ಗರ್ಭಿಣಿಯರಿಗೆ ಇನ್ನರ್ ಇಂಜಿನಿಯರಿಂಗ್ ಸಹಾಯ ಮಾಡಬಹುದೇ?
ನೀವು ತಾಯಿಯಾಗಲಿದ್ದೀರಾ? ನಿಮ್ಮ ಸಹಾಯಕ್ಕಿದೆ ಇನ್ನರ್ ಇಂಜಿನಿಯರಿಂಗ್!
ಗರ್ಭಿಣಿಯರಿಗೆ ಎಲ್ಲಾ ರೀತಿಯ ಯೋಗಾಭ್ಯಾಸಗಳು ಸೂಕ್ತವಲ್ಲವಾದರೂ, ಯೋಗದ ಅಭ್ಯಾಸವು ಗರ್ಭಾವಸ್ಥೆಯ ಅನುಭವವನ್ನು, ಮಗುವಿನ ಜನನವನ್ನು ಮತ್ತು ಮಗುವಿನ ಪಾಲನೆ ಪೋಷಣೆಯನ್ನು ತಾಯಿಯಾಗಲಿರುವವರಿಗೆ ಎಷ್ಟು ಸಾಧ್ಯವೋ ಅಷ್ಟು ಅದ್ಭುತವಾಗಿಸುವಲ್ಲಿ ಬಹಳ ಮುಖ್ಯವಾಗಿದೆ.
ಈಶದ ಪ್ರಮುಖ ಕಾರ್ಯಕ್ರಮವಾದ, ಇನ್ನರ್ ಇಂಜಿನಿಯರಿಂಗ್, ದೇಹ, ಮನಸ್ಸು, ಭಾವನೆ ಮತ್ತು ಪ್ರಾಣಶಕ್ತಿಗೆ ಸಾಮರಸ್ಯವನ್ನು ತಂದುಕೊಡುವಂತಹ ’ಶಾಂಭವಿ ಮಹಾಮುದ್ರ’ ಎಂಬ ಸನಾತನ ಕ್ರಿಯಾವನ್ನು ಕಲಿಸುತ್ತದೆ. ಗರ್ಭಿಣಿಯರಿಗೆ ಮಹತ್ವವಾದದ್ದೆಂದರೆ ಹೆಚ್ಚಿನ ಜೀವನಸತ್ವ ಮತ್ತು ಸಮತೋಲಿತ ಮನಸ್ಥಿತಿ ಹಾಗೂ ಭಾವನೆಗಳು. ಇಂದು ನಾವು ಇಬ್ಬರು ಈಶ ಶಿಬಿರಾರ್ಥಿಗಳ ಅನುಭವ ಮತ್ತು ಶಾಂಭವಿಯು ಅವರ ಗರ್ಭಾವಸ್ಥೆಯ ಸಮಯದಲ್ಲಿ ಹೇಗೆ ಸಹಾಯ ಮಾಡಿತು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
ಸದ್ಗುರು: ನೀವು ಮಗುವಿಗೆ ಕೇವಲ ದೇಹವನ್ನು ನೀಡುತ್ತಿಲ್ಲ, ನೀವು ಯಾರೆಂದು ಮಗುವಿನ ಮೇಲೆ ಅನೇಕ ರೀತಿಯಲ್ಲಿ ಅಚ್ಚೊತ್ತಲಾಗಿದೆ. ಆದ್ದರಿಂದ ಗರ್ಭಾವಸ್ಥೆಯಲ್ಲಿ ನಿಮ್ಮನ್ನು ನೀವು ಹೇಗೆ ಇಟ್ಟುಕೊಳ್ಳುತ್ತೀರಿ ಎಂಬುದು ಬಹಳ ಮುಖ್ಯವಾದ ವಿಷಯ
ಜೊಆನ್ನಾ ನೀಲ್, ಆಸ್ಟ್ರೇಲಿಯಾ
ನಾನು ಗರ್ಭಿಣಿಯಾಗಿದ್ದಾಗ ಸದ್ಗುರುಗಳೊಂದಿಗೆ ಇನ್ನರ್ ಎಂಜಿನಿಯರಿಂಗ್ ಕಾರ್ಯಕ್ರಮವನ್ನು ಮಾಡಿದೆ. ಈಶದಲ್ಲಿ ಎಲ್ಲರೂ ತುಂಬಾ ಸಕಾರಾತ್ಮಕ, ಸಂತೋಷಭರಿತ ಮತ್ತು ಸ್ನೇಹಮಯಿಯಾಗಿದ್ದರು. ಅವರ ಹುರುಪು ಎಷ್ಟು ಸೋಕಿತೆಂದರೆ, ನಾನು ಅವರಂತೆಯೇ ಜೀವನದಲ್ಲಿ ಅತ್ಯಂತ ಹುರುಪಿನಿಂದ ಇರಬೇಕೆಂದು ಅನಿಸಿತು. ನಾನು ಯಾವಾಗಲೂ ವಿಶ್ವಾಸಾರ್ಹ ಜನರೊಂದಿಗಿದ್ದೇನೆ ಮತ್ತು ಈಶ ಆಸ್ಟ್ರೇಲಿಯಾದ ಜನರಿಗೆ ತುಂಬಾ ಅರಿವಿದೆಯೆಂದು ಅನಿಸಿತು. ವೇಗವಾಗಿ ಬದಲಾಗುತ್ತಿರುವ ನನ್ನ ದೇಹದೊಂದಿಗೆ ನನ್ನ ದೈನಂದಿನ ಕ್ರಿಯಾವನ್ನು ಮಾಡಲು ಅವರು ನನಗೆ ಸಹಾಯ ಮಾಡಿದರು ಮತ್ತು ಮಾರ್ಗದರ್ಶನ ನೀಡಿದರು. ನಾನು ಪ್ರತಿದಿನ -ಹೆರಿಗೆಯಾಗುವ ಹಿಂದಿನ ರಾತ್ರಿಯವರೆಗೂ, ಕ್ರಿಯಾವನ್ನು ಮಾಡಿದೆ. ಇದರ ಪರಿಣಾಮ ನನ್ನ ಮೇಲೆ ಜೊತೆಗೆ ನನ್ನ ಸುಂದರ ಮಗುವಿನ ಮೇಲೆ ಗಾಢವಾಗಿತ್ತು.
ನನ್ನ ದೈನಂದಿನ ಕ್ರಿಯಾವನ್ನು ಮಾಡಿ ಜೀವಶಕ್ತಿಯು ನನ್ನೊಳಗೆ ಹೆಚ್ಚಾಗಲು ಆರಂಭವಾದಾಗ, ಹುಟ್ಟಲಿರುವ ನನ್ನ ಮಗುವಿನೊಂದಿಗೆ ತುಂಬಾ ಆಳವಾದ ಸಂಪರ್ಕ ಹೊಂದಿದ್ದೇನೆ, ಜನನದ ಮುಂಚೆಯೇ ನಾವು ಒಬ್ಬರನ್ನೊಬ್ಬರು ಸಂಪೂರ್ಣವಾಗಿ ತಿಳಿದಿದ್ದೇವೆ ಎಂದು ನನಗನಿಸಿತು. ನಮ್ಮ ಕಣಕಣಗಳು ಒಂದಾಗಿವೆಯೇನೋ ಎಂಬಷ್ಟು ನಾನು ಅವಳೊಂದಿಗೆ ಒಂದಾಗಿದ್ದೇನೆಂದು ನನಗನಿಸಿತು. ವಾಸ್ತವವಾಗಿ, ನನಗೆ ಈಗಲೂ ಹಾಗೆಯೇ ಭಾಸವಾಗುತ್ತದೆ.
ಕೆಲ ಹಳೆಯ ಆರೋಗ್ಯ ಸಮಸ್ಯೆಗಳಿಂದಾಗಿ ನನ್ನ ಗರ್ಭಧಾರಣೆಯನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿತ್ತು. ನನ್ನ ಪ್ರಸೂತಿ ತಜ್ಞರು, ವೈದ್ಯರು ಮತ್ತಿತರರು ನನ್ನ ಹೆರಿಗೆಯು ಎಷ್ಟು ಸಲಿಸಾಗಿಯಿತೆಂದು ನೋಡಿ ಆಶ್ಚರ್ಯಗೊಂಡರು. ಷಾರ್ಲೆಟ್ ತುಂಬಾ ಶಾಂತಿಯುತವಾಗಿ ಮತ್ತು ಸೌಮ್ಯವಾಗಿ ಜಗತ್ತಿಗೆ ಬಂದಳು. ಅವಳು ಹುಟ್ಟಿದ ಕ್ಷಣದಿಂದ ಶಾಂತಿಯುತ, ಸಂತೋಷ ಮತ್ತು ಚುರುಕಾಗಿದ್ದಾಳೆ. ಅವಳು ಮೊದಲನೇ ದಿನದಿಂದ ರಾತ್ರಿಯಿಡೀ ಮಲಗಿದ್ದಾಳೆ ಮತ್ತು ಪ್ರಕೃತಿಯೆಡೆಗೆ ಆಕರ್ಷಿತಳಾಗಿದ್ದಾಳೆ.
ನಾನೂ ಸಹ ಬದಲಾಗಿದ್ದೇನೆ. ದಿನದ ಕೆಲಸಗಳನ್ನು ಆತುರವಾಗಿ ಮುಗಿಸಬೇಕೆಂಬ ಒತ್ತಡವಿಲ್ಲ ಹಾಗೂ ಸೂಕ್ಷ್ಮ ವಿವರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಭೂತ ಭವಿಷ್ಯ ಇಲ್ಲದಿರುವಂತೆ ನಾನು ಪ್ರತಿ ಕ್ಷಣವನ್ನು ಆನಂದಿಸುತ್ತೇನೆ. ಹೀಗೆ ಮಾಡಿದರೆ ಏನೂ ಕೆಲಸ ಮಾಡಲು ಸಾಧ್ಯವಾಗುವುದಿಲ್ಲವೆಂದು ತಿಳಿದಿದ್ದೆ. ಆದರೆ, ವಾಸ್ತವದಲ್ಲಿ ನಾನು ಹಿಂದೆಂದಿಗಿಂತಲೂ ಹೆಚ್ಚಿನದನ್ನು ಸಾಧಿಸುತ್ತಿದ್ದೇನೆ.
ಒಡೆಸ್ಸಾ, ಮಲೇಷ್ಯಾ
ನಾನು ಈಗ 7 ತಿಂಗಳ ಗರ್ಭಿಣಿ, ಈಗಲೂ ನಾನು ಪ್ರತಿದಿನ ಬೆಳಿಗ್ಗೆ ಕ್ರಿಯಾವನ್ನು ಅಭ್ಯಾಸ ಮಾಡುತ್ತಿದ್ದೇನೆ. ನನ್ನಲ್ಲಿ ಶಕ್ತಿ ಹೆಚ್ಚಾಗಿದೆ ಮತ್ತು ನಾನು ರಾತ್ರಿ ಆಳವಾಗಿ ನಿದ್ದೆ ಮಾಡುತ್ತೇನೆ. ಹಿಂದೆ ಅದು ಈ ರೀತಿಯಲ್ಲಿರಲಿಲ್ಲ. ಆದ್ದರಿಂದ, ನನ್ನ ಮಗುವಿಗೆ ಇದು ತುಂಬಾ ಒಳ್ಳೆಯದು ಏಕೆಂದರೆ ನಾನು ರಾತ್ರಿ ಶಾಂತಿಯುತವಾಗಿ ಮಲಗಬಹುದು.
ಪ್ರತಿದಿನ ಬೆಳಿಗ್ಗೆ ಯೋಗಾಭ್ಯಾಸದ ನಂತರ, ನನ್ನ ದೇಹ ಹಗುರವಾದಂತೆ ಭಾಸವಾಗುತ್ತದೆ. ಆ ಭಾವನೆ ಅದ್ಭುತವಾದುದು. ಕಿಟಕಿಯ ಹೊರಗೆ ಹಕ್ಕಿಗಳ ಕಲರವವವು ನನಗೆ ಕೇಳುತ್ತದೆ ಮತ್ತು ಈಗ ಜೀವನವನ್ನು ನಾನು ಹೆಚ್ಚು ಪ್ರಶಂಸಿಸುತ್ತೇನೆ. ನನ್ನ ವೃತ್ತಿ ಮತ್ತು ವ್ಯವಹಾರದಲ್ಲಿ ನಾನು ಅತಿಯಾಗಿ ತೊಡಗಿಕೊಂಡಿದ್ದರಿಂದ, ಅದರ ಒತ್ತಡವು ಅಸಹನೀಯವಾಗಿದ್ದರಿಂದ ಕಳೆದ ವರ್ಷ ನನ್ನ ಪತಿ ನನ್ನನ್ನು ಇನ್ನರ್ ಇಂಜಿನಿಯರಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಿದರು.
ಈಗ, ನಾನು ಶಾಂತಿಯುತವಾಗಿದ್ದೇನೆ ಮತ್ತು ಪ್ರತಿ ಕ್ಷಣವನ್ನು ಆನಂದಿಸುತ್ತೇನೆ. ನನ್ನ ಕೋಪವು ಕಡಿಮೆಯಾಗುತ್ತಿದೆ, ಇದು ನನ್ನ ಗಂಡ ಮತ್ತು ನನ್ನ ಬಸಿರಿಗೆ ಒಳ್ಳೆಯದು. ಇದಕ್ಕೆ ಪ್ರತಿಯಾಗಿ, ನನ್ನ ಪತಿ ಈ ಮೇ ತಿಂಗಳಲ್ಲಿ ಮಲೇಷ್ಯಾದಲ್ಲಿ ಇನ್ನರ್ ಇಂಜಿನಿಯರಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ನಮ್ಮ ಸುತ್ತಮುತ್ತಲಿನ ಜನರನ್ನು ಪ್ರೀತಿಸುವುದೆಂದರೆ, ಮೊದಲು ನಾವು ನಮ್ಮನ್ನು ಪ್ರೀತಿಸುವುದು ಮತ್ತು ನೋಡಿಕೊಳ್ಳುವುದು ಎಂದು ನಾವು ಅರ್ಥಮಾಡಿಕೊಂಡಿದ್ದೇವೆ.
ಸಂಪಾದಕರ ಟಿಪ್ಪಣಿ: ಮೇ 31, 2020ರ ವರೆಗೆ ‘ಇನ್ನರ್ ಇಂಜಿನಿಯರಿಂಗ್ ಆನ್ ಲೈನ್’ 50% ಗೆ ಅರ್ಪಿಸುತ್ತಿದ್ದೇವೆ. ಸವಾಲಿನ ಸಮಯಗಳ ಕೊಡುಗೆ. ಇದು ಕನ್ನಡದಲ್ಲಿ ಲಭ್ಯ. ನೋಂದಾಯಿಸಲು: kannada.sadhguru.org/ieo