ಕಳೆದ 25-30 ವರ್ಷಗಳಲ್ಲಿ, ಕೆಲವು ಪ್ರಚೋದಿತ ಗುಂಪುಗಳು - ಚಿಕ್ಕದಾಗಿದ್ದರೂ, ಅಬ್ಬರದಿಂದ ಮತ್ತು ದುಷ್ಟತನದಿಂದ ಕೂಡಿದ - ಯಾವುದೇ ವಾಸ್ತವಿಕ ಆಧಾರವಿಲ್ಲದೆ ಈಶ ಫೌಂಡೇಶನ್ ಅನ್ನು ನಿರಂತರವಾಗಿ ಅವಹೇಳನ ಮಾಡಿವೆ. ಇಂದು, ಸುಳ್ಳು ಸುದ್ದಿ, ಪೇಯ್ಡ್ ಮೀಡಿಯಾ ಮತ್ತು ಸಾಮಾಜಿಕ ಮಾಧ್ಯಮಗಳೊಂದಿಗೆ, ಈ ಸ್ವಾರ್ಥಪರ ಗುಂಪುಗಳು ಸುಳ್ಳುಗಳ ವ್ಯವಸ್ಥಿತ ಜಾಲವನ್ನು ಹೆಣೆಯುತ್ತಿರುವುದನ್ನು, ಫೌಂಡೇಶನ್ ಅನ್ನು ಕಳಂಕಿತಗೊಳಿಸಲು ಕುತಂತ್ರದ ಮಾರ್ಗಗಳನ್ನು ಹುಡುಕುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಯಾವುದೇ ಸರ್ಕಾರಿ ಸಂಸ್ಥೆಯಿಂದ ಒಂದು ಕೋರ್ಟ್ ಕೇಸ್ ಕೂಡ ದಾಖಲಾಗಿಲ್ಲದಿದ್ದರೂ, ಈ ಗುಂಪುಗಳು ಗಲಭೆಯ ದೂರುಗಳ ಮಿಥ್ಯೆಯನ್ನು ಸೃಷ್ಟಿಸಿ, ಫೌಂಡೇಶನ್ ಅನ್ನು ವಿವಾದ ಮತ್ತು ಕೆಟ್ಟ ಪ್ರಚಾರದಲ್ಲಿ ಸಿಲುಕಿಸಲು ಪದೇ ಪದೇ ಪ್ರಯತ್ನಿಸಿವೆ. 1 ಕೋಟಿ 10 ಲಕ್ಷಕ್ಕಿಂತಲೂ ಹೆಚ್ಚು ಸ್ವಯಂಸೇವಕರು ಮತ್ತು ವಿಶ್ವದಾದ್ಯಂತ ಒಂದು ಬಿಲಿಯನ್‌ಗಿಂತಲೂ ಹೆಚ್ಚು ಶುಭಾಕಾಂಕ್ಷಿಗಳಿಗೆ ನಮ್ಮ ಬದ್ಧತೆಯಾಗಿ, ಸತ್ಯವನ್ನು ಪ್ರಕಟಿಸಲು ಅವರಿಂದ ಪದೇ ಪದೇ ಬಂದ ಮನವಿಗಳಿಗೆ ಪ್ರತಿಕ್ರಿಯೆಯಾಗಿ, ನಾವೀಗ ಅತ್ಯಂತ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತಿದ್ದೇವೆ.