ನಮ್ಮ ಹೆತ್ತವರು ನಮ್ಮ ಬದುಕನ್ನು ಹೇಗೆ ಪ್ರಭಾವಿಸಬೇಕು?
ಹೆತ್ತವರೊಂದಿಗಿನ ನಮ್ಮ ಸಂಬಂಧದ ಪ್ರಭಾವದ ಬಗ್ಗೆ ಲಕ್ಷ್ಮಿ ಮಂಚು ಅವರು ಸದ್ಗುರುಗಳನ್ನು ಕೇಳುತ್ತಾರೆ. ನಮಗೆ 21 ವರ್ಷಗಳಾಗುವವರೆಗೂ ನಮ್ಮ ಹೆತ್ತವರು ನಮ್ಮನ್ನು ಹಲವಾರು ವಿಧಗಳಲ್ಲಿ ಪ್ರಭಾವಿಸಬಹುದು. ಆದರೆ, ನಂತರ ನಮ್ಮ ಜೀವನವು ಹೊಸದಾಗಿ ನಡೆಯುವುದನ್ನು ಸಾಧ್ಯವಾಗಿಸಲು, ನಮ್ಮ ಮೇಲಿನ ಅವರ ಕರ್ಮದ ಪ್ರಭಾವವು ಕೊನೆಗೊಳ್ಳುತ್ತದೆ ಎಂದು ಸದ್ಗುರುಗಳು ಹೇಳುತ್ತಾರೆ.
ಲಕ್ಷ್ಮಿ ಮಂಚು: ನಮಸ್ಕಾರ ಸದ್ಗುರು! ನಾವು ನಮ್ಮ ಹೆತ್ತವರೊಂದಿಗೆ ಹೊಂದಿರುವ ಸಂಬಂಧವು ನಮ್ಮ ಬದುಕಿನ ಹಾದಿಯ ಮೇಲೆ ಪ್ರಭಾವ ಬೀರುತ್ತದೆಯೇ? ಹೌದೆಂದರೆ, ಅದನ್ನು ಹೇಗೆ ಚೆನ್ನಾಗಿ ಪೋಷಿಸುವುದು?
21 ವರ್ಷ ಕಳೆದ ಮೇಲೆ, ವಂಶಾವಳಿಯ ಮರುಕಳಿಸುವ ಸಂಸ್ಕಾರಗಳಿಂದ ನಾವು ಪ್ರಭಾವಿತರಾಗಬಾರದು. ಯಾಕೆಂದರೆ, ನಿಮ್ಮದೊಂದು ಹೊಸದಾದ ಜೀವ, ಈ ಜೀವ ಕೇವಲ ಹಿಂದಿನ ತಲೆಮಾರಿನ ಮರುಕಳಿಸುವಿಕೆ ಆಗಬಾರದು. ಹೆಚ್ಚೆಂದರೆ, 21 ವರ್ಷಗಳವರೆಗೆ ಎಲ್ಲರ ಮೇಲೂ ಕರ್ಮದ ಪ್ರಭಾವವಿರುತ್ತದೆ. ಆದರೆ 21 ಕಳೆದ ಬಳಿಕ ಇಂತಹದೇನೂ ಇರುವುದಿಲ್ಲ. ಅನೇಕರು ಮಾನಸಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅವರ ಹೆತ್ತವರನ್ನು ಅವಲಂಬಿಸಿರಬಹುದು. ಆದರೆ, ಮೂಲಭೂತವಾಗಿ 21 ವಯಸ್ಸಿಗೆ, ಈ ಕರ್ಮಬಂಧವು ಮುರಿಯುತ್ತದೆ. 21 ವರ್ಷ ಕಳೆದ ನಂತರ ನಾವು ಅವರ ಪೋಷಣೆಯನ್ನು ಬಯಸಬಾರದು - ಅದು ಸಂಬಂಧ, ಪ್ರೀತಿ, ಕೃತಜ್ಞತೆಗಳ ಬಂಧವಾಗಿರಬೇಕು. ಅದು ಕೊನೆಯವರೆಗೂ ಇರಬಹುದು.
ಸಂಪಾದಕರ ಟಿಪ್ಪಣಿ: ನೀವು ಯಾವುದಾದರೂ ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವಾ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.