Login | Sign Up
Inner Engineering
Login|Sign Up
Country

ಒಳಗೂಡಿಸಿಕೊಳ್ಳುವಿಕೆ

Want to get a fresh perspective on ಒಳಗೂಡಿಸಿಕೊಳ್ಳುವಿಕೆ? Explore Sadhguru’s wisdom and insights through articles, videos, quotes, podcasts and more.

video  
ಪ್ರೀತಿಯ ಬಗೆಗಿನ ತಪ್ಪು ಕಲ್ಪನೆಯಿಂದ ಹೊರಬನ್ನಿ | Confusions about Love | Sadhguru Kannada
ನಟಿ, ನಿರ್ಮಾಪಕಿ ಮತ್ತು ಮಾಜಿ ಮಿಸ್ ಇಂಡಿಯಾ ಆಗಿರುವ ಜೂಹಿ ಚಾವ್ಲಾ ಅವರು ಸದ್ಗುರುಗಳೊಂದಿಗೆ 'ಪ್ರೀತಿ ನಿಜಕ್ಕೂ ಏನು?' ಎನ್ನುವುದರ ಕುರಿತು ಸೊಗಸಾದ ಹಾಗೂ ಒಳನೋಟಗಳುಳ್ಳ ಚರ್ಚೆಯನ್ನು ನಡೆಸುತ್ತಾರೆ. ಸದ್ಗುರುಗಳು ಪ್ರೀತಿ ಮತ್ತು ಅದಕ್ಕೆ ಅಂಟಿಕೊಳ್ಳುವುದರ ಬಗ್ಗೆ ಇರುವ ಅನೇಕ ತಪ್ಪುಕಲ್ಪನೆಗಳನ್ನು ದೂರ ಮಾಡುತ್ತಾರೆ‌ ಹಾಗೂ ಎಲ್ಲರನ್ನು ಮತ್ತು ಎಲ್ಲವನ್ನು ಪ್ರೀತಿಸಲು ಪ್ರತಿಯೊಬ್ಬರಿಗೂ ಹೇಗೆ ಸಾಧ್ಯ ಎನ್ನುವುದನ್ನು ವಿವರಿಸುತ್ತಾರೆ. ಪ್ರೀತಿ ನಮ್ಮೊಳಗಿನ ಭಾವಗಳ ಮಾಧುರ್ಯ, ಅದು ಯಾರೋ ನಮಗೆ ಕೊಡುವ ಸಂಗತಿಯಲ್ಲ.‌ ಹಾಗಾಗಿ ಪ್ರೇಮಮಯಿಯಾಗಿರುವುದು ಅಥವಾ ಪ್ರೀತಿಸುವುದು ಸಂಪೂರ್ಣವಾಗಿ ನಮ್ಮ ಕೈಯ್ಯಲ್ಲಿದೆ ಎಂದು ತಿಳಿಸಿಕೊಡುತ್ತಾರೆ.
Apr 25, 2023
Loading...
Loading...
video  
ಮಾಂಸಾಹಾರ ಎಂದರೆ ಕೆಲವರಿಗೆ ಬಲು ಇಷ್ಟ. ಕೆಲವರು ಅದನ್ನು ಕಷ್ಟಪಟ್ಟು ತ್ಯಜಿಸಲು ಪ್ರಯತ್ನಿಸುತ್ತಿರುತ್ತಾರೆ. ಅದರಲ್ಲಿ ಯಶಸ್ವಿಯಾಗಿ ಸ್ವಲ್ಪ ದಿನ ತ್ಯಜಿಸುತ್ತಾರೆ ಕೂಡ. ಆದರೆ ಮತ್ತೆ ಆಸೆ ಉಂಟಾಗಿ ಮಾಂಸಾಹಾರವನ್ನು ತಿನ್ನಲು ಪ್ರಾರಂಭಿಸುತ್ತಾರೆ. ಹಾಗಿದ್ದರೆ ಮಾಂಸಾಹಾರ ತಿನ್ನುವುದು ತಪ್ಪೇ? ಅದು ಪಾಪವೇ? ಅದನ್ನು ತ್ಯಜಿಸಬೇಕು ಅಂತಿರುವವರು ತಿಳಿದುಕೊಳ್ಳಬೇಕಿರುವುದು ಏನು? ಇನ್ನು ಕೆಲವರು ಮಾಂಸಾಹಾರ ಅಂತಲ್ಲ, ತಿನ್ನುವಾಗ ಅತಿಯಾಗಿ ತಿನ್ನುತ್ತಾರೆ. ತಿನ್ನುವ ಚಪಲದಿಂದ ಹೊರಬರಲು ಪ್ರಯತ್ನಿಸುತ್ತಿರುತ್ತಾರೆ. ನಾವು ಈ ನಿಟ್ಟಿನಲ್ಲಿ ಯಾವ ರೀತಿ ಯೋಚಿಸಬೇಕು? ಯಾವ ಮನಸ್ಥಿತಿ ಬೆಳೆಸಿಕೊಳ್ಳಬೇಕು? ತಿನ್ನುವ ವಿಷಯದಲ್ಲಿ ವಿವೇಚನೆಯಿಂದಿರುವುದು ಹೇಗೆ? ಕನ್ನಡ ಚಿತ್ರರಂಗದ ಖ್ಯಾತ ನಟಿ ಹರಿಪ್ರಿಯಾ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸದ್ಗುರುಗಳು ಈ ವಿಷಯಗಳೆಡೆಗೆ ಬೆಳಾಕು ಚೆಲ್ಲುತ್ತಾರೆ.
Jan 2, 2023
Loading...
Loading...