ಆರೋಗ್ಯಕರವಾಗಿ ಮತ್ತು ಸೌಖ್ಯವಾಗಿ ಬದುಕುವುದು ಹೇಗೆ?
ಕೇವಲ ರೋಗದಿಂದ ಮುಕ್ತವಾಗಿರದೆ, ಜೀವನದ ಪ್ರತಿಯೊಂದು ಅಂಶಗಳಲ್ಲೂ ಒಬ್ಬ ವ್ಯಕ್ತಿಯು ನಿಜವಾಗಿಯೂ ಆರೋಗ್ಯವಾಗಿರುವುದು ಹೇಗೆ ಎಂದು ಸದ್ಗುರುಗಳು ಈ ಲೇಖನದಲ್ಲಿ ವಿವರಿಸುತ್ತಾರೆ: "ಹೆಲ್ತ್" ಎಂಬ ಆಂಗ್ಲ ಪದವು "ಹೋಲ್" ಎಂಬ ಪದದಿಂದ ಬಂದಿದೆ. ಹೋಲ್ ಪದದ ಅರ್ಥ ಪೂರ್ಣ ಎಂದು. ನಿಮ್ಮ ದೇಹ, ನಿಮ್ಮ ಮನಸ್ಸು, ನಿಮ್ಮ ಭಾವನೆ, ನಿಮ್ಮ ಪ್ರಾಣಶಕ್ತಿಗಳು ಪರಸ್ಪರ ಲಯಬದ್ಧವಾಗಿದ್ದಾಗ ಮತ್ತು ನಿಮ್ಮೊಳಗೆ ಪೂರ್ಣತೆಯ ಅನುಭವವಿದ್ದಾಗ, ನೀವು ಆರೋಗ್ಯವಂತರು.”
ಕೇವಲ ರೋಗದಿಂದ ಮುಕ್ತವಾಗಿರದೆ, ಜೀವನದ ಪ್ರತಿಯೊಂದು ಅಂಶಗಳಲ್ಲೂ ಒಬ್ಬ ವ್ಯಕ್ತಿಯು ನಿಜವಾಗಿಯೂ ಆರೋಗ್ಯವಾಗಿರಲು ಹೇಗೆ ಸಾಧ್ಯವೆಂದು ಸದ್ಗುರುಗಳು ವಿವರಿಸುತ್ತಾರೆ.
ಸದ್ಗುರು: "ಹೆಲ್ತ್" ಎಂಬ ಆಂಗ್ಲ ಪದವು "ಹೋಲ್" ಎಂಬ ಪದದಿಂದ ಬಂದಿದೆ. ಹೋಲ್ ಪದದ ಅರ್ಥ ಪೂರ್ಣ ಎಂದು. ನಿಮ್ಮ ದೇಹ, ನಿಮ್ಮ ಮನಸ್ಸು, ನಿಮ್ಮ ಭಾವನೆ, ನಿಮ್ಮ ಪ್ರಾಣಶಕ್ತಿಗಳು ಪರಸ್ಪರ ಲಯಬದ್ಧವಾಗಿದ್ದಾಗ ಮತ್ತು ನಿಮ್ಮೊಳಗೆ ಪೂರ್ಣತೆಯ ಅನುಭವವಿದ್ದಾಗ, ನೀವು ಆರೋಗ್ಯವಂತರು. ವೈದ್ಯಕೀಯವಾಗಿ ಆರೋಗ್ಯವಂತರು ಎಂದು ಪರಿಗಣಿಸಲ್ಪಟ್ಟ ಅನೇಕರು ಸೇರಿದಂತೆ ವಿಶ್ವದ ಹೆಚ್ಚಿನ ಜನರು ಆರೋಗ್ಯವಂತರಲ್ಲ. ಅವರಿಗೆ ಯಾವುದೇ ಔಷಧಿಗಳ ಅಗತ್ಯವಿಲ್ಲದಿರಬಹುದು. ಆದರೆ ಅವರ ಜೀವವ್ಯವಸ್ಥೆಯು ಯಾವುದೇ ಪೂರ್ಣತೆಯನ್ನು ತಿಳಿದಿಲ್ಲ. ಅವರಲ್ಲಿ ಶಾಂತಿ ಅಥವಾ ಸಂತೋಷದ ಭಾವವಿಲ್ಲ. ನೀವು ಒಂದು ನಿರ್ದಿಷ್ಟ ಹಂತವನ್ನು ಮೀರಿ ಖಿನ್ನತೆಗೆ ಒಳಗಾದಾಗ ಮಾತ್ರ ನಿಮ್ಮ ಆರೋಗ್ಯ ಕೆಟ್ಟಿದೆಯೆಂದು ನೀವು ಭಾವಿಸುತ್ತೀರಿ, ಆದರೆ ನೀವು ಸಂತೋಷದಿಂದ ತುಂಬಿ ತುಳುಕುತ್ತಿಲ್ಲದಿದ್ದರೆ ನೀವು ಆರೋಗ್ಯವಂತರಲ್ಲ. ನೀವು ಯಾರೆಂಬುದರ ಆಂತರಿಕ ಸಂಯೋಜನೆಯ ದೃಷ್ಟಿಯಿಂದ ಯಾವುದೇ ಪೂರ್ಣತೆಯಿರುವುದಿಲ್ಲ.ನೀವು ಎಂದಿಗೂ ಇದರ ಬಗ್ಗೆ ಗಮನ ಹರಿಸದ ಕಾರಣ ಹೀಗಾಗಿದೆ. ಹೊರಗಿನಿಂದ ಎಲ್ಲವನ್ನೂ ಸರಿಪಡಿಸಲು ಪ್ರಯತ್ನಿಸುವ ಈ ಅಭ್ಯಾಸ ನಿಲ್ಲಬೇಕಾಗಿದೆ. ಯಾವುದೇ ವೈದ್ಯರು ಅಥವಾ ಔಷಧಿ ನಿಮಗೆ ಆರೋಗ್ಯವನ್ನು ನೀಡಲು ಸಾಧ್ಯವಿಲ್ಲ. ನೀವು ಅನಾರೋಗ್ಯಕ್ಕೆ ಸಿಲುಕಿದಾಗ ಅವರು ನಿಮಗೆ ನೆರವಾಗಬಹುದು ಮತ್ತು ಅದರಿಂದ ಗುಣಮುಖರಾಗಲು ಸ್ವಲ್ಪಮಟ್ಟಿಗೆ ಸಹಾಯ ಮಾಡಬಹುದು, ಆದರೆ ಆರೋಗ್ಯವು ನಿಮ್ಮೊಳಗೆ ಆಗಬೇಕು.
ಆರೋಗ್ಯವು ಕೇವಲ ದೈಹಿಕ ಅಂಶವಲ್ಲ. ಇಂದು ಆಧುನಿಕ ಔಷಧಿಯು ಮನುಷ್ಯರಿಗೆ ಉಂಟಾಗುವ ಕಾಯಿಲೆಯು ಮನೋದೈಹಿಕ -ಮಾನಸಿಕ ಒತ್ತಡದಿಂದ ಉಂಟಾಗುವ ದೈಹಿಕ ರೋಗ, ಎಂದು ಹೇಳುತ್ತದೆ. ಮನಸ್ಸಿನಲ್ಲಿ ಏನಾಗುತ್ತದೆಯೋ ಅದು ದೇಹದಲ್ಲಿ ಸ್ವಾಭಾವಿಕವಾಗಿ ಸಂಭವಿಸುತ್ತದೆ. ದೇಹದಲ್ಲಿ ಏನಾಗುತ್ತದೆಯೋ ಅದು ಮನಸ್ಸಿನಲ್ಲಿ ಸಂಭವಿಸುತ್ತದೆ. ಆದ್ದರಿಂದ ನಾವು ಇಲ್ಲಿ ಜೀವಿಸುತ್ತಿರುವ ರೀತಿ, ನಮ್ಮ ವರ್ತನೆ, ನಮ್ಮ ಭಾವನೆ, ಮೂಲಭೂತ ಮಾನಸಿಕ ಸ್ಥಿತಿ, ನಮ್ಮ ಚಟುವಟಿಕೆಯ ಮಟ್ಟ, ನಮ್ಮ ಮನಸ್ಸು ಎಷ್ಟು ಸುವ್ಯವಸ್ಥಿತವಾಗಿದೆ ಎಂಬುದೆಲ್ಲವೂ ನಮ್ಮ ಆರೋಗ್ಯದ ಒಂದು ಭಾಗವಾಗಿದೆ.
ಆರೋಗ್ಯವು ಒಳಗಿನಿಂದ ಹೊಮ್ಮಬೇಕಾದರೆ, ನಾವು ಖಂಡಿತವಾಗಿಯೂ ಒಂದಿಷ್ಟು ಇನ್ನರ್ ಎಂಜಿನಿಯರಿಂಗ್ ಮಾಡಬೇಕು. ನಮ್ಮ ದೇಹ, ಮನಸ್ಸು, ಭಾವನೆ ಮತ್ತು ಪ್ರಾಣಶಕ್ತಿಯು ಉತ್ತಮ ಸಾಮರಸ್ಯವನ್ನು ಹೊಂದಿರುವ ವಾತಾವರಣವನ್ನು ನಾವು ಖಂಡಿತವಾಗಿ ನಿರ್ಮಿಸಬೇಕು.
ಪೂರ್ಣ ಆರೋಗ್ಯ ಮತ್ತು ಯೋಗಕ್ಷೇಮವನ್ನು ಅನುಭವಿಸುವುದಕ್ಕಾಗಿ ತಮ್ಮ ದೇಹ ಮತ್ತು ಮನಸ್ಸನ್ನು ಎಂಜಿನಿಯರ್ ಮಾಡಲು ಜನರು ದಿನಕ್ಕೆ ಸುಮಾರು ಇಪ್ಪತ್ತೈದರಿಂದ ಮೂವತ್ತು ನಿಮಿಷಗಳನ್ನು ತಮ್ಮ ಆಂತರಿಕ ಯೋಗಕ್ಷೇಮದ ಕಡೆಗೆ, ಕೆಲವು ಸರಳ ಪ್ರಕ್ರಿಯೆಗಳಿಗಾಗಿ ವಿನಿಯೋಗಿಸಿದರೆ, ಆಗ ಪ್ರತಿಯೊಬ್ಬರೂ ಆರೋಗ್ಯಕರ ಮತ್ತು ಒಳ್ಳೆಯ ರೀತಿಯಲ್ಲಿ ಬದುಕಲು ಸಮರ್ಥಾರಾಗಿರುತ್ತಾರೆ.
Editor’s Note: Get the latest updates from the Isha Blog. Twitter, facebook, rss or browser extensions, take your pick.