ಸಾಮಾನ್ಯ ಜನತೆಗೆಂದೇ ಬರೆದ ಸರಳ ವಾಕ್ಯಗಳ ಕಿರುಪ್ರಬಂಧಗಳು `ಟೈಮ್ಸ್ ಆಫ಼್ ಇಂಡಿಯ ಪತ್ರಿಕೆಯ ’ಸ್ಪೀಕಿಂಗ್ ಟ್ರೀ’ ಅಂಕಣದಲ್ಲಿ ಪ್ರಕಟಗೊಂಡವು.
`ಪಾದೆಯಲ್ಲಿನ ಕುಸುಮಗಳು’ ಪುಸ್ತಕವು ಈ ಪ್ರಬಂಧಗಳದೊಂದು ಹೂಗುಚ್ಛ.
ಗಾಣಕ್ಕೆ ಕಟ್ಟಿದ ಕೋಣನಂತೆ ದಿನಚರಿಯಲ್ಲಿ ಒಂದೇಸಮ ಸುತ್ತುತ್ತಿರುವ ನಮಗೆ, ದಿನದ- ತೊಟ್ಟು ಹಾಸ್ಯ, ಸ್ವಲ್ಪ ಬುದ್ಧಿವಾದ, ಸ್ವಲ್ಪ ಸೌಂದರ್ಯ, ಒಂದಷ್ಟು ಸ್ಪಷ್ಟತೆ
ಕೊಟ್ಟು, ದಿನದ ಏಕತಾನತೆ ಕಳೆಯುವ ರೀತಿಯಿದು. ಪತ್ರಿಕೆಯಲ್ಲಿನ ಸುದ್ದಿ ಸಂಖ್ಯೆಗಳ
ಮಧ್ಯೆ ಅನಿರೀಕ್ಷಿತ ಹೊಳಹು, ಸ್ತಬ್ಧತೆ ತರುವ ಪು?ಗಳಿವು. ಕೆಲವೊಮ್ಮೆ ಮಂದ
ಸುಗಂಧ ಬೀರಿದರೆ, ಕೆಲಸಲ ದಿಢೀರನೆ ಹಳೆಯ ಸಿದ್ಧಾಂತಕ್ಕೆ ಹೊಸ ದೃಷ್ಟಿ ಕೊಡುತ್ತ
ವಿಚಾರಮಂಥನಕ್ಕೆ ಎಳೆಯುತ್ತವೆ. ಈ ಹೂಗಳ ಸುಗಂಧದ ಮತ್ತಿಗೆ ಸೋತು ಬೆಂಬತ್ತಿದ ಓದುಗನಿಗೆ, ಜೀವನದ
‘ಮೂಲ ರಹಸ್ಯ’ಬಿಚ್ಚಿಡಲಿಕ್ಕಲ್ಲ; ಅದರ ನಿಗೂಢತೆಯನ್ನು ಅನುಭವಿಸಲಿಕ್ಕೆ ಮಾತ್ರ ಎಂದು ಅರಿವಾಗುವುದು.