದು, ನೀವು ಹೋಗುತ್ತಿರುವ ದಿಕ್ಕಿನಲ್ಲಿ. ವಿರುದ್ಧವಾಗಿ ಅದು ಕೇವಲ ನಾಲ್ಕು ಮೈಲು” ಎಂದು.

ನೀವು ಒಂದು ದಿಕ್ಕಿನಲ್ಲಿ ನೋಡುತ್ತಾ ಆಧ್ಯಾತ್ಮಿಕರಾಗಲು ಪ್ರಯತ್ನಿಸುತ್ತಿರುವಿರಿ - ಇದು ಬಹಳ ದೂರದ ಹಾದಿ. ನೀವು ಬ್ರಹ್ಮಾಂಡದಾಚೆ ಹೋಗಿ ತಿರುಗಿ ಬರಬೇಕು. ಅದೇ ನೀವು ಸ್ವಲ್ಪ ವಿರುದ್ಧ ದಿಕ್ಕಿನಲ್ಲಿ ತಿರುಗಿದರೆ, ಅದು ಇಲ್ಲೇ ಇದೆ - ಏಕೆಂದರೆ ನೀವು ಹುಡುಕುತ್ತಿರುವುದು ನಿಮ್ಮೊಳಗೇ ಇದೆ, ನಿಮ್ಮ ಹೊರಗೆ ಅಲ್ಲ. ನಿಮ್ಮ ಒಳಗೆ ಏನಿದೆಯೋ, ಅದನ್ನು ನಿಮ್ಮನ್ನು ಬಿಟ್ಟು ಇನ್ಯಾರೂ ನಿಮಗೆ ನಿರಾಕರಿಸಲಾರರು. ಯಾರಾದರೂ ನಿಮಗೆ ನಿಮ್ಮದೇ ಅಂತರಂಗಕ್ಕೆ ಪ್ರವೇಶ ನಿರಾಕರಿಸಲು ಸಾಧ್ಯವೇ? ಅದು ಸಾಧ್ಯವಾಗುತ್ತಿಲ್ಲ ಎಂದರೆ, ನೀವು ಸಾಕಷ್ಟು ತುಡಿತವನ್ನು ಸೃಷ್ಟಿಸಿಕೊಂಡಿಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಬೇರೆ ಯಾವುದೇ ಕಾರಣವಿಲ್ಲ. 

ನೀವು ಮನಸ್ಸಿನಿಂದ ಹೊರಗಿದ್ದೀರೇ?

ಈಗ, ಆಲೋಚನೆಗಳನ್ನು ನಿಗ್ರಹಿಸಲು ಪ್ರಯತ್ನಿಸಬೇಡಿ. ಜನರು ನಿಮಗೆ “ಮನಸ್ಸನ್ನು ನಿಯಂತ್ರಿಸಿ” ಎಂದಿರುವುದು ಅತಿದೊಡ್ಡ ತಪ್ಪಾಗಿದೆ. ನೀವು ಒಮ್ಮೆ ನಿಮ್ಮ ಮನಸ್ಸನ್ನು ನಿಯಂತ್ರಿಸಲು ಪ್ರಯತ್ನಿಸಿದರೆ, ನಿಮ್ಮ ಕಥೆ ಮುಗಿಯಿತು! ನೀವು ಈಗ ‘ಶಾಂಭವಿ ಮಹಾಮುದ್ರ’ವನ್ನು ಅಭ್ಯಾಸ ಮಾಡುತ್ತಿರುವಿರಿ ಎಂದುಕೊಳ್ಳೋಣ. ನೀವು ಆ ಪ್ರಕ್ರಿಯೆಯನ್ನು ಮಾಡಿದರೆ, ಅದು ನಿಮ್ಮ ಮತ್ತು ನಿಮ್ಮ ದೇಹದ ನಡುವೆ ಹಾಗೂ ನಿಮ್ಮ ಮತ್ತು ನಿಮ್ಮ ಮನಸ್ಸಿನ ನಡುವೆ ಒಂದು ಅಂತರವನ್ನು ಸೃಷ್ಟಿಸುತ್ತದೆ. ನೀವು ನಿಮ್ಮ ಶಾಂಭವಿಯನ್ನು ಮಾಡಿ ಸುಮ್ಮನೆ ಕೂರಿ - ನಿಮ್ಮ ದೇಹ ಇಲ್ಲಿದೆ, ನಿಮ್ಮ ಮನಸ್ಸು ಆ ಕಡೆ ಇದೆ ಮತ್ತು ನೀವು ಏನನ್ನು “ನಾನು” ಎನ್ನುವಿರೋ ಅದು ಮತ್ತೆಲ್ಲೋ ಇದೆ. ಯಾವಾಗ ಈ ಭಿನ್ನತೆ ಅರಿವಾಗುವುದೋ, ಆಗ ಮನಸ್ಸಿನೊಂದಿಗೆ ಯಾವ ಜಂಜಾಟವೂ ಇರುವುದಿಲ್ಲ.

ಯಾರಾದರೂ ನಿಮಗೆ ಮನಸನ್ನು ಉಪಯೋಗಿಸದೆ ಹುಚ್ಚರ ಹಾಗೆ ಆಡುತ್ತಿದ್ದೀರ ಎಂದರೆ, ಅವಮಾನಿತರಾಗದಿರಿ. ಅದು ಅವರು ನಿಮಗೆ ಕೊಡಬಹುದಾದ ಅತಿದೊಡ್ಡ ಶ್ಲಾಘನೆ.

ಒಮ್ಮೆ ನೀವು ಮನಸ್ಸಿನಿಂದ ಹೊರಗಿದ್ದರೆ, ಆಗ ಯಾವ ಸಮಸ್ಯೆಯೂ ಇಲ್ಲ. ಯಾರಾದರೂ ನಿಮಗೆ ಮನಸನ್ನು ಉಪಯೋಗಿಸದೆ ಹುಚ್ಚರ ಹಾಗೆ ಆಡುತ್ತಿದ್ದೀರ ಎಂದರೆ, ಅವಮಾನಿತರಾಗದಿರಿ. ಅದು ಅವರು ನಿಮಗೆ ಕೊಡಬಹುದಾದ ಅತಿದೊಡ್ಡ ಶ್ಲಾಘನೆ. ಅವರು ನಿಮಗೆ ಹೇಳುತ್ತಿರುವುದು “ನೀವು ಬುದ್ಧ” ಎಂದು. ಬುದ್ಧ ಎಂದರೆ ಆತ ತನ್ನ ಮನಸ್ಸಿನಿಂದ ಹೊರಗಿದ್ದಾನೆ ಎಂದು. ಜನ ಮನಸ್ಸಿನಿಂದ ಹೊರಗಿರುವುದು ಹುಚ್ಚುತನ ಎಂದುಕೊಳ್ಳುತ್ತಾರೆ. ಅದು ಹುಚ್ಚುತನ ಅಲ್ಲ. ಹುಚ್ಚುತನ ಯಾವಾಗಲೂ ಮನಸ್ಸಿನದ್ದು. ನೀವು ನಿಮ್ಮ ಮನಸ್ಸಿನಿಂದ ಹೊರಗಿದ್ದರೆ, ನೀವು ನೂರು ಪ್ರತಿಶತ ಸ್ವಸ್ಥ ಬುದ್ಧಿಯವರು. ಅದು ಹುಚ್ಚುತನದ ಕೊನೆ. ಈಗ ನೀವು ಜೀವನವನ್ನು ಅದಿರುವ ರೀತಿಯಲ್ಲೇ ನೋಡುವಿರಿ.

ಒಮ್ಮೆ ನೀವು ಜೀವನವನ್ನು ಮನಸ್ಸು ತೋರಿಸುತ್ತಿರುವ ರೀತಿಯಲ್ಲಿ ನೋಡದೇ, ಕೇವಲ ಅದಿರುವ ರೀತಿಯಲ್ಲಿ ನೋಡಿದರೆ, ಆಗ ಎಲ್ಲವೂ ಬಹಳ ಚಿಕ್ಕದು ಎಂಬುದು ನಿಮಗೆ ಗೋಚರಿಸುತ್ತದೆ. ನಿಮ್ಮ ಮನಸ್ಸು ಏನು ಮಾಡಬಲ್ಲದೋ, ಪ್ರಪಂಚ ಏನು ಮಾಡಬಲ್ಲದೋ, ಅವೆಲ್ಲವೂ ಎಷ್ಟು ಕ್ಷುಲ್ಲಕವೆಂದರೆ, ಅವುಗಳೊಂದಿಗೆ ನಿಮಗೆಷ್ಟು ಬೇಕೋ ಅಷ್ಟು ಆಟವಾಡಿ ಸುಮ್ಮನಾಗಬಹುದು. ನಿಮಗೆ ಬೇಡವಾದರೆ, ನೀವು ಸುಮ್ಮನೆ ಪಕ್ಕಕ್ಕೆ ಸರಿಯಬಹುದು. ಎರಡೂ ಪ್ರಜ್ಞಾಪೂರ್ವಕವಾದವು. ನಿಮ್ಮಲ್ಲಿ ವಿವಶತೆ ಎಂಬುದಿಲ್ಲ. ನೀವು ಯಾವಾಗ ಸೃಷ್ಟಿಯ ಮೂಲವನ್ನೇ ನೋಡಲಾರಂಭಿಸುವಿರೋ, ನಿಮ್ಮೊಳಗಿನ ಎಲ್ಲಾ ವಿವಶತೆಗಳೂ ದೂರವಾಗುತ್ತವೆ. ಈಗ ಎಲ್ಲವೂ ನಿಮ್ಮ ಆಯ್ಕೆಯ ಮೂಲಕವೇ ಹಾಗೂ ಜೀವನ ಸುಂದರವಾಗುತ್ತದೆ.

ಜೀವನ ಸುಂದರವಾಗುವುದು ಏನು ನಡೆಯುತ್ತಿದೆ ಎಂಬ ಕಾರಣಕ್ಕಲ್ಲ, ಆದರೆ ನೀವದನ್ನು ಆಯ್ಕೆ ಮಾಡಿ ಮಾಡುತ್ತಿರುವಿರಿ ಎಂಬ ಕಾರಣಕ್ಕೆ. ಯಾವುದೂ ಸುಂದರವೂ ಅಲ್ಲ, ಅಸಹ್ಯವೂ ಅಲ್ಲ. ನೀವು ಏನನ್ನೋ ಆಯ್ಕೆ ಮಾಡಿ, ಅದರಲ್ಲಿ ನಿಮ್ಮನ್ನು ತೊಡಗಿಸಿಕೊಂಡರೆ, ಎಲ್ಲವೂ ಸುಂದರವೇ. ಅದು ನಿಮ್ಮ ಮೇಲೆ ಹೇರಲಾಗಿದ್ದರೆ ಅಥವಾ ಅದು ವಿವಶತೆಯಿಂದ ನಡೆಯುತ್ತಿದ್ದರೆ, ಆಗ ಎಲ್ಲವೂ ಭಯಾನಕ. ಇದು ಮಾನಸಿಕ ಚಟುವಟಿಕೆಗೂ ಅನ್ವಯವಾಗುತ್ತದೆ. ಅದು ಪ್ರಜ್ಞಾಪೂರ್ವಕವಾಗಿದ್ದರೆ, ಅದ್ಭುತ ಉಪಕರಣವೇ ಆಗಿರುವ ಮನಸ್ಸಿನೊಂದಿಗೆ ನೀವು ಆಟವಾಡಬಹುದಿತ್ತು. ಆದರೆ ಅದು ವಿವಶತೆಯಿಂದ ನಡೆಯುತ್ತಿರುವುದಕ್ಕಾಗಿ, ಒತ್ತಡಮಯವಾಗಿದೆ.  

Editor's Note:  Ready to dig deeper? Here is a collection of eye-opening articles and videos by Sadhguru covering different aspects of the mind. A smorgasbord of key insights, every aspect is explored at a fundamental level and provides pragmatic tools to enhance your life.

The Present Moment

In this blog, Sadhguru explains how shedding the burden of the past to move into the present moment as a completely fresh life is a significant step towards inner freedom. He narrates the story of sage Vyasa and his son Suka to illustrate that only a person who does not carry the past is truly sinless.

Read More…

Overcoming Negative Thoughts

When life situations become hard to handle and just going through the day seems like a challenge, many succumb to the vicious cycle of negative thinking. But can negative thoughts be avoided? Is it better to always look at the bright side rather than at the whole picture? Sadhguru promptly dismantles such questions by explaining that there is no such thing as positive or negative thoughts.

Read More…

Yoga for Mental Health

The human mind is a powerful instrument and when it goes out of control, it can cause enormous misery. It is unfortunate that mental illness is on the rise and in these challenging times, there seems to be no solution in sight. Approaching a delicate topic with artful tenderness, Sadhguru reveals the fragility of human sanity and explores various factors that are leading to the rise in mental illness, from culture to religion and even the chemistry of the human body.

Read More…

Paying Attention

In this poignant article, Sadhguru explains how one’s ability to function well in the world is largely a product of one’s ability to pay attention. Adding a spiritual aspect to the topic, he reveals that heightening one’s attention can open up miraculous dimensions beyond one’s normal capability. Sadhguru reveals how he consciously crafts situations for people around him so that they need to pay deeper levels of attention as a means for their spiritual growth.

Read More…

Taking a Deep Breath

The Yogic sciences have given enormous importance to the ability of breath and mind to affect each other. However, the breath can become more than just a means to manage the mind. In this article, Sadhguru expounds on the deeper aspects of breath and how it can be used as a passageway to a dimension beyond the physical. Approaching the topic from a hardcore Yogic perspective, he explains how the breath can lead one to mukti or ultimate liberation.

Read More…

Reducing Stress

Minister of State (I/C) for Information & Broadcasting and Olympic Silver medalist Colonel Rajyavardhan Singh Rathore asks Sadhguru about how youth can stay stress-free and focused during challenging times. In response, Sadhguru talks about information overload, social media, ambition, lifestyle and enhancing one’s life to a higher possibility. He clarifies that technology is not a source of stress but can be a tremendous empowerment if handled well.                     

Watch Video…

Feel Overwhelmed by Life

In this video, Indian actress Juhi Chawla asks Sadhguru about what to do when life overwhelms you. In his typical straight-shooting fashion, Sadhguru exclaims that every moment of life should overwhelm you! This comes as a potent reminder to step out of the straight jacket of one’s mind and experience the pure grandeur of life.

Watch Video…