FILTERS:
SORT BY:
ಹತ್ತುವುದು ಪ್ರಯಾಸ, ಬೀಳುವುದು ಅನಾಯಾಸ. ನೀವು ಸೊಗಸಾದ ಜಾಗಗಳಲ್ಲಿ ಬೀಳುವುದನ್ನು ಕಲಿಯಬೇಕಷ್ಟೆ – ಮತ್ತು ಅತ್ಯಂತ ಸೊಗಸಾದ ಜಾಗ ನಿಮ್ಮೊಳಗೇ ಇದೆ.
ಅದು ಹಾಡಿರಲಿ, ನೃತ್ಯವಿರಲಿ, ಅಥವಾ ಕೆಲಸವಿರಲಿ – ನೀವದರಲ್ಲಿ ಸಂಪೂರ್ಣವಾಗಿ ಧುಮುಕಿ ಮೈಮರೆತರೆ, ನಿಮ್ಮ ಜೀವನವು ಸುಮಧುರವಾಗುತ್ತದೆ.
ನಿಮ್ಮ ಮತ, ಜನಾಂಗ, ಅಥವಾ ಜಾತಿ ಅದೇನೇ ಆಗಿರಲಿ – ನೀವು ಮಾನವರಾಗಿದ್ದರೆ, ಮಹಾಶಿವರಾತ್ರಿಯು ನಿಮಗೆ ಪ್ರಸ್ತುತವಾದುದು. ಅಂತರ್ಮುಖರಾಗುವ ವಿಜ್ಞಾನವು ನಿಮಗೆ ಪ್ರಸ್ತುತವಾದುದು, ಏಕೆಂದರೆ ಮಾನವರ ಒಳಿತು ಸೃಷ್ಟಿಸಲ್ಪಡುವುದು ಒಳಗಿನಿಂದಲೇ.
ಸಂಗೀತವು ಒಂದು ಪರಿಶೋಧನೆಯಾಗಬೇಕು, ಜೀವನವನ್ನು ಶ್ರೀಮಂತವಾಗಿಸಬೇಕು. ಅದು ಯಾಂತ್ರಿಕವಾದರೆ, ಯಂತ್ರಗಳೇ ಅದನ್ನು ಮಾಡುವುವು – ಅವು ಯಾವತ್ತಿದ್ದರೂ ಯಾಂತ್ರಿಕವಾದುದನ್ನು ನಮಗಿಂತ ಚೆನ್ನಾಗಿ ಮಾಡಬಲ್ಲವು.
ನೀವು ಯಾರು ಎಂಬುದು ನಿಮ್ಮೊಳಗೆ ಸ್ಪಷ್ಟವಾಗಿ ನೆಲೆಗೊಂಡಿದ್ದರೆ, ಜನರು ಏನು ಹೇಳುತ್ತಾರೆ ಎಂಬುದು ನಗಣ್ಯವಾಗುತ್ತದೆ.
ಪ್ರೀತಿ ಎಂದರೆ ಮತ್ತೊಬ್ಬರನ್ನು ನಿಮ್ಮ ಭಾಗವಾಗಿ ಒಳಗೂಡಿಸಿಕೊಳ್ಳುವ ಹಾತೊರೆತ – ನಿಮ್ಮ ಸದ್ಯದ ಗಡಿಗಳನ್ನು ನಿಮ್ಮನ್ನು ಮೀರಿ ವಿಸ್ತರಿಸುವ ಹಾತೊರೆತ.
ನೀವು ನರಳುತ್ತಿರುವುದು ಜೀವನವನ್ನಲ್ಲ. ನೀವು ನರಳುತ್ತಿರುವುದು ನಿಮ್ಮ ನೆನಪು ಮತ್ತು ಕಲ್ಪನೆಗಳನ್ನು.
ನಿಮಗೆ ಕಾಳಜಿಯಿರುವುದನ್ನು ಮಾಡಲು ನೀವು ನಿಜವಾಗಿಯೂ ಬದ್ಧರಾಗಿದ್ದರೆ, ಇಡೀ ಜಗತ್ತು ನಿಮಗೆ ಬೆಂಬಲವನ್ನು ನೀಡುವುದು.
ನಮ್ಮ ಸುತ್ತಲಿನ ಸನ್ನಿವೇಶಗಳನ್ನು ಬದಲಿಸುವುದು ನಮಗೆ ಯಾವಾಗಲೂ ಸಾಧ್ಯವಾಗದೇ ಇರಬಹುದು. ಆದರೆ ಅವನ್ನು ನಾವು ಹೇಗೆ ಅನುಭವಿಸುತ್ತೇವೆ ಎಂಬುದನ್ನು ಬದಲಿಸಿಕೊಳ್ಳಬಹುದು – ಈ ನಿಟ್ಟಿನಲ್ಲಿ ನಮ್ಮನ್ನು ಯಾರೂ ತಡೆಯಲಾರರು.
ಹೊಸ ಸಾಧ್ಯತೆಗಳತ್ತ ಸಾಗುತ್ತಲೇ ಇರುವುದು ಜೀವನದ ಸ್ವಭಾವ. ಆದರೆ ಜೀವನದ ಬದಲಿಗೆ, ಪರಿಚಿತವಾಗಿರುವುದರಲ್ಲಿ ಉಳಿದುಬಿಡುವ ಆರಾಮವನ್ನು ಆಯ್ಕೆ ಮಾಡುವುದು ನಿಮ್ಮ ಮನಸ್ಸು.
ಹತ್ತಲು ಯಾವಾಗಲೂ ಇನ್ನೊಂದು ಮೆಟ್ಟಿಲು ಇದ್ದೇ ಇದೆ. ಜೀವನವು ಜೀವಿಸಲು ಅರ್ಹವಾಗಿರುವುದು ಅದಕ್ಕೇ.
ನಿಮ್ಮ ಪ್ರಜ್ಞಾಶಕ್ತಿಯು ನಿಮ್ಮ ಪರವಾಗಿ ಕೆಲಸ ಮಾಡುತ್ತಿದ್ದರೆ, ನೀವು ನಿಮ್ಮೊಳಗೆ ತೊಳಲಾಟವನ್ನು ಉಂಟುಮಾಡಿಕೊಳ್ಳುತ್ತಿರಲಿಲ್ಲ. ನಿಮ್ಮೊಳಗೆ ನೀವು ಅತ್ಯುತ್ತಮವಾದ ಸ್ಥಿತಿಯನ್ನು ಉಂಟುಮಾಡಿಕೊಳ್ಳುತ್ತಿದ್ದಿರಿ, ಮತ್ತು ಹೊರಗಡೆ ನಿಮ್ಮ ಕೈಲಾದಷ್ಟನ್ನು ಮಾಡುತ್ತಿದ್ದಿರಿ.