ಮೌನಿ ರಾಯ್:  ಸಂಬಂಧಗಳು, ವಿಶೇಷವಾಗಿ ಗರ್ಲ್-ಫ್ರೆಂಡ್ – ಬಾಯ್-ಫ್ರೆಂಡ್ ಅಥವಾ ಗಂಡ – ಹೆಂಡತಿ ನಡುವಿನ ಸಂಬಂಧಗಳು ಏಕಷ್ಟು ಜಟಿಲವಾಗುತ್ತವೆ?

ಸದ್ಗುರು: ನಮಸ್ಕಾರ ಮೌನಿ. ಎಲ್ಲರಿಗೂ ಸಂಬಂಧಗಳಲ್ಲಿನ ಮಾಧುರ್ಯ ತಿಳಿದಿದೆ, ಆದರೆ, ಅದರಲ್ಲಿ ಬಹಳಷ್ಟು ಹುಳಿಯೂ ಇದೆ - ಅದರ ರುಚಿಯನ್ನು ನೀವೀಗ ಅನುಭವಿಸುತ್ತಿದ್ದೀರಿ. ದುರದೃಷ್ಟವಶಾತ್, ಈ ವಿಷಯದಲ್ಲಿ ನಾವು ಪಾಶ್ಚಿಮಾತ್ಯರ ಕಲ್ಪನೆಯನ್ನು ಅಳವಡಿಸಿಕೊಂಡಿರುವುದರಿ೦ದ - "ಸಂಬಂಧ" ಅನ್ನುವ ಪದವನ್ನು ಬಳಸಿದಾಕ್ಷಣ, ಸಾಮಾನ್ಯವಾಗಿ ಜನರು ಅದನ್ನು ದೈಹಿಕ ಸಂಬಂಧವೆಂದೇ ಭಾವಿಸುತ್ತಾರೆ. ಆದರೆ ಸಂಬಂಧಗಳು ಅನೇಕ ವಿಧಗಳಲ್ಲಿ ಇರಬಹುದು.

 

ನಿಮ್ಮ ಸಂಬಂಧಗಳು ಕೇವಲ ದೇಹಕ್ಕೆ ಸೀಮಿತವಾಗಿದ್ದರೆ, ಸ್ವಲ್ಪ ಸಮಯದ ನ೦ತರ ಪರಸ್ಪರರ ಶರೀರದ ಮೇಲಿನ ಉತ್ಸಾಹವು ಸಾಮಾನ್ಯವಾಗಿ ಬತ್ತಿಹೋಗುತ್ತದೆ. ನೀವು ಯಾವುದನ್ನು ಪರಮಸುಖವೆ೦ದು ತಿಳಿದಿದ್ದಿರೋ, ಕೆಲ ಸಮಯಾನಂತರ ಅದು ಹಾಗೆನಿಸುವುದಿಲ್ಲ. ಇಬ್ಬರನ್ನೂ ಸಮೀಪಕ್ಕೆ ತಂದ ಮುಖ್ಯವಾದ ಸೆಳತವು ಕರಗಲು ಆರಂಭಿಸಿದಾಗ, ಸಹಜವಾಗಿಯೇ ಅವರುಗಳು ಶಾರೀರಿಕ ಸಂಬಂಧವನ್ನು ಮೀರಿ ಬೆಳೆಯಲು ಅನುವಾಗುತ್ತಾರೆ.  ಕಾರಣವಿಲ್ಲದೆ, ಒಬ್ಬರಿಗೊಬ್ಬರು ಕಿರಿಕಿರಿಯನ್ನು ಉ೦ಟುಮಾಡಿಕೊಳ್ಳುವ ರೀತಿ ವರ್ತಿಸಲು ಆರಂಭಿಸುತ್ತಾರೆ. ಇಂತಹ ಸಂಬಂಧಗಳು ಮೂಲಭೂತವಾಗಿ ಇನ್ನೊಬ್ಬರಿಂದ ಮಾಧುರ್ಯ ಮತ್ತು ಸಂತೋಷವನ್ನು ಹಿಂಡಿ ತೆಗೆಯುವ೦ತವುಗಳಾಗಿರುತ್ತವೆ. ನೀವು ಬೇರೊಬ್ಬರಿಂದ ಸಂತೋಷವನ್ನು ಹಿಂಡುವ ಪ್ರಯತ್ನವನ್ನು ಮಾಡುತ್ತಿದ್ದರೆ, ಅದು ಆರಂಭದಲ್ಲಿ ನೀಡುತ್ತಿದ್ದ ಫಲಿತಾಂಶವನ್ನು ನೀಡದಿದ್ದಾಗ, ಸಂಬಂಧಗಳಲ್ಲಿ ಕಹಿಯಾದ ಭಾವನೆಗಳು ಬರಲು ಪ್ರಾರಂಭವಾಗುತ್ತವೆ.

ನಿಮ್ಮ ಸಂಬಂಧಗಳು ಕೇವಲ ದೇಹಕ್ಕೆ ಸೀಮಿತವಾಗಿದ್ದರೆ, ಸ್ವಲ್ಪ ಸಮಯದ ನ೦ತರ ಪರಸ್ಪರರ ಶರೀರದ ಮೇಲಿನ ಉತ್ಸಾಹವು ಸಾಮಾನ್ಯವಾಗಿ ಬತ್ತಿಹೋಗುತ್ತದೆ. ನೀವು ಯಾವುದನ್ನು ಪರಮಸುಖವೆ೦ದು ತಿಳಿದಿದ್ದಿರೋ, ಕೆಲ ಸಮಯಾನಂತರ ಅದು ಹಾಗೆನಿಸುವುದಿಲ್ಲ.

ನಿಮಗೆ ವಯಸ್ಸಾದ೦ತೆಲ್ಲಾ, ನಿಮ್ಮಲ್ಲಿ ಕೆಲವು ಬದಲಾವಣೆಗಳಾಗಬಹುದು. ನಿನ್ನೆಯಿಂದ ಇವತ್ತಿಗೆ, ನೀವು ಸ್ವಲ್ಪ ಪ್ರೌಢರಾಗಿದ್ದೀರಿ, ಅಲ್ಲವೇ?  ಇ೦ದು, ಅ೦ದರೆ ನೀವು ಪ್ರಾಯದಲ್ಲಿರುವಾಗಲೇ, ಕೇವಲ ರಕ್ತಸಂಬಂಧಗಳಷ್ಟೆ ಅಲ್ಲ, ನೀವು ನಿಮ್ಮ ಬದುಕಿನಲ್ಲಿ ಹೊ೦ದಿರುವ ಎಲ್ಲಾ  ಸಂಬಂಧಗಳನ್ನು ವಿಶ್ಲೇಷಣೆ ಮಾಡಿ, ಅವುಗಳನ್ನು ನಿಮ್ಮ ಸಂತೋಷದ ಅಭಿವ್ಯಕ್ತಿಯ ಮಾರ್ಗಗಳನ್ನಾಗಿ ಪರಿಗಣಿಸಬೇಕೆ ವಿನಃ ಸಂತೋಷವನ್ನು ಹಿಂಡಿ ತೆಗೆಯುವ ರೀತಿಯಲ್ಲಲ. 

ಇದಾಗಬೇಕಾದರೆ, ಮೊದಲು ನೀವು ಸ್ವಾಭಾವಿಕವಾಗಿ ಸಂತೋಷವಾಗಿರಬೇಕು. ನೀವೊಂದು ಉತ್ಸಾಹಭರಿತ, ಸ೦ತೋಷದಿ೦ದ ತು೦ಬಿತುಳುಕುವ ಚಿಲುಮೆಯ೦ತಾಗುವ ಕಡೆ ಗಮನ ಹರಿಸಿದರೆ, ಮತ್ತು ನಿಮ್ಮ ಸಂಬಂಧಗಳು ಈ ಸಂತೋಷವನ್ನು ಹಂಚಿಕೊಳ್ಳುವುದರ ಅಭಿವ್ಯಕ್ತಿಯಾದರೆ, ಸಾಮಾನ್ಯವಾಗಿ ಸಂಬಂಧಗಳಲ್ಲಿ ಜನರು ಅನುಭವಿಸುವ ಪೀಕಲಾಟಗಳ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ.

ಸಂಬಂಧಗಳನ್ನು ನಿಭಾಯಿಸುವುದು

ಸಂಬಂಧಗಳು ಜೀವನದ ಒಂದು ಭಾಗಕ್ಕಷ್ಟೆ ಸೀಮಿತವಾಗಿಲ್ಲದೇ ಇರಬಹುದು. ಒಮ್ಮೆ ಜನಗಳು ಒಟ್ಟಿಗೆ ಸೇರಿದರೆ೦ದರೆ, ಅವರು ಅನೇಕ ವಿಷಯಗಳನ್ನು ಹಂಚಿಕೊಳ್ಳಬೇಕಾಗುತ್ತದೆ. ಸಹಜವಾಗಿ ಅವರು, ಚಿಕ್ಕ ಪುಟ್ಟ ವಿಷಯಗಳಿಗೆ ಪರಸ್ಪರ ಮೂಗು ತೂರಿಸುವುದುಕ್ಕೆ ಆರಂಭಿಸುತ್ತಾರೆ. ಇದರಿಂದಾಗಿ, ಮಾತುಕತೆಗಳು ನಡೆಯುತ್ತವೆ, ಮತ್ತು ವಾಗ್ವಾದಗಳೂ ಸಹ ಜರಗುತ್ತವೆ.

ಇದೆಲ್ಲವನ್ನೂ ಪ್ರತಿದಿನ ನಿಮ್ಮಿ೦ದ ನಿಭಾಯಿಸಲು ಸಾಧ್ಯವಾಗುವುದಿಲ್ಲ. ಆದ್ದರಿ೦ದಾಗಿ, ಸ್ವಭಾವಯುತವಾಗಿ ಸಂತೋಷ ಮತ್ತು ಉತ್ಸಾಹದಿ೦ದಿರುವ ರೀತಿಯಲ್ಲಿ ನಿಮ್ಮನ್ನು ನೀವು ನಿಭಾಯಿಸಿಕೊಳ್ಳುವುದು ಉತ್ತಮ. ಹೀಗಾದಾಗ, ನಿಮ್ಮ ಸಂಬಂಧಗಳು ಅಗತ್ಯತೆಗಳನ್ನು ಪೂರೈಸಲು ಇರುವ೦ತಹ ಸ೦ಭ೦ದಗಳಾಗಿರುವುದಿಲ್ಲ. 
 

 

ನಿಮ್ಮ ಸಂಬಂಧಗಳು ಕೇವಲ ಅಗತ್ಯತೆಗಳನ್ನು ಪೂರೈಸುವ೦ತಹ ಸಂಬಂಧಗಳಾಗಿದ್ದರೆ, ನಿಮ್ಮ ಅಗತ್ಯತೆಗಳು ಪೂರೈಸದಿದ್ದಾಗ ನೀವು ಗೊಣಗಾಡಲು ಶುರು ಮಾಡುವಿರಿ. ನಿಮ್ಮೊಳಗಿರುವ ಈ ಅಗತ್ಯತೆಗಳನ್ನು ಇಲ್ಲದ ಹಾಗೆ ಮಾಡಿದರೆ ಮತ್ತು ನೀವು ಸ್ವಭಾವಯುತವಾಗಿ ಸಂತೋಷದಿಂದ ತುಂಬಿ ತುಳುಕುತ್ತಿದ್ದರೆ, ಆಗ ನೀವು ಎಲ್ಲಾ ತೆರನಾದ ವ್ಯಕ್ತಿಗಳೊಂದಿಗೆ, ಅವರ ವ್ಯಕ್ತಿತ್ವವನ್ನು ಪರಿಗಣಿಸದಯೆ, ಅದ್ಭುತವಾದ ಸಂಬಂಧಗಳನ್ನು ಹೊಂದಬಹುದು. ಅವರು ನಿಮ್ಮಂತೆಯೇ ಇರಬೇಕಾದ ಅಗತ್ಯವಿರುವುದಿಲ್ಲ. ನೀವು ಜೀವನದಲ್ಲಿ ಅತ್ಯಂತ ಸುಂದರವಾದ ಸಂಬಂಧಗಳನ್ನು ಹೊ೦ದಲಿ ಎಂದು ನಾನು ಹಾರೈಸುತ್ತೇನೆ.

ಸಂಪಾದಕರ ಟಿಪ್ಪಣಿ: ನೀವು ಯಾವುದಾದರು ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.

Youth and Truth Banner Image