ಪ್ರಶ್ನೆ: ಈಶಾ ಹಠ ಯೋಗದ ಯೋಗಾಸನ ಕಾರ್ಯಕ್ರಮದಲ್ಲಿ, ಇರುವ ಒಟ್ಟು 84 ಆಸನಗಳಲ್ಲಿ, ಕೇವಲ 21 ಆಸನಗಳನ್ನು ಆರಿಸಿದ್ದೀರಾ. ಏಕೆ ಆ ಆಸನಗಳ ಸಮೂಹವನ್ನೇ ಆಯ್ಕೆ ಮಾಡಿದ್ದೀರಾ ?

ಸದ್ಗುರು: 84 ಆಸನಗಳನ್ನು ಒಮ್ಮೆಲೇ ಆರಂಭಿಸುವುದು ಹೆಚ್ಚು ಪ್ರಯಾಸಕರ. ಆಸನಗಳಲ್ಲಿ, ಕೆಲವು ಪೂರ್ವಸಿದ್ಧತೆಗೆಂದೇ ಮೀಸಲಿರುತ್ತದೆ, ಅಂದರೆ ಅವು ಸಾಧನ ಪಾದದ ಭಾಗವಾಗಿದೆ. ಮತ್ತು ಮಿಕ್ಕವು ಪರಿವರ್ತನೆಗೆ ಬೇಕಾಗುವ ಸಾಧನಗಳಾಗಿವೆ, ಇವು ಕೈವಲ್ಯ ಪಾದದ ಭಾಗವಾಗಿರುತ್ತದೆ. ವರ್ಷದಲ್ಲಿ ಈ ಪಾದಗಳಿಗೆ ತನ್ನದೇ ಆದ ಸಮಯ ಮೀಸಲಿರುತ್ತದೆ. ಮೊದಲ ಕಾಲು ಭಾಗದ ಆಸನಗಳು ಪೂರಕ ವ್ಯವಸ್ಥೆ ಸಿದ್ದ ಪಡಿಸಲೆಂದು ಮೀಸಲಿರುತ್ತದೆ. ನಾವು ನಿಮಗೆ ಅಪಾರ ಪ್ರಮಾಣದ ಶಕ್ತಿಯನ್ನು ತುಂಬಲು ಬಯಸುತ್ತೇವೆ ಎಂದು ಭಾವಿಸೋಣ, ಮೊದಲು ನಿಮ್ಮ ವ್ಯವಸ್ಥೆ ಅದಕ್ಕೆ ಸಿದ್ಧವಾಗಿರಬೇಕು.

ಶಕ್ತಿ ಶರೀರ(ಪ್ರಾಣಮಯ ಕೋಶ)ದ ವರ್ಧನೆ

ಸರಳವಾಗಿ ನೋಡುವುದಾದರೆ, ಭೌತಿಕ ಶರೀರ, ಕರ್ಮದ ಅಥವ ಮಾನಸಿಕ ಶರೀರ, ಹಾಗು ಪ್ರಾಣಶಕ್ತಿ ಶರೀರ ಇರುತ್ತದೆ. ಒಂದು ಸರಳವಾದ ಹೋಲಿಕೆಯನ್ನು(100% ನಿಜವಾದುದಲ್ಲ) ತೆಗೆದುಕೊಂಡರೆ, ಈ ಮೂರು ಶರೀರಗಳು ಕವಚಗಳ ಹಾಗೆ ಒಂದರೊಳಗೊಂದು ಇರುತ್ತವೆ. ಒಂದು ವೇಳೆ ಶಕ್ತಿ ಶರೀರವನ್ನು ದೊಡ್ಡ ಮಟ್ಟದಲ್ಲಿ ವರ್ಧಿಸಿದರೆ, ಮತ್ತೆರೆಡು ಶರೀರಗಳು ಅದಕ್ಕೆ ಎಡೆ ಮಾಡಿಕೊಡದಿದ್ದಲ್ಲಿ ಹಾನಿ ಉಂಟಾಗುವುದು. ಆದ್ದರಿಂದ ಮೊದಲ ಹಂತವಾಗಿ, ದೇಹವನ್ನು ಅನುಕೂಲಕರವಾಗುವಂತೆ ಸಿದ್ದಪಡಿಸಬೇಕು. ಈ ನಿಟ್ಟಿನಲ್ಲಿ ಭೂತ ಶುದ್ದಿ ಅಭ್ಯಾಸ ಒಂದು ಸುಲಭ ದಾರಿ. ಪಂಚ ಭೂತಗಳು ದೇಹದ ಸುತ್ತಲೂ ವ್ಯವಹರಿಸುತ್ತಿರುತ್ತವೆ. ಕನಿಷ್ಟ, ಉಸಿರಾಡುವ ಗಾಳಿಯನ್ನು ನಿಮ್ಮ ಅನುಭವಕ್ಕೆ ತಂದುಕೊಳ್ಳಬಹುದು.

ಮೊದಲ ಹಂತವಾಗಿ, ದೇಹವನ್ನು ಅನುಕೂಲಕರವಾಗಿಸಬೇಕು. ಇದನ್ನು ವಿವಿಧ ರೀತಿಯಲ್ಲಿ ಸಾಧಿಸಬಹುದು. ಒಂದು ಸರಳ ಮಾರ್ಗವೆಂದರೆ ಭೂತ ಶುದ್ಧಿಯನ್ನು ಅಭ್ಯಾಸ ಮಾಡುವುದು.

ವಿವಿಧ ಆಯಾಮದಲ್ಲಿ ಈ ವ್ಯವಹಾರ ನಿರಂತರವಾಗಿರುತ್ತದೆ. ಪರಿಸರದ ತಾಪಮಾನದಿಂದ ನಿಮ್ಮ ದೆಹದ ತಾಪಮಾನ ಬದಲಾಗುವುದನ್ನು ನೀವೆ ಗಮನಿಸಬಹುದು. ಅಂದರೆ, ಪಂಚ ಭೂತಗಳ ವ್ಯವಹರಿಕೆ ಇರುವುದು ಖಚಿತ. ನಿಮ್ಮ ಆಹಾರ ಹಾಗು ನೀರಿನ ಸೇವನೆಯ ಮೂಲಕ ಭೂಮಿಯ ಅಂಶ ಹಾಗು ನೀರಿನ ಅಂಶ ವ್ಯವಹರಿಸುತ್ತಿದೆ. ಈ ವ್ಯವಹಾರವು ನಿಮ್ಮ ಗಮನಕ್ಕೆ ಬರುವ ಹಂತಕ್ಕೆ ಸೀಮಿತವಾಗಿಲ್ಲ, ಮತ್ತೂ ಮೂಲಭೂತ ಹಂತದಲ್ಲಿ ಈ ವ್ಯವಹಾರ ನಡೆಯಿತ್ತಿದೆ. ಪಂಚಭೂತಗಳು ನೀವು ನಿಮ್ಮಲ್ಲಿ ನಿರ್ಮಿಸಿಕೊಂಡಿರುವ ಗಡಿಗೆ ಮಹತ್ವ ಕೊಡುವುದಿಲ್ಲ.

‘ನೀವು’ ಎಂಬ ಗಡಿಯೆಂದು ನೀವೇನು ಪರಿಗಣಿಸಿರುವಿರೋ, ಅದು ಮಾನಸಿಕ ಹಾಗು ದೈಹಿಕ ಮಟ್ಟದಲ್ಲಿ ಇರುತ್ತದೆ. ಪಂಚಭೂತಗಳ ಆಯಾಮದಲ್ಲಿ ಯಾವುದೇ ಗಡಿಯಿರುವುದಿಲ್ಲ. ಯೋಗದ ಅರ್ಥವೇ ಈ ವಯಕ್ತಿಕ ಮಟ್ಟದ ಗಡಿಗಳನ್ನು ಅಳಿಸುವುದು. ಏಕೆಂದರೆ ಜೀವನದ ಮೂಲ ರೀತಿಯೇ ಐಕ್ಯತೆ. ಹಾಗೂ ಜೀವನವನ್ನು ಮೂಲ ರೀತಿಯಲ್ಲೇ ಕಂಡುಕೊಳ್ಳಬೇಕು. ನೀವು – ನಾನು ಎಂದು ಬೇರ್ಪಡಿಸುವ ಭಾವನೆ ಕೇವಲ ಕಾಲ್ಪನಿಕ. ಹೇಗೆ ಗಾಳಿಯು ಎಲ್ಲೆಡೆ ವ್ಯಾಪಿಸಿರುವುದೋ, ಹಾಗೆಯೇ ಎಲ್ಲವೂ ಬೇರೆ ಬೇರೆ ರೇತಿಯಲ್ಲಿ ವ್ಯಾಪಕವಾಗಿರುತ್ತದೆ. ನಿಮ್ಮಲ್ಲಿನ ಭೌತಿಕ ಅಂಶದ ಪ್ರಮಾಣವೂ ದಿನೇ ದಿನೇ ಬದಲಾಗುತ್ತಿದೆ. ಎಲ್ಲಾ ಸಮಯದಲ್ಲೂ ಈ ವ್ಯವಹಾರಿಕೆ ನಡೆಯುತ್ತಿದೆ.

IEO

84 ಆಸನಗಳಲ್ಲಿ ಹೆಚ್ಚಿನವು ನಿಮ್ಮ ಶಕ್ತಿಯನ್ನು ವರ್ಧಿಸಲು ನಿರ್ಮಿಸಲಾಗಿದೆ. ಶಕ್ತಿಯನ್ನು ದೊಡ್ಡ ಮಟ್ಟದಲ್ಲಿ ವರ್ಧಿಸುವ ಮುನ್ನ, ನಿಮ್ಮ ದೇಹ ಮತ್ತು ಮನಸ್ಸು ಅದನ್ನು ತೆಗೆದುಕೊಳ್ಳಲು, ನಿರ್ಧಿಷ್ಟ ಪ್ರಮಾಣದ ತಯಾರಿ, ವಿಸ್ತರಣೆ ಹಾಗು ಪಾರದರ್ಶಕತೆಯು ಅಗತ್ಯ. ಪೂರ್ವಸಿದ್ದತೆಯಿಲ್ಲದೆ ನಿಮ್ಮ ದೈಹಿಕ ಹಾಗು ಮಾನಸಿಕ ಶಕ್ತಿ ವರ್ಧಿಸಿದರೆ, ಬಲೂನ್ ಹಿಡಿದಿಟ್ಟುಕೊಳ್ಳುವುದಕ್ಕಿಂತ ಹೆಚ್ಚಿನ ಗಾಳಿ ತುಂಬಿದಂತಾಗುವುದು. ಯೋಗದ ಮೊದಲ ಸರಣಿಯು ನಿಮ್ಮ ದೇಹ ಹಾಗು ಮನಸ್ಸಿನ ತದೆಗೋಡೆಗಳನ್ನು ತೆಳುವಾಗಿಸಲು ಪೂರಕವಾಗಿರುತ್ತದೆ. ಇದರಿಂದ “ಇದು ನಾನು – ಅದು ನೀವು” ಎಂಬ ಭಾವನೆಯು ಕೇವಲ ಪ್ರಾಯೋಗಿಕ ಉದ್ದೇಶಕ್ಕಷ್ಟೇ ಸೀಮಿತ ಎಂದು ಪ್ರಜ್ನಾಪೂರ್ವಕವಾಗಿ ಅರಿತುಲೊಳ್ಳಬಹುದು. ಮೂಲಭೂತ ಮಟ್ಟದಲ್ಲಿ, “ಇದು” ಹಾಗು “ಅದು” ಎಂಬ ಗಡಿ ಇರುವುದಿಲ್ಲ.

ಸಂಪಾದಕರ ಟಿಪ್ಪಣಿ: ಈಶಾ ಹಠ ಯೋಗ ಕಾರ್ಯಕ್ರಮಗಳು ಶಾಸ್ತ್ರೀಯ ಹಠಯೋಗದ ವಿಸ್ತೃತ ಪರಿಶೋಧನೆಯಾಗಿದ್ದು, ಇಂದು ಮರೆಯಾಗುತ್ತಿರುವ ಪ್ರಾಚೀನ ಯೋಗವಿಜ್ಞಾನದ ವಿವಿಧ ಆಯಾಮಗಳನ್ನು ಪುನರುಜ್ಜೀವನಗೊಳಿಸುತ್ತಿದೆ. ಈ ಕಾರ್ಯಕ್ರಮಗಳು ಉಪ - ಯೋಗ, ಅಂಗಮರ್ಧನ, ಸೂರ್ಯ ಕ್ರಿಯಾ, ಸೂರ್ಯಶಕ್ತಿ, ಯೋಗಾಸನ ಮತ್ತು ಭೂತಶುಧ್ಧಿ ಮೊದಲಾದ ಪ್ರಬಲ ಯೋಗ ಅಭ್ಯಾಸಗಳನ್ನು ಅರಿಯಲು ಅವಕಾಶ ಮಾಡಿಕೊಡುತ್ತಿದೆ.

Find Hatha Yoga Program Near You