ಉನ್ನತ ಸಾಧ್ಯತೆಗಳಿಗಾಗಿ ದೇಹವನ್ನು ಅಣಿಮಾಡಿಕೊಳ್ಳಲು ಅದನ್ನು ಕಾಲಕಾಲಕ್ಕೆ ಶುದ್ದೀಕರಿಸುವುದು ಒಂದು ಪ್ರಮುಖವಾದ ಅಂಶವಾಗಿದೆ. ಸ್ವಾಭಾವಿಕವಾಗಿಯೇ ನಿಮ್ಮ ದೇಹವನ್ನು ನಂಜುರಹಿತವನ್ನಾಗಿ ಮಾಡುವುದು ಅತ್ಯುತ್ತಮವಾಗಿದೆ. ಇದನ್ನು ಮನೆಯಲ್ಲಿಯೇ ಪ್ರಾರಂಭಿಸಬಹುದು. ಯೋಗಿ ಮತ್ತು ಅನುಭಾವಿ ಸದ್ಗುರುಗಳು ಶರೀರದಲ್ಲಿನ ಪಂಚ ಪ್ರಕೃತಿ ತತ್ತ್ವಗಳನ್ನು ಶುದ್ಧೀಕರಿಸುವ ಸರಳ ವಿಧಾನಗಳನ್ನು ಮತ್ತು ಯಾವ ರೀತಿಯಲ್ಲಿ ಶರೀರದಲ್ಲಿನ ನಂಜನ್ನು ಸ್ವಾಭಾವಿಕವಾಗಿ ಹೊರಹಾಕಬಹುದೆಂಬುದನ್ನೂ ತಿಳಿಸಿದ್ದಾರೆ.

ಸದ್ಗುರು: ಮೂಲಭೂತವಾಗಿ, ಈ ಶರೀರವು ಐದು ಪ್ರಕೃತಿಶಕ್ತಿಗಳಾದ ಜಲ, ಪೃಥ್ವಿ, ವಾಯು, ಅಗ್ನಿ ಮತ್ತು ಆಕಾಶಗಳಿಂದ ಕೂಡಿದ ಲೀಲೆಯಾಗಿದೆ. ಭಾರದಲ್ಲಿ ಈ ಶರೀರವನ್ನು ಪಂಚಭೂತಗಳಿಂದ ಕೂಡಿರುವ ಒಂದು ಸೂತ್ರದ ಬೊಂಬೆಯನ್ನೆಉವುದು ಸಾಮಾನ್ಯವಾಗಿದೆ. ಈ ಶರೀರವು ೭೨% ಜಲ, ೧೨% ಪೃಥ್ವಿ (ಮಣ್ಣು), ೬% ವಾಯು, ೪% ಅಗ್ನಿ ಹಾಗೂ ಉಳಿದ ೬% ಆಕಾಶ ತತ್ತ್ವದಿಂದ ಕೂಡಿದ ಸಂಯೋಜನೆಯಾಗಿದೆ.

ನಿಮ್ಮ ಆಂತರ್ಯದಲ್ಲಿ ಈ ಐದು ಪೃಕೃತಿ ಶಕ್ತಿಗಳು (ಪಂದಭೂತಗಳು) ಯಾವ ರೀತಿ ಕ್ರಿಯಾಶೀಲವಾಗಿರುತ್ತವೆ ಎನ್ನುವುದು ಎಲ್ಲವನ್ನೂ ನಿರ್ಧರಿಸುತ್ತದೆ. ಭೂತ ಎಂದರೆ ಪ್ರಕೃತಿ ತತ್ತ್ವಗಳು, ಭೂತ ಶುದ್ಧಿ ಎಂದರೆ ಈ ಪ್ರಕೃತಿ ತತ್ತ್ವಗಳ ದೋಷಗಳಿಂದ ಬಿಡುಗಡೆಗೊಳ್ಳುವುದು, ಅಂದರೆ ಶಾರೀರಕವಾಗಿ ಮುಕ್ತರಾಗುವುದು. ಯೋಗದಲ್ಲಿ ಭೂತಶುದ್ಧಿಯು ಶಾರೀರಕ ಮಿತಿಗಳಿಂದಾಚೆ  ಸಾಗುವ ಮೂಲ ಸಾಧನವಾಗಿದೆ. ಇದರಿಂದ ಶಾರೀರಕವಾಗಿರುವುದನ್ನೂ ಮೀರಿ ಇರುವ ಒಂದು ಆಯಾಮಕ್ಕೆ ತೆರೆದುಕೊಳ್ಳುವುದಾಗಿದೆ.

ಅತ್ಯಂತ ಪ್ರಾಕೃತಿಕ ರೀತಿಯಿಂದ ಭೂತಶುದ್ಧಿಯನ್ನು ನೀವು ಮಾಡಲು ಕೆಲವು ಸರಳ ವಿಧಾನಗಳಿವೆ. ಅದೇ ಅಂತಿಮ ಭೂತ ಶುದ್ದೀಯಲ್ಲ, ಆದರೆ ಪಂಚ ಭೂತಗಳನ್ನು ಶುದ್ದೀಕರಿಸುವ ಕೆಲವು ಕ್ರಿಯೆಗಳನ್ನು ನೀವು ಮಾಡಬಹುದು.

ಜಲ

ಪಂಚಭೂತಗಳಲ್ಲಿ ಜಲಕ್ಕೆ ನಮ್ಮ ಅತ್ಯಧಿಕ ಆಸ್ಥೆ  ಇದೆ. ನೀವು ಜಲದ ಬಗ್ಗೆ ಅತ್ಯಂತ ಜಾಗರೂಕತೆಯಿಂದರಬೇಕು ಏಕೆಂದರೆ ಅದು ಶೇಕಡ ೭೨ ಭಾಗದಷ್ಟಿದ್ದು ಮಹತ್ತರವಾದ ನೆನಪನ್ನು ಹೊಂದಿದೆ. ನೀವು ಮಾಡಬಹುದಾದ ಕೆಲಸವೆಂದರೆ ಸ್ವಲ್ಪ ಬೇವು ಅಥವಾ ತುಳಸಿ ಎಲೆಗಳನ್ನು ಅದರಲ್ಲಿ ಹಾಕುವುದು. ಅವುಗಳು ಜಲದಲ್ಲಿನ ರಾಸಾಯನಿಕ ಕಲ್ಮಶಗಳನ್ನು ತೆಗೆದು ಹಾಕುವುದಿಲ್ಲ ಆದರೆ ನೀರನ್ನು ಹೆಚ್ಚು ಕಂಪನಗಳಿಂದ ಮತ್ತು ಶಕ್ತಿಯಿಂದ ಕೂಡಿರುವಂತೆ ಮಾಡುತ್ತವೆ ಮತ್ತೊಂದು ವಿಷಯವೆಂದರೆ ತಾಮ್ರದ ಪಾತ್ರೆಯಲ್ಲಿ ನೀರನ್ನು ಶೇಖರಿಸಿಡುವುದು, ಅದರಿಂದ ಜಲವು ತಾಮ್ರದ ಗುಣವನ್ನು ಪಡೆದುಕೊಳ್ಳುತ್ತದೆ ಅದು ಪ್ರಯೋಜನಕಾರಿಯಾಗಿದೆ.

ಪೃಥ್ವಿ

ಪೃಥ್ವಿಯು ಶೇಕಡ ೧೨ರಷ್ಟಿದೆ. ಯಾವ ರೀತಿಯಲ್ಲಿ ಆಹಾರವು ನಿಮ್ಮೊಳಗೆ ಸೇರುತ್ತದೆ, ಯಾರ ಕೈಗಳಿಂದ ಅದು ನಿಮಗೆ ಬರುತ್ತದೆ, ಯಾವ ರೀತಿಯಲ್ಲಿ ಅದನ್ನು ನೀವು ಸೇವಿಸುವಿರಿ, ಯಾವ ರೀತಿಯಲ್ಲಿ ನೀವು ಅದನ್ನು ಸಮೀಪಿಸುವಿರಿ, ಈ ಅಂಶಗಳೆಲ್ಲವೂ ಮುಖ್ಯವಾಗಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ ನೀವು ಸೇವಿಸುವ ಆಹಾವೇ ಪ್ರಾಣವಾಗಿದೆ. ನಮ್ಮನ್ನು ಪೋಷಿಸುವುದಕ್ಕಾಗಿ ಬೇರೇ ಸ್ವರೂಪಗಳು ತಮ್ಮ ಪ್ರಾಣವನ್ನೇ ಸಮರ್ಪಸುತ್ತವೆ. ನಮ್ಮ ಜೀವವನ್ನು ಪೋಷಿಸುವುದಕ್ಕಾಗಿ ಪ್ರಾಣವನ್ನು ಕಳೆದುಕೊಳ್ಳುವ ಈ ಎಲ್ಲ ಸಜೀವಿಗಳಿಗೆ ನಮ್ಮ ಅಪಾ ಕೃತಜ್ಞತೆಗಳನ್ನು ತೋರಿಸಿ, ಸೇವಿಸಿದರೆ ನಿಮ್ಮೊಳಗೆ ಆಹಾರವು ಅತ್ಯಂತ ಭಿನ್ನ ರೀತಿಯಲ್ಲಿ ವರ್ತಿಸುವುದು.

ಗಾಳಿ

ವಾಯುವು ಶೇಕಡ ೬ರಷ್ಟಿದೆ. ಅದರಲ್ಲಿ ಕೇವಲ ಶೇಕಡ ಒಂದರಷ್ಟು ಅಥವಾ ಅದಕ್ಕೂ ಕಡಿಮೆ ನಿಮ್ಮ ಉಸಿರಾಗಿದೆ. ಉಳಿದಿದ್ದು ಅನೇಕ ವಿವಿಧ ರೀತಿಗಳಲ್ಲಿ ಸಂಭವಿಸುತ್ತಿದೆ. ನೀವು ಉಸಿರಾಡುವ ವಾಯುವು ಮಾತ್ರವಷ್ಟೇ ನಿಮ್ಮ ಮೇಲೆ ಪರಿಣಾಮ ಬೀರುವುದಿಲ್ಲ, ಅದನ್ನು ಯಾವ ರೀತಿಯಲ್ಲಿ ನಿಮ್ಮೊಳಗೆ ಹೇಗೆ ಇರಿಸಿಕೊಳ್ಳುವಿರೆಂಬುದೂ ಮುಖ್ಯವಾಗಿದೆ. ನೀವು ಆ ೧% ಗಾಳಿಯ ಮೇಲೂ ಎಚ್ಚರಿಕೆ ವಹಿಸಬೇಕು. ಆದರೆ ನೀವು ಪಟ್ಟಣವಾಸಿಗಳಾಗಿದ್ದರೆ, ನೀವು ಯಾವ ರೀತಿಯ ಗಾಳಿ ಸೇವನೆ ಮಾಡುತ್ತೀರೆನ್ನುವುದು. ನಿಮ್ಮ ಕೈಯಲ್ಲಿರುವುದಿಲ್ಲ. ಆದ್ದರಿಂದ ಗಾಳಿಸೇವನೆಗಾಗಿ ಪಾರ್ಕ್‌ನಲ್ಲಿ ನಡೆದಾಡಿ ಅಥವಾ ಕೆರೆಯ ಪಕ್ಕದಲ್ಲಿ ನಡೆದಾಡಿ.

ಅದರಲ್ಲೂ ವಿಶಿಷ್ಟವಾಗಿ, ನಿಮಗೆ ಮಕ್ಕಳಿದ್ದರೆ ಅವರನ್ನು ಕನಿಷ್ಠ ಪಕ್ಷ ತಿಂಗಳಿಗೊಮ್ಮೆಯಾದರೂ ಹೊರಗಡೆ ಕರೆದುಕೊಂಡು ಹೋಗಬೇಕು - ಸಿನಿಮಾಗಲ್ಲ ಅಥವಾ ಅಂತಹುದೇ ಯಾವುದಕ್ಕೂ ಅಲ್ಲ. ಏಕೆಂದರೆ ಆ ಸಭಾಂಗಣದ ಮಿತಿಯಲ್ಲಿನ ಗಾಳಿಯು ಅಲ್ಲಿ ತೆರೆಯ ಮೇಲೆ ಉಂಟಾಗುತ್ತಿರುವ ಶಬ್ದಗಳಿಂದ, ಉದ್ದೇಶಗಳಿಂದ ಮತ್ತು ಭಾವನೆಗಳಿಂದ ಜನರ ಮನಸ್ಸಿನ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಸಿನೆಮಾಕ್ಕೆ ಕರೆದುಕೊಂಡು ಹೋಗುವ ಬದಲು ಅವರನ್ನು ನದಿಯ ಬಳಿಗೆ ಕೊಂಡೊಯ್ಯಿರಿ, ಹೇಗೆ ಈಜುವುದು ಎಂಬುದನ್ನು ಹೇಳಿಕೊಡಿ ಅಥವಾ ಬೆಟ್ಟವನ್ನು ಹತ್ತುವುದಕ್ಕೆ ಕರೆದೊಯ್ಯಿರಿ. ನೀವೇನೂ ಹಿಮಾಲಯದವರೆಗೂ ಹೋಗಾಬೇಕಾದ್ದಿಲ್ಲ. ಮಗುವಿಗೆ ಒಂದು ಸಣ್ಣ ಬೆಟ್ಟವೇ ಪರ್ವತವಿದ್ದಂತೆ. ಒಂದು ಬಂಡೆಯೂ ಆಗಬಹುದು. ನೀವು ಅದನ್ನು ಹತ್ತಿ ಯಾವುದಾದರೊಂದರ ಮೇಲೆ ಕುಳಿತುಕೊಳ್ಳಿ, ಮಕ್ಕಳು ಅದನ್ನು ಅಪಾರವಾಗಿ ಆನಂದಿಸುವರು ಮತ್ತು ಆರೋಗ್ಯವಂತರಾಗುವರು. ನೀವು ಸಮರ್ಥರಾಗುವಿರಿ, ನಿಮ್ಮ ಶರೀರ ಮತ್ತು ಮನಸ್ಸು ವಿಭಿನ್ನ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತವೆ ಹಾಗೂ ಎಲ್ಲದಕ್ಕಿಂತಲೂ ಹೆಚ್ಚಾಗಿ, ಅತ್ಯಂತ ಪ್ರಮುಖ ವಿಚಾರವೆಂದರೆ ನೀವು ಸೃಷ್ಟಿಕರ್ತನ ಸೃಷ್ಟಿಯೊಡನೆ ಸಂಪರ್ಕ ಹೊಂದುವಿರಿ.

ಅಗ್ನಿ

ನಿಮ್ಮೊಳಗೆ ಯಾವ ಬಗೆಯ ಅಗ್ನಿಯು ಜ್ವಲಿಸುತ್ತಿದೆ ಎಂಬುದರ ಕುರಿತಾಗಿಯೂ ಕಾಳಜಿ ವಹಿಸಬಹುದು. ಪ್ರತಿದಿನವೂ ನಿಮ್ಮ ಶರೀರದ ಮೇಲೆ ಸೂರ್ಯನ ಶಾಖವು ಬಿಳಲಿ, ಏಕೆಂದರೆ ಸೂರ್ಯನ ಪ್ರಕಾಶವು ಇನ್ನೂ ಶುದ್ಧವಾಗಿದೆ. ಅದೃಷ್ಟವಶಾತ್, ಅದನ್ನು ಯಾರೂ ಕುಲುಷಿತಗೊಳಿಸಲಾಗುವುದಿಲ್ಲ. ನಿಮ್ಮ ಆಂತರ್ಯದಲ್ಲಿ ಎಂತಹ ಅಗ್ನಿಯು ಉರಿಯುತ್ತಿದೆ - ಅದು ದುರಾಸೆಯ ಅಗ್ನಿಯೇ, ದ್ವೇಷದ ಅಗ್ನಿಯೇ, ಕ್ರೋಧಾಗ್ನಿಯೇ, ಪ್ರೇಮಾಗ್ನಿಯೇ ಅಥವಾ ಕರುಣೆಯ ಅಗ್ನಿಯೇ - ನೀವು ಇವುಗಳ ಕುರಿತು ಕಾಳಜಿ ವಹಿಸಿದರೆ, ನಿಮ್ಮ ಶಾರೀರಿಕ ಹಾಗಾ ಮಾನಸಿಕ ಆರೋಗ್ಯದ ಕುರಿತಾಗಿ ಚಿಂತಿಸುವ ಅಗತ್ಯವಿರುವುದಿಲ್ಲ. ಅದು ತಂತಾನೇ ನಿರ್ವಹಿಸಲ್ಪಡುತ್ತದೆ.

ಆಕಾಶ

ಆಕಾಶವು ಸೃಷ್ಟಿಯ ಮೂಲ ಮತ್ತು ಸೃಷ್ಟಿಯ ನಡುವಿನ ಪರಿಸ್ಥಿತಿಯಾಗಿದೆ.

ನಾವು ಇತರ ನಾಲ್ಕು ಪ್ರಕೃತಿ ತತ್ತ್ವಗಳನ್ನು ಸಮರ್ಪಕವಾಗಿಟ್ಟುಕೊಂಡರೆ, ಆಕಾಶ ತತ್ತ್ವವು ತನ್ನನ್ನು ತಾನೇ ನೋಡಿಕೊಳುತ್ತದೆ. ನಿಮ್ಮ ಜೀವನದಲ್ಲಿ ಆಕಾಶ ತತ್ತ್ವದ ಸಹಕಾರವನ್ನು ಹೇಗೆ ಪಡೆಯುವುದೆಂಬ ಅರಿವಿದ್ದರೆ ನಿಮ್ಮದು ಒಂದು ಅನುಗ್ರಹಿತ ಜೀವನವಾಗುವುದು.

ಸಂಪಾದಕರ ಟಿಪ್ಪಣಿ: ಈ ಲೇಖನವು ಪ್ರಾಕೃತಿಕವಾಗಿ ನಂಜನ್ನು ಹೊರಹಾಕುವ ಮತ್ತು ದೇಹವನ್ನು ಶುದ್ದೀಕರಿಸುವ ಅನೇಕ ವಿಧಾನಗಳುಳ್ಳ ಮುಂಬರುವ ಪುಸ್ತಕದಿಂದ ಆಯ್ದ ಭಾಗವಾಗಿದೆ. ಯೋಗದ ದೃಷ್ಟಿಕೋನದಿಂದ ಕ್ಯಾನ್ಸರ್‌ನನ್ನು ಪರಿಶೋಧಿಸುತ್ತದೆ. ಮುಂಬರುವ ತಿಂಗಳುಗಳಲ್ಲಿ ಅದರ ಬಿಡುಗಡೆಯ ನಿರೀಕ್ಷೆಣೆಯಲ್ಲಿರಿ!