ವಿಷಯ ಸೂಚಿ

1.ಈ ಕ್ರಿಯೆಯು ಹೇಗೆ ಕೆಸಮಾಡುತ್ತದೆ?
2. ಶಾಂಭವಿ ಮಹಾಮುದ್ರೆ ಕುರಿತ ಅಧ್ಯಯನಗಳು
3. ಧ್ಯಾನದ ಪ್ರಯೋಜನಗಳು   
    3-1. ಸುಧಾರಿತ ಹೃದಯಾರೋಗ್ಯ
    3-2. ಮೆದುಳಿನ ಒಳಗಿನ ಹೊಂದಾಣಿಕೆ
    3-3. ಸುಧಾರಿತ ನಿದ್ರೆ
    3-4. ಉತ್ತಮವಾದ ಲಕ್ಷ್ಯ ಮತ್ತು ಕೇಂದ್ರೀಕರಣ
    3-5. ಋತುಚಕ್ರದ(ಮುಟ್ಟಿನ)  ಅಸ್ವಸ್ಥತೆಗಳ ಇಳಿಕೆ
4. ಧ್ಯಾನದ ಇತರ ಪ್ರಯೋಜನಗಳು
5. ಸಂಕ್ಷಿಪ್ತವಾಗಿ
6. ಪ್ರಯತ್ನಿಸಿ ನೋಡಿ

ಧ್ಯಾನವು ಅಧ್ಯಾತ್ಮಿಕ ಬೆಳೆವಣಿಗೆಗೆ ಒಂದು ಪ್ರಬಲ ಸಾಧನವಾಗಿದೆ ಹಾಗೂ ಭೌತಿಕ ಮತ್ತು ಮಾನಸಿಕೆ ಸೀಮಿತತೆಗಳನ್ನು ಮೆಟ್ಟಿ ನಿಲ್ಲಲು ಮೂಲ ಸಾಧನವಾಗಿದೆ.  “ಅಂತಃ ತಂತ್ರಜ್ಞಾನ”ಗಳ  ಶಿಕ್ಷಕರು ಮತ್ತು ಅಭ್ಯಾಸಕರು ಧ್ಯಾನ ಮತ್ತು ಯೋಗದಿಂದ ಬಹಳಷ್ಟು ದೈಹಿಕ ಮತ್ತು ಮಾನಸಿಕ ಪ್ರಯೋಜನಗಳನ್ನು ಅನುಭವಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ, ಧ್ಯಾನದ ಬಗ್ಗೆ ಹೆಚ್ಚುತ್ತಿರುವ ಅನೇಕ ವೈಜ್ಞಾನಿಕ ಅಧ್ಯಯನಗಳು ಮತ್ತು  ಸಂಶೋಧನೆಗಳು ಇದನ್ನು ಧೃಡೀಕರಿಸಿವೆ.

ಶಾಂಭವಿ ಮಹಾಮುದ್ರ ಈಶದ ಪರಿಚಯ ಅಭ್ಯಾಸವಾಗಿದೆ, ಇದೊಂದು ಪ್ರಾಚೀನ ಕ್ರಿಯೆಯಾಗಿದ್ದು, ಸ್ವಯಂ ಮುಡಿಪಾದ ಸಾಧಕರು ನಿರಂತರ ಧ್ಯಾನ ಮತ್ತು ಕ್ರಿಯಾಭ್ಯಾಸದಿಂದ(ಸಾಧನೆ) ಹೆಚ್ಚಿನ ಭಾವನಾತ್ಮಕ ಸಮತೋಲನ, ಏಕಾಗ್ರತೆ, ಕೇಂದ್ರೀಕರಣ, ಸ್ಥಿರತೆ ಮತ್ತು ಉತ್ತಮ ಆರೋಗ್ಯವನ್ನು ಪಡೆಯಬಹುದು ಎಂದು ಧೃಡೀಕರಿಸಿದ್ದಾರೆ. ವಾಸ್ತವವೆಂದರೆ, ಈ ಕ್ರಿಯೆಯ ನಿರಂತರ ಅಭ್ಯಾಸದಿಂದ ಆಗುವ ಪ್ರಯೋಜನಗಳನ್ನು ಮಾಪನ ಮಾಡಲು ವೈಜ್ಞಾನಿಕ ಅಧ್ಯಯನಗಳು ಮತ್ತು ಸಾಧನೆಯ ಸಮಯದಲ್ಲಿ ನಡೆಯುವ ಮೆದುಳಿನ ಕಾರ್ಯ ಚಟುವಟಿಕೆಗಳು ಹಾಗೂ  ಜನರ ಅರೋಗ್ಯ ಮತ್ತು  ಸೌಖ್ಯದ ಮೇಲೆ ಆಗುವ ಪರಿಣಾಮಗಳ  ಅಂಕಿಅಂಶಗಳ ಸಂಶೋಧನೆ ಚಾಲ್ತಿಯಲ್ಲಿವೆ. 

ಈ ಕ್ರಿಯೆಯು ಹೇಗೆ ಕೆಲಸಮಾಡುತ್ತದೆ? 

ಹೆಚ್ಚಿನ ಜನರು ಅತೃಪ್ತಿ ಮತ್ತು ಅನಾರೋಗ್ಯದಿಂದ ಇರಲು ಕಾರಣ ದೈಹಿಕ, ಮಾನಸಿಕ ಮತ್ತು ಪ್ರಾಣಮಯ ಶರೀರಗಳು ಹೊಂದಾಣಿಕೆಯಲ್ಲಿ ಇಲ್ಲದೇ  ಇರುವುದು.

ಸದ್ಗುರು ಹೇಳುತ್ತಾರೆ, “ನಮ್ಮೊಳಗಿನ ವ್ಯವಸ್ಥೆಯ ವಿನ್ಯಾಸಕ್ಕೆ  ಅಂದರೆ, ಈ ದೇಹ, ಮನಸ್ಸು .....  ನಮ್ಮ ಅಂತರ್ ಅರಿವನ್ನು ನಮ್ಮದೇ ರೀತಿಯಲ್ಲಿ ರೂಪಿಸಿಕೊಳ್ಳಲು ಒಂದು ನಿರ್ದಿಷ್ಟ ಮಾರ್ಗವಿದೆ.” ಸಾಂಪ್ರದಾಯಿಕವಾಗಿ, ಮಾನವ ದೇಹವನ್ನು ಯೋಗವು ಐದು ಪದರಗಳಾಗಿ ಗುರುತಿಸುತ್ತದೆ: ಭೌತಿಕ ಶರೀರ, ಮಾನಸಿಕ ಶರೀರ, ಪ್ರಾಣಮಯ ಶರೀರ,  ವಿಜ್ಞಾನಮಯ ಶರೀರ ಮತ್ತು ಆನಂದಮಯ ಶರೀರ. ಹೆಚ್ಚಿನ ಜನರು ಅತೃಪ್ತಿ ಮತ್ತು ಅನಾರೋಗ್ಯದಿಂದ ಇರಲು ಕಾರಣ ದೈಹಿಕ, ಮಾನಸಿಕ ಮತ್ತು ಪ್ರಾಣಮಯ ಶರೀರಗಳು ಸಮ ಜೋಡಣೆಯಲ್ಲಿ  ಇಲ್ಲದೇ  ಇರುವುದು. ಸದ್ಗುರು ಹೀಗೆ ವಿವರಿಸುತ್ತಾರೆ, “ಇವುಗಳು ಸಾಮರಸ್ಯದಿಂದಿದ್ದರೆ, ಒಂದು ಸಹಜ  ಅಭಿವ್ಯಕ್ತಿ, ಅಂದರೆ, ಒಬ್ಬ ಮನುಷ್ಯನಲ್ಲಿ ಅತಿಯಾದ ಆನಂದಾಭಿವ್ಯಕ್ತಿ ತಂತಾನೆ  ಉಂಟಾಗುತ್ತದೆ. ಈಗ ನಮ್ಮ ಪ್ರಯತ್ನವೆಂದರೆ, ಈ ಮೂರೂ ಶರೀರಗಳನ್ನು ಸದಾಕಾಲ ಸಾಮರಸ್ಯದಿಂದ ಇರಿಸಿಕೊಳ್ಳುವ ಒಂದು ತಂತ್ರಜ್ಞಾನವನ್ನು ಹೊಂದುವುದು, ಇದರಿಂದ ಆನಂದವೆಂಬುದು ಒಂದು ಆಕಸ್ಮಿಕ ಅನುಭವವಾಗದೆ, ಒಂದು ಸಾಧಾರಣ  ಸ್ಥಿತಿಯಾಗುತ್ತದೆ ಮತ್ತು  ನಮ್ಮ ಜೀವನದ ಸಹಜ ಮಾರ್ಗವಾಗುತ್ತದೆ.

ಶಾಂಭವಿ ಮಹಾಮುದ್ರೆ ಕುರಿತ ಅಧ್ಯಯನಗಳು

ಶಾಂಭವಿ ಮಹಾ ಮುದ್ರೆ ಕುರಿತ ಅಧ್ಯಯನಗಳು ನಾನಾ ರೀತಿಯದಾಗಿದೆ: ಕೆಲವು ಖಾಯಿಲೆಗಳು ಮತ್ತು ಅದರ ಔಷಧೋಪಚಾರಗಳ ಪರಿಶೀಲನೆಯಾದರೆ, ಇನ್ನು ಕೆಲವು ಋತುಚಕ್ರದ  ಅಸ್ವಸ್ಥೆತೆಗಳ  ಅಧ್ಯಯನವಾಗಿದೆ, ಇನ್ನು ಕೆಲವು ಅಧ್ಯಯನಗಳು ಈ ಧ್ಯಾನದಿಂದ ನಿದ್ದೆ, ಹೃದಯ ಬಡಿತದ ಏರಿಳಿತ, ಮೆದುಳಿನ ಚಟುವಟಿಕೆ ಮುಂತಾದವುಗಳ ಬಗ್ಗೆ ಸಂಶೋಧನೆ ನಡೆಸಿವೆ.

ಕೆಲವು ಪ್ರಮುಖ ಅಧ್ಯಯನಗಳ ಫಲಿತಾಂಶಗಳತ್ತ ಒಂದು ನೋಟ ಹರಿಸೋಣ.

ಧ್ಯಾನದ ಪ್ರಯೋಜನಗಳು

#1: ಸುಧಾರಿತ ಹೃದಯಾರೋಗ್ಯ

2008 ಮತ್ತು 2012 ರಲ್ಲಿ ಪ್ರಕಟಗೊಂಡ ಎರಡು ಅಧ್ಯಯನಗಳು ಶಾಂಭವಿ ಮಹಾಮುದ್ರ ಹೇಗೆ ಹೃದಯಾರೋಗ್ಯವನ್ನು ಬೆಂಬಲಿಸುತ್ತದೆ ಎಂದು ಪರಿಶೀಲಿಸಿತು. ಹೃದಯದ ಸ್ವನಿಯಂತ್ರಿತ ನರಮಂಡಲದ ವ್ಯವಸ್ಥೆಯ ಉತ್ತಮ ಸಮತೋಲನ ಮತ್ತು ಅಭ್ಯಾಸದ ಸಮಯದಲ್ಲಿ ಹೆಚ್ಚಿದ  ಸಮಗ್ರ ರಕ್ರದೊತ್ತಡದ ಏರಿಳಿತ (Heart Rate Variability -HRV)ವನ್ನು ಗಮನಿಸಿತು. ಹೆಚ್ಚಿನ HRV ಒತ್ತಡದ ಸನ್ನಿವೇಶಗಳಲ್ಲಿ ಉತ್ತಮ ಪ್ರತಿರೋಧಕ ಶಕ್ತಿ ಹೊಂದಲು ಮತ್ತು ಮನುಷ್ಯರ ಇರುವಿಕೆಯ ಪ್ರಯೋಜನ ಹೆಚ್ಚಿಸುತ್ತದೆ. ಆದರೆ ಕಡಿಮೆ HRV, ಪರಿಧಮನಿ ಸಂಬಂಧಿತ ಖಾಯಿಲೆ, ಅಧಿಕ ರಕ್ತದೊತ್ತಡ, ದೀರ್ಘಕಾಲಿಕ ಹೃದಯ ವೈಫಲ್ಯಗಳು, ಹೃದಯ ಸ್ನಾಯು ಊತದಿಂದುಂಟಾಗುವ ಸಾವು - ಹೀಗೆ ನಾನಾ ಹೃದಯ ಸಂಬಂಧಿ ಖಾಯಿಲೆಗಳಿಗೆ ಕಾರಣವಾಗಿದೆ. ಶಾಂಭವಿ ಮಹಾಮುದ್ರ ಮತ್ತು ಇತರ ಈಶ ಯೋಗಾಭ್ಯಾಸಗಳಿಂದ ಅಧಿಕ ವ್ಯಾಯಾಮ ಸಹಿಷ್ಣುತೆ, ಒತ್ತಡದ ಸನ್ನಿವೇಶಗಳಲ್ಲಿ ಉತ್ತಮ ಹೃದಯ ಪ್ರತಿಕ್ರಿಯೆ, ರಕ್ತ ಪರಿಚಲನೆ ಮತ್ತು ರಕ್ತದೊತ್ತಡ ಮತ್ತು ಹೃದಯ ತೊಂದರೆಗಳಿಗೆ ಸಿಲುಕುವ  ಸಂಭವಗಳನ್ನು ಕಡಿಮೆಗೊಳಿಸುತ್ತದೆ. 

#2: ಮೆದುಳಿನ ಒಳಗಿನ ಹೊಂದಾಣಿಕೆ

ಸೆಂಟರ್ ಫಾರ್ ಬಯೋಮೆಡಿಕಲ್ ಇಂಜಿನಿಯರಿಂಗ್, ಐಐಟಿ ಡೆಲ್ಲಿ, ಒಬ್ಬ ಅಭ್ಯಾಸಿಗರ  ಮೆದುಳಿನ ಚಟುವಟಿಕೆಯನ್ನು ಕ್ರಿಯಾಭ್ಯಾಸದ ಮೊದಲು, ಅಭ್ಯಾಸದ ಸಮಯದಲ್ಲಿ, ಮತ್ತು ನಂತರ  ಮೆದುಳಿನ ವಿದ್ಯುತ್ ಚಟುವಟಿಕೆ -EEG (Electroencephalography)ಯ ಮೂಲಕ ದಾಖಲಿಸಿ,  ಪರಿಶೀಲಿಸಿ  ಅಧ್ಯಯನ ನಡೆಸಿತು. ಫಲಿತಾಂಶಗಳು ಸೂಚಿಸಿದ್ದೇನೆಂದರೆ, ಅಭ್ಯಾಸಿಗರು, ಎಡ ಮತ್ತು ಬಲ ಮೆದುಳಿನ ಭಾಗಗಳ ಸಮನ್ವಯವನ್ನು ಅನುಭವಿಸಿದರು. EEG ಸಮನ್ವಯವೆಂದರೆ, ಮೆದುಳಿನ ನಾನಾ ಭಾಗಗಳ ಹೊಂದಾಣಿಕೆಯ ಅಳತೆಗೋಲು. ಹೆಚ್ಚಿನ ಹೊಂದಾಣಿಕೆ, ಮೆದುಳಿನ ನಾನಾ ಭಾಗಗಳ ನಡುವೆ ಮಾಹಿತಿ  ವಿನಿಮಯ, ಮತ್ತು ಕಾರ್ಯ ಚಟುವಟಿಕೆಗಳ ಸಮನ್ವಯತೆಯ ಹೆಚ್ಚಳ.  ಹೆಚ್ಚಿನ ಹೊಂದಾಣಿಕೆ ಉತ್ತಮವಾದ  ಬುದ್ಧಿs ಮತ್ತು ಸೃಜನಶೀಲತೆ, ಹಾಗು ಭಾವನಾತ್ಮಕ ಸಮತೋಲನ ಮತ್ತು ಸರಳ  ಸಂವೇದನಾಶೀಲತೆಗೂ ಇದು  ಕಾರಣವಾಗಿದೆ.

ಸಂಶೋಧಕರು ಮುಖ್ಯವಾದ  EEG ಸ್ಪೆಕ್ಟ್ರಲ್ ಬ್ಯಾಂಡ್ ಗಳಾದ ಆಲ್ಫಾ, ಬೀಟ, ಡೆಲ್ಟಾ ಮತ್ತು ತೀಟಗಳ ಸಂಕೇತಗಳನ್ನೂ  ಮಾಪನ ಮಾಡಿದರು. ಶಾಂಭವಿ ಅಭ್ಯಾಸಕರಲ್ಲಿ  ಆಲ್ಫಾ  ಬ್ಯಾಂಡ್ ನ ಪ್ರಭಾವ ಅಧಿಕವಾಗಿತ್ತು.  ಇದು ಅವರ ಒತ್ತಡದ ಮಟ್ಟ ಅತ್ಯಂತ ಕಡಿಮೆ ಎಂದು ಸೂಚಿಸುತ್ತದೆ. ಡೆಲ್ಟಾ ಮತ್ತು ತೀಟ ಬ್ಯಾಂಡ್ ಗಳು ತೀವ್ರವಾಗಿದ್ದು, ಬೀಟ ಬ್ಯಾಂಡ್  ನ ಶಕ್ತಿಯಲ್ಲಿ ಗಮನಾರ್ಹ ಇಳಿಕೆಯಿತ್ತು.  ಬೀಟ ಶಕ್ತಿಯ ಇಳಿತ  ಮಾನಸಿಕ ಉದ್ವೇಗ, ಅತಿ ಉದ್ರೇಕ ಮತ್ತು ಆತಂಕಗಳನ್ನು ಕುಗ್ಗಿಸುತ್ತದೆ. ಹೆಚ್ಚಿನ ಡೆಲ್ಟಾ ಮತ್ತು ತೀಟ ಚಟುವಟಿಕೆ ಆಳವಾದ ಧ್ಯಾನ ಹಂತಗಳಿಗೆ ಪ್ರಜ್ಞಾಪೂರ್ವಕವಾಗಿ ತಲುಪುವ ಅವಕಾಶ ಕೊಡುತ್ತದೆ. ಆಲ್ಫಾ ಜೊತೆಗೂಡಿದ ಡೆಲ್ಟಾ ತರಂಗಗಳು ಆಂತರಿಕ ಪರಾನುಭೂತಿಯ ರೇಡಾರ್, ಅಂದರೆ, ಒಂದು ರೀತಿಯ ಆರನೇ ಇಂದ್ರಿಯದಂತೆ“ ಎಂಬುದನ್ನು ಸಂಶೋಧಕರು ಗಮನಿಸಿದರು.

#3: ಸುಧಾರಿತ ನಿದ್ರೆ:  

ಪೋರ್ಚುಗಲ್ ನ  ಲಿಸ್ಬನ್ ನಲ್ಲಿ ನಡೆದ 20ನೇ ಯುರೋಪಿಯನ್ ಸ್ಲೀಪ್ ರಿಸರ್ಚ್ ಸೊಸೈಟಿಯಲ್ಲಿ ಒಂದು ಅಧ್ಯಯನದ ಮಂಡನೆಯಾಯಿತು. ಅಲ್ಲಿ 15 ಮಂದಿ ಪುರುಷ  ಧ್ಯಾನಸ್ಥರ ನಿದ್ರಾ ಮಾದರಿಯನ್ನು  ಇನ್ನೊಂದು 15 ಧ್ಯಾನಸ್ಥರಲ್ಲದ ಸಮವಯಸ್ಕರು ಮತ್ತು ಸಮಾನ ವಿದ್ಯಾವಂತರೊಡನೆ ಹೋಲಿಸಲಾಯಿತು. ಭಾಗವಹಿಸಿದವರೆಲ್ಲಾ 25 ರಿಂದ  55 ವರ್ಷದವರಾಗಿದ್ದರು. ಧ್ಯಾನಸ್ಥರೆಲ್ಲಾ ಇತರ ಯೋಗಾಭ್ಯಾಸಗಳೊಂದಿಗೆ ಶಾಂಭವಿ  ಮುದ್ರೆಯನ್ನೂ ಅಭ್ಯಸಿಸಿದ್ದರು. ಇಡೀ ರಾತ್ರಿ ಎಲ್ಲ ಅಭ್ಯರ್ಥಿಗಳ ನಿದ್ರಾ ಚಟುವಟಿಕೆಗಳನ್ನು ಪಾಲಿಸೋ ನೋಗ್ರಫಿಯ ಮಾಪನ, EEG ಮಾಹಿತಿ, ಮತ್ತು ಇತರ ಮಾಪನಗಳ ಮೂಲಕ ನಿರ್ಧರಿಸಲಾಯಿತು. ಕ್ಷಿಪ್ರ ನಿದ್ರಾ ಚಲನ ವ್ಯವಸ್ಥೆ(rapid eye movement sleep-REM sleep)ಯ ಪರ್ಸೆಂಟೇಜ್, ನಿದ್ರಾ ಸಾಮರ್ಥ್ಯತೆ, ಮತ್ತು ಸಂಪೂರ್ಣ ನಿದ್ರಾ ಸಮಯ - ಇವೆಲ್ಲವೂ ಉಳಿದವರಿಗಿಂತ  ಧ್ಯಾನಸ್ಥರಲ್ಲಿ ಗಮನಾರ್ಹವಾಗಿ ಹೆಚ್ಚಾಗಿರುವುದು ಕಂಡು ಬಂದಿತು. ಮತ್ತು ಧ್ಯಾನಸ್ಥರು ನಿದ್ರಾ ಸಮಯದ ನಡುವೆ ಎಚ್ಚರಗೊಳ್ಳುವುದೂ ಬಹಳ ಕಡಿಮೆಯಾಗಿತ್ತು. ನಿರಂತರ ಅಭ್ಯಾಸದಿಂದ  ಶಾಂಭವಿ ಧ್ಯಾನವು ನಿದ್ದೆಯ ಮೇಲೆ ಸಕಾರಾತ್ಮಕ  ಪರಿಣಾಮ ಬೀರುತ್ತದೆ   ಎಂಬುದನ್ನು ಅಧ್ಯಯನವು ತೀರ್ಮಾನಿಸಿತು.

#4: ಉತ್ತಮವಾದ ಲಕ್ಷ್ಯ ಮತ್ತು ಕೇಂದ್ರೀಕರಣ

ಪರ್ಸೆಪ್ಷನ್ ಎಂಬ ಪತ್ರಿಕೆಯು ಮುದ್ರಿಸಿದ ಒಂದು ಅಧ್ಯಯನವು, 89 ಭಾಗಿಗಳು ಮೂರು ತಿಂಗಳ ಈಶ ಯೋಗದ ಧ್ಯಾನ ಕಾರ್ಯಕ್ರಮದ ಮೊದಲು ಮತ್ತು ನಂತರ  ಸ್ಟ್ರೂಪ್  ಟಾಸ್ಕ್ (ಬಣ್ಣಗಳನ್ನು ಹೆಸರಿಸುವ ಆಟ) ಮತ್ತು ಏಕಾಗ್ರತಾ  ಬ್ಲಿಂಕ್ ಟಾಸ್ಕ್ ಅನ್ನು ಹೇಗೆ ಆಡುತ್ತಾರೆ ಎಂದು ಪರೀಕ್ಷಿಸಿತು. ಸ್ಟ್ರೂಪ್ ಟಾಸ್ಕ್ ನಲ್ಲಿ ಕಾರ್ಯದ ಪ್ರಕ್ರಿಯೆಗೂ ,  ನಿಮ್ಮ ಪ್ರತಿಫಲನ ಶಕ್ತಿಗೂ ಘರ್ಷಣೆಯಾಗುತ್ತದೆ.  ಉದಾಹರಣೆಗೆ, ಒಂದು ಬಣ್ಣದ ಹೆಸರು ಇನ್ನೊಂದು ಬಣ್ಣದಲ್ಲಿದ್ದರೆ, (ಉದಾ: “ಕೆಂಪು” ಎಂದು ಕಪ್ಪು ಬಣ್ಣದಲ್ಲಿ ಅಚ್ಚಾಗಿದ್ದರೆ), ಉತ್ತರಿಸುವವರು, ಅಚ್ಚಾಗಿರುವ ಬಣ್ಣವನ್ನು ತಪ್ಪಾಗಿ ಗ್ರಹಿಸಬಹುದು. ಆದರೆ, ಕಾರ್ಯಕ್ರಮದ ನಂತರ ಭಾಗಿಗಳ ತಪ್ಪು ಗ್ರಹಿಕೆ ಗಮನಾರ್ಹವಾಗಿ ಕೆಡಿಮೆಯಾಯಿತು.

ಹಾಗೆಯೇ, ಅಟೆಂಷನ್ ಬ್ಲಿಂಕ್ ಟಾಸ್ಕ್ ನಲ್ಲಿ ಭಾಗವಹಿಸುವವರು  ಅವರಿಗೆ ತೋರಿಸುವ ದೃಶ್ಯ ಪ್ರಚೋದಕಗಳನ್ನು ಅತ್ಯಂತ ಕಡಿಮೆ ಸಮಯದಲ್ಲಿ ಗುರುತಿಸಬೇಕು. ಭಾಗಿಗಳು  ಸಾಧನೆಗೆ ಮುಂಚೆ 58% ಸರಿಯಾಗಿ ಗುರುತಿಸಿದವರು, ಆದರೆ, ಸಾಧನೆಯ ನಂತರ 69% ಸರಿಯಾಗಿ ಗುರುತಿಸಿದರು. ಇದರಿಂದ ಸಂಶೋಧಕರು, “ಧ್ಯಾನವು ಏಕಾಗ್ರತಾ  ಸಂಪನ್ಮೂಲವನ್ನು ವೃದ್ಧಿಸುತ್ತದೆ” ಎಂಬ ಸಿದ್ಧಾಂತವನ್ನು ಅನುಮೋದಿಸಿದರು. 

ಯುನಿವರ್ಸಿಟಿ ಡಿ ಟೌಲೋಸ್ ನ ಮನಃಶಾಸ್ತ್ರ ಮತ್ತು ಮನುಷ್ಯ ಸ್ವಭಾವ   ವಿಭಾಗ, ಯು ಸಿ ಐರ್ವಿನ್ ಮತ್ತು ಇಂಡಿಯಾನಾ ಯೂನಿವರ್ಸಿಟಿಯ ವೆದ್ಯಕೀಯ ಶಾಲೆ - ಇವೆಲ್ಲವೂ ಈಶ ಯೋಗಾಭ್ಯಾಸಗಳು ಏಕಾಗ್ರತಾ  ಸಂಪನ್ಮೂಲವನ್ನು ವೃದ್ಧಿಸುವುದು, ಏಕಾಗ್ರತೆ ಮತ್ತು ಕೇಂದ್ರೀಕರಣದ ಸ್ಥಿರತೆ, ಏಕಾಗ್ರತಾ  ಸಂಪನ್ಮೂಲಗಳ ಶೀಘ್ರ ಮರು ಹಂಚಿಕೆ, ಅರಿವಿನ ನಮ್ಯತೆ, ಸ್ವಯಂ ಪ್ರತಿಕ್ರಿಯೆಯ ಸುಧಾರಣೆ  ಸಾಧ್ಯ ಎಂದವು. ಈ ಅಧ್ಯಯನಗಳು ಗಮನಿಸಿದ್ದೆಂದರೆ, ಸಾಮಾನ್ಯರಿಗೆ ಹೋಲಿಸಿದರೆ, ಇಂತಹ ನಿಯಂತ್ರಿತ ಗುಂಪುಗಳಲ್ಲಿ ಈ ಸುಧಾರಣೆಗೆ ಕಾರಣ ಅರಿವಿನ ವ್ಯವಸ್ಥೆಯಲ್ಲುಂಟಾಗುವ ರಚನೆ,  ಶಾರೀರಿಕ ವಿನ್ಯಾಸ ಮತ್ತು ಕ್ರಿಯಾತ್ಮಕ ಬದಲಾವಣೆಗಳಿಂದಾಗಿ ಇರಬಹುದು ಎಂದು.

#5: ಋತುಚಕ್ರದ(ಮುಟ್ಟಿನ)  ಅಸ್ವಸ್ಥತೆಗಳ ಇಳಿಕೆ

75% ಸ್ತ್ರೀಯರು ಋತುಚಕ್ರ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಾರೆ ಮತ್ತು ಇದರಿಂದ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕ ಒತ್ತಡಗಳನ್ನು ಅನುಭವಿಸುತ್ತಾರೆ. ಇದರ ಪ್ರಾಥಮಿಕ ಚಿಕಿತ್ಸೆಗಳು ಸಮಾಧಾನಕರ ಪರಿಹಾರ ನೀಡುವುದಿಲ್ಲ, ಶಸ್ತ್ರಚಿಕಿತ್ಸೆಯನ್ನು ಕಡೆಯ ಆಯ್ಕೆಯಾಗಿ  ಮಾಡಿಕೊಂಡರೂ ಆಗುವುದಿಲ್ಲ. ಸದ್ಯಕ್ಕಂತೂ ಯೋಗಾಭ್ಯಾಸ ಹಲವು  ಅಸ್ವಸ್ಥೆಗಳಿಗೆ  ಉತ್ತಮ ಪರಿಹಾರ ಕೊಡುವಂತಹ ಮುಖ್ಯ ಚಿಕಿತ್ಸೆಗೆ ಪರ್ಯಾಯವಾಗಿ ಪ್ರಚಲಿತವಾಗುತ್ತಿದೆ. ಇಂತಹ ಅಸೌಖ್ಯಗಳಿಗೆ ಧ್ಯಾನ ಮತ್ತು ಯೋಗದಿಂದಾಗುವ ಪ್ರಯೋಜನಗಳ ಕುರಿತಾಗಿ ಅಧ್ಯಯನಗಳು ಕೆಲ ಸಮಯದಿಂದ ನಡೆಯುತ್ತಿವೆ ಮತ್ತು ಭರವಸೆಯನ್ನೂ ಮೂಡಿಸಿವೆ.

ಯೂಕೆಯ ಪೂಲೆ ಹಾಸ್ಪಿಟಲ್ ನ NHS ಟ್ರಸ್ಟ್ ನ ಒಂದು ತಂಡ ಮತ್ತು ಇಂಡಿಯಾನಾ ಯೂನಿವರ್ಸಿಟಿಯ ವೈದ್ಯಕೀಯ ಶಾಲೆಯು ಶಾಂಭವಿಯನ್ನು ಅಭ್ಯಾಸ ಮಾಡುತ್ತಿರುವ  14 ರಿಂದ  55 ವರ್ಷ ವಯೋಮಾನದ USA, UK, ಸಿಂಗಾಪುರ್, ಮಲೇಶಿಯಾ ಮತ್ತು ಲೆಬೆನಾನ್ ನ 128 ಮಹಿಳೆಯರಿಗೆ ಪ್ರಶ್ನಾವಳಿಯ ಒಂದು ಸಮೀಕ್ಷೆ ನಡೆಸಿತು. ಅವರಲ್ಲಿ 72% ಮಹಿಳೆಯರು ಪ್ರತಿದಿನ ಅಭ್ಯಾಸ ಮಾಡುತ್ತಿದ್ದರು ಮತ್ತು  ಉಳಿದವರು ವಾರದಲ್ಲಿ 1-3 ಬಾರಿ  ಅಭ್ಯಾಸ ಮಾಡುತ್ತಿದ್ದರು.

ಈ ಅಭ್ಯಾಸವನ್ನು ಪ್ರಾರಂಭಿಸುವ ಮೊದಲು ಮತ್ತು ಕನಿಷ್ಠ ಆರು ತಿಂಗಳ ಅಭ್ಯಾಸದ  ನಂತರ  ಋತುಚಕ್ರದ ವಿವಿಧ ಅಸ್ವಸ್ಥೆಗಳು  ಮತ್ತು ಸೋಂಕುಗಳ ಬಗ್ಗೆ ಅಭ್ಯಸಿಗರನ್ನು  ಪ್ರಶ್ನಾವಳಿಯಲ್ಲಿ ಕೇಳಿದರು. ಅಸ್ವಸ್ಥತೆಗಳಲ್ಲಿ ಡಿಸ್ಮೆನೋರಿಯಾ, ಪ್ರೀ ಮೆನ್ಯಾಸ್ಟಿಯಲ್ ಸಿಂಡ್ರೋಮ್(ಋತುಚಕ್ರದ ಮೊದಲಿನ ತೊಂದರೆಗಳು) ಅತಿಯಾದ ಋತುಸ್ರಾವ, ಅನಿಯಮಿತ ಋತುಚಕ್ರ, ಇದರ ನಿಗ್ರಹಕ್ಕೆ ಹಾಗೂ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆಗಳ ಹಸ್ತಕ್ಷೇಪದ ಅಗತ್ಯತೆ, ಮತ್ತು ಆ ಸಮಯದಲ್ಲಿ ದೈನಂದಿನ  ಕೆಲಸಗಳಲ್ಲಾಗುವ ನ್ಯೂನತೆಗಳು  ಇವೆಲ್ಲವೂ ಇತ್ತು.

ಫಲಿತಾಂಶದಲ್ಲಿ ಡಿಸ್ಮೆನೋರಿಯಾದಲ್ಲಿ 57% ಇಳಿಕೆ, ಮಾನಸಿಕ ವಿಲಕ್ಷಣಗಳಾದ  ಕಿರಿಕಿರಿ, ವಿಭಿನ್ನ ಮನಸ್ಥಿತಿ, ಅಳು, ಖಿನ್ನತೆ ಮತ್ತು ವಿವಾದಗಳು  72% ಕಡಿಮೆಯಾಗಿರುವುದನ್ನೂ, ಸ್ತನ ಊತ ಮತ್ತು ಮೃದುತ್ವದಲ್ಲಿ  40% ಇಳಿಕೆ, ಉಬ್ಬುವಿಕೆ ಮತ್ತು ತೂಕ ಹೆಚ್ಚುವಿಕೆಯಲ್ಲಿ 50% ಇಳಿಕೆಯನ್ನು ಕಾಣಲಾಯಿತು.  ಋತುಸ್ರಾವದ  ಸಮಯದಲ್ಲಿ ಅತಿಯಾದ ಹರಿಯುವಿಕೆ ಶೇಕಡ  87%  ಇಳಿಕೆಯಾಯಿತು.  ಮತ್ತು ಅಋತು  ಚಕ್ರದ ಅನಿಯಮಿತತೆಯಲ್ಲಿ  80% ಇಳಿಕೆಯಾಯಿತು.  ವೆದ್ಯಕೀಯ ಸಹಾಯ ಮತ್ತು ಶಸ್ತ್ರಚಿಕಿತ್ಸೆಗಳ ಹಸ್ತಕ್ಷೇಪ  63% ಇಳಿಕೆ ಕಂಡಿತು. ಮತ್ತು ಕೆಲಸದ ನ್ಯೂನತೆಯಲ್ಲಿ  83% ಇಳಿಕೆಯಾಯಿತು.

ವಿವಿಧ ಮಾನದಂಡಗಳಲ್ಲಿ ಸುಧಾರಣೆ ಇರುವುದರಿಂದ ಮಂಡನಕಾರರು “ಋತುಚಕ್ರದ ಅಸ್ವಸ್ಥತೆಗೆ  ಶಾಂಭವಿ ಕ್ರಿಯೆಯನ್ನು ಸಹಾಯಕ ಚಿಕಿತ್ಸೆಯಾಗಿ ಬಳಸಬಹುದು” ಎಂದು ತೀರ್ಮಾನಿಸಿದರು. 

ಧ್ಯಾನದ ಇತರ ಪ್ರಯೋಜನಗಳು

ಶಾಂಭವಿ ಮಹಾಮುದ್ರದ ಅಭ್ಯಾಸದಿಂದ ನಮ್ಮ ಜೀವನದಲ್ಲಿ ಆಗಬಹುದಾದ ಇತರ ಸುಧಾರಣೆಗಳ ಬಗ್ಗೆ ಪ್ರಶ್ನಾವಳಿ ನಡೆಸಿದಾಗ, 536 ಪ್ರತಿಕ್ರಿಯಿಸಿದ ಜನರೆಲ್ಲಾ ಈ ಕ್ರೆಯೆಯ ಅಭ್ಯಾಸದಿಂದ ಔಷಧಿಗಳ ಬಳಕೆ ಕೆಡಿಮೆಯಾಗಿದೆ, ಮತ್ತು ಖಿನ್ನತೆ, ಅಲರ್ಜಿ, ಅಸ್ತಮಾ ಮತ್ತು ಇತರ ತೊಂದರೆಗಳನ್ನು ನಿವಾರಿಸಿದೆ ಎಂದು ಪ್ರತಿಕ್ರಿಯಿಸಿದರು. 91% ಜನ ಅಂತಃ ಶಾಂತಿಯ ಬಗ್ಗೆ ಹೇಳಿದರು, 87% ಭಾವನಾತ್ಮಕ ಸಮತೋಲನದ ಸುಧಾರಣೆಯ ಬಗ್ಗೆ ಹೇಳಿದರು, 80% ಜನ ಉತ್ತಮವಾದ ಮಾನಸಿಕ ಸ್ಪಷ್ಟತೆ ಪಡೆದರು, 79% ಜನ ಶಕ್ತಿ ಮಟ್ಟದಲ್ಲಿ  ಹೆಚ್ಚಳ ಪಡೆದರು,  74% ಆತ್ಮ ವಿಶ್ವಾಸದಲ್ಲಿ ಹೆಚ್ಚಿಯೇ ಸುಧಾರಣೆ ಪಡೆದರು ಮತ್ತು 70% ಜನ ಉತ್ತಮ ಏಕಾಗ್ರತೆ ಮತ್ತು ಅಧಿಕ ಉತ್ಪಾದನಾ ಸಾಮರ್ಥ್ಯವನ್ನು ಪಡೆದಿರುವುದನ್ನು ಸ್ಪಷ್ಟ ಪಡಿಸಿದರು.

ಖಿನ್ನತೆಯಿಂದ ಬಳಲುತ್ತಿದ್ದ ಧ್ಯಾನಸ್ಥರಲ್ಲಿ 87% ಜನ ಸುಧಾರಣೆಯನ್ನು, 25% ಜನ ತಮ್ಮ ಔಷಧ ಸೇವನೆಯಲ್ಲಿ ಇಳಿತವನ್ನು, ಮತ್ತು 50% ಸಂಪೂರ್ಣವಾಗಿ ಔಷಧ ಸೇವನೆಯನ್ನು ಬಿಟ್ಟಿರುವುದಾಗಿ ಸಮರ್ಥಿಸದರು. ಹಾಗೆಯೇ ಯಾವಾಗಲೂ ಆತಂಕದಿಂದ ಬಳಲುತ್ತಿದ್ದವರು, 86% ಸುಧಾರಣೆಯನ್ನು ಖಚಿತ ಪಡಿಸಿದರು,  28%  ಜನ ತಮ್ಮ ಔಷಧ ಸೇವನೆಯಲ್ಲಿ ಇಳಿತವನ್ನು, ಮತ್ತು 50% ಸಂಪೂರ್ಣವಾಗಿ ಔಷಧ ಸೇವನೆ ಬಿಟ್ಟಿರುವುದನ್ನು  ಸಮರ್ಥಿಸಿದರು. ನಿದ್ರಾಹೀನತೆಯಿಂದ ಬಳಲುತ್ತಿದ್ದವರಲ್ಲಿ 73% ಜನ ಸುಧಾರಣೆ ಕಂಡರೂ,  40% ಜನ ತಮ್ಮ ಔಷಧ ಸೇವನೆಯಲ್ಲಿ ಇಳಿತವನ್ನು, ಮತ್ತು 30% ಸಂಪೂರ್ಣವಾಗಿ ಔಷಧ ಸೇವನೆ ಬಿಟ್ಟಿರುವುದನ್ನು  ಸಮರ್ಥಿಸಿದರು. ನೆಗಡಿ, ಜ್ವರ, ತಲೆನೋವುಗಳಿಗೆ ಸಹಿಷುತೆ ಇಲ್ಲದವರು,  ಅಸ್ತಮಾ, ಫೈಬ್ರೊಮಿಅಲ್ಜಿಯಾ, ಜಠರಗರುಳಿನ ಅಸ್ವಸ್ಥತೆ, ಸಕ್ಕರೆ ಖಾಯಿಲೆ, ಅಧಿಕ ರಕ್ತದೊತ್ತಡ, ಹೃದಯ ಖಾಯಿಲೆಯಿಂದ ಬಳಲುವವರು, ಮತ್ತು ಇನ್ನೂ ಅನೇಕ ದೀರ್ಘಕಾಲಿಕ ಖಾಯಿಲೆಗಳಿಂದ ಬಳಲುತ್ತಿರುವವರು ಇಂತಹುದೇ ಸುಧಾರಣೆಯನ್ನು ಕಂಡಿದ್ದಾರೆ.

ಸಂಕ್ಷಿಪ್ತವಾಗಿ

ಇವನ್ನೆಲ್ಲಾ ಒಟ್ಟಾಗಿಸಿದಾಗ, ಎಲ್ಲಾ ಫಲಿತಾಂಶಗಳ ಸಾರಾಂಶ ಶಾಂಭವಿ ಮಹಾಮುದ್ರದ ಅಭ್ಯಾಸದಿಂದ ಒತ್ತಡ ಮತ್ತು ಆತಂಕ ನಿವಾರಣೆ, ಮಾನಸಿಕ ಸ್ವಾಸ್ಥ್ಯ ಮತ್ತು ಏಕಾಗ್ರತೆಯ ಹೆಚ್ಚಳ, ಸ್ವಯಂ ಜಾಗೃತಿಯಲ್ಲಿಯೂ ಸುಧಾರಣೆಯನ್ನು ಸ್ಪಷ್ಟ ಪಡಿಸಿದೆ. ಅಷ್ಟೇ ಅಲ್ಲದೇ , ನಿರಂತರ ಅಭ್ಯಾಸದಿಂದ ಹೃದಯ ಸ್ವಾಸ್ಥ್ಯದ ಪ್ರಯೋಜನಗಳು, ಮತ್ತು ಔಷಧ ಸೇವನೆಯ ನಿಲುಗಡೆ, ಅಥವಾ ರಕ್ತದೊತ್ತಡ, ಖಿನ್ನತೆ ಮತ್ತು ಋತುಚಕ್ರ ಸಂಬಂಧಿತ ವಿಷಯಗಳು  ಮತ್ತು ಹಲವಾರು ಅಸೌಖ್ಯಗಳಲ್ಲಿ  ಔಷಧ ಸೇವನೆಯಲ್ಲಿ ಗಣನೀಯ ಇಳಿತ  ಕಂಡಿರುವುದನ್ನು ಸ್ಪಷ್ಟ ಪಡಿಸಿದೆ.

ಪ್ರಯತ್ನಿಸಿ ನೋಡಿ!

ಶಾಂಭವಿ ಮಹಾಮುದ್ರ ವಿಶೇಷ ಸೌಂದರ್ಯವೆಂದರೆ, ಇದಕ್ಕೆ ಇಡೀ ದಿನದ ನಿಮ್ಮ ಸಮಯಲ್ಲಿ  ಕೇವಲ 21 ನಿಮಿಷ ಮೀಸಲಿಟ್ಟರೇ ಸಾಕು. ಈ ಕ್ರಿಯೆಯು ಈಶದ ಪ್ರಮುಖ ಕೋರ್ಸ್ ಗಳಲ್ಲಿ ಒಂದಾದ ಇನ್ನರ್ ಇಂಜಿನೀರಿಂಗ್ ನ ಒಂದು ಭಾಗವಾಗಿದೆ. ಇಂಜಿನಿಯರಿಂಗ್ ಆನ್‌ಲೈನ್ ಮೂಲಕ ಕೋರ್ಸ್‌ನ ಹೆಚ್ಚಿನ ಭಾಗವನ್ನು ನಿಮ್ಮ ಮನೆಯ ಸೌಕರ್ಯದಲ್ಲಿಯೇ ತೆಗೆದುಕೊಳ್ಳಬಹುದು ಮತ್ತು ಶಾಂಭವಿಗೆ ದೀಕ್ಷೆಯನ್ನು ಪ್ರಪಂಚದಾದ್ಯಂತ ನಿಯಮಿತ ಮಧ್ಯಂತರಗಳಲ್ಲಿ ನೀಡಲಾಗುತ್ತದೆ.

ಮತ್ತೊಂದು ಆಯ್ಕೆಯೆಂದರೆ, ಮಾರ್ಗದರ್ಶನ ಲಭ್ಯವಿರುವ ಈಶಕ್ರಿಯಾ . ಈಶಕ್ರಿಯಾ  12-18 ನಿಮಿಷಗಳ ಪ್ರಬಲ ಅಭ್ಯಾಸ. ಇದನ್ನು ಆನ್‌ಲೈನ್‌ನಲ್ಲಿ ಉಚಿತ ಮಾರ್ಗದರ್ಶಿ ಧ್ಯಾನವಾಗಿ ನೀಡಲಾಗಿದೆ. ಧ್ಯಾನದ ಸವಿಯನ್ನು ಇಚ್ಚಿಸುವವರಿಗೆ ಇದೊಂದು ಸದಾವಕಾಶವಾಗಿದೆ. IshaKriya.com ನಲ್ಲಿ ಪ್ರಯತ್ನಿಸಿ.