
ಸದ್ಗುರುಗಳೊಂದಿಗೆ ವೈಯಕ್ತಿಕವಾಗಿ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಲು ಒಂದು ಅಪೂರ್ವ ಅವಕಾಶ.
15 ಜನವರಿ 2023, ಬೆಳಗ್ಗೆ 8 ರಿಂದ 10:30
ಸದ್ಗುರು ಸನ್ನಿಧಿ, ಬೆಂಗಳೂರು
Registrations closed
“ಯೋಗೇಶ್ವರ ಲಿಂಗವನ್ನು ಸಂಪೂರ್ಣ ತೀವ್ರತೆ, ತಲ್ಲೀನತೆ ಮತ್ತು ಒಳಗೊಳ್ಳುವಿಕೆಯನ್ನು ತರಲು ವಿನ್ಯಾಸಗೊಳಿಸಲಾಗಿದ್ದು, ಅದು ನಮ್ಮನ್ನು ಪಾರಮಾರ್ಥಿಕತೆಯತ್ತ ನಡೆಸುತ್ತದೆ.”
—ಸದ್ಗುರು
ಯೋಗೇಶ್ವರ ಲಿಂಗ
ಯೋಗೇಶ್ವರ ಲಿಂಗವನ್ನು 112 ಅಡಿಗಳ ಆದಿಯೋಗಿಯ ಸನ್ನಿಧಿಯಲ್ಲಿ, ಮಾನವ ವ್ಯವಸ್ಥೆಯಲ್ಲಿನ ಐದು ಪ್ರಮುಖ ಚಕ್ರಗಳ ಅಭಿವ್ಯಕ್ತಿಯಾಗಿ ಸದ್ಗುರುಗಳಿಂದ ಪ್ರತಿಷ್ಠಾಪಿಸಲ್ಪಡುತ್ತದೆ. ಯೋಗೇಶ್ವರ ಲಿಂಗದ ಉಪಸ್ಥಿತಿಯೊಂದಿಗೆ, ಆದಿಯೋಗಿಯ ಉಪಸ್ಥಿತಿಯೂ ಜೀವಂತವಾಗುತ್ತದೆ.
ಅಧ್ಯಾತ್ಮದ ಶಿಸ್ತು ಮತ್ತು ಉತ್ಕಟ ಭಾವಪರವಶತೆಯ ಸಂಯೋಜನೆಯು, ಒಬ್ಬರ ಸಾಧನಕ್ಕೆ ಆಸರೆಯಾಗಲು ಮತ್ತು ಇಂದ್ರಿಯಗಳನ್ನು ಮೀರಿದ ಆಯಾಮಗಳನ್ನು ಅನುಭವದಿಂದ ಅನ್ವೇಷಿಸಲು ಈ ಲಿಂಗವನ್ನು ಪ್ರತಿಷ್ಠಾಪಿಸಲಾಗುತ್ತದೆ.
ಯೋಗೇಶ್ವರ ಲಿಂಗ ಪ್ರತಿಷ್ಠಾಪನೆಯಲ್ಲಿ ಏಕೆ ಪಾಲ್ಗೊಳ್ಳಬೇಕು?
ಸದ್ಗುರುಗಳ ಉಪಸ್ಥಿತಿಯಲ್ಲಿ ಪ್ರಾಣಪ್ರತಿಷ್ಠೆಯ ಅತೀಂದ್ರಿಯ ಆಯಾಮಗಳನ್ನು ಅನುಭವಿಸಿ.
ಒಂದು ದೈವದ ಸೃಷ್ಟಿಯಲ್ಲಿ ಪಾಲ್ಗೊಳ್ಳಿ.
ಮುಂಬರುವ ಪೀಳಿಗೆಗೆ ತೇಜಸ್ವಿಯುತ ಆಧ್ಯಾತ್ಮಿಕ ಸಾಧ್ಯತೆಯನ್ನು ಸೃಷ್ಟಿಸಲು ಕೊಡುಗೆ ನೀಡಿ.
ಕಾರ್ಯಕ್ರಮದ ವಿವರಗಳು
ಸದ್ಗುರುಗಳಿಂದ ಯೋಗೇಶ್ವರ ಲಿಂಗ ಪ್ರಾಣಪ್ರತಿಷ್ಠೆಯು 15 ಜನವರಿ 2023 ರಂದು ಸದ್ಗುರು ಸನ್ನಿಧಿ, ಬೆಂಗಳೂರಿನಲ್ಲಿ ನಡೆಯಲಿದೆ.
ನಿಕಟ ಶಿಷ್ಯರೊಂದಿಗೆ ಮಾತ್ರ ಹಂಚಿಕೊಳ್ಳಲಾಗುತ್ತಿದ್ದ ಪ್ರತಿಷ್ಠಾಪನೆಯ ಪ್ರಕ್ರಿಯೆಯಲ್ಲಿ, ವೈಯಕ್ತಿಕವಾಗಿ ಭಾಗವಹಿಸುವ ಒಂದು ಅಪರೂಪವಾದ ಅವಕಾಶ.
ಯಾರು ಹಾಜರಾಗಬಹುದು?
12 ವರ್ಷ ಮೇಲ್ಪಟ್ಟ ಯಾರಾದರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
ಈಶ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಕಡ್ಡಾಯವಲ್ಲ.
ಆಸನ ವರ್ಗಗಳು
All participants registered for the Yogeshwar Linga Consecration will receive a complimentary seating pass for the Adiyogi Unveiling in the same category.
ಹಿಂದಿನ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಂಡವರ ಅನುಭವ
ಪ್ರಾಣಶಕ್ತಿಯ ಪ್ರಬಲ ಅನುಭವವಾಯಿತು, ನಾನು ಅದನ್ನು ಪ್ರತಿಯೊಂದು ಸ್ಥಳದಲ್ಲಿಯೂ ಅನುಭವಿಸುತ್ತಿದ್ದೇನೆ. ಇದು ಅದ್ಬುತವಾಗಿದೆ. ಈ ಮಂಗಳಕರ ದಿನದಂದು ಇಲ್ಲಿಗೆ ಬಂದಿರುವುದು ನಿಜವಾಗಿಯೂ ಕನಸೊಂದು ನನಸಾದಂತೆ.
ಇದು ನಾನು ಪಾಲ್ಗೊಂಡ ಮೊದಲ ಪ್ರತಿಷ್ಠಾಪನೆ ಮತ್ತು ನಾನು ಅತ್ಯಂತ ಉತ್ಸಾಹಭರಿತಳಾಗಿದ್ದೆ ಆದರೆ ನಾನು ಈಗ ಸಂಪೂರ್ಣ ಕೃತಜ್ಞತಾ ಭಾವವನ್ನು ಹೊಂದಿದ್ದೇನೆ.
ಇದು ನಾನು ಪಾಲ್ಗೊಂಡ ಮೊದಲ ಪ್ರತಿಷ್ಠಾಪನೆ ಮತ್ತು ನಾನು ಅತ್ಯಂತ ಉತ್ಸಾಹಭರಿತಳಾಗಿದ್ದೆ ಆದರೆ ನಾನು ಈಗ ಸಂಪೂರ್ಣ ಕೃತಜ್ಞತಾ ಭಾವವನ್ನು ಹೊಂದಿದ್ದೇನೆ.
ಪ್ರಾಣಶಕ್ತಿಯ ಪ್ರಬಲ ಅನುಭವವಾಯಿತು, ನಾನು ಅದನ್ನು ಪ್ರತಿಯೊಂದು ಸ್ಥಳದಲ್ಲಿಯೂ ಅನುಭವಿಸುತ್ತಿದ್ದೇನೆ. ಇದು ಅದ್ಬುತವಾಗಿದೆ. ಈ ಮಂಗಳಕರ ದಿನದಂದು ಇಲ್ಲಿಗೆ ಬಂದಿರುವುದು ನಿಜವಾಗಿಯೂ ಕನಸೊಂದು ನನಸಾದಂತೆ.
ಇದು ನಾನು ಪಾಲ್ಗೊಂಡ ಮೊದಲ ಪ್ರತಿಷ್ಠಾಪನೆ ಮತ್ತು ನಾನು ಅತ್ಯಂತ ಉತ್ಸಾಹಭರಿತಳಾಗಿದ್ದೆ ಆದರೆ ನಾನು ಈಗ ಸಂಪೂರ್ಣ ಕೃತಜ್ಞತಾ ಭಾವವನ್ನು ಹೊಂದಿದ್ದೇನೆ.
ಇದು ನಾನು ಪಾಲ್ಗೊಂಡ ಮೊದಲ ಪ್ರತಿಷ್ಠಾಪನೆ ಮತ್ತು ನಾನು ಅತ್ಯಂತ ಉತ್ಸಾಹಭರಿತಳಾಗಿದ್ದೆ ಆದರೆ ನಾನು ಈಗ ಸಂಪೂರ್ಣ ಕೃತಜ್ಞತಾ ಭಾವವನ್ನು ಹೊಂದಿದ್ದೇನೆ.
ಪ್ರಾಣಶಕ್ತಿಯ ಪ್ರಬಲ ಅನುಭವವಾಯಿತು, ನಾನು ಅದನ್ನು ಪ್ರತಿಯೊಂದು ಸ್ಥಳದಲ್ಲಿಯೂ ಅನುಭವಿಸುತ್ತಿದ್ದೇನೆ. ಇದು ಅದ್ಬುತವಾಗಿದೆ. ಈ ಮಂಗಳಕರ ದಿನದಂದು ಇಲ್ಲಿಗೆ ಬಂದಿರುವುದು ನಿಜವಾಗಿಯೂ ಕನಸೊಂದು ನನಸಾದಂತೆ.
ಕೇಂದ್ರವನ್ನು ಹೇಗೆ ತಲುಪುವುದು
ಕೇಂದ್ರವು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 45 ಕಿಮೀ (60-ನಿಮಿಷದ ಡ್ರೈವ್) ಮತ್ತು ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದಿಂದ 63 ಕಿಮೀ (80-ನಿಮಿಷದ ಡ್ರೈವ್) ದೂರದಲ್ಲಿದೆ.
ಬೆಂಗಳೂರು ನಗರದಿಂದ ಚಿಕ್ಕಬಳ್ಳಾಪುರ ಪಟ್ಟಣಕ್ಕೆ ನಿಯಮಿತ ಬಸ್ ಮತ್ತು ಟ್ಯಾಕ್ಸಿ ಸೇವೆಗಳು ಲಭ್ಯವಿವೆ, ಇದು ಸದ್ಗುರು ಸನ್ನಿಧಿ, ಬೆಂಗಳೂರಿಗೆ ಹತ್ತಿರದ ಪಟ್ಟಣವಾಗಿದೆ.
ಶುಲ್ಕಸಹಿತ ಸಾರಿಗೆಯ ಆಯ್ಕೆಗಳು ಲಭ್ಯವಿರುತ್ತವೆ. ವಿವರಗಳನ್ನು ಶೀಘ್ರದಲ್ಲೇ ಒದಗಿಸಲಾಗುವುದು.
ವಸತಿ ಸೌಕರ್ಯ
ಸದ್ಗುರು ಸನ್ನಿಧಿ, ಬೆಂಗಳೂರು ಇನ್ನೂ ನಿರ್ಮಾಣ ಹಂತದಲ್ಲಿರುವುದರಿಂದ ವಸತಿ ಸೌಕರ್ಯವು ಲಭ್ಯವಿಲ್ಲ, ಭಾಗವಹಿಸುವವರು ತಮ್ಮದೇ ಆದ ವ್ಯವಸ್ಥೆಯನ್ನು ಮಾಡಲು ವಿನಂತಿಸಲಾಗಿದೆ.
ಯೋಗ ಕೇಂದ್ರದ ಸುತ್ತಮುತ್ತಲಿನಲ್ಲಿ ವಸತಿ ಸೌಕರ್ಯದ ಲಭ್ಯತೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ಒದಗಿಸಲಾಗುವುದು.
ಕಾರ್ಯಕ್ರಮದ ಶುಲ್ಕವು ವಸತಿ ಸೌಕರ್ಯವನ್ನು ಒಳಗೊಂಡಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.
ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು
ಯಾವುದೇ ಷರತ್ತುಗಳು ಅಥವಾ ವಯಸ್ಸಿನ ಮಿತಿಗಳಿಲ್ಲ. ಈ ಕಾರ್ಯಕ್ರಮದ ಭಾಗವಾಗಲು ಎಲ್ಲರಿಗೂ ಸ್ವಾಗತ. ಉಚಿತ ಮತ್ತು ಪಾವತಿಸಿದ ಆಸನಗಳು ಲಭ್ಯವಿದೆ.
ಹೌದು, ಭಾರತದ ಹೊರಗಿನವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ನೋಂದಾಯಿಸುವಾಗ ನಿಮ್ಮ ಪಾಸ್ಪೋರ್ಟ್ ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ. ನೋಂದಾವಣೆ ಖಚಿತಪಡಿಸಿ ಮತ್ತು ಈ-ರಶೀದಿಯನ್ನು ಸ್ವೀಕರಿಸಿದ ನಂತರವೇ ಪ್ರಯಾಣದ ಟಿಕೆಟ್ಗಳನ್ನು ಖರೀದಿಸಿ.
ದಯವಿಟ್ಟು info.iycbangalore@ishafoundation.org ಗೆ ಸಂಪರ್ಕಿಸಿ. ಈ-ಮೇಲ್ ಮೂಲಕ ನಿಮ್ಮನ್ನು ಸಂಪರ್ಕಿಸಲು ದಯವಿಟ್ಟು ನಮಗೆ ಕನಿಷ್ಠ 24 ಗಂಟೆಗಳ ಕಾಲಾವಕಾಶ ನೀಡಿ. ಪರ್ಯಾಯವಾಗಿ, ನೀವು ನಮ್ಮ ಬೆಂಬಲ ಸಹಾಯವಾಣಿಯಾದ 83000 53111 ಗೆ ಕರೆ ಮಾಡಬಹುದು.
ಆಗಬಗುದು, ಗರ್ಭಿಣಿಯರು ಮತ್ತು ಋತುಚಕ್ರದಲ್ಲಿರುವವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ದಯವಿಟ್ಟು ನೀವು ಸಾಕಷ್ಟು ವೈದ್ಯಕೀಯ ಆರೈಕೆಯನ್ನು ಪಡೆದುಕೊಳ್ಳಿ ಮತ್ತು ನೀವು ಯಾವುದೇ ವಿಶೇಷ ಆರೋಗ್ಯ ಸ್ಥಿತಿಯನ್ನು ಹೊಂದಿದ್ದರೆ ನಿಮ್ಮ ಹತ್ತಿರದ ಸ್ವಯಂಸೇವಕರಿಗೆ ತಿಳಿಸಿ.
ಯೋಗೇಶ್ವರ ಲಿಂಗ ಪ್ರತಿಷ್ಠಾಪನೆಯಲ್ಲಿ ಪ್ರತಿಯೊಬ್ಬರಿಗೂ ಭಾಗವಹಿಸಲು ಅವಕಾಶವನ್ನು ಒದಗಿಸಲು, ಸದ್ಗುರುಗಳು ಬೆಂಗಳೂರಿನ ಈಶ ಯೋಗ ಕೇಂದ್ರದಲ್ಲಿ ನಿರ್ದಿಷ್ಟ ಸಮಯದವರೆಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳುವ ಮೂಲಕ ಪ್ರತಿಷ್ಠಾಪನೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಹೊಸ ಸಾಧ್ಯತೆಯನ್ನು ತೆರೆದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ: https://online.sadhguru.org/shramdaan
ನೀವು ಇನ್ನೂ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ದಯವಿಟ್ಟು ಸಮಸ್ಯೆಯ ಸ್ಕ್ರೀನ್ಶಾಟ್ ತೆಗೆದುಕೊಳ್ಳಿ, URL ಗೋಚರಿಸುತ್ತದೆ ಎಂದು ಖಚಿತಪಡಿಸಿಕೊಳ್ಳಿ ಮತ್ತು ವಿಷಯದ ಸಾಲನ್ನು ಬಳಸಿಕೊಂಡು ಅದನ್ನು ನಮ್ಮೊಂದಿಗೆ info.iycbangalore@ishafoundation.org ನಲ್ಲಿ ಹಂಚಿಕೊಳ್ಳಿ: YLC - ಪಾವತಿ ಸಂಬಂಧಿತ ಪ್ರಶ್ನೆ.
ಇಲ್ಲ. ಭಾಗವಹಿಸುವವರು ಸ್ಥಳದಲ್ಲಿ ಖುದ್ದಾಗಿ ಹಾಜರಿರುವುದು ಅಗತ್ಯ.
ಕಾರ್ಯಕ್ರಮವನ್ನು ಇಂಗ್ಲಿಷ್ನಲ್ಲಿ ನಡೆಸಲಾಗುವುದು ಮತ್ತು ಕನ್ನಡ, ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ನೇರ ಅನುವಾದ ಲಭ್ಯವಿರುತ್ತದೆ. ನೀವು ಕಾರ್ಯಕ್ರಮಕ್ಕೆ ಖುದ್ದಾಗಿ ಹಾಜರಾಗುತ್ತಿದ್ದರೆ ಮತ್ತು ನೇರ ಅನುವಾದದ ಅಗತ್ಯವಿದ್ದರೆ, ದಯವಿಟ್ಟು FM ರೇಡಿಯೊ ಮತ್ತು ವಯರ್ ಹೆಡ್ಸೆಟ್ ಹೊಂದಿರುವ ಮೊಬೈಲ್ ಫೋನ್ ಅನ್ನು ತನ್ನಿ.
ದಯವಿಟ್ಟು ನಿಗದಿತ ಸಮಯಕ್ಕಿಂತ ಕನಿಷ್ಠ 4 ಗಂಟೆಗಳ ಮುಂಚಿತವಾಗಿ ಸ್ಥಳಕ್ಕೆ ಆಗಮಿಸಲು ಯೋಜಿಸಿ ಇದರಿಂದ ನೀವು ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಚೆಕ್ ಇನ್ ಮಾಡಿ, ಕುಳಿತುಕೊಳ್ಳಬಹುದು. ನೀವು ವಿದೇಶದಿಂದ ಪ್ರಯಾಣಿಸುತ್ತಿದ್ದರೆ, ಕನಿಷ್ಠ ಒಂದು ದಿನ ಮುಂಚಿತವಾಗಿ ಬೆಂಗಳೂರಿಗೆ ಬರಲು ಸೂಚಿಸುತ್ತೇವೆ. ಚೆಕ್-ಇನ್ ಸಮಯವನ್ನು ಶೀಘ್ರದಲ್ಲೇ ಇಮೇಲ್ ಮೂಲಕ ತಿಳಿಸಲಾಗುತ್ತದೆ.
ಡ್ರೆಸ್ ಕೋಡ್ ಅವಶ್ಯಕತೆಗಳನ್ನು ಶೀಘ್ರದಲ್ಲೇ ಘೋಷಿಸಲಾಗುತ್ತದೆ.
ಹೌದು, ಕುರ್ಚಿಗಳನ್ನು ನೀಡಲಾಗುವುದು. ನಿಮ್ಮ ಆಸನ ಜಾಗದಲ್ಲಿ ತಲುಪಿದಾಗ, ದಯವಿಟ್ಟು ಸ್ವಯಂಸೇವಕರಲ್ಲಿ ಕುರ್ಚಿಯನ್ನು ವಿನಂತಿಸಿ.
12 ವರ್ಷ ಮೇಲ್ಪಟ್ಟ ಯಾರಾದರೂ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಕಾರ್ಯಕ್ರಮದ ಸಮಯದಲ್ಲಿ ಮಕ್ಕಳ ಪ್ರತ್ಯೇಕ ಆರೈಕೆ ಲಭ್ಯವಿರುವುದಿಲ್ಲ. ಆದ್ದರಿಂದ, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕರೆತರದಂತೆ ನಾವು ನಿಮಗೆ ಸಲಹೆ ನೀಡುತ್ತೇವೆ.
ಹೌದು, ಪುರುಷರು ಮತ್ತು ಮಹಿಳೆಯರು ಪ್ರತ್ಯೇಕವಾಗಿ ಕುಳಿತುಕೊಳ್ಳುತ್ತಾರೆ.
ಒಂದೇ ಲಾಗಿನ್ ಅನ್ನು ಬಳಸಿಕೊಂಡು ನೀವು ಅನೇಕರನ್ನು ನೋಂದಾಯಿಸಿಕೊಳ್ಳಬಹುದು.
ಸದ್ಗುರು ಸನ್ನಿಧಿ,ಬೆಂಗಳೂರಿನಲ್ಲಿ ರಾತ್ರಿಯ ವಸತಿ ಸೌಕರ್ಯವು ಪ್ರಸ್ತುತ ಲಭ್ಯವಿಲ್ಲ. ಭಾಗವಹಿಸುವವರು ತಮ್ಮದೇ ಆದ ವ್ಯವಸ್ಥೆಗಳನ್ನು ಮಾಡಲು ವಿನಂತಿಸುತ್ತೇವೆ.
ಯೋಗ ಕೇಂದ್ರದ ಸುತ್ತಮುತ್ತಲಿನ ವಸತಿಗೆ ಸಂಬಂಧಿಸಿದ ಮಾಹಿತಿಯನ್ನು ಶೀಘ್ರದಲ್ಲೇ ಲಭ್ಯಗೊಳಿಸಲಾಗುವುದು.
ಶೇಖರಣೆಗಾಗಿ ಸ್ಥಳಾವಕಾಶವಿಲ್ಲದ ಕಾರಣ ಸಾಧ್ಯವಾದಷ್ಟು ಕಡಿಮೆ ಸಾಮಾನುಗಳೊಂದಿಗೆ ಬರುವುದು ಉತ್ತಮ. ಕಾರ್ಯಕ್ರಮಕ್ಕೆ ಆಹಾರವನ್ನು ತರಲು ಅನುಮತಿ ಇಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ನಿಗದಿಪಡಿಸಿದ ಸ್ಥಳದಲ್ಲಿ ನೀರು ಮತ್ತು ಆಹಾರ ಲಭ್ಯವಿರುತ್ತದೆ.
ಪಾವತಿಸಿದ ಸಾರಿಗೆ ವ್ಯವಸ್ಥೆ ಲಭ್ಯವಿರುತ್ತದೆ. ವಿವರಗಳನ್ನು ಶೀಘ್ರದಲ್ಲೇ ಒದಗಿಸಲಾಗುವುದು.
ಬೆಂಗಳೂರು ಭಾರತದ ಪ್ರಮುಖ ಐಟಿ ಕೇಂದ್ರವಾಗಿದೆ ಮತ್ತು ಇದು ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ವಿಮಾನಯಾನ ಸಂಸ್ಥೆಗಳು ಭಾರತ ಮತ್ತು ಸಾಗರೋತ್ತರ ಎಲ್ಲಾ ಪ್ರಮುಖ ನಗರಗಳಿಂದ ಬೆಂಗಳೂರಿಗೆ ನಿಯಮಿತ ವಿಮಾನಗಳನ್ನು ನಿರ್ವಹಿಸುತ್ತವೆ. ಭಾರತದ ಎಲ್ಲಾ ಪ್ರಮುಖ ನಗರಗಳಿಂದ ರೈಲು ಸೇವೆಗಳು ಲಭ್ಯವಿದೆ. ಬೆಂಗಳೂರು ನಗರದಿಂದ ಸದ್ಗುರು ಸನ್ನಿಧಿ,ಬೆಂಗಳೂರಿಗೆ ಹತ್ತಿರದ ಪಟ್ಟಣವಾದ ಚಿಕ್ಕಬಳ್ಳಾಪುರಕ್ಕೆ ನಿಯಮಿತ ಬಸ್ ಮತ್ತು ಟ್ಯಾಕ್ಸಿ ಸೇವೆಗಳು ಲಭ್ಯವಿವೆ.
ಚಿಕ್ಕಬಳ್ಳಾಪುರ ಪಟ್ಟಣದಿಂದ ಸದ್ಗುರು ಸನ್ನಿಧಿ,ಬೆಂಗಳೂರಿಗೆ ನಿತ್ಯ ಬಸ್ ಸಂಚಾರ ಆರಂಭವಾಗಿದೆ.
ಚಾಲನೆ ನಿರ್ದೇಶನಗಳಿಗಾಗಿ, Google ನಕ್ಷೆಗಳನ್ನು ಬಳಸಬೇಡಿ. ಬದಲಿಗೆ ಈ ಪಿನ್ ಮಾಡಲಾದ ನಕ್ಷೆಯನ್ನು ಬಳಸಿ: https://isha.co/IYCB-directions
ನಕ್ಷೆಯಲ್ಲಿ ಪಿನ್ ಮಾಡಿದ ಸ್ಥಳವಾದ ಈಶ ಜಂಕ್ಷನ್ (ಲಿಂಗಸೆಟ್ಟಿಪುರ ಜಂಕ್ಷನ್) ತಲುಪುವವರೆಗೆ NH44 (ಬೆಂಗಳೂರು-ಹೈದರಾಬಾದ್ ಹೆದ್ದಾರಿ) ನಲ್ಲಿರಿ. ತಿರುವು ತೆಗೆದುಕೊಳ್ಳಿ ಮತ್ತು ಸದ್ಗುರು ಸನ್ನಿಧಿ,ಬೆಂಗಳೂರಿಗೆ (ಜಂಕ್ಷನ್ನಿಂದ 5 ಕಿಮೀ) ಸೂಚನೆಗಳನ್ನು ಅನುಸರಿಸಿ.
ಸ್ಥಳದಲ್ಲಿ ಉಚಿತ ಪಾರ್ಕಿಂಗ್ ಲಭ್ಯವಿರುತ್ತದೆ. ಸ್ಥಳದ ಬಳಿ ತುಂಬಾ ಟ್ರಾಫಿಕ್ ಇರಬಹುದು, ದಯವಿಟ್ಟು ಅದಕ್ಕೆ ಅನುಗುಣವಾಗಿ ಯೋಜಿಸಿ.
ಹೆಚ್ಚಿನ ಪ್ರಶ್ನೆಗಳಿವೆಯೇ?
ದೂರವಾಣಿ ಸಂಖ್ಯೆ : +91 83000 53111
ಈ-ಮೇಲ್ ಐಡಿ : info.iycbangalore@ishafoundation.org