Login | Sign Up
logo
search
Login|Sign Up
Country
  • Sadhguru Exclusive

ಗುರು ಪೂರ್ಣಿಮೆ

ಸದ್ಗುರುಗಳೊಂದಿಗೆ ನೇರಪ್ರಸಾರ

ಜುಲೈ 3 2023, ರಾತ್ರಿ 9.30 ಕ್ಕೆ

ಗು ಎಂದರೆ ಅಂಧಕಾರ, ರು ಎಂದರೆ ಅಳಿಸುವುದು. ಯಾರು ನಿಮ್ಮ ಅಂಧಕಾರವನ್ನು ಅಳಿಸುವರೋ, ಅವರೇ ಗುರು. -- ಸದ್ಗುರು

ಗುರು ಪೂರ್ಣಿಮೆಯ ಮಹತ್ವ

ಉತ್ತರಾಯಣದ ಆಷಾಢ ಮಾಸದಲ್ಲಿ ಬರುವ ಮೊದಲ ಹುಣ್ಣಿಮೆಯನ್ನು (ಜುಲೈ-ಆಗಸ್ಟ್) ಗುರು ಪೂರ್ಣಿಮೆ ಎಂದು ಕರೆಯಲಾಗುತ್ತದೆ. ಈ ಪವಿತ್ರ ದಿನದಂದು, ಆದಿಯೋಗಿ - ಶಿವ ಯೋಗ ವಿಜ್ಞಾನವನ್ನು ಮೊದಲ ಬಾರಿಗೆ ತನ್ನ ಮೊದಲ ಶಿಷ್ಯರಾದ ಸಪ್ತ ಋಷಿಗಳಿಗೆ ಪ್ರಸರಣ ಮಾಡಲಾರಂಭಿಸಿದ. ಆದ್ದರಿಂದಲೇ, ಆದಿಯೋಗಿ ಈ ದಿನ ‘ಆದಿಗುರು’ ಅಥವಾ ಮೊದಲ ಗುರುವಾದ. ಸಪ್ತಋಷಿಗಳು ಪ್ರಪಂಚದಾದ್ಯಂತ ಈ ಜ್ಞಾನವನ್ನು ಸಾರಿದರು ಮತ್ತು ಇವತ್ತಿಗೂ ಪ್ರಪಂಚದಾದ್ಯಂತ ಇರುವ ಎಲ್ಲಾ ಆಧ್ಯಾತ್ಮಿಕ ಪ್ರಕ್ರಿಯೆಗಳಿಗೂ ಆದಿಯೋಗಿಯಿಂದ ರಚಿಸಲ್ಪಟ್ಟ ಜ್ಞಾನ ಬೆನ್ನೆಲುಬಾಗಿ ನಿಂತಿದೆ.

“ಗುರು" ಅನ್ನುವ ಪದಕ್ಕೆ ಸಂಸ್ಕೃತದಲ್ಲಿ " ಅಂಧಕಾರವನ್ನು ಅಳಿಸುವವರು" ಎಂಬ ಅರ್ಥವಿದೆ. ಗುರುಗಳು ಅಧ್ಯಾತ್ಮ ಸಾಧಕರ ಅಂಧಕಾರವನ್ನು ಅಳಿಸಿ ಹಾಕುತ್ತಾರೆ ಮತ್ತು ಅವರೊಳಗಿನ ಸೃಷ್ಟಿಯ ಮೂಲವನ್ನು ಅನುಭವಕ್ಕೆ ತಂದುಕೊಳ್ಳಲು ಅನುವು ಮಾಡಿಕೊಡುತ್ತಾರೆ. ಗುರು ಪೂರ್ಣಿಮೆಯ ದಿನದಂದು, ಸಾಂಪ್ರದಾಯಕವಾಗಿ ಆಧ್ಯಾತ್ಮಿಕ ಸಾಧಕರು ತಮ್ಮ ಗುರುಗಳಿಗೆ ಕೃತಜ್ಞತೆ ಸಲ್ಲಿಸಿ, ಅವರ ಅನುಗ್ರಹವನ್ನು ಪಡೆಯುತ್ತಾರೆ. ಯೋಗ ಸಾಧನೆ ಮತ್ತು ಧ್ಯಾನವನ್ನು ಅಭ್ಯಾಸ ಮಾಡಲು ಗುರು ಪೂರ್ಣಿಮೆಯ ದಿನ ವಿಶೇಷವಾಗಿ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.

ಗುರು ಪೂರ್ಣಿಮೆಯನ್ನು ನಾವೇಕೆ ಆಚರಿಸುತ್ತೇವೆ?

ಗುರು ಪೂರ್ಣಿಮೆಯನ್ನು ಮೊದಲ ಗುರುವಿನ ಜನ್ಮದಿನದ ಸಂಕೇತವಾಗಿ ಮತ್ತು ಕಾಲಾತೀತವಾದ ಯೋಗವಿಜ್ಞಾನದ ಪ್ರಸರಣದ ಪ್ರಾರಂಭದ ಸಂಕೇತವಾಗಿ ಆಚರಿಸಲಾಗುತ್ತದೆ. ಮಾನವ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ, ಈ ದಿನದಂದು, ಆದಿಯೋಗಿ - ಶಿವ `ಪ್ರಕೃತಿ ನಿಗದಿ ಪಡಿಸಿದ ಮಿತಿಗಳನ್ನು ಮೀರಿ ಹೊಸ ಸಾಧ್ಯತೆಯನ್ನು ತೆರೆಯಲು’ ಮಾನವರಿಗೆ ಅನುವು ಮಾಡಿಕೊಟ್ಟ. ಸದ್ಗುರುಗಳ ಮಾತಿನಲ್ಲಿ ಹೇಳುವುದಾದರೆ, “ಈ ದಿನ, ಮಾನವಕುಲದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ, ಮನುಷ್ಯರ ಜೀವನ ಸೀಮಿತವಾದುದಲ್ಲ ಎಂಬುದನ್ನು ನೆನಪಿಸಲಾಯಿತು. ಅವರು ಸಾಧನೆ ಮಾಡಲು ಸಿದ್ಧರಿದ್ದರೆ, ಅಸ್ತಿತ್ವದ ಪ್ರತಿಯೊಂದು ದ್ವಾರವೂ ತೆರೆದುಕೊಳ್ಳುತ್ತದೆ". Read More

ನೀವು ಗುರು ಪೂರ್ಣಿಮೆಯನ್ನು ಹೇಗೆ ಆಚರಿಸಬಹುದು?

ನೇರಪ್ರಸಾರದಲ್ಲಿ ಪಾಲ್ಗೊಳ್ಳಿ

ನೇರ ಪ್ರಸಾರದ ಮೂಲಕ, ಗುರು ಪೂರ್ಣಿಮೆಯ ಸಂಭ್ರಮಾಚರಣೆಗಳಲ್ಲಿ ನಮ್ಮೊಂದಿಗೆ ಸೇರಿಕೊಳ್ಳಿ ಮತ್ತು ಸದ್ಗುರುಗಳ ಸತ್ಸಂಗದಲ್ಲಿ ಭಾಗವಹಿಸಿ.

ಉಚಿತ ವೆಬ್ ಸ್ಟ್ರೀಮ್ ನಲ್ಲಿ ಪಾಲ್ಗೊಳ್ಳಿ

ಗುರು ಪೂರ್ಣಿಮಾ ಚಿತ್ರ ಗ್ಯಾಲರಿ

ಅನುಭವಗಳು

ಗುರು ಪೂರ್ಣಿಮೆಯು ನನ್ನ ಸಾಧನೆಯ ಮೇಲೆ ಕೇಂದ್ರೀಕರಿಸಲು ಮತ್ತು ಸದ್ಗುರುಗಳ ಮಾರ್ಗದರ್ಶನದಲ್ಲಿ ನನ್ನ ಅಸ್ತಿತ್ವದ ಬೇರುಗಳನ್ನು ಆಳವಾಗಿ ಅಗೆಯಲು ಒಂದು ಪ್ರಬಲ ಅವಕಾಶವಾಗಿತ್ತು.

- ಜೂರರ್, ವಿಜ್ಞಾನಿ, ಸ್ಲೊವೇನಿಯಾ
 
Close