ನಾಗ್ ಅಶ್ವಿನ್: ನಮ್ಮ ಪೀಳಿಗೆಯ ಯುವಜನರಲ್ಲಿ ಮದ್ಯಪಾನ ಮತ್ತು ವ್ಯಸನ ಹೆಚ್ಚಾಗುತ್ತಿರುವುದರ ಬಗ್ಗೆ ನನಗೆ ಸತ್ಯ ತಿಳಿಯಬೇಕಿದೆ. ಅನಾದಿ ಕಾಲದಿಂದಲೂ ಜನರು ಮದ್ಯಪಾನವನ್ನು ಮಾಡುತ್ತಿದ್ದರೂ, ಈಗ, ಹರೆಯದವರು, ಸ್ಕೂಲ್ ಮಕ್ಕಳೂ ಕೂಡ ತಾತ್ಕಾಲಿಕ ಖುಶಿಗಾಗಿ, ಒತ್ತಡದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಡ್ರಗ್ಸ್ ಅನ್ನು ಬಳಸುತ್ತಿದ್ದಾರೆ. ಇದು ಭಯಾನಕ ಮತ್ತು ಅಪಾಯಕಾರಿ. ಮಕ್ಕಳು ಇದನ್ನು ಏತಕ್ಕಾಗಿ ಬಳಸುತ್ತಾರೆ ಎಂದು ನನಗೆ ತಿಳಿಯಬೇಕು. ಜನರನ್ನು ಇದರಿಂದ ಮುಕ್ತಗೊಳಿಸುವುದಕ್ಕೆ ಉತ್ತಮ ಮತ್ತು ಸುವ್ಯವಸ್ಥಿತವಾದ ದಾರಿ ಯಾವುದು?

 ಸದ್ಗುರು: ನಮಸ್ಕಾರ, ನಾಗ್! ನನಗೆ ನಿಮ್ಮ ಹೆಸರು ಇಷ್ಟವಾಯ್ತು. ನಾಗರ ಹಾವುಗಳು ನನಗೆ ತುಂಬಾ ಅಚ್ಚುಮೆಚ್ಚು. ನಿಮಗೆ ಇದು ಗೊತ್ತಿಲ್ಲದಿರಬಹುದು – ಒಂದು ನಿರ್ದಿಷ್ಟವಾದ ರೀತಿಯಲ್ಲಿ ಬಳಸಿದರೆ, ನಾಗರ ಹಾವಿನ ವಿಷ ಕೂಡ ಒಂದು ಮಾದಕ ವಸ್ತು.  

ಸಮಾಜದಲ್ಲಿ ಮಾದಕತೆಯ ಅಗತ್ಯ ಹೆಚ್ಚಾಗುತ್ತಿರುವುದಕ್ಕೆ ಹಲವಾರು ಕಾರಣಗಳಿವೆ. ಮೂಲ ವಿಷಯವೆಂದರೆ, ಜನರು ಈಗ ಹೊಟ್ಟೆಪಾಡಿಗಾಗಿ ಹೋರಾಡಬೇಕಿಲ್ಲ. ಬಹಳಷ್ಟು ಜನರು, ಕೇವಲ ಹೊಟ್ಟೆಪಾಡಿನ ಬದುಕಿನಿಂದ ಹೊರಬಂದಿದ್ದಾರೆ. ಅದರಿಂದ ಹೊರಬಂದಾಗ, ಅವರಿಗೆ ಆಸಕ್ತಿ ತರಿಸುವಂತಹ, ಅವರು ಬಹಳ ಇಷ್ಟ ಪಡುವ ಬೇರೆ ವಿಷಯಗಳನ್ನು ಅವರು ಹುಡುಕಿಕೊಳ್ಳಬೇಕು. ಅದು ಆಗದಿದ್ದರೆ, ಭೋಗಸುಖದ ಅಗತ್ಯ ಮತ್ತು ಮಾದಕತೆಯ ಅಗತ್ಯ ಸಹಜವಾಗಿಯೇ ಆ ಸಮಾಜದಲ್ಲಿ ಹೆಚ್ಚಾಗುತ್ತದೆ. ಆದ್ದರಿಂದ, ಇದು ಬಹಳ ಮುಖ್ಯ – ತಂದೆತಾಯಿಗಳು ಶ್ರೀಮಂತರಾಗಿದ್ದರೂ, ಮಕ್ಕಳೊಂದು ವಯಸ್ಸಿಗೆ ಬರುವ ತನಕ, ಅವರಿಗೆ ಸಂಪತ್ತಿನ ಅರಿವಿರಬಾರದು.

ಸಂಪತ್ತು ಜೀವನದೊಳಗೆ ಬರುವುದಕ್ಕಿಂತ ಮೊದಲೇ, ಶಿಸ್ತು, ತೊಡಗಿಸಿಕೊಳ್ಳುವಿಕೆ ಮತ್ತು ಜೀವನದಲ್ಲಿ ಪಾಲ್ಗೊಳ್ಳುವಿಕೆಯ ಪ್ರಜ್ಞೆಯು ಬರಬೇಕು. ಇಲ್ಲದಿದ್ದರೆ, ಸಂಪತ್ತು ನೀವು ತಲೆಯ ಮೇಲೆ ಹೊತ್ತುಕೊಳ್ಳುವ ಹೊರೆಯಾಗುತ್ತದೆ. ಈ ಪೀಳಿಗೆಗೆ ಆಗುತ್ತಿರುವುದು ಇದೇ.

ಈ ಸಂಸ್ಕತಿಯಲ್ಲಿ, ರಾಜರು ಕೂಡ ತಮ್ಮ ಮಕ್ಕಳನ್ನು ಗುರುಕುಲಕ್ಕೆ ಕಳಿಸುತ್ತಿದ್ದರು – ಅಲ್ಲಿ ಅವರು ಬೇರೆ ಮಕ್ಕಳ ಜೊತೆ ಓದುತ್ತಿದ್ದರು. ಎಲ್ಲರೂ ಕನಿಷ್ಟ ಅಗತ್ಯಗಳೊಂದಿಗೆ ಬದುಕುತ್ತಿದ್ದರು. ಸಂಪತ್ತು ಜೀವನದೊಳಗೆ ಬರುವುದಕ್ಕಿಂತ ಮೊದಲೇ, ಶಿಸ್ತು, ತೊಡಗಿಸಿಕೊಳ್ಳುವಿಕೆ ಮತ್ತು ಜೀವನದಲ್ಲಿ ಪಾಲ್ಗೊಳ್ಳುವಿಕೆಯ ಪ್ರಜ್ಞೆಯು ಬರಬೇಕು. ಇಲ್ಲದಿದ್ದರೆ, ಸಂಪತ್ತು ನೀವು ತಲೆಯ ಮೇಲೆ ಹೊತ್ತುಕೊಳ್ಳುವ ಹೊರೆಯಾಗುತ್ತದೆ. ಈ ಪೀಳಿಗೆಗೆ ಆಗುತ್ತಿರುವುದು ಇದೇ. 

ಚಟುವಟಿಕೆ ಮತ್ತು ಗಮನದ ಕೊರತೆ

ಇನ್ನೊಂದು ಕಾರಣವೇನೆಂದರೆ, ಈಗ ಹೆಚ್ಚಾಗಿ, ತಂದೆತಾಯಿಗಳಿಬ್ಬರೂ ಕೆಲಸ ಮಾಡುತ್ತಿರುತ್ತಾರೆ. ಚಿಕ್ಕ ವಯಸ್ಸಿನಲ್ಲೇ ಒಂದು ಮಗುವಿಗೆ ಅವಶ್ಯವಾಗಿ ಸಿಗಬೇಕಾದ ಗಮನ ಮಕ್ಕಳಿಗೆ ಸಿಗುತ್ತಿಲ್ಲ. ಆದ್ದರಿಂದ, ಸಹಜವಾಗಿಯೇ, ಅವರು ಅನೇಕ ಅಡ್ಡದಾರಿಗಳನ್ನು ಹಿಡಿಯುತ್ತಿದ್ದಾರೆ. ದೈಹಿಕ ಚಟುವಟಿಕೆಯೂ ಬೇಕಿರುವಷ್ಟಿಲ್ಲ; ದೇಹದ ಫಿಟ್ನೆಸ್ ಅನ್ನು ನೀವು ಆನಂದಿಸದಿದ್ದಾಗ, ನೀವು ಆನಂದಿಸುವುದು ನಶೆ ಏರಿಸಿಕೊಳ್ಳುವುದನ್ನು ಮಾತ್ರ. ನಿಮ್ಮ ಜೀವದ ಉತ್ಸಾಹ, ಲವಲವಿಕೆಯನ್ನು ನೀವು ಆನಂದಿಸದಿದ್ದರೆ, ಮತ್ತು ಏರಿಸಿಕೊಳ್ಳುವುದೊಂದೇ ದಾರಿಯಾಗುತ್ತದೆ. ಮತ್ತೀಗ, ಡ್ರಗ್ಸ್‌ಗಳು ಕೇವಲ ನಶೆಯನ್ನು ಏರಿಸುವುದಿಲ್ಲ, ಅವು ಕೆಲ ಗಂಟೆಗಳ ಕಾಲ ಹುರುಪನ್ನೂ ಕೊಡುತ್ತದೆ. ಹಾಗಾಗಿ, ದೊಡ್ಡ ಮಟ್ಟಿನಲ್ಲಿ, ಈ ಪೀಳಿಗೆಯ ಆ ದಿಕ್ಕಿನಲ್ಲಿ ಹೋಗುತ್ತಿದೆ. 

ಈ ಪೀಳಿಗೆಯು ಡ್ರಗ್ಸ್‌ನತ್ತ ಆಕರ್ಷಿತರಾಗುತ್ತಿರುವುದಕ್ಕೆ ಇನ್ನೊಂದು ಪ್ರಮುಖವಾದ ಕಾರಣವೆಂದರೆ, ಅವರ ಮನಸ್ಸಿನಲ್ಲಿ, ಅವರಿಗೆ ನೀಡಲ್ಪಟ್ಟ ಸ್ವರ್ಗದ ಭರವಸೆಯು ಕುಸಿಯುತ್ತಿದೆ.

ಈ ಪೀಳಿಗೆಯು ಡ್ರಗ್ಸ್‌ನತ್ತ ಆಕರ್ಷಿತರಾಗುತ್ತಿರುವುದಕ್ಕೆ ಇನ್ನೊಂದು ಪ್ರಮುಖವಾದ ಕಾರಣವೆಂದರೆ, ಅವರ ಮನಸ್ಸಿನಲ್ಲಿ, ಅವರಿಗೆ ನೀಡಲ್ಪಟ್ಟ ಸ್ವರ್ಗದ ಭರವಸೆಯು ಕುಸಿಯುತ್ತಿದೆ. ಬಹುಶಃ, ಅವರಿಗೆ ಅದನ್ನು ಸ್ಪಷ್ಟವಾಗಿ ಹೇಳುವುದಕ್ಕಾಗುತ್ತಿಲ್ಲ. ಅದನ್ನು ಹೇಳುವುದಕ್ಕೆ ಅವರಲ್ಲಿ ಸ್ಪಷ್ಟತೆ ಅಥವಾ ಧೈರ್ಯವಿಲ್ಲ. ಆದರೆ, ಬಹಳ ಸಮಯದಿಂದ, “ಇದರಿಂದೆಲ್ಲಾ ನೀವು ದೂರವಿದ್ದರೆ, ಅದು ಸ್ವರ್ಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ.” ಎಂದು ಹೇಳಿ ನಾವು ಜನರನ್ನು ಸಂಭಾಳಿಸುತ್ತಿದ್ದೆವು. ಈಗ, ಸ್ವರ್ಗದ ನಂಬಿಕೆ, ಭರವಸೆ ಕುಸಿಯುತ್ತಿದೆ. ಅದಕ್ಕಾಗಿ ಇಲ್ಲಿಯೇ ಕುಡಿದು ಮುಗಿಸಿಬಿಡುತ್ತಿದ್ದಾರೆ! ಈ ತರಹದ ತುಂಬಾ ಕಾರಣಗಳಿವೆ. ಮೂಲಭೂತವಾಗಿ, ಬಹಳಷ್ಟು ಮನುಷ್ಯರಿಗೆ, ಉಳಿವಿಗಾಗಿ ಭೌತಿಕವಾಗಿ ಕಷ್ಟ ಪಡುವ ಅಗತ್ಯ ಹೆಚ್ಚು ಕಮ್ಮಿ ಹೊರಟು ಹೋಗಿದೆ. ಅದೇ ಮತ್ತಿನ ಅಗತ್ಯವನ್ನು ಹೆಚ್ಚಿಸುತ್ತದೆ.

ಇನ್ನಿತರ ತರದ ಸುಖ-ಆನಂದಗಳನ್ನು ಅರಿಯುವುದು

ಇದಕ್ಕಿರುವ ಪರಿಹಾರಗಳೇನು? ಬೆಳೆಯುತ್ತಿರುವ ಮಕ್ಕಳಿರುವವರು ಅವರ ಮಕ್ಕಳನ್ನು ಕ್ರೀಡೆಯಲ್ಲಿ ಮತ್ತು ಪ್ರಕೃತಿಯಲ್ಲಿ ತೊಡಗಿಸುವ ಚಟುವಟಿಕೆಗಳಾದ - ಟ್ರೆಕ್ಕಿಂಗ್, ಬೆಟ್ಟ ಹತ್ತುವುದು, ಈಜುವುದು – ಇವುಗಳಲ್ಲಿ ತೊಡಗಿಸುವುದು ಬಹಳ ಮುಖ್ಯ. ಕಲೆ, ಸಂಗೀತದಂತಹ ಚಟುವಟಿಕೆಗಳಲ್ಲಿ ಅವರು ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಅವರು ಬೌದ್ಧಿಕ ಸುಖ, ಭಾವನೆಗಳ ಸುಖ, ಪ್ರಜ್ಞೆಯ ಆನಂದವನ್ನು ಅನುಭವಿಸಲು ಕಲಿತುಕೊಳ್ಳಬೇಕು.  

 

ಮಾನಸಿಕ ಸುಖಗಳು, ಹರಿತವಾದ ಬುದ್ಧಿಯಿಂದ ದೊರಕುವ ಆನಂದ, ಭಾವನೆಗಳ ಸುಖ ಮತ್ತು ಪ್ರಜ್ಞೆಯ ಸುಖವನ್ನು ಆನಂದಿಸುವುದನ್ನು ಕಲಿತಾಗ, ದೇಹದ ಸುಖದಲ್ಲಿ ತೊಡಗುವುದು ಸಹಜವಾಗಿಯೇ ಬಹಳ ಕಡಿಮೆಯಾಗುತ್ತದೆ. ಮಕ್ಕಳು ವಿವಿಧ ರೀತಿಯ ಚಟುವಟಿಕೆಗಳಲ್ಲಿ ಬಹಳ ಆಸಕ್ತಿಯಿಂದ ತೊಡಗುವುದು ಬಹಳ ಮುಖ್ಯ. ಇದು ಕುಡಿತದ, ಡ್ರಗ್ಸ್‌ನ ಅಗತ್ಯವನ್ನು ಕಡಿಮೆಯಾಗಿಸುತ್ತದೆ.

ಮಕ್ಕಳು ವಿವಿಧ ರೀತಿಯ ಚಟುವಟಿಕೆಗಳಲ್ಲಿ ಬಹಳ ಆಸಕ್ತಿಯಿಂದ ತೊಡಗುವುದು ಬಹಳ ಮುಖ್ಯ. ಇದು ಕುಡಿತದ, ಡ್ರಗ್ಸ್‌ನ ಅಗತ್ಯವನ್ನು ಕಡಿಮೆಯಾಗಿಸುತ್ತದೆ.

ಆದರೆ, ನಾವಿದನ್ನೂ ಸಹ ಅರ್ಥಮಾಡಿಕೊಳ್ಳಬೇಕು - ಮದ್ಯವನ್ನು ಬಹಳವಾಗಿ ಮಾರ್ಕೆಟ್ ಮಾಡುತ್ತಿದ್ದಾರೆ. ಸಿನಿಮಾಗಳಲ್ಲೂ ಅದನ್ನು ಪ್ರೋತ್ಸಾಹಿಸುತ್ತಿದ್ದಾರೆ. ಎಲ್ಲಾ ಕಡೆಗಳಲ್ಲಿ ಅದನ್ನು ಸಾಮಾನ್ಯ ಸಂಗತಿಯ ತರಹ ತೋರ್ಪಡಿಸುತ್ತಿದ್ದಾರೆ – ನೀವು ಕುಡಿಯದೇ ಇದಲ್ಲಿ, ನೀವು ಅಪ್ರಯೋಜಕರು ಎನ್ನುವ ರೀತಿಯಲ್ಲಿ.  ನನ್ನನ್ನು ಜನ ಕೇಳುತ್ತಾರೆ, “ಸದ್ಗುರು, ನೀವು ಕುಡಿಯುತ್ತೀರ?” ಅದಕ್ಕೆ ನಾನು, “ಹೌದು, ನೀರನ್ನು ಕುಡಿಯುತ್ತೇನೆ." ಎನ್ನುತ್ತೇನೆ. ಆಗ ಅವರು ನನ್ನನ್ನು ವಿಚಿತ್ರ ಜೀವಿ ಎನ್ನುವಂತೆ ನೋಡಿ, “ಕೇವಲ ನೀರು?” ಅನ್ನುತ್ತಾರೆ. ಹೌದು. ನೀವು ಕುಡಿಯಬಹುದಾದ ಅತ್ಯದ್ಭುತವಾದ ಪಾನೀಯವೆಂದರೆ ನೀರೇ. ಈ ಶರೀರದಲ್ಲಿರುವುದು ನೀರು, ಆಲ್ಕೋಹಾಲ್ ಅಲ್ಲ. ಶರೀರದ 70 ಪ್ರತಿಶತ ನೀರು. ಖಂಡಿತ ಆಲ್ಕೋಹಾಲ್ ಅಲ್ಲ.
 

ಉನ್ಮತ್ತತೆ, ಒಳಗಿನಿಂದಲೇ

ಮಾನವ ವ್ಯವಸ್ಥೆಯೊಂದು ಅದ್ಭುತವಾದ ರಾಸಾಯನಿಕ ಕಾರ್ಖಾನೆ. ನಿಮಗೆ ನಶೆ ಬೇಕಿದ್ದರೆ, ಒಳಗಿನಿಂದಲೇ ಅದನ್ನು ಸೃಷ್ಟಿಸಬಹುದು - ನಿಮಗೆ ಅಮಲು ಹಾಗೂ ಪೂರ್ತಿ ಜಾಗೃತಿ, ಇವೆರಡೂ ಒಂದೇ ಸಮಯದಲ್ಲಿ ಇರುವಂತಹ ನಶೆ. ಈ ರೀತಿಯಾದ ನಶೆಯನ್ನು ನಮ್ಮ ಮಕ್ಕಳಿಗೆ ಮತ್ತು ಯುವಜನರಿಗೆ ಪರಿಚಯಿಸಬೇಕು. ಇದಕ್ಕಾಗಿಯೇ ಎಲ್ಲರ ಜೀವನದಲ್ಲೂ ಯೋಗದ ತಂತ್ರಜ್ಞಾನವನ್ನು ತರುವುದಕ್ಕೆ ನಾವು ಪ್ರಯತ್ನಿಸುತ್ತಿರುವುದು. ನಿಮ್ಮೊಳಗೆ ನೀವು ಕೆಲವು ಸ್ಥಿತಿಗಳನ್ನು ಹೊಂದಿದಾಗ ಯಾವ ತರಹದ ನಶೆ ಸಿಗುತ್ತದೆಂದರೆ, ಅದು ಯಾವುದೇ ಡ್ರಗ್ಸ್ ಅಥವಾ ಡ್ರಿಂಕ್ಸ್‌ನಲ್ಲೂ ಸಿಗುವುದಿಲ್ಲ. ಹಾಗಿದ್ದರೂ, ಅದೇ ಸಮಯದಲ್ಲಿ, ನೀವು ಸಂಪೂರ್ಣವಾಗಿ ಜಾಗೃತರಾಗಿರುತ್ತೀರಿ. ಮತ್ತು ಅದು ನಿಮ್ಮ ಆರೋಗ್ಯ ಮತ್ತು ಸ್ಯಾಸ್ಥ್ಯದ ಮೇಲೆ ಪವಾಡವನ್ನೇ ಮಾಡುತ್ತದೆ. 

 

ನಾವು ತಾಂತ್ರಿಕವಾಗಿ ಹೆಚ್ಚು ಪರಿಷ್ಕೃತವಾದ ರೀತಿಗಳನ್ನು ಕಲಿಯುವ ಸಮಯ ಬಂದಿದೆ. ಜನರು ಒಳಮುಖರಾಗಿ, ಜೀವನದ ಅತ್ಯುನ್ನತ ಆನಂದಗಳನ್ನು ತಿಳಿಯುವುದಕ್ಕೆ ವಿಧಾನಗಳಿವೆ. ನಮ್ಮ ಯುವಜನರು ಇದನ್ನು ಅನುಭವಿಸುವ ತರಹ ಮಾಡಲೇಬೇಕು. ಯಾವುದೇ ಪರ್ಯಾಯವನ್ನು ಅವರಿಗೆ ಕೊಡದಿದ್ದರೆ, ಅವರು ಮತ್ತೆ ಮದ್ಯಕ್ಕೆ, ಮಾತ್ರೆಗಳಿಗೆ ಶರಣಾಗುತ್ತಾರೆ. 

ಜನರು ಒಳಮುಖರಾಗಿ, ಜೀವನದ ಅತ್ಯುನ್ನತ ಆನಂದಗಳನ್ನು ತಿಳಿಯುವುದಕ್ಕೆ ವಿಧಾನಗಳಿವೆ. ನಮ್ಮ ಯುವಜನರು ಇದನ್ನು ಅನುಭವಿಸುವ ತರಹ ಮಾಡಲೇಬೇಕು. ಯಾವುದೇ ಪರ್ಯಾಯವನ್ನು ಅವರಿಗೆ ಕೊಡದಿದ್ದರೆ, ಅವರು ಮತ್ತೆ ಮದ್ಯಕ್ಕೆ, ಮಾತ್ರೆಗಳಿಗೆ ಶರಣಾಗುತ್ತಾರೆ.

ಇಂದಿನ ದಿನಗಳಲ್ಲಿ, ನೀವು ಆರೋಗ್ಯ, ನೆಮ್ಮದಿ, ಆನಂದದಿಂದ ಇರುವುದಕ್ಕೆ ಮಾತ್ರೆಗಳ (ರಾಸಾಯನಿಕಗಳ) ಅಗತ್ಯವಿದೆ. ನಿಮ್ಮೊಳಗೆ ಏನನ್ನಾದರೂ ಅನುಭವಿಸುವುದಕ್ಕೂ ನಿಮಗೆ ಮಾತ್ರೆಗಳ ಸಹಾಯ ಬೇಕು.  ಒಂದು ತಲೆಮಾರು ಈ ರೀತಿಯಾಗಿ ಕೆಮಿಕಲ್ಸ್ ಬಳಸಿದರೆ, 90% ಜನ ಔಷಧಿಗಳನ್ನೋ ಅಥವಾ ಬೇರೆ ಯಾವುದೋ ಕೆಮಿಕಲ್ಸ್ ‌ಗಳನ್ನು ಪ್ರತಿನಿತ್ಯ ಬಳಸುವುದನ್ನು ಆರಂಭಿಸಿದರೆ, ನಾವು ಹುಟ್ಟಿಸುವ ಮುಂದಿನ ತಲೆಮಾರು ನಮಗಿಂತ ಅನೇಕ ರೀತಿಯಲ್ಲಿ ಕೆಳ ಮಟ್ಟದಲ್ಲಿರುತ್ತಾರೆ. 

ಮಾನವತೆಯ ವಿರುದ್ಧ ಇದೊಂದು ಅಪರಾಧ. ಈ ಸತ್ಯದ ಬಗ್ಗೆ ನಾವೆಲ್ಲರೂ ಎಚ್ಚೆತ್ತು, ಮಾಡಬೇಕಾದ್ದನ್ನು ಮಾಡಬೇಕು. 

ಸಂಪಾದಕರ ಟಿಪ್ಪಣಿ: ನೀವು ಯಾವುದಾದರೂ ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವಾ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.

Youth and Truth Banner Image