Karma book banner.

‘ಕರ್ಮ’ ಎಂದರೆ ನಿಮ್ಮ ಜೀವನದ ನಿರ್ಮಾತೃ ನೀವೇ ಎಂದರ್ಥ.
  

ನಿಮ್ಮ ಜೀವನದ ಪ್ರತಿಕ್ಷಣವೂ ನೀವು ಕಾರ್ಯಗಳನ್ನು ಎಸಗುತ್ತಿರುತ್ತೀರಿ - ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ, ಮತ್ತು ಪ್ರಾಣಶಕ್ತಿಯ ಹಂತದಲ್ಲಿ. ಪ್ರತಿ ಕಾರ್ಯವೂ ಒಂದು ಅಚ್ಚೊತ್ತನ್ನು ಬಿಡುತ್ತದೆ. ಅದುವೇ ಕರ್ಮ.

ಭಕ್ತಿಯು ಕರ್ಮವನ್ನು ಧ್ವಂಸ ಮಾಡುತ್ತದೆ, ಮತ್ತು ಮುಕ್ತಿಯನ್ನು ತರುತ್ತದೆ.

ಕರ್ಮ ಎಂದರೆ ಕಾರ್ಯವೂ ಹೌದು, ನೆನಪಿನ ಅಚ್ಚೊತ್ತುಗಳೂ ಹೌದು. ಕಾರ್ಯವಿಲ್ಲದೆ ನೆನಪಿರಲು ಸಾಧ್ಯವಿಲ್ಲ, ಮತ್ತು ನೆನಪಿಲ್ಲದೆ ಕಾರ್ಯವಿರಲು ಸಾಧ್ಯವಿಲ್ಲ.

ಕರ್ಮದ ಹಳೆಯ ಪದರಗಳು ನಿಮಗೆ ಅಂಟುವುದು ನೀವು ಕರ್ಮದ ಗೋಂದಿನ ಹೊಸ ಪದರಗಳನ್ನು ನಿರಂತರವಾಗಿ ಸೇರಿಸುತ್ತಿದ್ದರೆ ಮಾತ್ರ.

ಕರ್ಮ ಇರುವುದು ನಿಮ್ಮ ಕಾರ್ಯದಲ್ಲಲ್ಲ, ಅದಿರುವುದು ನಿಮ್ಮ ಸಂಕಲ್ಪದಲ್ಲಿ. ಕರ್ಮವನ್ನು ಹುಟ್ಟುಹಾಕುವುದು ನೀವು ಏನು ಮಾಡಿದಿರಿ ಎಂಬುದಲ್ಲ, ಬದಲಿಗೆ ಅದನ್ನು ಹೇಗೆ ಮಾಡಿದಿರಿ ಎಂಬುದು.

ಕರ್ಮವು ಕಾರ್ಯಗೈಯುವುದು ಪ್ರವೃತ್ತಿಗಳ ಮೂಲಕ. ಆದರೆ ಒಂದು ಮಟ್ಟದ ಅರಿವು ಮತ್ತು ಏಕಾಗ್ರತೆ ಇದ್ದರೆ, ನೀವದನ್ನು ಬೇರೆ ದಿಕ್ಕಿಗೆ ಹೊರಳಿಸಬಹುದು.

ಬೇರೆಲ್ಲಾ ರೀತಿಯ ಕರ್ಮಗಳಿಗೆ ಹೋಲಿಸಿದರೆ, ತಮ್ಮದೇ ಪ್ರಯೋಜನಕ್ಕೆ ಅಥವಾ ಇನ್ನೊಬ್ಬರಿಗೆ ಹಾನಿ ಮಾಡಲು ವಾಮಶಕ್ತಿಗಳನ್ನು ಬಳಸುವುದು ಅತ್ಯಂತ ಹೀನ ಪರಿಣಾಮಗಳನ್ನು ತರುತ್ತದೆ.

ಕರ್ಮವು ಮತ್ತೆ ಮತ್ತೆ ರೀಪ್ಲೇ ಆಗುವ ಹಳೆಯ ರೆಕಾರ್ಡಿಂಗ್ ಗಳಂತೆ. ಬದುಕು ಬರೀ ಒಂದು ರೀಪ್ಲೇ ಆಗಿ ಉಳಿಯದೆ, ಒಂದು ಪ್ರಬುದ್ಧ ಸಾಧ್ಯತೆ ಮತ್ತು ಅನುಭವವಾಗುವಂತೆ ಮಾಡುವುದೇ ಯೋಗ.

ಪ್ರಜ್ಞಾಪೂರ್ವಕವಾಗಿ ಮಾಡಿದ ಕಾರ್ಯಗಳು ಕರ್ಮವನ್ನು ಹುಟ್ಟುಹಾಕುವುದಿಲ್ಲ. ಅದನ್ನು ಹುಟ್ಟುಹಾಕುವುದು ಪ್ರತಿಕ್ರಿಯೆ.

ನೀವೇನೇ ಭೌತಿಕ ಚಟುವಟಿಕೆಯನ್ನು ಮಾಡಿದರೂ, ನೀವದನ್ನು ತೊಡಗುವಿಕೆ ಮತ್ತು ಸಂತೋಷದಿಂದ ಮಾಡಿದರೆ, ನೀವೊಬ್ಬ ಕರ್ಮಯೋಗಿ.

ಇಲ್ಲಿ ಯಾವುದೂ ಆಕಸ್ಮಿಕವಲ್ಲ. ಸಮಸ್ತ ಭೌತಿಕ ಅಸ್ತಿತ್ವವೇ ಕಾರಣ-ಪರಿಣಾಮಗಳಲ್ಲಿ ನಡೆಯುತ್ತಿದೆ.

ಕರ್ಮ ಎಂದರೆ ನಿಮ್ಮ ಬದುಕನ್ನು ನೀವೇ ಮಾಡಿಕೊಂಡಿದ್ದು ಎಂದರ್ಥ. ಕರ್ಮಸಂಚಯವು ಒಂದು ವರವೂ ಆಗಬಹುದು, ಒಂದು ಹೊರೆಯೂ ಆಗಬಹುದು - ಆ ಆಯ್ಕೆಯು ನಿಮ್ಮದೇ.

ನೀವು ಹಿಂದೆ ಯಾವ ರೀತಿಯ ಕರ್ಮವನ್ನು ಶೇಖರಿಸಿದ್ದರೂ, ಈ ಕ್ಷಣದ ಕರ್ಮವು ಸದಾ ನಿಮ್ಮ ಕೈಯಲ್ಲಿದೆ.

ನೀವೇನೇ ಮಾಡಿದರೂ, ಇಷ್ಟನ್ನು ಗಮನಿಸಿ - ನೀವು ಮಾಡುತ್ತಿರುವುದು ಕೇವಲ ನಿಮ್ಮ ಬಗ್ಗೆಯಾಗಿದೆಯೋ, ಅಥವಾ ಅದು ಎಲ್ಲರ ಒಳಿತಿಗಾಗಿಯೋ. ಇದು ಒಳ್ಳೆ ಮತ್ತು ಕೆಟ್ಟ ಕರ್ಮಗಳ ಕುರಿತಾದ ಎಲ್ಲ ಗೊಂದಲವನ್ನೂ ನಿವಾರಿಸುತ್ತದೆ.

ನಿಮ್ಮ ಗ್ರಹಿಕೆಯು ನೆನಪುಗಳಿಂದ ವಿರೂಪಗೊಂಡಾಗ, ಅದು ಕರ್ಮ. ನಿಮ್ಮ ನೆನಪುಗಳೇ ನಿಮ್ಮ ಪೂರ್ವಗ್ರಹದ ತಳಹದಿ.

ಕರ್ಮವು ನಿಮ್ಮ ಉಳಿವೂ ಹೌದು, ನಿಮ್ಮ ಬಂಧನವೂ ಹೌದು. ಮತ್ತು ನೀವದನ್ನು ಸರಿಯಾಗಿ ನಿಭಾಯಿಸಿದರೆ, ಅದು ನಿಮ್ಮ ಮುಕ್ತಿಯೂ ಆಗಬಲ್ಲದು.

ಕರ್ಮಯೋಗ ಎಂದರೆ ಸೇವೆ ಮಾಡುವುದು ಎಂದಲ್ಲ. ಕರ್ಮಯೋಗ ಎಂದರೆ ಕರ್ಮದಲ್ಲಿ ತೊಡಗಬೇಕೆಂಬ ವಿವಶತೆಯನ್ನು ಮೀರಿ ಹೋಗುವುದು.

ಕರ್ಮ ಎಂದರೆ ಪರಿಪೂರ್ಣ ಜವಾಬ್ದಾರಿ. ನೀವು ನಿಮ್ಮ ವಂಶವಾಹಿಗಳಿಗೂ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೀರಿ.

ನೀವು ನಿಜವಾಗಿಯೂ ಧ್ಯಾನಸ್ಥರಾದರೆ, ನೀವು ಕರ್ಮವನ್ನು ಮೀರಿರುತ್ತೀರಿ.

Karma book banner.