ವೀರೇಂದ್ರ ಸೆಹ್ವಾಗ್: ನಮಸ್ಕಾರ ಸದ್ಗುರು! ನಮ್ಮ ಭಾರತೀಯ ಜಾತಿ ಪದ್ಧತಿಯ ಬಗ್ಗೆ ಸತ್ಯವನ್ನು ನಾನು ತಿಳಿದುಕೊಳ್ಳಬೇಕು. ಹೆಚ್ಚು ಒಳಗೂಡಿಸಿಕೊಳ್ಳುವಿಕೆ ಮತ್ತು ಸಮಾನತೆಯನ್ನು ನಾವು ಹೇಗೆ ಖಚಿತಪಡಿಸಿಕೊಳ್ಳಬಹುದು?

ಸದ್ಗುರು: ನಮಸ್ಕಾರ ವೀರು! ಮೂಲಭೂತವಾಗಿ, ಈ ಜಾತಿ ಪದ್ಧತಿಯು ದುಡಿತದ ವಿಂಗಡಣೆಯಾಗಿ ಪ್ರಾರಂಭವಾಯಿತು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ದುರದೃಷ್ಟವಶಾತ್, ಕಾಲಾಂತರದಲ್ಲಿ, ಈ ವಿಂಗಡಣೆಯು ಭೇದಭಾವನ್ನುಂಟುಮಾಡಿತು, ಮತ್ತು ಜನರು ಪರಸ್ಪರರ ವಿರುದ್ಧ ಕೆಲಸ ಮಾಡಲು ಪ್ರಾರಂಭಿಸಿದರು.
ಒಂದು ಸಮಾಜವು ಅರ್ಥಪೂರ್ಣವಾಗಿ ಕಾರ್ಯ ನಿರ್ವಹಿಸಲು, ಅದರ ಜನಸಂಖ್ಯೆಯಲ್ಲಿ ಕೆಲವರು ಕುಶಲಕರ್ಮಿಗಳಾಗಿರಬೇಕು, ಕೆಲವರು ವ್ಯಾಪಾರ ವಹಿವಾಟನ್ನು ನೋಡಿಕೊಳ್ಳಬೇಕು, ಕೆಲವರು ಆಡಳಿತವನ್ನು ನೋಡಿಕೊಳ್ಳಬೇಕು, ಮತ್ತಿತರರು ಸಮುದಾಯದ ಶಿಕ್ಷಣ ಮತ್ತು ಆಧ್ಯಾತ್ಮಿಕ ಪ್ರಕ್ರಿಯೆಯನ್ನು ನೋಡಿಕೊಳ್ಳಬೇಕು. ಈ ರೀತಿಯಾಗಿ, ನಾಲ್ಕು ಮೂಲಭೂತ ವಿಭಾಗಗಳನ್ನು ಮಾಡಿದರು.

ಪ್ರಾಚೀನ ಕಾಲದಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಿಶ್ವವಿದ್ಯಾಲಯಗಳಿರಲಿಲ್ಲ ಎಂದು ನಾವು ಅರ್ಥಮಾಡಿಕೊಳ್ಳಬೇಕು…ಜಾತಿ ವ್ಯವಸ್ಥೆಯನ್ನು ಮುಂದುವರಿಸುವ ಮೂಲಕ ಕೌಶಲಗಳನ್ನು ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸಲಾಗುತ್ತಿತ್ತು..

ಪ್ರಾಚೀನ ಕಾಲದಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಿಶ್ವವಿದ್ಯಾಲಯಗಳಿರಲಿಲ್ಲ ಎಂದು ನಾವು ಅರ್ಥಮಾಡಿಕೊಳ್ಳಬೇಕು. ನಿಮ್ಮ ತಂದೆ ಬಡಗಿಯಾಗಿದ್ದರೆ, ನೀವು ಬಾಲ್ಯದಿಂದಲೂ ಮನೆಯಲ್ಲಿ ಮರಗೆಲಸವನ್ನು ಕಲಿತು, ಉತ್ತಮ ಬಡಗಿಯಾಗುತ್ತಿದ್ದಿರಿ. ಈ ಜಾತಿ ವ್ಯವಸ್ಥೆಯನ್ನು ಮುಂದುವರಿಸುವ ಮೂಲಕ ಈ ತರದ ಕೌಶಲಗಳನ್ನು ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸಲಾಗುತ್ತಿತ್ತು.
ದುರದೃಷ್ಟವಶಾತ್, ದಾರಿಯಲ್ಲಿ ಎಲ್ಲೋ, ಅಕ್ಕಸಾಲಿಗನು, ತನ್ನ ವೃತ್ತಿಯು ಕಮ್ಮಾರನಿಗಿಂತ ಉತ್ತಮವಾದದು ಎಂದು ಯೋಚಿಸಲಾರಂಭಿಸಿದ. ಕಮ್ಮಾರನ ಕೆಲಸವು ಸಮಾಜಕ್ಕೆ ಹೆಚ್ಚು ಉಪಯುಕ್ತವಾಗಿದ್ದರೂ ಸಹ, ಹೇಗೋ, ಅವನಿಗಿಂತ ಅಕ್ಕಸಾಲಿಗನು ಶ್ರೇಷ್ಠನೆಂದು ಜನರು ಭಾವಿಸಿದರು. ಮತ್ತು ಇದು ಹೀಗೆಯೇ ಮುಂದುವರೆದು, ಕೆಲ ತಲೆಮಾರುಗಳ ನಂತರ, ಈ ಮೇಲರಿಮೆಯು ಸಮಾಜದಲ್ಲಿ ಗಟ್ಟಿಯಾಗಿ ನೆಲೆಯೂರಿತು. ಈ ಮೇಲರಿಮೆಯನ್ನು ಸ್ಥಾಪಿಸಲು ಪ್ರಯತ್ನಿಸುವಾಗ, ಎಲ್ಲ ವಿಧದ ಶೋಷಣೆಗಳು ನಡೆದವು; ಇದು ಎಲ್ಲಿಯ ತನಕ ಬಂದಿತೆಂದರೆ, ಈ ಜಾತಿ ಪದ್ಧತಿಯು ಜನಾಂಗದ್ವೇಷದ ರೂಪತಾಳಿತು.

ಇಂದಿನ ದಿನಗಳಲ್ಲಿ,  ಕುಶಲತೆಗಳ ಹಸ್ತಾಂತರ ಕುಟುಂಬದ ಮೂಲಕ ನಡೆಯುವುದಿಲ್ಲ. ಈ ಸನ್ನಿವೇಶದಲ್ಲಿ ಜಾತಿ ಪದ್ಧತಿಯು ಪ್ರಸ್ತುತವಾಗಿರುವುದಿಲ್ಲ.

ನೂರಾರು ವರ್ಷಗಳವರೆಗೆ ಜನರ ಮೇಲೆ ಬಹಳ ದೌರ್ಜನ್ಯಗಳನ್ನು ಎಸಗಲಾಗಿದೆ. ಭಾರತದ ಅನೇಕ ಹಳ್ಳಿಗಳಲ್ಲಿ, ಕೆಳ ಜಾತಿ ಎಂದು ಪರಿಗಣಿಸಲ್ಪಡುವ ಜನರು - ದಲಿತರು ಎಂದು ನೀವು ಕರೆಯುವ ಜನರಿಗೆ - ಇಂದಿಗೂ ಕೂಡ ಮೂಲಭೂತ ಮಾನವ ಹಕ್ಕುಗಳಿಲ್ಲ. ಕಳೆದ ಇಪ್ಪತ್ತೈದರಿಂದ ಮೂವತ್ತು ವರ್ಷಗಳಲ್ಲಿ ಪರಿಸ್ಥಿತಿ ತುಂಬ ಬದಲಾಗಿದೆಯಾದರೂ, ನಮ್ಮ ದೇಶದಲ್ಲಿ ಇನ್ನೂ ಅನೇಕ ಅಹಿತಕರ ಘಟನೆಗಳು ನಡೆಯುತ್ತಲೇ ಇರುತ್ತವೆ.

 

ಇದರಿಂದ ಹೊರ ಬರುವ ಮಾರ್ಗ ಯಾವುದು? ಮುಖ್ಯವಾಗಿ, ಇಂದು ಕೌಶಲಗಳನ್ನು ಹಲವಾರು ವಿವಿಧ ರೀತಿಗಳಲ್ಲಿ ಕಲಿಸಲು ಸಾಧ್ಯವಿದೆ. ಇದನ್ನು ಮಾಡಲು ಶಿಕ್ಷಣ ಮತ್ತು ತಾಂತ್ರಿಕ ಸಂಸ್ಥೆಗಳಿವೆ. ಇಂದಿನ ದಿನಗಳಲ್ಲಿ,  ಕುಶಲತೆಗಳ ಹಸ್ತಾಂತರ ಕುಟುಂಬದ ಮೂಲಕ ನಡೆಯುವುದಿಲ್ಲ. ಈ ಸನ್ನಿವೇಶದಲ್ಲಿ ಜಾತಿ ಪದ್ಧತಿಯು ಪ್ರಸ್ತುತವಾಗಿರುವುದಿಲ್ಲ.
ಆದರೆ ಸಾಮಾಜಿಕ ಭದ್ರತೆಯ ವಿಷಯಕ್ಕೆ ಬಂದಾಗ,  ಜಾತಿ ಪದ್ದತಿಯು ಇನ್ನೂ ಕಾರ್ಯನಿರ್ವಹಿಸುತ್ತಿದೆ. ಜನರು ತಮ್ಮ ಕುಲ ಮತ್ತು ಜಾತಿಯ ಜನರ ಕಾಳಜಿಯನ್ನು ವಹಿಸುತ್ತಾರೆ. ತೊಂದರೆಯಲ್ಲಿರುವ ತಮ್ಮ ಜಾತಿಯ ಜನರ ಸಹಾಯಕ್ಕೆ ಅವರು ಯಾವಾಗಲೂ ಮುಂದಾಗಿರುತ್ತಾರೆ. ಈ ದೇಶದಲ್ಲಿ ಪ್ರತಿ ಪ್ರಜೆಗೂ ನಾವು ರಾಷ್ಟ್ರವ್ಯಾಪಿ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಸ್ಥಾಪಿಸುವವರೆಗೂ, ಜಾತಿ ವ್ಯವಸ್ಥೆಯು ಸ್ವಲ್ಪ ಮಟ್ಟಿಗೆ ಮುಂದುವರಿಯುತ್ತಲೇ ಇರುತ್ತದೆ. 

ರಾಷ್ಟ್ರವ್ಯಾಪಿ ಸಾಮಾಜಿಕ ಭದ್ರತಾ ವ್ಯವಸ್ಥೆ ಮತ್ತು ಜನರ ಪ್ರತಿಭೆ ಹಾಗೂ ಯೋಗ್ಯತಾನುಸಾರವಾಗಿ ಕುಶಲತೆಗಳನ್ನು ಕಲಿಸುವ ಶಿಕ್ಷಣ ವ್ಯವಸ್ಥೆಯನ್ನು ತರುವುದು ಬಹಳ ಮುಖ್ಯ.

ಸುಮ್ಮನೆ ಜಾತಿ ಪದ್ದತಿಯನ್ನು ನಿರ್ಮೂಲನಗೊಳಿಸುವ ಪ್ರಯತ್ನ ಮಾಡಿ ಅದನ್ನು ಎದುರು ಹಾಕಿಕೊಂಡರೆ, ಫಲಿತಾಂಶ ಸಿಗುವುದಿಲ್ಲ. ಈ ವ್ಯವಸ್ಥೆಯು ಒದಗಿಸುವ ಸಾಮಾಜಿಕ ಭದ್ರತೆಯ ಕಾರಣದಿಂದಾಗಿ ಜನರು ಈಗಲೂ ಇದಕ್ಕೆ ಅಂಟಿಕೊಂಡಿದ್ದಾರೆ. ರಾಷ್ಟ್ರವ್ಯಾಪಿ ಸಾಮಾಜಿಕ ಭದ್ರತಾ ವ್ಯವಸ್ಥೆ ಮತ್ತು ಜನರ ಪ್ರತಿಭೆ ಹಾಗೂ ಯೋಗ್ಯತಾನುಸಾರವಾಗಿ ಕುಶಲತೆಗಳನ್ನು ಕಲಿಸುವ ಶಿಕ್ಷಣ ವ್ಯವಸ್ಥೆಯನ್ನು ತರುವುದು ಬಹಳ ಮುಖ್ಯ. ಇದು ಸಂಭವಿಸಿದಾಗ, ಜಾತಿ ಪದ್ಧತಿಯ ಪ್ರಸ್ತುತತೆ ಸಂಪೂರ್ಣವಾಗಿ ನಾಶವಾಗುತ್ತದೆ. ಇದು ನಡೆದರೆ, ಜಾತಿ ಪದ್ಧತಿಯು ತನ್ನ ಸ್ವಾಭಾವಿಕವಾದ ಸಾವನ್ನಪ್ಪುತ್ತದೆ.

ಸಂಪಾದಕರ ಟಿಪ್ಪಣಿ: ನೀವು ಯಾವುದಾದರು ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.

Youth and Truth Banner Image