ಮಾಟಮಂತ್ರ - ಅದು ನಿಜವಾಗಿಯೂ ಕೆಲಸ ಮಾಡುತ್ತದೆಯೇ ಮತ್ತು ಅದನ್ನು ಬಿಡಿಸುವುದು ಹೇಗೆ?
ಮಾಟಮಂತ್ರ ನಿಜವೇ? ಹೌದು, ಅಥವಾ ಇಲ್ಲದೆಯೂ ಇರಬಹುದು. ಮತ್ತೊಬ್ಬರು ಮಾಡಬಹುದಾದ ಮಾಟಮಂತ್ರದ ಬಗ್ಗೆ ಹಾಗು ನಮಗೆ ನಾವೇ ಮಾಡಿಕೊಳ್ಳುವ ಮಾಟಮಂತ್ರದ ಬಗ್ಗೆ ಸದ್ಗುರುಗಳು ನಮಗೆ ತಿಳಿಸುತ್ತಾ, ಅವುಗಳ ಪ್ರಭಾವವನ್ನು ತೆಗೆದು ಹಾಕುವ ಸರಳವಾದ ವಿಧಾನವನ್ನು ತಿಳಿಸುತ್ತಾರೆ.
ಪ್ರಶ್ನೆ: ಶಕ್ತಿಗಳನ್ನು ನಕಾರಾತ್ಮಕವಾಗಿ ಬಳಸಬಹುದೇ, ಉದಾಹರಣೆಗೆ ಮಾಟಮಂತ್ರ ಮುಂತಾದವುಗಳನ್ನು ಮಾಡುವ ಮೂಲಕ?
ಸದ್ಗುರು: ನಿಮಗೆ ಒಂದು ವಿಷಯ ಅರ್ಥವಾಗಬೇಕು, ಶಕ್ತಿಯನ್ನು ಶಕ್ತಿಯಾಗಷ್ಟೇ ನಾವು ನೋಡಬೇಕು; ಅದು ದೈವವೂ ಅಲ್ಲ ದೆವ್ವವೂ ಅಲ್ಲ. ನೀವು ಅದನ್ನು ಉಪಯೋಗಿಸಿ ಏನಾನ್ನಾದರೂ ಮಾಡಬಹುದು - ಅದು ದೈವವನ್ನಾದರೂ ಸರಿ ಅಥವಾ ದೆವ್ವವನ್ನಾದರೂ ಸರಿ. ಅದು ವಿದ್ಯುತ್ಶಕ್ತಿಯ ಹಾಗೆ. ವಿದ್ಯುತ್ಶಕ್ತಿಯು ದೈವವೂ ಅಲ್ಲ ದೆವ್ವವೂ ಅಲ್ಲ? ಅದು ನಿಮ್ಮ ಮನೆಯನ್ನು ಬೆಳಕಾದಾಗ ಅದು ದೈವ. ಅದೇ ಒಂದು ವಿದ್ಯುತ್ ಕುರ್ಚಿಯಾದಾಗ ಅದು ದೆವ್ವ. ಯಾವ ಸಮಯಗಳಲ್ಲಿ ಅದನ್ನು ಹೇಗೆ ಅಳವಡಿಸಿಕೊಳ್ಳುವಿರೋ ಅದಕ್ಕೆ ಅನುಗುಣವಾಗಿ ಇರುತ್ತದೆ.
ಐದು ಸಾವಿರ ವರ್ಷಗಳ ಹಿಂದೆ ಅರ್ಜುನ ಕೃಷ್ಣನನ್ನು ಇದೇ ಪ್ರಶ್ನೆಯನ್ನು ಕೇಳಿದ್ದನು, "ನೀನು ಹೇಳುವ ಹಾಗೆ ಎಲ್ಲವೂ ಒಂದೇ ಶಕ್ತಿಯಾದರೆ ಹಾಗು ಎಲ್ಲವೂ ದೈವೀಕವೇ ಆಗಿದ್ದರೆ, ದುರ್ಯೋಧನನಲ್ಲಿಯೂ ದೈವೀಕತೆ ಇರುವುದು. ಮತ್ತೆ, ಅವನು ಹೀಗೆ ಏಕೆ ಪ್ರವರ್ತಿಸುತ್ತಿದ್ದಾನೆ? " ಕೃಷ್ಣ ಎಲ್ಲವನ್ನೂ ಬೋಧಿಸಿದ ಮೇಲೂ ಅರ್ಜುನನು ಮತ್ತೆ ಒಂದು ಮಗುವಿನ ಹಾಗೆ, ಅದೇ ಸರಳ, ಮೂಲಭೂತ ಪ್ರಶ್ನೆಗೆ ಬಂದುದನ್ನು ಕಂಡು ಕೃಷ್ಣ ನಕ್ಕನು. ಅವನು ಉತ್ತರಿಸುತ್ತಾ "ದೇವರು ನಿರ್ಗುಣ, ದೈವೀಕತೆ ನಿರ್ಗುಣ. ಅದಕ್ಕೆ ತನ್ನದೇ ಆದ ಗುಣಲಕ್ಷಣಗಳು ಇಲ್ಲ." ಇದರ ಅರ್ಥ ಅದು ಶುದ್ಧವಾದ ಶಕ್ತಿ ಅಷ್ಟೆ. ನೀವು ಅದರಿಂದ ಏನನ್ನಾಗಿಯೂ ಮಾಡಬಹುದು. ನಿಮ್ಮನ್ನು ತಿನ್ನಲು ಬರುವ ಹುಲಿಯಲ್ಲೂ ಅದೇ ಶಕ್ತಿ ಇರುವುದು. ನಿಮ್ಮನ್ನು ಕಾಪಾಡಲು ಬಂದ ದೇವರೂ ಅದೇ ಶಕ್ತಿ. ಅವು ಬೇರೆ ಬೇರೆ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಅಷ್ಟೇ. ನಿಮ್ಮ ಕಾರನ್ನು ನೀವು ಚಲಿಸುತ್ತಿರುವಾಗ, ಒಳ್ಳೆಯದ್ದೋ ಅಥವಾ ಕೆಟ್ಟದ್ದೋ? ಅದು ನಿಮ್ಮ ಜೀವನಕ್ಕೆ ಆಧಾರವಾಗಬಹುದು ಅಥವಾ ನಿಮ್ಮ ಜೀವವನ್ನು ಯಾವ ಕ್ಷಣವಾದರೂ ತೆಗೆಯಬಹುದು, ಅಲ್ಲವೇ?
ಹಾಗಾಗಿ ಜನ ಮಾಟಮಂತ್ರ ಮಾಡಬಹುದೇ? ಖಂಡಿತವಾಗಿಯೂ ಸಾಧ್ಯ. ಒಳ್ಳೆಯ ಉಪಯೋಗಗಳು ಇದ್ದರೆ ಕೆಟ್ಟವೂ ಇದ್ದೇ ಇರುತ್ತದೆ. ಅಥರ್ವಣ ವೇದ ಈ ಶಕ್ತಿಗಳ ಒಳ್ಳೆಯ ಮತ್ತು ಕೆಟ್ಟ ಉಪಯುಕ್ತತೆಗಾಗಿಯೆ ಮೀಸಲಾಗಿದೆ. ಆದರೆ ನಾನು ನೋಡಿರುವ ಹಾಗೆ, ಬಹಳಷ್ಟು ಬಾರಿ ಇದು ಮಾನಸಿಕ ಮಟ್ಟದಲ್ಲಿ ಇರುತ್ತದೆ. ಸ್ವಲ್ಪ ಮಟ್ಟಕ್ಕೆ ಮಾಟಮಂತ್ರ ಇರಬಹುದು, ಆದರೆ ಬಹಳಷ್ಟು ಬಾರಿ ನಿಮ್ಮ ಮನಸ್ಸೇ ನಿಮಗೆ ಹುಚ್ಚು ಹಿಡಿಸುತ್ತದೆ. ನಾನು ನಿಮಗೆ ಹುಚ್ಚು ಹಿಡಿಸಬೇಕೆಂದುಕೊಂಡರೆ ನಾನು ಮಾಟಮಂತ್ರ ಮಾಡಬೇಕಾದ ಅವಶ್ಯಕತೆ ಇಲ್ಲ. ನಾಳೆ ಬೆಳಗ್ಗೆ ಮನೆಯಿಂದಾಚೆ ನೀವು ಹೊರ ಬರುವ ಸಂದರ್ಭದಲ್ಲಿ ಒಂದು ತಲೆಬುರಡೆ ಮತ್ತು ಸ್ವಲ್ಪ ರಕ್ತ ಹರಡಿರುವುದು ಕಂಡು ಬಂದರೆ ಸಾಕು, ಅಷ್ಟೆ, ನೀವು ಗೊಂದಲಕ್ಕೊಳಗಾಗುವಿರಿ. ಒಂದು ತರಹದ ಭಯ ನಿಮ್ಮನ್ನು ಆವರಿಸಿದ ಕಾರಣ ನಿಮ್ಮ ವ್ಯಾಪಾರ ಹಾಳಾಗುತ್ತದೆ, ಎಲ್ಲ ಕೆಟ್ಟದ್ದೇ ನಡೆಯುತ್ತದೆ . ವಾಸ್ತವವಾಗಿ ಯಾವ ಮಾಟಮಂತ್ರವೂ ನಡೆದಿಲ್ಲ. ಮಾಟಮಂತ್ರ ನಡದಿರುವಂತಹ ಕೆಲವು ಲಕ್ಷಣಗಳು ಕಂಡು ಬಂದರೆ ಸಾಕು ಅದು ನಿಮ್ಮ ಮನಸ್ಸನ್ನು ನಾಶಮಾಡುತ್ತದೆ. ಆದ್ದರಿಂದ ಬಹಳಷ್ಟು ಸಮಯ, ಅದು ಮಾನಸಿಕ ಮಟ್ಟದಲ್ಲಿಯೇ ಇರುತ್ತದೆ. ನಿಮಗೆ ಮಾಟಮಂತ್ರ ಮಾಡಿದ್ದರೂ, ಅದರಲ್ಲಿ 10 ಪ್ರತಿಶತ ನಿಜವಿರಬಹುದು. ಮಿಕ್ಕಂತೆ ನೋಡಿದರೆ ನಿಮ್ಮನ್ನು ನೀವೇ ನಾಶ ಮಾಡಿಕೊಳ್ಳುತ್ತಿದ್ದೀರಿ. ಆದ್ದರಿಂದಲೇ ಅದು ಸಂಕೇತಗಳೊಡನೆ ಬರುತ್ತದೆ. ಅದರ ಪ್ರಭಾವ ನಿಮ್ಮ ಮನಸ್ಸಿನ ಮೇಲೆ ಇರುತ್ತದೆಯೆಂದು ಅವರಿಗೆ ತಿಳಿದಿದೆ. ಒಂದು ಬಾರಿ ಅದರ ಸಂಕೇತಗಳು ಕಂಡರೆ, ನಿಮ್ಮನ್ನು ನೀವೇ ನಾಶ ಮಾಡಿಕೊಳ್ಳುತ್ತೀರಿ.
ನಮ್ಮನ್ನು ಮಾಟಮಂತ್ರದಿಂದ ಹೇಗೆ ಕಾಪಾಡಿಕೊಳ್ಳಬಹುದು?
ಧ್ಯಾನಲಿಂಗ
ನೀವೇನಾದರೂ ಅಂತಹ ಪ್ರಭಾವಕ್ಕೆ ಒಳಗಾಗಿದ್ದರೆ, ನೀವು ಧ್ಯಾನಲಿಂಗದ ಆವರಣದಲ್ಲಿ ಬಂದು ಕುಳಿತುಕೊಳ್ಳಬಹುದು, ಏಕೆಂದರೆ ಧ್ಯಾನಲಿಂಗದಲ್ಲಿ ಕೆಲವು ಅಂಶಗಳು ಇವೆ. ಅದು ಆ ಪ್ರಭಾವಗಳಿಂದ ಮುಕ್ತಗೊಳಿಸುತ್ತದೆ. ನಿಮಗೆ ಅಂತಹದ್ದೇನಾದರೂ ನಡೆದಿದೆಯೆಂದು ಅನ್ನಿಸಿದ್ದರೆ, ನೀವು ಧ್ಯಾನಲಿಂಗದಲ್ಲಿ ಬಂದು ಒಂದು ದಿನ ಕುಳಿತುಕೊಂಡು ಹೋಗಿ. ಎಲ್ಲವೂ ತಾನೆ ಸರಿ ಹೋಗುತ್ತದೆ. ಆದರೆ, ಅವುಗಳ ಬಗ್ಗೆ ನೀವು ಗಮನಕೊಡದೆ ಇರುವುದು ಉತ್ತಮ. ಏಕೆಂದರೆ ನಿಮ್ಮ ಮನಸ್ಸೇ ನಿಮ್ಮ ಮೇಲೆ ಬೇರೆಯವರಿಗಿಂತ ಹೆಚ್ಚು ಮಾಟಮಂತ್ರ ಮಾಡುತ್ತದೆ.
ಧ್ಯಾನಲಿಂಗದ ಮುಂಬದಿಯಲ್ಲಿ ವನಶ್ರೀ ಮತ್ತು ಪತಂಜಲಿ ಮೂರ್ತಿಗಳಿವೆ, ಅವು ಧ್ಯಾನಲಿಂಗದಿಂದ 15 ಡಿಗ್ರೀ ಅಂತರದಲ್ಲಿ ಇವೆ. ಇಲ್ಲದಿದ್ದರೆ, ಕಟ್ಟಡದ ಶೈಲಿಯಂತೆ ನಾನು ಅದನ್ನು ಇನ್ನೂ ಹತ್ತಿರವಿಡಲು ಬಯಸಿದ್ದೆ. ಸಹಜವಾಗಿ, ಯಾರಿಗೆ ನಕಾರಾತ್ಮಕ ಶಕ್ತಿಗಳ ಪ್ರಭಾವವಾಗಿದೆಯೋ ಅಥವಾ ಮಾಟಮಂತ್ರದ ಪ್ರಭಾವವಿರುವುದೋ ಅವರ ಯಾವ ಪ್ರಭಾವಕ್ಕೊಳಗಾಗಿದ್ದಾರೆಯೋ ಅದಕ್ಕಣುಗುಣವಾಗಿ ಅವರನ್ನು ಅದರಿಂದ 15 ಡಿಗ್ರೀ ಮುಂದೆ ಅಥವಾ ಹಿಂದೆ ಕುಳ್ಳಿರಿಸುತ್ತಾರೆ.
ಆ ಸ್ಥಳವನ್ನು ಪ್ರತ್ಯೇಕವಾಗಿ ಅಂತಹ ಪರಿಸ್ಥಿತಿಯವರ ಉಪಯೋಗಕ್ಕಾಗಿಯೇ ಸೃಷ್ಟಿಸಲಾಗಿದೆ. ನಿಮಗೆ ಅದರ ಅರಿವು ಇಲ್ಲದಿದ್ದರೂ ಮಾಟಮಂತ್ರದಂತಹ ದುಷ್ಟ ಶಕ್ತಿ ಇದ್ದೇ ಇದೆ. . ಆ 15 ಡಿಗ್ರಿ ಕೋನದಲ್ಲೇ ಅದರ ದ್ವಾರವಿದೆ .ಯಾರು ಅದರೊಳಗೆ ಪ್ರವೇಶಿಸುತ್ತಾರೆಯೋ, ಅವರಲ್ಲಿನ ದುಷ್ಟ ಅಂಶಗಳು ಅಲ್ಲಿಯೇ ಕಳೆದುಹೋಗುತ್ತದೆ. ಅಂತಹ ಪ್ರಭಾವದಿಂದ ಹೊರಬಂದ ಸಾವಿರಾರು ಉದಾಹರಣೆ ಇದೆ. ಆದ್ದರಿಂದಲೇ ಧ್ಯಾನಲಿಂಗಕ್ಕೆ ಬಂದ ಎಷ್ಟೋ ಜನರ ಜೀವನದಲ್ಲಿ ಇದ್ದಕ್ಕಿದ್ದಂತೆ ಬದಲಾವಣೆ ಕಾಣುತ್ತದೆ. ಅವರ ಜೀವನದಲ್ಲಿನ ನಕಾರಾತ್ಮಕ ಪ್ರಭಾವಗಳು ಕಳೆದುಹೋಗಿವೆ.
ನಾವು “ನಕಾರಾತ್ಮಕ ಪ್ರಭಾವಗಳು” ಎಂದು ಹೇಳುವಾಗ ಅದು ಬೇರೆಯವರು ನಮ್ಮ ಮೇಲೆ ಕೆಟ್ಟದನ್ನು ಮಾಡಿದ್ದಾರೆ ಎಂಬ ಅರ್ಥದಲ್ಲಿ ಅಲ್ಲ. ಬೇರೆ ಬೇರೆ ರೀತಿಯಲ್ಲಿ, ನಾವು ಕೆಟ್ಟ ಅಂಶಗಳನ್ನು ಎಲ್ಲಿಂದಲೋ ತೆಗೆದುಕೊಂಡಿರುತ್ತೇವೆ. ಯಾರಾದರೂ ವಿಷ ತುಂಬಿಸಿರುವ ಹಣ್ಣನ್ನು ನಿಮಗೆ ಕೊಡಬೇಕೆಂಬ ಅವಶ್ಯಕತೆ ಇಲ್ಲ. ಆ ಹಣ್ಣಲ್ಲಿ ಸಹಜವಾಗಿಯೇ ಸ್ವಲ್ಪ ವಿಷವಿರಬಹುದು, ಅದನ್ನು ನಾವು ಸೇವಿಸಿದಾಗ ಅದು ನಮ್ಮ ದೇಹದೊಳಗೆ ಸೇರಬಹುದು. ಅದೇ ರೀತಿಯಲ್ಲಿ, ಜೀವನದಲ್ಲಿ ಎಷ್ಟೋ ರೀತಿಯಲ್ಲಿ ನಮ್ಮೊಳಗೆ ಕೆಟ್ಟ ಪ್ರಭಾವಗಳು ಪ್ರವೇಶಿಸುತ್ತದೆ. ಬೇರೆಯವರು ಎಲ್ಲೋ ಕುಳಿತು ನಿಮ್ಮ ಮೇಲೆ ಸಂಚು ಮಾಡುತ್ತಿರುವರೆಂದಲ್ಲ. ಹಾಗಾಗಿ ಧ್ಯಾನಲಿಂಗದ ಮೊದಲ 15 ಡಿಗ್ರೀ ಸ್ಥಳವು ಜನರಿಗೆ ಆ ಉದ್ದೇಶಕ್ಕಾಗಿಯೇ ಮೀಸಲಾಗಿದೆ. ಅವರು ಆ ಸ್ಥಳದ 60 ರಿಂದ 70 ಅಡಿಗಳಷ್ಟು ನಡೆಯಬೇಕು ಅಷ್ಟೆ, ಕೆಟ್ಟ ಪ್ರಭಾವಗಳನ್ನೆಲ್ಲಾ ಅದೇ ನೋಡಿಕೊಳ್ಳುತ್ತದೆ.
ಸಂಪಾದಕರ ಟಿಪ್ಪಣಿ: ನಿಮ್ಮ ಬದುಕನ್ನು ನಮಗೆ ಬೇಕಾದ ರೀತಿಯಲ್ಲಿ ರೂಪಿಸಿಕೊಳ್ಳಲು ನೆರವಾಗುವ ‘ಇನ್ನರ್ ಇಂಜಿನಿಯರಿಂಗ್ ಆನ್ ಲೈನ್’ ಈಗ 50%ನಲ್ಲಿ ಲಭ್ಯವಿದೆ. ಜುಲೈ 31ರ ವರೆಗೆ. ಇಲ್ಲಿ ನೋಂದಾಯಿಸಿ.