ಸುಮಾರು ಮೂವತ್ತೆರಡು ದೇಶಗಳಿಂದ ಸುಮಾರು 800 ಶಿಬಿರಾರ್ಥಿಗಳು ಈಶ ಯೋಗ ಕೇಂದ್ರದ ಪ್ರಾಣ ಪ್ರತಿಷ್ಠಾಪಿತ ವಾತಾವರಣದಲ್ಲಿ ತಮ್ಮ ಆಂತರಿಕ ಬೆಳವಣಿಗೆಗಾಗಿ ಏಳು ತಿಂಗಳುಗಳ ಅವಧಿಯನ್ನು ಕಳೆಯಲು ಒಟ್ಟಾಗುತ್ತಾರೆ.

Life in Sadhanapada - All Articles

ಸಾಧನಪಾದ 2019 ರ ಜೀವನದಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಅವಧಿಯನ್ನು ಕಳೆದ ಶಿಬಿರಾರ್ಥಿಗಳು ಇಲ್ಲಿನ ಜೀವನಕ್ರಮವನ್ನು ಅರಿತಿದ್ದಾರೆ ಮತ್ತು ತಮ್ಮ ಆಂತರಿಕ ಪ್ರಯಾಣದಲ್ಲಿ ಮುಂದುವರಿಯುತ್ತಿದ್ದಾರೆ.

ಸಾಧನಪಾದದಲ್ಲಿ ಬದುಕುಳಿಯಲು ಮತ್ತು ಯಶಸ್ವಿಯಾಗಲು, ನಾವು ಕೆಲವು ಶಿಬಿರಾರ್ಥಿಗಳ ಮೂಲಕ ಕೆಲವು ತಂತ್ರಗಳು, ಸಲಹೆಗಳು ಮತ್ತು ಉಪಾಯಗಳ ಒಳತಳಗಳನ್ನು ಸಂಗ್ರಹಿಸಲು ಸಾಧ್ಯವಾಗಿದೆ. ವಿಶ್ವಾಸಾರ್ಹ ಮೂಲದಿಂದ ಸಂಗ್ರಹಿಸಿದ ಕೆಲವು ಮುಖ್ಯ ಸಲಹೆಗಳು ಮತ್ತು ವಿವೇಕದ ತುಣುಕುಗಳು ಇಲ್ಲಿವೆ…

 

ನೀವು ನಿಮ್ಮ ದೊಡ್ಡ ಸೂಟ್ ಕೇಸ್‍ಗೆ ಕೈಹಾಕುವ ಮುನ್ನ…

isha_blog_article_life_in-sadhanapada-serious-sadhanapada-survival-guide-img1

 • ಹತ್ತು ಜೊತೆ ಬಟ್ಟೆಗಳನ್ನು ತನ್ನಿ – 5 ಜೊತೆ ನಿಮ್ಮ ಈಗಿನ ಅಳತೆಯವು ಮತ್ತು ಇನ್ನೈದು ಜೊತೆ ನಿಮ್ಮ ಈಗಿನ ಅಳತೆಯ ಅರ್ಧದಷ್ಟಿರುವಂತವು !
 • ನೀವು ನಿಮ್ಮ ವಸ್ತುಗಳಿಗೆ ಗುರುತು ಹಾಕಿಡಬೇಕೆಂಬ ಸಕಾರಣವಾದ ಸೂಚನೆಯಿದೆ. ನಿಮ್ಮ ಬಟ್ಟೆಗಳು ಅಥವಾ ಪಾದರಕ್ಷೆಗಳು ಅದಲುಬದಲಾಗುವ ಸಾಧ್ಯತೆಗಳಿವೆ.
 • ನಿಮ್ಮ ಪಾದರಕ್ಷೆಗಳು ಬೇರೆಯವರ ಕಾಲುಗಳ ಜೊತೆ ಹೋಗಿಬಿಟ್ಟೆರೆ ಚಿಂತಿಸಬೇಡಿ; ಅದು ನಿಮ್ಮ ಭೂತಶುದ್ಧಿಗಾಗಿ ನಿಮ್ಮನ್ನು ಭೂಮಿಯೊಂದಿಗೆ ಸಂಪರ್ಕದಲ್ಲಿಡಲು ದೇವರೇ ಮಾಡಿದ ಯೋಜನೆಯಾಗಿರಬಹುದು.
 • ಹೌದು, ಸೂರ್ಯನು ಜೀವನದ ಮೂಲಸ್ರೋತಸ್ಸಾಗಿದ್ದಾನೆ, ಆದರೆ ನೀವು ಸುಂದರ ಚರ್ಮವುಳ್ಳವರಾಗಿದ್ದರೆ, ನಿಮ್ಮನ್ನು ಸೂರ್ಯನು ಇಷ್ಟಪಡುವುದಿಲ್ಲ. ಸನ್‍ಸ್ಕ್ರೀನ್ ಲೋಶನ್ ಅನ್ನು ತನ್ನಿ ಮತ್ತು ಅದನ್ನು ಎಲ್ಲಾ ಕಡೆ ಕೊಂಡೊಯ್ಯಿರಿ.
 • ಸೊಳ್ಳೆಯನ್ನ ಓಡಿಸುವ ವಸ್ತುಗಳು ನಿಮ್ಮ ಜೀವನವನ್ನು ಸುಲಭಗೊಳಿಸುತ್ತವೆ ಮತ್ತು ಸೊಳ್ಳೆಯ ಜೀವನವನ್ನೂ ಕಾಪಾಡುತ್ತವೆ.

ಏಳು ತಿಂಗಳ ಅವಧಿಗೆ ಏನೆಲ್ಲವನ್ನು ಪ್ಯಾಕ್ ಮಾಡಿಕೊಳ್ಳಬೇಕೆಂಬುದು ಒಂದು ಚಿಂತೆಯ ವಿಷಯವೇ ಸರಿ. ಅನೇಕ ವಿಧವಾದ ಚಟುವಟಿಕೆಗಳು ಮತ್ತು ಬಿರುಬೇಸಿಗೆಯಿಂದ ಮಾನ್ಸೂನ್ ಮಳೆಯ ಪ್ರವಾಹದವರೆಗೆ ವಿವಿಧ ರೀತಿಯ ಹವಾಮಾನಗಳಿಗೆ ಸಮಯವನ್ನು ಗಮನದಲ್ಲಿಟ್ಟುಕೊಂಡು ಸಜ್ಜುಗೊಳಿಸಿಕೊಳ್ಳುವುದು ಅತ್ಯಗತ್ಯ. ಆದಾಗ್ಯೂ, ಅಜ್ಞಾತವಾದುದಕ್ಕೆ ಸಜ್ಜುಗೊಳ್ಳುವುದು ಒಂದು ರೀತಿಯ ಸಾಹಸವೇ ಸರಿ. ಎಲ್ಲವೂ ವಿಫಲವಾದಾಗ, ಈಶ ಡಿಪಾರ್ಟ್ ಮೆಂಟ್ ಸ್ಟೋರ್ ಮತ್ತು ಅಮೆಜಾನ್ ಡೆಲಿವರಿ ಸೇವೆಗಳು ಇದ್ದೇ ಇವೆ.

ಆಹಾರಪ್ರಿಯರಿಗಾಗಿ ಒಂದಿಷ್ಟು

 • ಅಂತರ್ಮುಖರಾಗುವುದು ಎಂದರೆ ನಿಮ್ಮ ಹೊಟ್ಟೆಯ ಚಿಂತೆಯ ಮಾಡುತ್ತಾ , ಸಿಹಿತಿಂಡಿಗಳಿಗಾಗಿ ಅರಸುವುದಲ್ಲವಷ್ಟೆ!
 • ಪೆಪ್ಪರ್ ವೈನ್‍ಗೆ* ನೀವು ಕಾಲಿಟ್ಟರೆ, ನಿಮ್ಮೊಳಗೆ ದೈವಿಕತೆ ಕಾಲಿಡುವುದಿಲ್ಲ.*.
 • ಪ್ರಜ್ಞಾಪೂರ್ವಕವಾಗಿ ಆಹಾರ ಸೇವಿಸುವುದೆಂದರೆ ಕಣ್ಣುಮುಚ್ಚಿಕೊಂಡು ನಿಧಾನವಾಗಿ ಗಂಟೆಗಟ್ಟಲೆ ತಿನ್ನುವುದಲ್ಲ.
 • ದಿನಕ್ಕೆರಡು ಬಾರಿ ಮಹಾ ವಲಸೆ ಸಂಭವಿಸುವ ಏಕೈಕ ಸ್ಥಳ ಈಶ ಯೋಗ ಕೇಂದ್ರ. ಬ್ರಂಚ್ ಸಮಯ ಮತ್ತು ರಾತ್ರಿಯೂಟದ ಸಮಯ.
 • ಇನ್ನೂ ಸಿಹಿತಿಂಡಿಗಳ ಬಯಕೆಯೇ? ನಿಮ್ಮ ಸೋಪು, ಶಾಂಪೂ, ಟೂತ್ ಪೇಸ್ಟ್, ಡಿಟರ್ಜೆಂಟ್, ಎಲ್ಲವನ್ನೂ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿರಿ. ಇದು ಡಿಪಾರ್ಟ್ಮೆಂಟ್ ಸ್ಟೋರಿಗೆ ಹೋಗುವ ನೆಪವನ್ನು ಇಲ್ಲವಾಗಿಸುತ್ತದೆ.
 • ಕಾಫಿ ಅಥವಾ ಟೀ ಸೇವನೆಯನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದೀರಾ? ಧ್ಯಾನಲಿಂಗ ಪ್ರಸಾದ ಅಥವಾ ಭೈರವಿ ಪ್ರಸಾದವನ್ನು ಸೇವಿಸಿ ನೋಡಿ. ಎರಡರಲ್ಲಿ ಯಾವುದು ಹೆಚ್ಚು ರುಚಿಕರ ಎನ್ನುವುದರ ಬಗ್ಗೆ ಇನ್ನೂ ಚರ್ಚೆಗಳಾಗುತ್ತಿವೆ!

ಭಿಕ್ಷಾಹಾಲ್ ನಲ್ಲಿ ದಿನಕ್ಕೆರಡು ಬಾರಿ ಆಹಾರವನ್ನು ನೀಡಲಾಗುತ್ತದೆ – ಬೆಳಿಗ್ಗೆ 10 ಗಂಟೆಗೆ ಬ್ರಂಚ್ ಮತ್ತು ರಾತ್ರಿ 7 ಘಂಟೆಗೆ ಊಟದ ವ್ಯವಸ್ಥೆ ಇರುತ್ತದೆ.

*ಭೋಗಿ ಯಿಂದ ಯೋಗಿಯಾಗಲು ಇನ್ನೂ ಪ್ರಯತ್ನಿಸುತ್ತಿರುವವರಿಗೆ, ಈಶದ ವತಿಯಿಂದ ನಡೆಸಲಾಗುತ್ತಿರುವ “ಪೆಪ್ಪರ್ ವೈನ್” ಎಂಬ ಉಪಾಹಾರ ಕೇಂದ್ರವೂ ಲಭ್ಯವಿದೆ.

ಡಿಪಾರ್ಟ್ ಮೆಂಟಲ್ ಸ್ಟೋರ್ ನಲ್ಲಿ ಹಲವಾರು ಉಪಯುಕ್ತ ಆಹಾರ ಪದಾರ್ಥಗಳು ಲಭ್ಯವಿವೆ, ಚಾಕೋಲೇಟ್ ಕೂಡ! ಶ್!! ಅದೊಂದು ರಹಸ್ಯ!

ಸೇವೆಯೆಂಬ ತೂಗುಯ್ಯಾಲೆ

 • ನೀವೊಬ್ಬ ವಾರಾಂತ್ಯದ ವ್ಯಕ್ತಿಯಾಗಿದ್ದರೆ, ಆಶ್ರಮದಲ್ಲಿ ವಾಸಿಸುವುದು ನಿಮ್ಮ ಕಣ್ಣುಗಳನ್ನು ತೆರೆಸುತ್ತದೆ ಏಕೆಂದರೆ ನಿಮಗಿಲ್ಲಿ ಒಂದು ವಾರ ಯಾವಾಗ ಪ್ರಾರಂಭವಾಗುತ್ತದೆ ಮತ್ತು ಯಾವಾಗ ಕೊನೆಗೊಳ್ಳುತ್ತದೆ ಅಥವಾ ಇವತ್ತು ಯಾವ ವಾರ ಎನ್ನುವುದೂ ತಿಳಿಯುವುದಿಲ್ಲ. (ಇವತ್ತು ಭಾನುವಾರ, ಸರಿಯೇ?)
 • ನೀವು ಸೇವೆ ಮಾಡುವುದನ್ನು ಇಷ್ಟಪಡುವುದಾದರೆ, ಅದು ಒಳ್ಳೆಯದೇ, ಸೇವೆ ಮಾಡುವುದು ನಿಮಗಿಷ್ಟವಿಲ್ಲದಿದ್ದರೆ, ಅದಿನ್ನೂ ಒಳ್ಳೆಯದು!
 • ನೀವು ಎಡವಟ್ಟು ಮಾಡಿಕೊಂಡರೆ, ಸುಮ್ಮನೆ ನಿಮ್ಮ ಕೈಗಳನ್ನು ಜೋಡಿಸಿ, ಮುಗುಳ್ನಗುತ್ತಾ ನಮಸ್ಕಾರ ಮಾಡಿರಿ!
 • ನೀವು ನಿಜವಾಗಿಯೂ ಯಾವ ಸೇವೆ ಮಾಡಲು ಬಯಸುತ್ತೀರಿ ಎನ್ನುವುದು ನಿಮ್ಮ ವ್ಯವಸ್ಥಾಪಕರಿಗೆ ಗೊತ್ತಾಗದಂತೆ ನೋಡಿಕೊಳ್ಳಿ, ಇಲ್ಲವಾದರೆ ಅವರು ನಿಮಗೆ ಅದು ಎಂದಿಗೂ ಸಿಗದಂತೆ ಮಾಡುತ್ತಾರೆ!

ಸೇವೆ ಮಾಡುವುದೆಂದರೆ ಅನುಕೂಲದ ಪರಿಧಿಯಿಂದ ಹೊರಹೋಗುವುದು. ಇದಕ್ಕಾಗಿ ಕಾರ್ಯಕ್ರಮ ವ್ಯವಸ್ಥಾಪಕರು ಕೈಗೊಳ್ಳದ ಕ್ರಮಗಳಿಲ್ಲ. ಸೇವೆಯನ್ನು ವ್ಯವಸ್ಥಿತಗೊಳಿಸುವ ಹುಚ್ಚುತನಕ್ಕೇನಾದರೂ ಒಂದು ವಿಧಾನವಿದ್ದರೆ, ಅದನ್ನು ನಾವಿನ್ನೂ ಕಂಡುಕೊಂಡಿಲ್ಲ! ನಿಮ್ಮ ಸೇವೆಯಲ್ಲಿ ನಿಜವಾಗಿಯೂ ಆರಾಮವಾಗಿದ್ದೀರಾ? ಬೂಮ್! ನಿಮ್ಮ ಸೇವೆಯನ್ನು ಬದಲಾಯಿಸಲಾಗಿದೆ.

ಕೆಲವು ಆಶ್ರಮ ಸಲಹೆಗಳು

isha_blog_article_life_in-sadhanapada-serious-sadhanapada-survival-guide-img2

isha_blog_article_life_in-sadhanapada-serious-sadhanapada-survival-guide-img3

 • ಆಶ್ರಮದಲ್ಲಿ, ಮಳೆ ಬಂದಾಗ, ಅದು ಸುರಿಯುತ್ತದೆ! ಒಂದು ಕೊಡೆಯನ್ನು ತನ್ನಿ. ಒಂದು ರೇನ್ ಕೋಟ್ ಅನ್ನು ತನ್ನಿ. ಹ್ಮ್, ಒಂದು ಸಣ್ಣ ದೋಣಿಯನ್ನೂ ತಂದಿರಿ!
 • ಯಾರದ್ದಾದರೂ ಹೆಸರು ಮರೆತುಹೋದರೆ, “ಅಣ್ಣ” ಮತ್ತು “ಅಕ್ಕ” ಎಂಬ ಪದಗಳು ಯಾವಾಗಲೂ ಕೆಲಸ ಮಾಡುತ್ತವೆ(ಆದರೆ “ಯಾವ ಅಣ್ಣ” ಎಂಬ ಪ್ರಶ್ನೆಗಳಿಗೆ ಸಿದ್ಧರಾಗಿರಿ).
 • (ಕೊಡೆಯ ವೇದನೆ) : ನನ್ನನ್ನು ಸರಿಯಾಗಿ ಹಿಡಿದುಕೊಳ್ಳಿ! ನಾನು ಹೋರಾಟಕ್ಕೆ ತಯಾರಿಲ್ಲ! ಸರಿಯಾಗಿ ನಿಲ್ಲಿ! ಗಾಳಿಯ ಇಚ್ಛೆಗೆ ತಲೆಬಾಗದಿರಿ!
 • ಭಿಕ್ಷಾ ಹಾಲ್‍ಗೆ ಇನ್ನೂ ಸಮಯವಿದೆಯೇ ಅಥವಾ ತಡವಾಗಿದೆಯೇ? ಖಾತ್ರಿಯಿಲ್ಲವೆ? ಬ್ರಹ್ಮಚಾರಿಗಳನ್ನು ಗಮನಿಸಿ. ಅವರು ನಡೆಯುತ್ತಿದ್ದರೆ, ನಿಮಗೆ ಇನ್ನೂ ಸಮಯವಿದೆ. ಮತ್ತು ಅವರು ಓಡುತ್ತಿದ್ದರೆ? ಅವರಿಗಿಂತ ದುಪ್ಪಟ್ಟು ವೇಗದಲ್ಲಿ ಓಡುವುದು ಒಳ್ಳೆಯದು.
 • ಭಿಕ್ಷಾ ಹಾಲ್‍ನಲ್ಲಿ ನಡೆಯುವ ಪ್ರಾರ್ಥನೆಯ ಓಂಕಾರದ ಲೆಕ್ಕವನ್ನು ಸರಿಯಾಗಿ ಇಟ್ಟುಕೊಳ್ಳಿ. ಇಲ್ಲವಾದರೆ, ಎಲ್ಲರೂ ಪ್ರಾರ್ಥನೆಯನ್ನು ಮುಂದುವರೆಸುತ್ತಿರುವಾಗ ನೀವು ನಾಲ್ಕನೆಯ ಓಂಕಾರವನ್ನು ಹೇಳಿದರೆ ಬೇಸ್ತುಬೀಳುತ್ತೀರಿ.
 • ಮಳೆಯ ದಿನಗಳಲ್ಲಿ, ನೀವು ನಿಮ್ಮ ಹಿಂಭಾಗದಲ್ಲಿ ಕೆಸರಿನ ವಿನ್ಯಾಸವಿರುವ ಪ್ಯಾಂಟುಗಳನ್ನು ಇಷ್ಟಪಡುವವರಲ್ಲದಿದ್ದರೆ, ಬರಿಗಾಲಲ್ಲಿ ನಡೆಯುವುದು ಒಳ್ಳೆಯದು,
 • ಬೆಳಿಗ್ಗೆ ಏಳಲು ಅತ್ಯುತ್ತಮವಾದ ಸಮಯವೆಂದರೆ ನಿಮ್ಮ ರೂಮ್‍ಮೇಟ್‍ಗಿಂತ 20 ಸೆಕೆಂಡು ಮೊದಲು ಏಳುವುದು, ಅದು ಬೆಳಿಗ್ಗೆ 2.24ಕ್ಕಾಗಲಿ ಅಥವಾ 5.24ಕ್ಕಾಗಲಿ.

ಆಶ್ರಮದ ಜೀವನವೆಂದರೆ ಎಲ್ಲವೂ ಕಲ್ಲು ಮುಳ್ಳುಗಳ ಹಾದಿಯಲ್ಲ, ಈಶ ಯೋಗಕೇಂದ್ರದಲ್ಲಿ ಅವುಗಳು ಸಾಕಷ್ಟಿವೆ. ನಿಮ್ಮ ತಂಡದ ಜೊತೆಗಾರರೊಂದಿಗೆ ಇವೆಲ್ಲದರ ಮೂಲಕ ಸಾಗುವುದರಲ್ಲಿ ಸಾಧನಪಾದದ ನಿಜವಾದ ಸಂತೋಷವಿದೆ. ಒಹ್, ಮತ್ತು ಸಾಧನಪಾದದ ತಂಡವು ಅದ್ಭುತವಾದ ವಿಸ್ಮಯಕಾರಿ ಮನರಂಜನೆಯನ್ನು ಆಯೋಜಿಸುತ್ತದೆ. ಇವುಗಳು ವರ್ಣನೆಗೆ ಮೀರಿದ್ದಾದರೂ ಒಂದು ಗಂಟೆಗೂ ಹೆಚ್ಚು ಕಾಲ ಎಲ್ಲರನ್ನೂ ನಗೆಗಡಲಲ್ಲಿ ತೇಲಾಡಿಸುತ್ತದೆ.

ಸಾಧನೆಗಾಗಿ ಕೆಲವು ಸಲಹೆಗಳು

 • ಸಾಧನಪಾದದಲ್ಲಿ, ಸ್ಪರ್ಧೆಯಿರುವುದು ನೀವು ಮತ್ತು ನಿಮ್ಮ ನಡುವೆ.
 • ನೆನಪಿಡಿ, ಶವಾಸನದಲ್ಲಿ ಗೊರಕೆ ಹೊಡೆಯುವುದು ನಿಮ್ಮ ಮುಸುಕನ್ನು ತೊಡೆದುಹಾಕುತ್ತದೆ. ವಿಶೇಷವಾಗಿ ನೀವು ಒಂದು ಲಿಂಗ ಸೇವಾ ಶಾಲನ್ನು ಹೊದಿಕೆಯನ್ನಾಗಿಸಿಕೊಂಡಾಗ.
 • ಅರ್ಧಸಿದ್ಧಾಸನದಲ್ಲಿ ಕುಳಿತು ನಿಮ್ಮ ಕಾಲುಗಳು ನೋಯುತ್ತಿದ್ದರೆ, ಅರ್ಧಸಿದ್ಧಾಸನದಲ್ಲಿ ದೀರ್ಘಸಮಯ ಕುಳಿತುಕೊಳ್ಳುವುದು ಒಳ್ಳೆಯದು.
 • ಆಶ್ರಮದಲ್ಲಿ ಎಲ್ಲಿಯಾದರೂ ಅರ್ಧಸಿದ್ಧಾಸನದಲ್ಲಿ ಕುಳಿತುಕೊಂಡಾಗ ನಿಮ್ಮ ಗುರುತಿನ ಚೀಟಿಯು ನಿಮ್ಮ ಪಾದದ ಗಂಟಿನ ಮೂಳೆಗೆ ಒಂದು ಮೃದುವಾದ ಒತ್ತಿನಂತೆ ಸಹಾಯಕವಾಗುತ್ತದೆ.
 • ತೆಂಗಿನ ಮರಗಳ ಕೆಳಗೆ ನಡೆದಾಡುವಾಗ, ಮೇಲಿಂದ ಬೀಳುವ ವಸ್ತುಗಳ ಬಗ್ಗೆ ಎಚ್ಚರವಿರಲಿ. ಕೆಳಗೆ ಬೀಳುತ್ತಿರುವ ಒಂದು ತೆಂಗಿನ ಕಾಯಿಯಿಂದ ಇಲ್ಲಿಯವರೆಗೂ ಯಾರಿಗೂ ಜ್ಞಾನೋದಯ ಉಂಟಾಗಿಲ್ಲ.
 • ಇವತ್ತಿನ ಸಾಧನೆ ಚೆನ್ನಾಗಿ ಆಗಿದ್ದರಿಂದ, ನೀವು ಒಬ್ಬ ಜ್ಞಾನೋದಯ ಹೊಂದಿದ ಯೋಗಿಯಾಗಿದ್ದೀರಿ ಎಂದು ಭಾವಿಸಿಕೊಂಡರೆ, ದಯವಿಟ್ಟು ಮಾರನೇ ದಿನದ ಸಾಧನೆಯವರೆಗೆ ಕಾಯಿರಿ.

ಸಾಧನೆಯು ಸುಲಭವಾಗಿರಬಹುದು ಅಥವಾ ಕಠಿಣವಾಗಿರಬಹುದು, ಸಂತೋಷಕರವಾಗಿರಬಹುದು ಅಥವಾ ಬೇಸರದಿಂದ ಕೂಡಿರಬಹುದು, ಏಕಾಗ್ರವಾಗಿರಬಹುದು ಅಥವಾ ತಮಾಷೆಯ ವಿಷಯವಾಗಿರಬಹುದು. ಅದು ಯಾವಾಗಲೂ ಒಬ್ಬರ ಬೆಳವಣಿಗೆಗೆ ಬೇಕಾದ ರೀತಿಯಲ್ಲಿರುತ್ತದೆ. ಅದು ಒಂದು ಆಯ್ಕೆಯ ವಿಷಯವಲ್ಲ ಅಷ್ಟೆ. ಅದಕ್ಕೇ ಅದನ್ನು ಸಾಧನಪಾದ ಎಂದು ಕರೆಯಲಾಗುತ್ತದೆ.

ಹೆಚ್ಚುವರಿ ಸಲಹೆ – ಸಮಯದ ಮೌಲ್ಯವನ್ನು ತಿಳಿಯವುದು

 • ಒಂದು ತಿಂಗಳ ಮೌಲ್ಯ ನಿಮಗೆ ತಿಳಿಯಬೇಕಾದರೆ, ಮೂಳೆಯ ನಾರಿನ (ಲಿಗಮೆಂಟ್) ಮುರಿತಕ್ಕೊಳಗಾದ ವ್ಯಕ್ತಿಯನ್ನು ಕೇಳಿರಿ.
 • ಒಂದು ಗಂಟೆಯ ಮೌಲ್ಯವನ್ನು ತಿಳಿಯಬೇಕಾದರೆ, ಬೆಳಿಗ್ಗೆ ಮೂರು ಗಂಟೆಗೆ ಏಳುವ ವ್ಯಕ್ತಿಯನ್ನು ಕೇಳಿರಿ.
 • ಒಂದು ನಿಮಿಷದ ಮೌಲ್ಯವನ್ನು ತಿಳಿಯಬೇಕಾದರೆ, ಆ ಕಷ್ಟಕರವಾದ ಆಸನವನ್ನು(45 ಡಿಗ್ರಿಯಲ್ಲಿರುವ ದ್ವಿಪಾದ ಉತ್ಥಾನಪಾದಾಸನ) ಮಾಡುತ್ತಿರುವ ವ್ಯಕ್ತಿಯನ್ನು ಕೇಳಿರಿ.
 • ನಿಮಗೆ ಒಂದು ಸೆಕೆಂಡಿನ ಮೌಲ್ಯ ತಿಳಿಯಬೇಕೆಂದಿದ್ದರೆ, ಎರಡನೇ ಪಂಕ್ತಿಯ ಬ್ರಂಚ್ ಅನ್ನು ತಪ್ಪಿಸಿಕೊಂಡ ವ್ಯಕ್ತಿಯನ್ನು ಕೇಳಿರಿ.

 

Editor’s Note: Find out more about Sadhanapada and pre-register for the upcoming batch here.