ಸದ್ಗುರು ಮತ್ತು ಮಾರ್ಕ್ ಹೈಮಾನ್ ಅಮೆರಿಕಾದ ವೈದ್ಯರು ಮತ್ತು ಪ್ರಖ್ಯಾತ ಲೇಖಕಕರರು, ನಾವು ತಿನ್ನುವ ಆಹಾರ ಮತ್ತು ನಮ್ಮ ಶಾರೀರಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಏನು ಸಂಬಂಧವಿದೆ ಹಾಗೂ ನಮ್ಮ ಆಹಾರದ ವ್ಯವಸ್ಥೆಯಲ್ಲಿ ಬದಲಾವಣೆಗಳ ಸಾಧ್ಯತೆಗಳ ಬಗ್ಗೆ ವಿಚಾರ ಮಾಡಿದರು. ಇದರ ಹಿಂದಿನ ಚರ್ಚೆಯ ಇಲ್ಲಿ ತಿಳಿದುಕೊಳ್ಳಬಹುದು: Hand Over The Forks, Folks! and Raise Your Food Consciousness.

ಮಾರ್ಕ್ ಹೈಮಾನ್: ಸಭಿಕರಿಂದ ಬಂದಿರುವ ಒಂದು ಪ್ರಶ್ನೆ ನಮ್ಮ ಮನಸ್ಸಿಗೆ, ನಮ್ಮ ಮಾನಸಿಕ ಸ್ಥಿತಿಗೆ, ನಮ್ಮ ಭಾವನೆಗಳ ಸ್ಥಿತಿಗೆ, ನಮ್ಮ ಮಾನಸಿಕ ಆರೋಗ್ಯಕ್ಕೆ ಮತ್ತು ನಾವು ತಿನ್ನುವ ಆಹಾರಕ್ಕೆ ಏನಾದರು ಸಂಬಂಧವಿದೆಯೇ. ಎಲ್ಲವೂ ಎ ಡಿ ಡಿ ಇಂದ ಬೈಪೋಲಾರ್ ರೋಗ, ಹಾಗೂ ಖಿನ್ನತೆಗೆ ಅದರೊಟ್ಟಿಗೆ ಸಂಬಂಧವನ್ನು ಕಾಣಬಹುದು. ಹಾಗಾದರೆ ನಮ್ಮ ದೇಹಕ್ಕೆ ಮತ್ತು ಮನಸ್ಸಿಗೆ ಇರುವ ಸಂಬಂಧವೇನು?

ಸದ್ಗುರು: ಯೋಗದಲ್ಲಿ ದೇಹ ಮತ್ತು ಮನಸ್ಸನ್ನು ಎರಡು ವಿಷಯಗಳನ್ನಾಗಿ ಪರಿಗಣಿಸುವುದಿಲ್ಲ. ನಿಮ್ಮ ಮೆದುಳು ನಿಮ್ಮ ದೇಹದ ಒಂದು ಭಾಗ. ನಾವು ಏನನ್ನು ಮನಸ್ಸು ಎಂದು ಹೇಳುತ್ತೇವೆಯೋ ಅದು ಒಂದು ನಿರ್ದಿಷ್ಟವಾದ ನೆನಪುಗಳು ಮತ್ತು ಬುದ್ಧಿವಂತಿಕೆ. ದೇಹದ ಮಿಕ್ಕ ಭಾಗಗಳು ಮತ್ತು ಮೆದುಳಿನ ನಡುವೆ ಯಾವುದಕ್ಕೆ ಹೆಚ್ಚು ನೆನಪಿನ ಶಕ್ತಿಯಿದೆ ಮತ್ತು ಯಾವುದಕ್ಕೆ ಹೆಚ್ಚು ಬುದ್ದಿವಂತಿಕೆ ಇದೆ? ನೀವು ಸೂಕ್ಷ್ಮವಾಗಿ ನೋಡಿದರೆ ನಿಮ್ಮ ದೇಹದ ನೆನಪಿನ ಶಕ್ತಿ ಸಹಸ್ರಾರು ವರ್ಷಗಳ ಹಿಂದಿನದು. ಅದಕ್ಕೆ ನಿಮ್ಮ ಮುತ್ತಾತಂದಿರು ಹೇಗಿರುತ್ತಿದ್ದರು ಎನ್ನುವುದೂ ತಿಳಿದಿದೆ. ನಿಮ್ಮ ಮನಸ್ಸಿಗೆ ಅಷ್ಟು ನೆನಪಿನ ಶಕ್ತಿ ಇದೆ ಎಂದು ಹೇಳಲಾಗುವುದಿಲ್ಲ. ಬುದ್ಧಿವಂತಿಕೆಗೆ ಬಂದಾಗ ಒಂದು ಡಿಎನ್ಎ ಅಣುವಿನಲ್ಲಿ ನಡೆಯುತ್ತಿರುವುದು ಎಷ್ಟು ಸಂಕೀರ್ಣವೆಂದರೆ ನಿಮ್ಮ ಪೂರ್ತಿ ಮೆದುಳು ಅದನ್ನು ಕಂಡುಹಿಡಿಯಲು ಸಾಧ್ಯವಿಲ್ಲ.

ಯೋಗ ಪದ್ಧತಿಯಲ್ಲಿ ಒಂದು ಭೌತಿಕ ಶರೀರವಿದೆ ಮತ್ತು ಒಂದು ಮಾನಸಿಕ ಶರೀರವಿದೆ. ಒಂದು ಬುದ್ಧಿವಂತಿಕೆ ಈ ಶರೀರದಲ್ಲಿ ಹರಿಯುತ್ತಿದೆ. ಜನರು ಸಾಮಾನ್ಯವಾಗಿ ಮೆದುಳೇ ಎಲ್ಲವೂ ಎಂದು ತಿಳಿದಿರುತ್ತಾರೆ, ಏಕೆಂದರೆ ಅದರಲ್ಲಿ ಆಲೋಚನಾ ಶಕ್ತಿಯಿದೆ ಎಂದು. ದೇಹ ಮತ್ತು ಮನಸ್ಸನ್ನು ಬೇರೆಯಾಗಿ ನೋಡುವ ಈ ಕಾರಣದಿಂದಲೇ ಬಹಳಷ್ಟು ಪಾಶ್ಚಾತ್ಯ ಜನರು ಅವರ ಜೀವನದ ಯಾವುದಾದರೂ ಒಂದು ಹಂತದಲ್ಲಿ ಖಿನ್ನತೆಯನ್ನು ಶಮನ ಮಾಡುವ ಚಿಕಿತ್ಸೆ ತೆಗೆದುಕೊಂಡಿರುತ್ತಾರೆ.

ಮನಸ್ಸಿನ ಮೇಲೆ ಆಹಾರದ ಪ್ರಭಾವ

ನಾವು ಯಾವ ರೀತಿಯ ಆಹಾರವನ್ನು ಸೇವಿಸುತ್ತೇವೆಯೋ ಅದು ನಮ್ಮ ಮನಸ್ಸಿನ ಮೇಲೆ ದೊಡ್ಡ ಪ್ರಭಾವವನ್ನು ಬೀರುತ್ತದೆ. ಒಬ್ಬ ಸಾದಾರಣ ಅಮೆರಿಕನ್ ವ್ಯಕ್ತಿ ಒಂದು ವರ್ಷಕ್ಕೆ 200 ಪೌಂಡ್ ಮಾಂಸವನ್ನು ತಿನ್ನುತ್ತಾನೆ. ನೀವು ಅದನ್ನು 50 ಪೌಂಡ್‍ಗೆ ಇಳಿಸಿದರೆ 75% ಜನರಿಗೆ ಖಿನ್ನತೆಯನ್ನು ಶಮನ ಮಾಡುವ ಔಷಧಿಗಳು ಬೇಕಾಗಿರುವುದಿಲ್ಲ ಎಂದು ನೋಡಬಹುದು. ಮಾಂಸ ಕಾಡಲ್ಲಿ ಅಥವಾ ಮರುಭೂಮಿಯಲ್ಲಿ ಬದುಕುವವರಿಗೆ ಬೇಕು. ನೀವು ಎಲ್ಲಾದರೂ ಕಳೆದುಹೋದರೆ ಮಾಂಸ ನಿಮ್ಮನ್ನು ಬಹಳ ದಿನ ಬದುಕಿಸುತ್ತದೆ ಏಕೆಂದರೆ ಅದು ನಿಮಗೆ ಕೇಂದ್ರೀಕೃತವಾದ ಪೋಷಣೆಯನ್ನು ಕೊಡುತ್ತದೆ. ಆದರೆ ಅದು ದಿನಚರಿಯಾಗಬಾರದು ಪ್ರತ್ಯೇಕವಾಗಿ ನಿಮಗೆ ತಿನ್ನಲು ಬೇರೆ ಆಹಾರ ಇರುವಾಗ.

ನೀವು ಒಂದು ಪ್ರಾಣಿಯನ್ನು ಕೊಂದಾಗ, ಅದರಿಂದ ಬರುವ ಋಣಾತ್ಮಕ ಆಮ್ಲಗಳು ಮತ್ತು ಬೇರೆ ರಾಸಾಯನಿಕಗಳು ಆ ಮಾಂಸದಲ್ಲಿ ಇರುತ್ತವೆ.

ಇದನ್ನು ಬೇರೆ ಬೇರೆ ರೀತಿಯಲ್ಲಿ ನೋಡಬಹುದು. ಪ್ರಾಣಿಗಳಿಗೆ ಅವು ಇನ್ನು ಸ್ವಲ್ಪ ಸಮಯದಲ್ಲಿ ಸಾಯುತ್ತವೆ ಎಂದು ತಿಳಿದುಬಿಡುತ್ತದೆ. ನೀವು ಎಷ್ಟೇ ಕುತಂತ್ರದಿಂದ ಅಥವಾ ಎಷ್ಟೇ ವೈಜ್ಞಾನಿಕವಾಗಿ ಮಾಡಿದರೂ ಸರಿ. ಯಾವುದೇ ಪ್ರಾಣಿಗೆ ಅದರ ಸಾವನ್ನು ತಿಳಿಯುವಷ್ಟು ಬುದ್ದಿವಂತಿಕೆ ಇರುತ್ತದೆ ಮತ್ತು ಭಾವನೆ ಬರುತ್ತದೆ.

IEO

 

ನಿಮ್ಮನ್ನು ಈ ಸಂಜೆಗೆ ಖಸಾಯಿಖಾನೆಗೆ ಕರೆದುಕೊಂಡು ಹೋಗುತ್ತಿದ್ದಾರೆಂದು ನಿಮಗೆ ತಿಳಿಯಿತು ಎಂದುಕೊಳ್ಳೋಣ. ನಿಮಗೆ ಎಷ್ಟು ತಳಮಳವಾಗಬಹುದು ಮತ್ತು ನಿಮ್ಮಲ್ಲಿ ಎಷ್ಟು ವಿಧವಾದ ರಾಸಾಯನಿಕ ಕ್ರಿಯೆಗಳು ನಡೆಯಬಹುದು ಎಂದು ಕಲ್ಪಿಸಿಕೊಳ್ಳಿ. ಒಂದು ಪ್ರಾಣಿಯಲ್ಲಿ ನಿಮ್ಮಲ್ಲಿ ನಡೆಯುವ ಕ್ರಿಯೆಗಳ ಒಂದು ಸ್ವಲ್ಪ ಪಾಲಾದರೂ ನಡೆಯುತ್ತದೆ. ಅದರ ಅರ್ಥ ಅದರಲ್ಲಿರುವ ಋಣಾತ್ಮಕ ಆಮ್ಲಗಲ್ಲೆಲ್ಲಾ ಆ ಮಾಂಸದಲ್ಲಿರುತ್ತದೆ, ನೀವು ಆ ಮಾಂಸವನ್ನು ಸೇವಿಸಿದರೆ ನಿಮ್ಮಲ್ಲಿ ಬೇಡದೆ ಇರುವ ಮಾನಸಿಕ ಏರಿಳಿತಗಳಾಗುತ್ತದೆ.

ನೀವು ನಿರುತ್ಸಾಹಕ್ಕೆ ಔಷಧಗಳನ್ನು ತೆಗೆದುಕೊಳ್ಳುವವರಿಗೆ ಮೂರು ತಿಂಗಳು ಸಸ್ಯಾಹಾರವನ್ನು ಕೊಟ್ಟರೆ ಅವರಲ್ಲಿ ಸುಮಾರು ಜನರಿಗೆ ಔಷಧಿಗಳ ಅವಶ್ಯಕತೆ ಬರುವುದಿಲ್ಲ. ನಾವು ಇದನ್ನು ನಮ್ಮ ಈಶ ಯೋಗ ಕೇಂದ್ರದಲ್ಲಿ ಎಷ್ಟೋ ಜನರಲ್ಲಿ ನೋಡುತ್ತಿದ್ದೇವೆ.

ನಮ್ಮ ಸಾಮಾಜಿಕ ವ್ಯವಸ್ಥೆಯೊಳಗೆ ನಾವು ಸೃಷ್ಟಿಸಿ ಬೆಳೆಸಿಕೊಳ್ಳದೆ, ಬಹಳಷ್ಟು ಜನರು ಮಾನಸಿಕ ರೋಗಿಗಳಾಗಿರಲಾರರು.

ಮಾನಸಿಕವಾಗಿ ರೋಗವಿರುವ ಬಹಳ ಜನರು ಅದನ್ನು ಅವರೊಳಗೆ ಬೆಳೆಸಿಕೊಂಡಿದ್ದಾರೆ. ಅವರಿಗೆ ನಿಜವಾಗಿಯೂ ರೋಗವಿಲ್ಲ. ನಮ್ಮ ಸಾಮಾಜಿಕ ವ್ಯವಸ್ಥೆಯೊಳಗೆ ನಾವು ಸೃಷ್ಟಿಸಿ ಬೆಳೆಸಿಕೊಳ್ಳದೆ, ಬಹಳಷ್ಟು ಜನರು ಮಾನಸಿಕ ರೋಗಿಗಳಾಗಿರಲಾರರು. ನಾವು ವ್ಯವಹಾರಿಕ ವಿಷಯವನ್ನು ನಮ್ಮ ಜೀವನವದ ಶೈಲಿಯನ್ನು ನಿರ್ಧರಿಸಲು ಬಿಡಬಾರದು. ವ್ಯವಹಾರ ಇರುವುದು ಮಾನವನ ಸೇವೆಗಾಗಿ, ಆದರೆ ಈಗ ಪ್ರಪಂಚಾದ್ಯಂತ ನಮ್ಮ ಆರ್ಥಿಕ ಪರಿಸ್ಥಿತಿ ಹೇಗೆ ರಚಿಸಲ್ಪಟ್ಟಿದೆ, ಎಂದರೆ ಮನುಷ್ಯರು ಈ ಆರ್ಥಿಕ ಮತ್ತು ವ್ಯವಹಾರಿಕ ಕ್ರಿಯೆಯನ್ನು ಸೇವೆ ಮಾಡಲು ಬದುಕಿದ್ದಾರೆ ಎಂಬಂತಿದೆ. ನೀವು ವರ್ಲ್ಡ್ ಎಕನಾಮಿಕ್ ಫೋರಮ್ ಎಂದು ಹೇಳುತ್ತಿದ್ದೀರಿ. ನಾನು ಕೆಲವು ವರ್ಷಗಳ ಹಿಂದೆ ಅಲ್ಲಿದ್ದಾಗ, ಎಲ್ಲರೂ ಭಾರತವನ್ನು, ಚೀನಾ ಮತ್ತು ಇತರ ದೇಶಗಳನ್ನೂ ಸೂಚಿಸಿ ಮೇಲೆ ಬರುತ್ತಿರುವ ಮಾರುಕಟ್ಟೆಗಳೆಂದು ಮಾತನಾಡುತ್ತಿದ್ದರು.

ನಾನು ಹೇಳಿದೆ " ದಯವಿಟ್ಟು ಮನುಷ್ಯರನ್ನು ಮಾರುಕಟ್ಟೆಗಳೆಂದು ಕರೆಯಬೇಡಿ. ನೀವು ಅವರನ್ನು ಮನುಷ್ಯರೆಂದು ನೋಡಿದರೆ, ಬಹುಷಃ ನಿಮಗೆ ಅವರ ಜೊತೆ ಹೇಗೆ ವರ್ತಿಸಬೇಕೆಂದು ಸರಿಯಾದ ಕಲ್ಪನೆ ಬರುತ್ತಿತ್ತೇನೋ. ನೀವು ಅವರನ್ನು ಮಾರುಕಟ್ಟೆಗಳೆಂದು ನೋಡಿದಾಗ ನೀವು ಬೇರೆಯದನ್ನೇ ಮಾಡುತ್ತೀರಿ! ಇದು ಮರುಕಟ್ಟೆಯಿಲ್ಲ ಇವರು ಮನುಷ್ಯರು." ನೀವು ಮನುಷ್ಯರನ್ನು ಮನುಷ್ಯರಾಗಿ ನೋಡದಿದ್ದರೆ, ನೀವು ಪ್ರಾಣವನ್ನು ಪ್ರಾಣವನ್ನಾಗಿ ನೋಡದಿದ್ದರೆ ನೀವು ಅವರೊಳಗೆ ಏನನ್ನು ತುರುಕುತ್ತಿದ್ದೀರೆಂದು ನೀವು ಯೋಚಿಸುವುದಿಲ್ಲ. ನಿಮಗೆ ಹೆಚ್ಚು ಹಣವನ್ನು ಏನು ಕೊಡುತ್ತದೆಯೋ ಅದನ್ನೇ ನೀವು ಮಾರುತ್ತೀರಿ.

ಮಾರ್ಕ್ ಹೈಮಾನ್: ಹೌದು, ಇದು ನಿಜ. ಕೆಲವು ವರ್ಷಗಳ ಹಿಂದೆ, ದೇಹವು ಮನಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ನಾನು ಒಂದು ಪುಸ್ತಕವನ್ನು ಬರೆದೆ - ‘ದ ಅಲ್ಟ್ರಾ ಮೈಂಡ್ ಸಲ್ಯೂಷನ್’. ನಾನು ಅವರಿಗೆ ಒಟ್ಟಾರೆಯಾದ ಚಿಕಿತ್ಸೆಯನ್ನು ಕೊಟ್ಟಾಗ ಬಹಳಷ್ಟು ಮಾನಸಿಕ ರೋಗಗಳು ಮತ್ತು ಅರಿವಿನ ರೋಗಗಳು ಕಡಿಮೆಯಾಗುತ್ತಿದ್ದುದ್ದನ್ನು ಗಮನಿಸಿದೆ. ನಾನು ಮಾಡುತ್ತಿರುವುದು ಕ್ರಿಯಾತ್ಮಕ ವೈದ್ಯ(ಫಂಕ್ಷನಲ್ ಮೆಡಿಸಿನ್). ಅದು ಆರೋಗ್ಯವನ್ನು ಸೃಷ್ಟಿಸಲು ಬೇಕಾದ ವಿಜ್ಞಾನ. ಬಹಳ ಮಟ್ಟ್ಟಿಗೆ ಸದ್ಗುರುಗಳು ಹೇಳಿಕೊಡುವುದು ಇದನ್ನೇ.

ನಾವು ತಿನ್ನುವ ಆಹಾರದ ಗುಣಮಟ್ಟ ಮತ್ತು ತಿನ್ನುವ ವಿಧಾನ ಎನ್ನುವುದು ಬೇರೆ ಎಲ್ಲದಕ್ಕಿಂತ ಬಹಳ ಮುಖ್ಯ.

ನಾನು ಅದನ್ನು ಮಾಡಲು ಶುರು ಮಾಡಿದಮೇಲೆ ಜನರ ನಿರುತ್ಸಾಹ ಹೊರಟುಹೋಯಿತು ಮತ್ತು ಅವರ ಎ ಡಿ ಡಿ ಹಾಗು ಬೈಪೋಲಾರ್ ರೋಗ ಸುಧಾರಿಸಿತು, ಹಾಗು ನಾನು ಅದರ ಕಾರಣವನ್ನು ತಿಳಿದುಕೊಂಡಾಗ ಅವರು ತಿನ್ನುತ್ತಿರುವ ಆಹಾರವೇ ಬಹಳಷ್ಟು ಬಾರಿ ಕಾರಣವಾಗಿತ್ತು. ವಾಸ್ತವವಾಗಿ ಜನರು ನಿಜವಾದ ಆಹಾರವನ್ನು ತಿನ್ನುತ್ತಿಲ್ಲ. ಅವರು ಆಹಾರದಂತಿರುವ ಪದಾರ್ಥಗಳನ್ನು ತಿನ್ನುತ್ತಿದ್ದರು. ನಾವು ನಿಜವಾದ ಆಹಾರವನ್ನು ತಿಂದು ನಮ್ಮ ಮಾಂಸಾಹಾರವನ್ನು ಕಡಿಮೆ ಮಾಡಿದರೆ, ಸದ್ಗುರುಗಳು ಹೇಳಿದ ಹಾಗೆ ಹೆಚ್ಚಾಗಿ ಸಸ್ಯಾಹಾರವನ್ನು ಸೇವಿಸಿದರೆ, ನಮ್ಮ ಧೀರ್ಘ ಕಾಲ ರೋಗಗಳು ಶಮನವಾಗುತ್ತವೆ, ಮಾನಸಿಕ ಮತ್ತು ನರಗಳ ರೋಗಗಳನ್ನೊಳಗೊಂಡು ಹೊರಟು ಹೋಗುತ್ತವೆ. ನಾನು ಇದನ್ನು ಮತ್ತೆ ಮತ್ತೆ ನೋಡಿದ್ದೇನೆ.

ಸಾಧಾರಣವಾಗಿ ನಾನು ಮಾನಸಿಕ ರೋಗಗಳ ಚಿಕಿತ್ಸೆ ಮಾಡುವುದಿಲ್ಲ. ಆದರೂ ಅವರಿಗೆ ಅದೊಂದು ಅನಂತರದ ಪರಿಣಾಮವಾಗಿ ಕಾಣಿಸಿತು. ಈ ರಾಷ್ಟ್ರದಲ್ಲಿ ಜನರು ಅದರ ಪ್ರಾಮುಖ್ಯತೆಯನ್ನು ಇನ್ನೂ ತಿಳಿದಿಲ್ಲವೆಂದು ನನಗೆ ನಾಚಿಕೆಯಾಗುತ್ತಿದೆ, ಮತ್ತು ನಮ್ಮನ್ನು ಹೆಚ್ಚು ದಪ್ಪ ಮಾಡುವುದನ್ನು ಬಿಟ್ಟು ಆಹಾರ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೆಂಬುದರ ಬಗ್ಗೆ ನಮ್ಮ ವ್ಯದ್ಯರು ಇನ್ನೂ ಅನುಮಾನ ಮಾಡುತ್ತಿದ್ದಾರೆ. ಈ ಮಾಹಿತಿಯನ್ನು ಚಿಕಿತ್ಸೆಗೆ ಒಂದು ವಿಭಾಗವನ್ನಾಗಿ ಉಪಯೋಗಿಸಬಹುದು. ಆದರೆ ಇದು ನಿಜವಾಗಿಯೂ ಒಂದು ಪ್ರಬಲವಾದ ಯಂತ್ರ. ನಾವು ತಿನ್ನುವ ಆಹಾರದ ಗುಣಮಟ್ಟ ಮತ್ತು ನಾವು ತಿನ್ನುವ ರೀತಿ ಬೇರೆ ಎಲ್ಲದಕ್ಕಿಂತ ಹೆಚ್ಚು ಮುಖ್ಯವಾದದ್ದು.

ಸರಿಯಾದ ಆಯ್ಕೆಗಳನ್ನು ಮಾಡುವುದು

ಸದ್ಗುರು: ಆಹಾರದ ವಿಷಯದಲ್ಲಿ ನಮಗೆ ಒಂದು ಪರಿಣಾಮಕಾರಿಯಾದ ಪ್ರಚಾರ ಬೇಕು ಎಂದು ನನಗೆನ್ನಿಸುತ್ತದೆ. 70ರ ದಶಕದಲ್ಲಿ ಅಮೇರಿಕಾದಲ್ಲಿ ನಡೆದ ಧೂಮ್ರಪಾನ ನಿಷೇದ ಪ್ರಚಾರದ ಹಾಗೆ. ಅಮೇರಿಕಾದಲ್ಲಿ, ಸಾರ್ವಜನಿಕರ ಸ್ಥಳಗಳಲ್ಲಿ ಹೊಗೆಯ ನಡುವೆ ಹಾಯ್ದು ಹೋಗಬೇಕಿತ್ತು. ಅಗ ಅವರು ಸಕ್ರಿಯೆಯಾಗಿ ಒಂದು ಯಶಸ್ವಿಯಾದ ಪ್ರಚಾರವನ್ನು ಮಾಡಿದರು, ಅದು ಅಲ್ಲಿನ ಗಾಳಿಯನ್ನು ಸ್ವಚ್ಛ ಮಾಡಿತು. ಈ ದಿನ ಅವರು ಒಂದು ರೆಸ್ಟೋರೆಂಟ್ ಒಳಗೆ ಹೋದರೆ ಹೊಗೆ ಇರುವುದಿಲ್ಲ. ಆದರೆ ಪಾನೀಯದಲ್ಲಿ ಮಾತ್ರ ಇಂಗಾಲದ ಅಂಶ (ಕಾರ್ಬನ್ ಡೈ ಆಕ್ಸೈಡ್) ಇದೆ. ಒಂದು ಕಾಲದಲ್ಲಿ ಧೂಮ್ರಪಾನ ಜನರಿಗೆ ಅವಶ್ಯಕತೆಯಾಗಿರದೆ ಫ್ಯಾಷನ್ ಆಗಿತ್ತು. ಬೇರೆಯವರ ಮುಖದ ಮೇಲೆ ಹೊಗೆ ಊದುವುದು ಸರಿಯಾದ ಸಂಗತಿಯಾಗಿತ್ತು.

Sadhguru Chef- Food and mental Health

ಸರಿಯಾದ ಪ್ರಚಾರದಿಂದ ಒಂದು ತಲೆಮಾರಿನಲ್ಲಿ ಈ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಯಿಸಿತು. ಈ ದಿನ ನೀವು ಅಮೇರಿಕಾದಲ್ಲಿ ಬೇರೆ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ತಂಬಾಕು ಸೇವನೆ ಕಡಿಮೆ ಇದೆ. ನಾವು ಏನನ್ನು ತಿನ್ನಬೇಕು ಮತ್ತು ಕುಡಿಯಬೇಕು ಎನ್ನುವುದರ ಬಗ್ಗೆ ಅದೇ ರೀತಿಯ ಪ್ರಚಾರ ಬೇಕು.

ಮಾರ್ಕ್ ಹೈಮಾನ್: ಹೌದು. ನಮಲ್ಲಿ ಆ ಆಯ್ಕೆಯನ್ನು ಮಾಡುವ ಪ್ರತಿಯೊಬ್ಬರೂ, ನಮ್ಮ ಸ್ಥಳೀಯ ರಾಜಕೀಯ ನಾಯಕರೊಂದಿಗೆ ಮಾತನಾಡಿದರೆ ಒಂದು ದೂಡ್ಡ ಬದಲಾವಣೆ ಮಾಡಬಹುದು. ಆದರೆ ಸಮಸ್ಯೆ ಏನೆಂದರೆ ಈ ಆಹಾರದ ಉದ್ಯಮಕ್ಕೆ ಇರುವ ಪ್ರಭಾವ. ಅದು ಒಂದು ಟ್ರಿಲಿಯನ್ ಡಾಲರ್ ಉದ್ಯಮ - ಬಹಳ ಶಾಸನಗಳನ್ನು ನಿರ್ಧಾರ ಮಾಡುತ್ತದೆ. ಬಳಷ್ಟು ಸಾರಿ ಆಹಾರದ ಮಾರ್ಗಸೂಚಿಗಳು ಮತ್ತು ಫ್ ಡಿ ಎ ಶಿಫಾರಸ್ಸುಗಳು (ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಆ ದಿ ಯುನೈಟೆಡ್ ಸ್ಟೇಟ್ಸ್ ಆ ಅಮೇರಿಕಾ) ಮತ್ತು ಶಾಸನದ ಮೇಲೆ ಇದರ ಪ್ರಭಾವವಿರುತ್ತದೆ. ನಮಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ ; ನಮಗೆ ನಿಜವದ ಮಾಹಿತಿ ಸಿಗುತ್ತಿಲ್ಲ, ವಾಸ್ತವದಲ್ಲಿ ನಮಗೆ ಶಾಸನಗಳಲ್ಲಿನ ಬದಲಾವಣೆಗಳು ಗೊತ್ತಾಗುತ್ತಿಲ್ಲ.

ಸದ್ಗುರು: ನಿಜವಾಗಿಯೂ, ಇದು 4 ಟ್ರಿಲಿಯನ್ ಉದ್ಯಮ ಒಂದು ಟ್ರಿಲಿಯನ್ ಆಹಾರ ಮತ್ತು 3 ಟ್ರಿಲಿಯನ್ ಔಷಧಿಗಳು.

ಮಾರ್ಕ್ ಹೈಮಾನ್: ನಿಖರವಾಗಿ, ಅದು ಬಹಳ ದೊಡ್ಡದು. ಮೈಕಲ್ ಬ್ಲೂಮ್‍ಬರ್ಗ್ (ನ್ಯೂಯಾರ್ಕ್ ನಲ್ಲಿ ಮೇಯರ್ ಆಗಿ ಇದ್ದಾಗ) ಕೆಲವು ಶಾಸನಗಳನ್ನು ಬದಲಾಯಿಸಲು ನೋಡಿದರು. ಉದಾಹರಣೆಗೆ - ಸೋಡಾ ತರಿಗೆ(1) - ಅವರು ಅದನ್ನು ಅಮಲು ಮಾಡಿಸಲು ಸಾಧ್ಯವಾಗಲಿಲ್ಲ. ಅವರು ಫುಡ್ ಸ್ಟ್ಯಾಂಪ್ ಅನ್ನು ಮಿತಿ ಮಾಡಿದಾಗ ಏನು ಪರಿಣಾಮವಾಗುತ್ತದೆ ಎಂದು ನೋಡಬೇಕೆಂದು ಒಂದು ಅಧ್ಯಯನ ಮಾಡಬೇಕೆಂದುಕೊಂಡರು. ಮುನ್ನೋಟದಲ್ಲಿ ಫುಡ್ ಸ್ಟ್ಯಾಂಪ್ ಗಳು ಅಮೆರಿಕಾದ ಬಡವರಿಗೆ 4 ಬಿಲಿಯನ್ ಡಾಲರ್ಗಳನ್ನು ತಂದು ಕೊಡುತ್ತದೆ. ಆದರೆ ಹಿಂದುಗಡೆಯಿಂದ ಸರ್ಕಾರವು ಮೆಡಿಕೇರ್ ಮತ್ತು ಮೆಡಿಕೈಡ್ ಸೋಡಾ ಕುಡಿದು ಬಂದಿರುವ ರೋಗಗಳಿಗಾಗಿ ಕೊಡುತ್ತಿದೆ! ಯು ಸ್ ಡಿ ಎ ಕೃಷಿ ಇಲಾಖೆ ಅವರನ್ನು ಒಂದು ಪೈಲಟ್ ಅಧ್ಯಯನ ಕೂಡ ಮಾಡಲು ಬಿಡಲಿಲ್ಲ.

ಹಸಿರು - ಒಳ್ಳೆಯದು; ಹಳದಿ - ಎಚ್ಚರ; ಕೆಂಪು - ಬಹುಶಃ ಅದು ನಿಮಗೆ ಹಾನಿ ಮಾಡಬಹುದು.

ಹಾಗಾಗಿ, ಅವರು ಕೆಲವು ಶಾಸನಗಳನ್ನು ನಿರ್ಧರಿಸಲು ಸಹಾಯ ಮಾಡಲು ಮೆಕ್ಸಿಕೋಗೆ ಹೋದರು . ಉದಾಹರಣೆಗೆ ಸೋಡಾ ಮತ್ತು ಸಕ್ಕರೆ ಪಾವತಿ, ಅಪೌಷ್ಠಿಕ ಆಹಾರದ ಪಾವತಿ ಮತ್ತು ಆಹಾರದ ಗುರುತು ಪಟ್ಟಿ ಮಾಡುವುದರಲ್ಲಿ, ಹಾಗಾಗಿ ನೀವು ಆ ಆಹಾರ ನಿಮಗೆ ನಿಜವಾಗಿಯೂ ಒಳ್ಳೆಯದೋ ಅಲ್ಲವೋ ಎಂದು ತಿಳಿಯುತ್ತದೆ. ಹಸಿರು- ಒಳ್ಳೆಯದು; ಹಳದಿ - ಎಚ್ಚರ; ಕೆಂಪು - ಬಹುಶಃ ಅದು ನಿಮಗೆ ಹಾನಿ ಮಾಡುತ್ತದೆಯೇನೋ. ಅವರು ಶಾಲೆಗಳಲ್ಲಿ ಮಕ್ಕಳಿಗೆ ಹಾನಿಕರ ಆಹಾರಗಳನ್ನು ತೆಗೆದುಹಾಕುವ ಗುರಿ ಇಟ್ಟಿದ್ದಾರೆ ಮತ್ತು ನಿಜವಲ್ಲದ ಆಹಾರವನ್ನು ಮಾರುಕಟ್ಟೆಯಿಂದ ಕೊನೆಯಾಗಿಸಲು ನೋಡುತ್ತಿದ್ದಾರೆ.

ಈ ಶಾಸನಗಳು ಪ್ರಪಂಚಾದ್ಯಂತ ಕೆಲಸ ಮಾಡಬಹುದು - ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಯಲ್ಲಿ. ಆದರೆ ಆಹಾರದ ಉದ್ಯಮಿಗಳ ಪ್ರಭಾವದಿಂದ ಇಂತಹ ಬದಲಾವಣೆಗಳಿಗೆ ಅಲರ್ಜಿಯಿದೆ ಈ ರಾಷ್ಟ್ರದಲ್ಲಿ,. ಆದರೂ ನಾವು ಪ್ರತಿಯೊಬ್ಬರೂ ಇದಕ್ಕೆ ವಕಾಲತ್ತು ಮಾಡಿ ನಮ್ಮ ಪರಿವರಾದಲ್ಲಿ, ನಮ್ಮ ಸಮುದಾಯದಲ್ಲಿ, ನಮ್ಮ ಸ್ನೇಹಿತರಲ್ಲಿ, ಬದಲಾವಣೆಗಳು ಮಾಡಿದರೆ ನಾವು ಪ್ರಪಂಚದಲ್ಲಿ ಒಂದು ದೊಡ್ಡ ಮಾರ್ಪಾಡನ್ನು ನೋಡಬಹುದು.

ಸದ್ಗುರು: ಇದು ರಾಜಕೀಯ ನಾಯಕರ ಕೈಯಲ್ಲಿ ಅಥವಾ ಶಾಸನಗಳನ್ನು ಮಾಡುವ ನಿರೂಪಕರ ಕೈಯಲ್ಲಿ ಮಾತ್ರವೇ ಇಲ್ಲಾ. ನಾವು ಯಾವುದನ್ನು ತಿನ್ನುತ್ತಿದ್ದೇವೆ ಮತ್ತು ಹೇಗೆ ತಿನ್ನುತ್ತಿದ್ದೇವೆ - ಅದರಲ್ಲಿ ಬದಲಾವಣೆಗಳನ್ನು ಮಾಡಿದರೆ, ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುತ್ತದೆಯೆಂದು ಎಲ್ಲರಿಗೂ ತಿಳಿದುಬಂದರೆ, ನಾವು ರಾಜಕೀಯ ನಾಯಕರನ್ನೂ ಬದಲಾಯಿಸಬಹುದು.

ಮಾರ್ಕ್ ಹೈಮಾನ್: ಖಂಡಿತವಾಗಿ. ನಾವು ನಮ್ಮ ಆಹಾರ ಸೇವನೆಯ ಪದ್ದತಿಯನ್ನು ಬದಲಾಯಿಸಬೇಕು. ಏಕೆಂದರೆ ಆರೋಗ್ಯವಾಗಿ ಇರುವುದಕ್ಕೆ ಆರೋಗ್ಯ ರಕ್ಷಣೆ ಮಾತ್ರವಲ್ಲ - ಅದು ನಿಜವಾಗಿಯೂ ನಮ್ಮ ಆಹಾರದ ವ್ಯವಸ್ಥೆ. ಈ ಎರಡನ್ನೂ ಒಟ್ಟಿಗೆ ಸಂಬೋಧಿಸಿದರೆ, ಅದು ಎಚೆತ್ತಿರುವ ರಾಷ್ಟ್ರವನ್ನು ಸೃಷ್ಟಿಸಿದ ಹಾಗೆ ಮತ್ತು ಆಹಾರದ ವ್ಯವಸ್ಥೆಯ ಬದಲಾವಣೆಗಳೇ ಇದಕ್ಕೆ ಉತ್ತರ.

ಅನಾರೋಗ್ಯಕರ ಆಹಾರವನ್ನು ನಿರುತ್ಸಾಹಗೊಳಿಸಲು ಮತ್ತು ಬೊಜ್ಜಿನ ಆರ್ಥಿಕ ವೆಚ್ಚವನ್ನು ಸರಿದೂಗಿಸಲು ತಂಪು ಪಾನೀಯಗಳ ಮೇಲಿನ ತೆರಿಗೆ

Food Body

ಸಂಪಾದಕರ ಟಿಪ್ಪಣಿ: ’ಇನ್ನರ್ ಇಂಜಿನಿಯರಿಂಗ್ ಆನ್ ಲೈನ್’ ಅನ್ನು ಸವಾಲಿನ ಸಮಯಕ್ಕಾಗಿ ಸದ್ಗುರುಗಳು 50%ಗೆ ಅರ್ಪಿಸಲಾಗುತ್ತಿದೆ. ಸದ್ಗುರುಗಳು ರೂಪಿಸಿದ 7 ಶಕ್ತಿಶಾಲಿ ಸೆಷನ್ ಗಳು. ನೋಂದಾಯಿಸಿ: kannada.sadhguru.org/ieo

 

A version of this article was originally published in Isha Forest Flower July 2015. Download as PDF on a “name your price, no minimum” basis or subscribe to the print version.