ತಂತ್ರ ಯೋಗದ ಸರಳ ತತ್ವವೆಂದರೆ, ನಿಮ್ಮನ್ನು ಯಾವುದು ಕೆಳಗೆ ತೆಗೆದುಕೊಂಡು ಹೋಗುತ್ತದೆಯೋ ಅದು ನಿಮ್ಮನ್ನು ಮೇಲಕ್ಕೂ ಕೊಂಡೊಯ್ಯಬಲ್ಲುದು, ಎಂದು ಸದ್ಗುರುಗಳು ಹೇಳುತ್ತಾರೆ.

ಸದ್ಗುರು: ದುರಾದೃಷ್ಟವಷಾತ್, ಪಾಶ್ಚಾತ್ಯ ದೇಶಗಳಲ್ಲಿ, ತಂತ್ರವನ್ನು ಅನಿರ್ಬಂಧಿತ ಕಾಮ ಎಂಬರ್ಥದಲ್ಲಿ ನಿರೂಪಿಸಲಾಗುತ್ತಿದೆ. ಅದನ್ನು ಅತ್ಯಂತ ಕೆಟ್ಟದಾಗಿ ಅಪವ್ಯಾಖ್ಯಾನಿಸಲಾಗಿದೆ. ಇದು ಏಕೆಂದರೆ ತಂತ್ರದ ಕುರಿತು ಬರೆಯಲ್ಪಟ್ಟ ಪುಸ್ತಕಗಳು ಕೇವಲ ಪುಸ್ತಕ ಮಾರಾಟ ಮಾಡಿ ಹಣ ಸಂಪಾದಿಸುವವರು ಬರೆದ ಪುಸ್ತಕಗಳಾಗಿವೆ. ಅವರು ಯಾವ ರೀತಿಯಲ್ಲೂ ತಾಂತ್ರಿಕರಲ್ಲ. ’ತಂತ್ರ’ ಎನ್ನುವುದು ಒಂದು ಚಳಕ ಅಥವಾ ತಂತ್ರಜ್ಞಾನ. ಇದೊಂದು ಆಂತರಿಕ ತಂತ್ರಜ್ಞಾನ. ಇವು ವ್ಯಕ್ತಿನಿಷ್ಠ ವಿಧಾನಗಳೇ ಹೊರತು ವಸ್ತುನಿಷ್ಠ ವಿಧಾನಗಳಲ್ಲ

ಸಮಾಜದ ಇಂದಿನ ಪರಿಭಾಷೆಯಲ್ಲಿ, ತಂತ್ರ ಎಂಬ ಪದವು ಅತ್ಯಂತ ಅಸಾಂಪ್ರದಾಯಿಕ ಅಥವಾ ಸಾಮಾಜಿಕವಾಗಿ ಒಪ್ಪಿತವಲ್ಲದ ವಿಧಾನಗಳನ್ನು ಸೂಚಿಸುತ್ತದೆ. ಅದರಲ್ಲಿ ಕೆಲವು ಅಂಶಗಳನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಉಪಯೋಗಿಸಲಾಗುತ್ತದೆ. ಅದು ಯೋಗಕ್ಕಿಂತ ಭಿನ್ನವೇನೂ ಅಲ್ಲ. ಅದು ತಂತ್ರ ಯೋಗ ಎಂದು ಕರೆಯಲ್ಪಡುವ ಯೋಗದ ಒಂದು ಸಣ್ಣ ಅಂಗವಾಗಿದೆ.

ತಂತ್ರ ಒಂದು ನಿರ್ದಿಷ್ಟ ಸಾಮರ್ಥ್ಯವಾಗಿದೆ. ಅದಿಲ್ಲದೇ ಯಾವುದೇ ಸಾಧ್ಯತೆಯಿಲ್ಲ. ನಿಮ್ಮ ತಂತ್ರ ಎಷ್ಟರ ಮಟ್ಟಿಗೆ ಪರಿಷ್ಕೃತ ಎನ್ನುವುದೇ ಪ್ರಶ್ನೆ.

ಜನರು, ನನಗೆ ಲೈಂಗಿಕ ಅವಶ್ಯಕತೆಗಳಿವೆಯಾದ್ದರಿಂದ ನಾನು ತಾಂತ್ರಿಕ ಮಾರ್ಗವನ್ನು ಅನುಸರಿಸುತ್ತೇನೆ ಎಂದು ಯೋಚಿಸುತ್ತಾರೆ, ಇದು ಅಸಂಬದ್ಧ. ತಂತ್ರದಲ್ಲಿ, ಒಬ್ಬರು ಕೇವಲ ಲೈಂಗಿಕತೆಯನ್ನು ಬೆಳವಣಿಗೆಗಾಗಿ ಉಪಯೋಗಿಸುವುದಿಲ್ಲ. ಅವರು ಎಲ್ಲ ಅಂಶಗಳನ್ನೂ ಬೆಳವಣಿಗೆಗಾಗಿ ಉಪಯೋಗಿಸುತ್ತಾರೆ.

ದುರಾದೃಷ್ಟವಷಾತ್, ತಪ್ಪು ಕಾರಣಗಳಿಗಾಗಿ ಅಂತಹ ಮಾರ್ಗದ ಕಡೆ ಆಕರ್ಷಿತರಾದ ಅನೇಕರಿದ್ದಾರೆ. ಅವರಿಗೆ ತಮ್ಮ ಲೈಂಗಿಕತೆಗೆ ಆಧ್ಯಾತ್ಮಿಕ ಅನುಮೋದನೆ ಬೇಕಾಗಿರುವುದರಿಂದ ಅವರು ಆ ಮಾರ್ಗಕ್ಕೆ ಹೋಗುತ್ತಾರೆ. ಆಧ್ಯಾತ್ಮಿಕತೆಯ ಕುರಿತು ನೀವೇಕೆ ಅಸಂಬದ್ಧ ಪರಿಕಲ್ಪನೆಗಳಿಗೆ ಒಳಗಾಗುತ್ತೀರಿ? ನಿಮ್ಮ ದೈಹಿಕತೆಯನ್ನು ದೈಹಿಕತೆಯಾಗಿಯೇ ನಿರ್ವಹಿಸಿರಿ, ನೀವದಕ್ಕೆ ಬೇರೆಬೇರೆ ಹೆಸರುಗಳನ್ನು ಕೊಡಬೇಕಾಗಿಲ್ಲ..

ತಂತ್ರಯೋಗದ ಸರಳ ತತ್ವವೆಂದರೆ: ಯಾವುದು ನಿಮ್ಮನ್ನು ಕೆಳಗೆ ನೂಕುತ್ತದೆಯೋ ಅದೆ ನಿಮ್ಮನ್ನು ಮೇಲಕ್ಕೂ ಕೊಂಡೊಯ್ಯಬಲ್ಲುದು. ಮನುಷ್ಯನು ತನ್ನ ಜೀವನದಲ್ಲಿ ಅದಃಪತನಗೊಳ್ಳುವ ಮಾರ್ಗಗಳೆಂದರೆ, ಅದು ಆಹಾರ, ಮದ್ಯಪಾನ ಮತ್ತು ಲೈಂಗಿಕತೆ. ತಂತ್ರಯೋಗವು ಈ ಮೂರು ಉಪಕರಣಗಳನ್ನು ಉನ್ನತಿಗಾಗಿ ಉಪಯೋಗಿಸುತ್ತದೆ. ಆದರೆ ಜನರು ನಿರ್ದಿಷ್ಟ ವಸ್ತುಗಳನ್ನು ಉಪಯೋಗಿಸಬೇಕಾದರೆ, ಅವರು ಒಂದು ನಿರ್ದಿಷ್ಟ ಸ್ಥಿತಿಯಲ್ಲಿರಬೇಕು, ಇಲ್ಲವಾದರೆ ಅದು ವ್ಯಸನವಾಗಿಬಿಡುತ್ತದೆ. ಇದಕ್ಕೆ ತೀವ್ರತರವಾದ ಶಿಸ್ತು ಬೇಕಾಗುತ್ತದೆ, ಆ ಶಿಸ್ತು ಬಹುತೇಕ ಜನರು ಪ್ರಯತ್ನಿಸಲೂ ಸಾಧ್ಯವಾಗುವುದಿಲ್ಲ. ಜನರು ಈ ಮಾರ್ಗದಲ್ಲಿ ಸಾಗಿದಾಗ, ಒಂದು ನೂರು ಜನ ಈ ಮಾರ್ಗವನ್ನು ಹಿಡಿದರೆ, ಅವರಲ್ಲಿ 99 ಜನ ಕುಡುಕರಾಗಿಬಿಟ್ಟಿರುತ್ತಾರೆ.

ಹೇಗಾದರೂ, ಇದನ್ನು ಎಡಗೈ-ತಂತ್ರ ಅಥವಾ ವಾಮಾಚಾರ ಅಂದರೆ ಒರಟು ತಂತ್ರಜ್ಞಾನ ಎಂದು ಕರೆಯಲಾಗುತ್ತದೆ; ಅದು ಅನೇಕ ವಿಧವಾದ ಪೂಜೆಗಳನ್ನು ಒಳಗೊಂಡಿರುತ್ತದೆ. ಇನ್ನೊಂದು ರೀತಿಯದ್ದು ಬಲಗೈ ತಂತ್ರ ಅಥವಾ ದಕ್ಷಿಣಾಚಾರ ಎಂದರೆ ಅತ್ಯಂತ ಪರಿಷ್ಕೃತ ತಂತ್ರಜ್ಞಾನ. ಇವೆರಡೂ ಸಂಪೂರ್ಣವಾಗಿ ವಿಭಿನ್ನ ಸ್ವರೂಪದ್ದಾಗಿವೆ.

ಬಲಗೈ ತಂತ್ರ ಅಥವಾ ದಕ್ಷಿಣಾಚಾರ

ಬಲಗೈ ತಂತ್ರ ಅಥವಾ ದಕ್ಷಿಣಾಚಾರವು ಹೆಚ್ಚು ಆಂತರಿಕ ಮತ್ತು ಶಕ್ತಿಯ ಕುರಿತಾಗಿದ್ದು, ಅದು ನಿಮ್ಮ ಬಗ್ಗೆಯಾಗಿದೆ. ಅದು ಯಾವುದೇ ಪೂಜೆ ಅಥವಾ ಬಾಹ್ಯ ಕ್ರಿಯೆಯನ್ನು ಒಳಗೊಂಡಿರುವುದಿಲ್ಲ. ಅದು ತಂತ್ರವೇ? ಒಂದು ರೀತಿಯಲ್ಲಿ ಹೌದು, ಆದರೆ ಯೋಗ ಎನ್ನುವ ಪದ ಅವೆಲ್ಲವನ್ನೂ ಒಟ್ಟಿಗೆ ಒಳಗೊಳ್ಳುತ್ತದೆ. ನಾವು ಯೋಗ ಎಂದಾಗ ನಾವು ಯಾವುದೇ ಸಾಧ್ಯತೆಯನ್ನೂ ಹೊರತುಪಡಿಸುವುದಿಲ್ಲ - ಅದರಲ್ಲಿ ಎಲ್ಲವೂ ಇರುತ್ತದೆ. ಕೇವಲ ಕೆಲವು ದಾರಿತಪ್ಪಿದ ಜನರು ಒಂದು ನಿರ್ದಿಷ್ಟ ರೀತಿಯ ತಂತ್ರವನ್ನು ಕಂಡುಕೊಂಡರು, ಅದು ಶುದ್ಧ ವಾಮಾಚಾರವಾಗಿದ್ದು ಅದರಲ್ಲಿ ಶರೀರವನ್ನು ನಿರ್ದಿಷ್ಟ ರೀತಿಯಲ್ಲಿ ಉಪಯೋಗಿಸಲಾಗುತ್ತದೆ. ಅವರು ಆ ಭಾಗವನ್ನಷ್ಟೇ ತೆಗೆದುಕೊಂಡರು, ಅದನ್ನು ದೊಡ್ಡದು ಮಾಡಿ ವೈಭವೀಕರಿಸಿದರು ಮತ್ತು ಎಲ್ಲಾ ರೀತಿಯ ವಿಕೃತ ಕಾಮದ ಸಂಗತಿಗಳನ್ನು ಸೇರಿಸಿ ಪುಸ್ತಕಗಳನ್ನು ಬರೆದರು ಮತ್ತು ಇದೇ ತಂತ್ರ ಎಂದು ಹೇಳಿದರು. ಅಲ್ಲ, ಅದು ತಂತ್ರವಲ್ಲ.

ಎಡಗೈ-ತಂತ್ರ ಅಥವಾ ವಾಮಾಚಾರ ಅಂದರೆ ಒರಟು ತಂತ್ರಜ್ಞಾನ ಎಂದು ಕರೆಯಲಾಗುತ್ತದೆ; ಅದು ಅನೇಕ ವಿಧವಾದ ಪೂಜೆಗಳನ್ನು ಒಳಗೊಂಡಿರುತ್ತದೆ. ಇನ್ನೊಂದು ರೀತಿಯದ್ದು ಬಲಗೈ ತಂತ್ರ ಅಥವಾ ದಕ್ಷಿಣಾಚಾರ ಎಂದರೆ ಅತ್ಯಂತ ಪರಿಷ್ಕೃತ ತಂತ್ರಜ್ಞಾನ.

ತಂತ್ರವೆಂದರೆ ನೀವು ನಿಮ್ಮ ಶಕ್ತಿಗಳನ್ನು ಬಳಸಿಕೊಂಡು ನಿಮಗೆ ಬೇಕಾದ ಸಂಗತಿಗಳನ್ನು ಸಂಭವಿಸುವಂತೆ ಮಾಡುವುದು. ನೀವು ನಿಮ್ಮ ಮನಸ್ಸನ್ನು ಎಲ್ಲವನ್ನೂ ಕತ್ತರಿಸಿ ನೋಡುವಷ್ಟು ಹರಿತಗೊಳಿಸಲು ಸಾಧ್ಯವಾದರೆ ಇದೂ ಸಹ ಒಂದು ರೀತಿಯ ತಂತ್ರ. ನೀವು ನಿಮ್ಮ ಶಕ್ತಿಗಳನ್ನು ನಿಮ್ಮ ಹೃದಯದ ಮೇಲೆ ಕೆಲಸ ಮಾಡುವಂತೆ ಮಾಡಿ ನೀವು ಅತ್ಯಂತ ಪ್ರೇಮದಿಂದ ತುಂಬಿ ತುಳುಕುವಂತೆ ಮಾಡಿದರೆ, ಅದೂ ಸಹ ಒಂದು ತಂತ್ರ. ನೀವು ನಿಮ್ಮ ಶರೀರವನ್ನು ಅಪಾರವಾಗಿ ಶಕ್ತಿಯುತವಾಗುವಂತೆ ಮಾಡಿ ಅದ್ಭುತವಾದ ಸಾಹಸ ಕಾರ್ಯಗಳನ್ನು ಮಾಡಿದರೆ, ಅದೂ ಒಂದು ತಂತ್ರ. ಅಥವಾ ನೀವು ನಿಮ್ಮ ಶರೀರ, ಮನಸ್ಸು ಅಥವಾ ಭಾವನೆಗಳನ್ನು ಉಪಯೋಗಿಸದೇ ನಿಮ್ಮ ಶಕ್ತಿಗಳು ಸ್ವಯಂ ತಾವೇ ಕೆಲಸಮಾಡುವಂತೆ ಮಾಡಿದರೆ ಅದೂ ಸಹ ಒಂದು ತಂತ್ರವಾಗಿದೆ. ಹಾಗಾಗಿ ತಂತ್ರ ಎನ್ನುವುದು ಏನೋ ಒಂದು ವಿಕೃತ ಅಸಂಬದ್ಧವಲ್ಲ.

ತಂತ್ರ ಒಂದು ನಿರ್ದಿಷ್ಟ ಸಾಮರ್ಥ್ಯವಾಗಿದೆ. ಅದಿಲ್ಲದೇ ಯಾವುದೇ ಸಾಧ್ಯತೆಯಿಲ್ಲ. ನಿಮ್ಮ ತಂತ್ರ ಎಷ್ಟರ ಮಟ್ಟಿಗೆ ಪರಿಷ್ಕೃತ ಎನ್ನುವುದೇ ಪ್ರಶ್ನೆ.

ನೀವು ನಿಮ್ಮ ಶಕ್ತಿಗಳು ಕೆಲಸ ಮಾಡುವಂತೆ ಮಾಡಲು, ನೀವು 10,000 ಪೂಜೆಗಳನ್ನು ಮಾಡಬಹುದು ಅಥವಾ ನೀವಿಲ್ಲಿ ಸುಮ್ಮನೆ ಕುಳಿತು ಅದನ್ನು ಮಾಡಬಹುದು. ಅದೇ ಬಹಳ ದೊಡ್ಡ ವ್ಯತ್ಯಾಸ. ಕೆಳಮಟ್ಟದ ತಂತ್ರಜ್ಞಾನವವೋ ಅಥವಾ ಉನ್ನತ ತಂತ್ರಜ್ಞಾನವೋ ಎನ್ನುವುದು ಪ್ರಶ್ನೆ, ಆದರೆ ತಂತ್ರವಿಲ್ಲದೆ ಆಧ್ಯಾತ್ಮಿಕ ಪ್ರಕ್ರಿಯೆಯಿಲ್ಲ.