ಮಿಥಾಲಿ ರಾಜ್: ನಮಸ್ಕಾರ ಸದ್ಗುರುಜಿ, ನಮ್ಮ ವಿರುದ್ಧವಾಗಿ ಪ್ರತಿದಿನವೂ ಬರುವ ಅಭಿಪ್ರಾಯಗಳನ್ನು ನಿರ್ಲಕ್ಷಿಸುವ ಶಕ್ತಿಯನ್ನು ನಾವು ಎಲ್ಲಿ ಹಾಗೂ ಹೇಗೆ ಪಡೆಯಬಹುದು ಎಂದು ನನಗೆ ತಿಳಿಯಬೇಕಿದೆ.

ಸದ್ಗುರು: ನಮಸ್ಕಾರ ಮಿಥಾಲಿ. ಜನರು ಎಲ್ಲದರ ಬಗೆಗೂ ಅನಿಸಿಕೆಗಳನ್ನು ಹೊಂದಿರುತ್ತಾರೆ - ಆದರೆ, ನಿಮಗೆ ಅಥವಾ ಇನ್ಯಾರಿಗಾದರೂ ಇದು ಏಕೆ ಪ್ರಸ್ತುತವಾಗಿರಬೇಕು? ನಾವು ಮಾಡುತ್ತಿರುವ ಕೆಲಸದ ಬಗ್ಗೆ ನಮಗೇ ಸ್ಪಷ್ಟತೆ ಇಲ್ಲದಿದ್ದಾಗ ಮಾತ್ರ ಅವರ ಅಭಿಪ್ರಾಯಗಳು ನಮಗೆ ಪ್ರಸ್ತುತವಾಗಿರುತ್ತದೆ. ಅವರ ಅಭಿಪ್ರಾಯಗಳ ಜೊತೆ ಕಾದಾಡುವ ಬದಲಾಗಿ, ನಾವು ಏನು ಮಾಡುತ್ತಿದ್ದೇವೆ, ಏತಕ್ಕಾಗಿ ಅದನ್ನು ಮಾಡುತ್ತಿದ್ದೇವೆ ಎಂಬುದರ ಬಗ್ಗೆ ಸ್ಪಷ್ಟತೆಯನ್ನು ಹೊಂದಲು ಪ್ರಯತ್ನಿಸಿದರೆ ಉತ್ತಮ. ಈ ಸ್ಪಷ್ಟತೆಯು ನಮ್ಮಲ್ಲಿ ಉಂಟಾದಾಗ, ಬೇರೆಯವರ ಅಭಿಪ್ರಾಯಗಳು ಗಣ್ಯವಾಗಿರುವುದಿಲ್ಲ. 

ಒಂದು ಕಾಲದಲ್ಲಿ, ನೀವು ಕೇವಲ ಮೂರು ಅಥವಾ ನಾಲ್ಕು ಜನರ ಅಭಿಪ್ರಾಯಗಳನ್ನು ಮಾತ್ರ ಎದುರಿಸಬೇಕಾಗುತ್ತಿತ್ತು. ಇಂದಿನ ದಿನಗಳಲ್ಲಿ, ಐವತ್ತು ಲಕ್ಷ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವ ಕಾರಣ, ನೀವು ಅವರನ್ನೆಲ್ಲಾ ಎದುರಿಸಬೇಕು.

ಜನರು ಯಾವಾಗಲೂ ನಮ್ಮ ಬಗ್ಗೆ ಅಭಿಪ್ರಾಯಗಳನ್ನು ಹೊಂದಿರುತ್ತಾರೆ; ಅದು ಅವರ ಹಕ್ಕು. ಅಕ್ಕ ಮಹಾದೇವಿಯವರು ಹೇಳಿದಂತೆ, "ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ – ಅಲ್ಲಿ ನೀವು ಇರಬಾರದಿತ್ತು. ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯ – ನಿಮಗಿರುವುದಕ್ಕೆ ಅದು ಸರಿಯಾದ ಸ್ಥಳವಲ್ಲ."

ಈಗ ನೀವು ಸಮಾಜದಲ್ಲಿ ಬದುಕುತ್ತಿದ್ದೀರಿ, ಮತ್ತು ಜನರು ಏನು ಹೇಳುತ್ತಾರೆ ಎಂದು ಭಯಪಡುತ್ತಿದ್ದೀರಿ. ಇದು ಸಹಾ ಸಾಮಾಜಿಕ ಜೀವನದ ಒಂದು ಭಾಗ. ಯಾರಾದರೂ ಯಾವಾಗಲೂ ಏನಾದರೂ ಹೇಳುತ್ತಲೇ ಇರುತ್ತಾರೆ. ಆದರೆ ಇಂದು ಸಾಮಾಜಿಕ ಜಾಲತಾಣಗಳ ಕಾರಣದಿಂದ ಇದು ಹೆಚ್ಚಾಗಿದೆಯಷ್ಟೆ. ಆದರೆ ಜನರು ಈ ಹಿಂದೆಯೂ, ಯಾವಾಗಲೂ ಅಭಿಪ್ರಾಯಗಳನ್ನು ಹೊಂದಿರುತ್ತಿದ್ದರು. 

ಅವರ ಅಭಿಪ್ರಾಯಗಳ ಜೊತೆ ಕಾದಾಡುವ ಬದಲಾಗಿ, ನಾವು ಏನು ಮಾಡುತ್ತಿದ್ದೇವೆ, ಏತಕ್ಕಾಗಿ ಅದನ್ನು ಮಾಡುತ್ತಿದ್ದೇವೆ ಎಂಬುದರ ಬಗ್ಗೆ ಸ್ಪಷ್ಟತೆಯನ್ನು ಹೊಂದಲು ಪ್ರಯತ್ನಿಸಿದರೆ ಉತ್ತಮ.

ಒಂದು ಕಾಲದಲ್ಲಿ, ನೀವು ಕೇವಲ ಮೂರು ಅಥವಾ ನಾಲ್ಕು ಜನರ ಅಭಿಪ್ರಾಯಗಳನ್ನು ಮಾತ್ರ ಎದುರಿಸಬೇಕಾಗುತ್ತಿತ್ತು. ಇಂದಿನ ದಿನಗಳಲ್ಲಿ, ಐವತ್ತು ಲಕ್ಷ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವ ಕಾರಣ, ನೀವು ಅವರನ್ನೆಲ್ಲಾ ಎದುರಿಸಬೇಕು. ಅವರುಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ತಪ್ಪೇನಲ್ಲ, ಅವರಿಗೆ ಬೇಕಾಗಿದ್ದನ್ನು ಅವರು ಹೇಳಬಹುದು. ಆದರೆ, ನಾವು ಏನು ಮಾಡುತ್ತಿದ್ದೇವೆ, ಏತಕ್ಕಾಗಿ ಅದನ್ನು ಮಾಡುತ್ತಿದ್ದೇವೆ ಎಂಬುದರ ಬಗ್ಗೆ ಪರಿಪೂರ್ಣ ಸ್ಪಷ್ಟತೆಯನ್ನು ನಮ್ಮ ಜೀವನದಲ್ಲಿ  ತರುವುದು ಅತೀ ಮುಖ್ಯ. ಇದು ನಮಗೆ ಸ್ಪಷ್ಟವಾಗಿದ್ದಲ್ಲಿ, ಅಭಿಪ್ರಾಯಗಳು ಬರುತ್ತಿರುತ್ತವೆ, ಹೋಗುತ್ತಿರುತ್ತವೆ, ಬದಲಾಗುತ್ತವೆ, ನಮಗೇನು?

ಕ್ರಿಕೆಟ್ ಮೈದಾನದಲ್ಲಿ, ನೀವು ದೊಡ್ಡ ಹಿಟ್ಟರ್ ಎಂದು ನಾನು ಕೇಳಲ್ಪಟ್ಟೆ. ಚೆಂಡನ್ನು ಚೆನ್ನಾಗಿ ಹೊಡೆಯುತ್ತಿರಿ, ಅಷ್ಟೆ. ಆಗ ನೋಡಿ, ಎಲ್ಲರ ಅಭಿಪ್ರಾಯಗಳು ಬದಲಾಗುತ್ತವೆ.

ಸಂಪಾದಕರ ಟಿಪ್ಪಣಿ: ನೀವು ಯಾವುದಾದರು ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.

Youth and Truth Banner Image