
ಈ ಸಾಧನೆಯನ್ನು 7 ಅಥವಾ 3 ದಿನಗಳ ಕಾಲ ಮಾಡಬಹುದು.
ಸಾಧನೆಯ ಅವಧಿಯಲ್ಲಿ, ಮೊಣಕೈಗಿಂತ ಮೇಲೆ ಕೆಂಪು ಬಟ್ಟೆಯನ್ನು ಕಟ್ಟಿಕೊಳ್ಳಿ (ಮಹಿಳೆಯರಿಗೆ ಎಡಗೈಗೆ ಮತ್ತು ಪುರುಷರಿಗೆ ಬಲಗೈಗೆ). ಬಟ್ಟೆಯು ಹತ್ತಿಯಂತಹ ನೈಸರ್ಗಿಕ ನೂಲಿನಿಂದ ಮಾಡಲ್ಪಟ್ಟಿರಬೇಕು ಮತ್ತು ಕನಿಷ್ಠ 12 ಇಂಚು ಉದ್ದ ಮತ್ತು ¾ ಇಂಚು ಅಗಲವಿದ್ದು, ತೋಳಿನ ಸುತ್ತ ಎರಡು ಬಾರಿ ಸುತ್ತುವಷ್ಟು ಉದ್ದವಿರಬೇಕು.
ಸಾಧನೆಯನ್ನು ಬೆಳಿಗ್ಗೆ ಅಥವಾ ಸಂಜೆ ಮಾಡಬಹುದು.
ಸಾಧನೆ ಮಾಡುವಾಗ ಹುಬ್ಬುಗಳ ಮಧ್ಯೆ ಕುಂಕುಮವನ್ನು ಹಚ್ಚಿಕೊಳ್ಳಿ.
ದೀಪವನ್ನು ಹಚ್ಚಿ ಅದರ ಮುಂದೆ ಕುಳಿತು ಸಾಧನೆ ಮಾಡಿ.
ದಿನಕ್ಕೆ ಒಮ್ಮೆ 12 ನಿಮಿಷಗಳ ಕಾಲ "ನಾಗ ನಾಗ ನಾಗೇಂದ್ರಾಯ" ಮಂತ್ರವನ್ನು ಪಠಿಸಿ. ಈ ಮಂತ್ರವು ಯೂಟ್ಯೂಬ್‌ನಲ್ಲಿ ಲಭ್ಯವಿದೆ.
ಜಪ ಮಾಡಿದ ನಂತರ ಪ್ರತಿದಿನ ದೀಪದ ಮುಂದೆ ಕೆಂಪು ಬಟ್ಟೆಯ ಮೇಲೆ ಒಂದು ಹಿಡಿ ಎಳ್ಳನ್ನು ಇಡಿ.
ಸಾಧನೆಯನ್ನು ಆಗಸ್ಟ್ 17ರಂದು ಬೆಳಿಗ್ಗೆ 6 ರಿಂದ ಸಂಜೆ 4 ರ ನಡುವೆ ಸದ್ಗುರು ಸನ್ನಿಧಿಯ ನಾಗ ಮಂಟಪದಲ್ಲಿ ಖುದ್ದಾಗಿ ಬಂದು ಸಮಾಪಣೆಗೊಳಿಸಬೇಕು.
ಸಾಧನೆಯ ಅವಧಿಯಲ್ಲಿ ಅರ್ಪಿಸಿದ ಎಳ್ಳು ಮತ್ತು ಕೆಂಪು ಹತ್ತಿ ಬಟ್ಟೆಯಿಂದ ಮುಚ್ಚಿದ ಒಂದು ತೆಂಗಿನಕಾಯಿಯನ್ನು ನಿಮ್ಮೊಂದಿಗೆ ತನ್ನಿ.
ನಾಗನ ಮುಂದೆ 12 ನಿಮಿಷಗಳ ಕಾಲ "ನಾಗ ನಾಗ ನಾಗೇಂದ್ರಾಯ" ಮಂತ್ರವನ್ನು ಪಠಿಸಿ.
ನಾಗನ ಮುಂದೆ ತೆಂಗಿನಕಾಯಿ ಒಡೆಯಿರಿ.
ನಾಗನಿಗೆ ಎಳ್ಳನ್ನು ಅರ್ಪಿಸಿ.
ನಿಮ್ಮ ತೋಳಿನಿಂದ ಕೆಂಪು ಬಟ್ಟೆಯನ್ನು ತೆಗೆದು ಆದಿಯೋಗಿಯ ಸುತ್ತಲಿರುವ ತ್ರಿಶೂಲಗಳಲ್ಲಿ ಒಂದಕ್ಕೆ ಕಟ್ಟಿ.