ಎರಡು ಭಾಗಗಳ ಸರಣಿಯ ಎರಡನೆಯ ಭಾಗದಲ್ಲಿ, ಸದ್ಗುರುಗಳು ಕರ್ಮವು ಹೇಗೆ ಅನೇಕತೆಯ ಮಾಯೆಯಾಗಿದೆ ಎಂಬುದನ್ನು ವಿವರಿಸುತ್ತಾರೆ, ಮತ್ತು ಕ್ರಿಯೆಗಳು ಹಾಗೂ ಪ್ರಾಣಾಯಾಮಗಳು ಆಕಾಶಿಕ ಶರೀರವನ್ನು ಹೇಗೆ ಬಲಪಡಿಸುವ ಪ್ರಕ್ರಿಯೆಗಳಾಗಿವೆ ಮತ್ತು ನಮ್ಮನ್ನು ನಾವು ಕರ್ಮದಿಂದ ಅಂತರವಿರಿಸಿಕೊಳ್ಳುವುದು ಹೇಗೆ ಎಂಬುದನ್ನು ವಿವರಿಸುತ್ತಾರೆ.

ಸದ್ಗುರು: ಕರ್ಮವು ಮೂಲತಃ ಅನೇಕತೆಯ ಮಾಯೆಯಾಗಿದೆ. "ಮಾಯೆ" ಎಂಬುದನ್ನು ಸಾಮಾನ್ಯವಾಗಿ "ಭ್ರಮೆ" ಎಂದು ಅನುವಾದಿಸಲಾಗುತ್ತದೆ, ಆದರೆ ಆ ಪದವು ಎಲ್ಲವನ್ನೂ ತಿಳಿಯಪಡಿಸುವುದಿಲ್ಲ. ಆದರೆ ಸದ್ಯಕ್ಕೆ ಮಾಯೆ ಎಂದರೆ ಭ್ರಮೆ ಎಂದು ಹೇಳೋಣ. ಅನೇಕತೆಯ ಭ್ರಮೆಯೇ ಕರ್ಮದ ವಸ್ತುವಿನ ಅಡಿಪಾಯವಾಗಿದೆ. ನೀವು "ಇದು ನಾನು, ಅದು ನೀನು" ಎಂಬ ಭಾವನೆಯಲ್ಲಿ ನೆಲೆಗೊಂಡಿರುವವರೆಗೆ, ಕರ್ಮವು ಒಂದು ದೃಢವಾದ ವಾಸ್ತವವಾಗಿರುತ್ತದೆ. ಅದು ಘನವಾದ, ನಿಜವಾದ, ಉಕ್ಕಿನ ರಚನೆಯಂತೆ.

ಆದರೆ, ನೀವು "ಯಾವುದು ನಾನು ಮತ್ತು ಯಾವುದು ನಾನಲ್ಲ?" ಎಂದು ಗೊಂದಲಕ್ಕೊಳಗಾದರೆ, ತಕ್ಷಣ ಕರ್ಮವು ಅದರ ಅಡಿಪಾಯವನ್ನು ಕಳೆದುಕೊಳ್ಳುತ್ತದೆ. ನೀವು ಸುತ್ತಲೂ ನೋಡಿದಾಗ ಯಾವುದು ನೀವು ಮತ್ತು ಯಾವುದು ನೀವಲ್ಲ ಎಂದು ತಿಳಿಯದಿದ್ದರೆ, ಈ ಗೊಂದಲದಲ್ಲಿ ಕರ್ಮದ ಅಡಿಪಾಯವು ಇನ್ನು ಮುಂದೆ ನಿಲ್ಲಲಾರದೆ ಕುಸಿದುಬೀಳುತ್ತದೆ. ಒಂದು ಕ್ಷಣದ ಗೊಂದಲದಲ್ಲಿ, ಹಠಾತ್ತಾಗಿ, ಕರ್ಮದ ಸಂಪೂರ್ಣ ರಚನೆಗಳು ಕುಸಿದುಬೀಳುತ್ತವೆ. ನೀವು ಗಮನಿಸಿದ್ದೀರಾ, ನೀವು ಯಾರನ್ನಾದರೂ ಪ್ರೀತಿಸಿದರೆ, ನಿಮ್ಮ ಇಷ್ಟ-ಅನಿಷ್ಟಗಳು, ನೀವು ಯಾರು, ನಿಮಗೆ ಏನು ಇಷ್ಟ, ಏನು ಇಷ್ಟವಿಲ್ಲ, ಎಲ್ಲವೂ ಸ್ವಲ್ಪ ಕದಡಿದಂತಾಗುತ್ತದೆ - ಕನಿಷ್ಠ ಕೆಲವು ದಿನಗಳವರೆಗಾದರೂ, ನಂತರ ಅದು ಮತ್ತೆ ನಿಮಗೆ ಮರಳಿರಬಹುದು! ನೀವು ಮಾಡಲಾರೆ ಎಂದು ಭಾವಿಸಿದ್ದನ್ನು ಮಾಡಲು ಪ್ರಾರಂಭಿಸಿದಿರಿ ಏಕೆಂದರೆ ನೀವು ಯಾರು ಎಂಬುದು ಸ್ವಲ್ಪ ಗೊಂದಲಕ್ಕೊಳಗಾಗಿತ್ತು. ಅನೇಕತೆಯ ಮಾಯೆಯು ಗೊಂದಲಕ್ಕೊಳಗಾಗಿತ್ತು ಏಕೆಂದರೆ ಎರಡು ವ್ಯಕ್ತಿಗಳ ನಡುವೆ ಸ್ವಲ್ಪ ಐಕ್ಯತೆ ಬಂದಿತ್ತು, ಮತ್ತು ಹಠಾತ್ತಾಗಿ ಕರ್ಮವು ಅದರ ಅಡಿಪಾಯವನ್ನು ಕಳೆದುಕೊಂಡು ಕುಸಿದುಬಿದ್ದಿತ್ತು.

ಅನೇಕತೆಯ ಸಮಸ್ಯೆ

ಇದು ಹೀಗೆ ನಡೆಯಿತು - 1944ರಲ್ಲಿ, ಎಂಟು ಹಿಟ್ಲರ್’ನ ತದ್ರೂಪರನ್ನು ಒಂದು ಸುರಕ್ಷಿತ ಮನೆಯಲ್ಲಿ ಇರಿಸಲಾಗಿತ್ತು. ಎಲ್ಲ ಜನರಲ್ಲಿ, ಇವರೇ ಅತ್ಯುತ್ತಮವಾಗಿ ಪೋಷಿಸಲ್ಪಟ್ಟ, ಅತ್ಯುತ್ತಮವಾಗಿ ನೋಡಿಕೊಳ್ಳಲ್ಪಟ್ಟ ಜನರಾಗಿದ್ದರು ಮತ್ತು ಅವರು ಯವಾಗಾದರೂ ಒಮ್ಮೊಮ್ಮೆ ಹೊರತುಪಡಿಸಿ ಬೇರೆಲ್ಲ ಸಮಯದಲ್ಲಿ ಏನೂ ಮಾಡಬೇಕಾಗಿರಲಿಲ್ಲ. ಅವರನ್ನು ಹಿಟ್ಲರ್‌ನಂತೆ ಇರಲು ತರಬೇತಿ  ನೀಡಲಾಗಿತ್ತು. ಅವರು ಅವನಂತೆ ಉಡುಪು ಧರಿಸುತ್ತಿದ್ದರು, ಅವನಂತೆ ತಿನ್ನುತ್ತಿದ್ದರು - ಅವನು ಮಾಡಿದ್ದನ್ನೆಲ್ಲ ಅವರೂ ಮಾಡಬೇಕಿತ್ತು ಏಕೆಂದರೆ ಅವರು ನಟಿಸಬೇಕಾದಾಗ, ಯಾರಿಗೂ ತಿಳಿಯದಿರುವಂತೆ ಮಾಡಬೇಕಿತ್ತು. ಆದ್ದರಿಂದ, ಈ ಜನರು ನಿಜವಾಗಿಯೂ ಚೆನ್ನಾಗಿ ಕಾಲ ಕಳೆಯುತ್ತಿದ್ದರು.

ನಂತರ ಹಿಟ್ಲರ್‌ನ ನಂಬಿಕಸ್ತ ಸಹಾಯಕರಲ್ಲಿ ಒಬ್ಬನಾದ ಹೆನ್ರಿಚ್ ಹಿಮ್ಮ್ಲರ್ ಬಂದನು. ಯಾರಾದರೂ ಬಂದಾಗ ನಿತ್ಯಕ್ರಮದಂತೆ, ಅವರು ತದ್ರೂಪಿಗಳನ್ನು ಹಿಟ್ಲರನ್ನು ವಂದಿಸುವಂತೆಯೇ ವಂದಿಸಬೇಕಿತ್ತು ಏಕೆಂದರೆ ಅದು ಅವರಿಗೆ ವಾಡಿಕೆಯಾಗಬೇಕಿತ್ತು. ಆದ್ದರಿಂದ, ಹಿಮ್ಮ್ಲರ್ ಬಂದು "ಹೈಲ್ ಹಿಟ್ಲರ್!" ಎಂದನು. ನಂತರ, ಅವನು "ನನ್ನಲ್ಲಿ ಒಳ್ಳೆಯ ಸುದ್ದಿ ಮತ್ತು ಕೆಟ್ಟ ಸುದ್ದಿ ಇದೆ" ಎಂದನು.

ಅವರೆಲ್ಲರೂ ಒಟ್ಟಿಗೆ, "ಮೊದಲು ಒಳ್ಳೆಯ ಸುದ್ದಿ" ಎಂದರು.

"ನಮ್ಮ ನಾಯಕ ಜೀವಂತವಾಗಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ."

"ಕೆಟ್ಟ ಸುದ್ದಿ...?"

"ದುರದೃಷ್ಟವಶಾತ್, ಅವರು ತಮ್ಮ ಎಡ ಕಣ್ಣನ್ನು ಕಳೆದುಕೊಂಡಿದ್ದಾರೆ," ಎಂದು ಹೇಳಿ ಕಾರ್ಕ್ ಸ್ಕ್ರೂ ಹೊರತೆಗೆದನು.

ಕರ್ಮವು ಹಾಗಿದೆ. ಅದು ಅನೇಕತೆಯ ಸಮಸ್ಯೆಯಾಗಿದೆ. ಆದ್ದರಿಂದ, ಮೊದಲ ಕರ್ತವ್ಯವೆಂದರೆ ಕರ್ಮವನ್ನು ಸೃಷ್ಟಿಸುವುದನ್ನು ನಿಲ್ಲಿಸುವುದು - ಜೀವನವು ತಾನಾಗಿಯೇ ಕಾರ್ಯನಿರ್ವಹಿಸುತ್ತದೆ. ಅಥವಾ ನೀವು ನಿಮ್ಮ ಎಲ್ಲಾ ಕರ್ಮವನ್ನು ಒಮ್ಮೆಲೇ ತ್ಯಜಿಸಬೇಕಾದರೆ, ಅದನ್ನೂ ಮಾಡಬಹುದು. ಆದರೆ ನೀವು ಅರ್ಥಮಾಡಿಕೊಳ್ಳಬೇಕಾದ ವಿಷಯವೆಂದರೆ, ಕರ್ಮವು ಕೇವಲ ಬಂಧನವಲ್ಲ, ಅದು ರಕ್ಷಣೆಯೂ ಹೌದು. ಅದು ನಿಮ್ಮನ್ನು ದೇಹದೊಂದಿಗೆ ಬಂಧಿಸುವ ಸಿಮೆಂಟ್ ಆಗಿದೆ. ಎಲ್ಲಾ ಕರ್ಮವು ವಿಸರ್ಜಿತವಾದರೆ, ನೀವು ನಿಮ್ಮ ದೇಹವನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ - ನೀವು ಅದನ್ನು ಬಿಟ್ಟುಬಿಡುವಿರಿ. ನೀವು ಇದನ್ನು ಅರಿಯದಿದ್ದರೆ, ಹೆಚ್ಚಿನ ವ್ಯಕ್ತಿಗಳಿಗೆ, ಜ್ಞಾನೋದಯದ ಕ್ಷಣ ಮತ್ತು ದೇಹವನ್ನು ಬಿಡುವ ಕ್ಷಣ ಒಂದೇ ಆಗಿರುತ್ತದೆ. ಕೇವಲ ಕ್ರಿಯಾ ಮಾರ್ಗದಲ್ಲಿರುವವರು, ದೇಹದ ಯಂತ್ರಶಾಸ್ತ್ರ ಮತ್ತು ನಟ್ ಹಾಗೂ ಬೋಲ್ಟ್‌ಗಳನ್ನು ತಿಳಿದಿರುವವರು ಮಾತ್ರ ಅದನ್ನು ಹಿಡಿದಿಟ್ಟುಕೊಳ್ಳುತ್ತಾರೆ.

ಆಕಾಶಿಕ ಶರೀರವನ್ನು ಕಾರ್ಯಕ್ಷಮಗೊಳಿಸುವುದು

ಯೋಗದಲ್ಲಿ ನಾವು ಮಾನವನನ್ನು ಐದು ಆವರಣಗಳ ಅಥವಾ ಶರೀರದ ಪದರಗಳ ಆಧಾರದ ಮೇಲೆ ನೋಡುತ್ತೇವೆ. ಮೂರು – ಭೌತಿಕ, ಮಾನಸಿಕ ಮತ್ತು ಪ್ರಾಣ ಶರೀರ – ಭೌತಿಕ ವಾಸ್ತವಗಳಾಗಿವೆ; ಸೂಕ್ಷ್ಮವಿರಬಹುದು ಆದರೆ ಇನ್ನೂ ಭೌತಿಕ. ಇನ್ನೊಂದು ಎರಡು – ಆಕಾಶಿಕ ಶರೀರ ಮತ್ತು ಆನಂದಮಯ ಶರೀರ – ಒಂದು ಭಿನ್ನ ಸ್ತರದಲ್ಲಿವೆ. ಆಕಾಶಿಕ ಶರೀರವು ಭೌತಿಕ ಮತ್ತು ಭೌತಿಕವಲ್ಲದರ ನಡುವೆಯಿದೆ. ಆನಂದಮಯ ಶರೀರವು ಪೂರ್ಣವಾಗಿ ಭೌತಿಕವಲ್ಲದ್ದು. ಭೌತಿಕ ಶರೀರ, ಮಾನಸಿಕ ಶರೀರ ಮತ್ತು ಪ್ರಾಣ ಶರೀರ ಕರ್ಮವನ್ನು ಹೊತ್ತಿದೆ. ಆದರೆ ಆಕಾಶಿಕ ಶರೀರ ಮತ್ತು ಆನಂದಮಯ ಶರೀರವು ಭೌತಿಕವಲ್ಲದ ಕಾರಣ ಯಾವುದೇ ಕರ್ಮದ ಸಾರವನ್ನು ಹೊಂದಿಲ್ಲ. ಭೌತಿಕ ಅಸ್ತಿತ್ವದ ಆಯಾಮವು ಕಾರಣ ಮತ್ತು ಪರಿಣಾಮದ ನಡುವೆ ನಡೆಯುತ್ತದೆ. ಆದರೆ ಭೌತಿಕವನ್ನು ಮೀರಿದುದು ಕಾರಣ ಮತ್ತು ಪರಿಣಾಮಗಳ ನಡುವೆ ಆಗುವಂಥದ್ದಲ್ಲ. ನೀವು ದಿವ್ಯತೆಯ ಸ್ವಾದವನ್ನು ಅನುಭವಿಸಲು ಪ್ರಾರಂಭಿಸಿದಾಗ, ತಕ್ಷಣ, ನಿಮ್ಮ ಕರ್ಮರಾಶಿ ಎಷ್ಟೇ ಇದ್ದರೂ ಅದಕ್ಕೆ ಯಾವ ಪ್ರಭಾವವೂ ಇರುವುದಿಲ್ಲ, ಏಕೆಂದರೆ ನೀವು ಯಾವುದೇ ಕರ್ಮದ ಸಾರವಿಲ್ಲದ ಭೌತಿಕವಲ್ಲದ ಕ್ಷೇತ್ರದ ಕಡೆ ಹೆಜ್ಜೆ ಇಡಲು ಪ್ರಾರಂಭಿಸುತ್ತಿದ್ದೀರಿ.

ಕರ್ಮವು ಅನೇಕತೆಯ ಸಮಸ್ಯೆಯಾಗಿದೆ. ಆದ್ದರಿಂದ, ಮೊದಲ ಕರ್ತವ್ಯವೆಂದರೆ ಕರ್ಮವನ್ನು ಸೃಷ್ಟಿಸುವುದನ್ನು ನಿಲ್ಲಿಸುವುದು - ಜೀವನವು ತಾನಾಗಿಯೇ ಕಾರ್ಯನಿರ್ವಹಿಸುತ್ತದೆ.
 

ಕ್ರಿಯಾ ಮತ್ತು ಪ್ರಾಣಾಯಾಮಗಳಂತಹ ಯಾವುದೇ ಪ್ರಕಾರದ ಪ್ರಜ್ಞಾಪೂರ್ವಕವಾದ ಉಸಿರಾಟದ ಪ್ರಕ್ರಿಯೆಗಳನ್ನು ಮಾಡಿದಾಗ, ನೀವು ಆಕಾಶಿಕ ಶರೀರವನ್ನು ಕಾರ್ಯಕ್ಷಮಗೊಳಿಸಲು ಪ್ರಯತ್ನಿಸುತ್ತಿದ್ದೀರಿ – ನಿಮ್ಮ ಆ ಒಂದು ಆಯಾಮ, ಯಾವುದಕ್ಕೆ ಭೌತಿಕ ಅಂಶವಿದ್ದರೂ ಭೌತಿಕವಲ್ಲದ್ದು. ನೀವು ಅದನ್ನು ಬಲಪಡಿಸಲು ಪ್ರಯತ್ನಿಸುತ್ತಿದ್ದೀರಿ, ಏಕೆಂದರೆ ನೀವು ಅದನ್ನು ಒಂದು ಮಾರ್ಗವನ್ನಾಗಿ ಮಾಡಲು ಬಯಸುತ್ತಿದ್ದೀರಿ, ನಿಮ್ಮ ಭೌತಿಕವಲ್ಲದ ಆಯಾಮಕ್ಕೆ ಅಡಚಣೆಯಾಗದಂತೆ. ಇದಕ್ಕೆ ಶಾರೀರಿಕ ಮತ್ತು ಮಾನಸಿಕ ಪ್ರಯೋಜನಗಳ, ಹಾಗೂ ಆಧ್ಯಾತ್ಮಿಕ ಆಯಾಮದಲ್ಲಿ ಹಲವಾರು ಅಂಶಗಳಿವೆ, ಆದರೆ ಒಂದು ಸರಳ ಅಂಶವೇನೆಂದರೆ, ಯಾವುದು ಭೌತಿಕ ಶರೀರ ಮತ್ತು ಸೃಷ್ಟಿಯ ಮೂಲವಾದ ಭೌತಿಕವಲ್ಲದ ಆಯಾಮದ ನಡುವೆ ಕೊಂಡಿಯಂತಿರುವುದೋ, ಇದೊಂದು ಪ್ರಬಲ ಶಕ್ತಿಯಾಗಿ ಪರಿಣಮಿಸಿದರೆ, ನಿಮ್ಮ ಭೌತಿಕ ಸ್ವರೂಪ, ನೀವು "ನಾನು" ಎಂದು ಕರೆಯುವ ಮಾನಸಿಕ ರಚನೆ, ಮತ್ತು ಈ ಎಲ್ಲದರ ಮೂಲವಾದ ಆಯಾಮ, ಸ್ವಾಭಾವಿಕವಾಗಿ ಸದಾ ಸಂಪರ್ಕದಲ್ಲಿರುತ್ತವೆ. ಇದೇನೆಂದರೆ ದಿವ್ಯತೆಯು ನಿಮ್ಮ ಜೀವನದ ಒಂದು ಕಲ್ಪನೆ ಅಥವಾ ನಂಬಿಕೆಯಲ್ಲದೆ, ದಿವ್ಯತೆಯು ನಿಮ್ಮ ಜೀವನದ ಒಂದು ಜೀವಂತ ಅಸ್ತಿತ್ವವಾಗಿರುತ್ತದೆ. ಇದುವೇ ಸಾಧನೆಯ ಮೂಲ, ಏನೆಂದರೆ ಈ ಮೂರು, ಕ್ಷಣ-ಕ್ಷಣದ ಆಧಾರದಲ್ಲಿ ಚೆನ್ನಾಗಿ ಒಗ್ಗೂಡಿದೆ ಹಾಗೂ ಸಂಪರ್ಕದಲ್ಲಿದೆ. ನಾವು ಉತ್ತುಂಗದ ಅನುಭವ ಅಥವಾ ಯಾವಗಲೋ ಒಮ್ಮೆ ಆಗುವ ಅನುಭವದ ನಿರೀಕ್ಷೆಯಲ್ಲಿಲ್ಲ, ನಾವು ಆ ಆಯಾಮದೊಂದಿಗೆ ನಿರಂತರ ಸಂಪರ್ಕದಲ್ಲಿರಲು ನೋಡುತ್ತಿದ್ದೇವೆ. ಕೇವಲ ಆಗ ಅದು ನೀವು ಜೀವಿಸುತ್ತಿರುವ ರೀತಿ, ನೀವು ಇರುವ ಬಗೆ, ನೀವು ಮಾಡಬಹುದಾದ ಕಾರ್ಯಗಳಲ್ಲಿ ವ್ಯಕ್ತಗೊಳ್ಳುತ್ತದೆ – ಪ್ರತಿಯೊಂದರಲ್ಲಿ.

Editor’s Note: Find more of Sadhguru’s insights in the book “Of Mystics and Mistakes.” Download the preview chapter or purchase the ebook at Isha Downloads.