Youth and Truth "ಯೂತ್ ಅ೦ಡ್ ಟ್ರುಥ್" ಅಭಿಯಾನವು ಒಂದು ತಿಂಗಳು ಪೂರ್ತಿ ನಡೆಯಲಿದ್ದು, ಈ ಅವಧಿಯಲ್ಲಿ ಸದ್ಗುರುಗಳು ನಮ್ಮ ಯುಜನರಲ್ಲಿ ಪ್ರಜ್ಞೆ ಮತ್ತು ಸ್ಪಷ್ಟತೆಯನ್ನು ತರವ ಸಲುವಾಗಿ ಭಾರತದ ಹಲವಾರು ಶೈಕ್ಷಣಿಕ ಸಂಸ್ಥೆಗಳಿಗೆ ತೆರಳಲಿದ್ದಾರೆ. ಮುಂದಿನ ಕಾರ್ಯಕ್ರಮವು, ಸೆಪ್ಟಂಬರ್ ಹತ್ತರಂದು, ಚೆನ್ನೈನ, ಸಿಇಜಿ-ಯಲ್ಲಿ ನಡೆಯುತ್ತದೆ. 

ತಾರುಣ್ಯ – ಒಂದು ಅದ್ಭುತ ಅವ್ಯವಸ್ಥೆಯ ಸಮಯ...

ಒಬ್ಬರ ಜೀವಂತಿಕೆಯು, ಅವರಿಗೆ ಜೀವನದ ಮೇಲಿರುವ ಅಚ್ಚರಿಯ ಮೇಲೆ ನೇರವಾಗಿ ಅವಲಂಬಿತವಾಗಿರುತ್ತದೆ. ತಾರುಣ್ಯವು, ಜೀವನದ ಅತ್ಯಂತ ಉತ್ಸಾಹಭರಿತವಾದ ಸಮಯವಾಗಿದ್ದು, ಸಹಜವಾಗಿಯೇ, ಎಲ್ಲದರ ಬಗ್ಗೆ ಉತ್ತರವಿರದ ಲಕ್ಷಾಂತರ ಪ್ರಶ್ನೆಗಳಿಂದಾಗುವ ಅಚ್ಚರಿಯಿಂದ ಕೂಡಿರುತ್ತದೆ. ಗುರಿಗಳು, ಯಶಸ್ಸು ಹಾಗೂ ವೈಫಲ್ಯಗಳು, ಕನಸು ಹಾಗು ಮಹತ್ವಾಕಾಂಕ್ಷೆಗಳು, ಭಾವನಾತ್ಮಕ ಹಾಗೂ ಭೌದ್ಧಿಕ ವಾದಗಳಾಚೆಗೆ, ಇನ್ನೂ ಹಲವಾರು ಪ್ರಶ್ನೆಗಳಿರುತ್ತವೆ – ಕೆಲವೊ೦ದು ಸ್ಪಷ್ಟವಾಗಿ ವ್ಯಕ್ತವಾಗುತ್ತವೆ ಮತ್ತು ಹಲವು ಪ್ರಶ್ನೆಗಳು ವ್ಯಕ್ತವಾಗದೇ ಉಳಿದುಹೋಗುತ್ತವೆ. ಒಂದು ಪ್ರಾಮಾಣಿಕೆ ಪ್ರಶ್ನೆಯು, ಸತ್ಯವನ್ನು ಅರಸಲು ಇರುವ ಒಂದು ಉತ್ತಮ ಸಾಧನ. ಅ೦ತಹ ಪ್ರಶ್ನೆಯು, ಅನಿಶ್ಚಿತತೆಯನ್ನು ನಿಭಾಯಿಸಲು ಪ್ರಪಂಚವು ಕಂಡುಕೊ೦ಡಿರುವ ಸರಳವಾದ ಪರಿಹಾರಗಳಿ೦ದ ತೃಪ್ತಿಯನ್ನು ಹೊಂದುವುದಿಲ್ಲ. ತಾರುಣ್ಯದ ಅಚ್ಚರಿ ಮತ್ತು ರೋಮಾಂಚನಕಾರಿ ಗೊ೦ದಲದ ಸಮಯದಲ್ಲಿ, ಸರಿಯಾದ ಮಾರ್ಗವನ್ನು ಕಂಡುಕೊಳ್ಳುವುದು ಹೇಗೆ ಅಥವಾ ಸರಿಯಾದ ಮಾರ್ಗವೆಂಬುದೇನಾದರು ಇದೆಯೇ?
 

Youth and Truth” “ಯೂತ್ ಅ೦ಡ್ ಟ್ರುಥ್(ಯುವಜನರೇ, ಸತ್ಯವು ನಿಮ್ಮದಾಗಲಿ)” ಸದ್ಗುರುಗಳಿ೦ದ ಪ್ರಾರ೦ಭಿಸಲ್ಪಟ್ಟ  ಆಂದೋಲನವಾಗಿದ್ದು, ಯುವಜನರನ್ನು ಅವರ ಸಂಪೂರ್ಣ ಸಾಮರ್ಥ್ಯಕ್ಕೆ ಬೆಳೆಯಲು ಮತ್ತು ಅವರಲ್ಲಿ ಹೆಚ್ಚು ಅಗತ್ಯವಿರುವ ಸ್ಪಷ್ಟತೆ ಮತ್ತು ಸಮತೋಲನದ ಪ್ರಜ್ಞೆಯನ್ನು ತರುವ ಸಲುವಾಗಿ ರೂಪಿಸಲಾದ ಕಾರ್ಯಕ್ರಮವಾಗಿದೆ.

ಸಮಾರಂಭದ ಸಿದ್ಧತೆ

 

 

ಕಾರ್ಯಕ್ರಮದ ಪೂರ್ವಭಾವಿಯಲ್ಲಿ ನಾವು ಹಲವು ವಿದ್ಯಾರ್ಥಿಗಳೊಡನೆ ಮಾತನಾಡಿದಾಗ, ಅವರುಗಳು, ಸದ್ಗುರುಗಳನ್ನು ನೋಡಲು, ಅವರ ಮಾತುಗಳನ್ನು ಕೇಳಲು ಉತ್ಸುಕರಾಗಿದ್ದೇವೆ೦ದು ಹೇಳಿದರು. ಕೆಲವರು ಸದ್ಗುರುಗಳನ್ನು YouTube ವಿಡಿಯೋಗಳಲ್ಲಿ ಅಥವಾ ಟಿವಿಯಲ್ಲಿ ನೋಡಿದ್ದರು, ಇನ್ನು ಕೆಲವರು ಅವರ ಬಗ್ಗೆ ಕೇಳಿದ್ದರಷ್ಟೆ. ಆದರೆ, ಅವರೆಲ್ಲರೂ ಕಾರ್ಯಕ್ರಮಕ್ಕಾಗಿ ಎದುರುನೋಡುತ್ತಿದ್ದರು. ಕೆಲವರಿಗೆ ತಾವು ಭಾಗವಹಿಸುತ್ತಿರುವ ಕಾರ್ಯಕ್ರಮದ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಆದರೆ, ನಾವು “ಯೂತ್ ಅ೦ಡ್ ಟ್ರುಥ್”-ನ ಉದ್ದೇಶವನ್ನು ವಿವರಿಸಿದಾಗ, ಅವರ ನಿಲುವಿನಲ್ಲಿ ತಕ್ಷಣದೊ೦ದು ಬದಲಾವಣೆ ಕಂಡುಬಂದಿತು ಮತ್ತವರಲ್ಲಿ ಉತ್ತರ ಹಾಗೂ ಸ್ಪಷ್ಟತೆ ಬೇಕಾಗಿರುವ ಅನೇಕ ಪ್ರಶ್ನಗೆಳಿವೆ ಎ೦ದವರು ಒಪ್ಪಿಕೊಂಡರು. 


ಆಡಿಟೋರಿಯಮ್-ನ ಒಳಗೆ ನೋಡಿದಾಗ, ಸದ್ಗುರುಗಳಿಗಾಗಿ ಕಾಯುತ್ತ, ವಿದ್ಯಾರ್ಥಿಗಳು ಹರಟೆ ಹೊಡೆಯುತ್ತಿರುವುದು ಕಂಡುಬಂತು. ಸದ್ಗುರುಗಳು ಆಗಮಿಸಿದ ತಕ್ಷಣವೆ, ಗಲಾಟೆಗದ್ದಲಗಳು ಗೌರವಯುತವಾದ ಮೌನಕ್ಕೆ ತಿರುಗಿದವು. ವಿದ್ಯಾರ್ಥಿಗಳು ಅನಿರೀಕ್ಷಿತವಾಗಿ ಎದ್ದುನಿಂತು, ಚಪ್ಪಾಳೆಗಳೊ೦ದಿಗೆ, ಸದ್ಗುರುಗಳನ್ನು “ಮುಖ್ಯ ಅತಿಥಿ”ಯೆಂದು ಪ್ರೀತಿಯಿಂದ ಕರೆದು, ಆದರದಿಂದ ಬರಮಾಡಿಕೊಂಡರು.
 

 

ಕಾರ್ಯಕ್ರಮವು ಆರಂಭವಾಗುವು ಮುನ್ನ, ಕೆಲ ವಿಡಿಯೋಗಳನ್ನು ತೋರಿಸಲಾಯಿತು. ಪ್ರತಿಬಾರಿ, ಈ ಆಂದೋಲನದ ವಿಡಿಯೋವೊ೦ದು ಬಂದಾಗ, ವಿದ್ಯಾರ್ಥಿಗಳ ಗಮನದಲ್ಲಿ ದೊಡ್ಡದೊ೦ದು ವ್ಯತ್ಯಾಸವು ಕಂಡುಬರುತ್ತಿತ್ತು.  

ಅನ್ವೇಷಣೆಯು ಆರಂಭವಾಗಲಿ!

 

ಕಾರ್ಯಕ್ರಮವು ಪ್ರಾರಂಭವಾದಾಗ, ವಿದ್ಯಾರ್ಥಿಗಳು ಪ್ರಶ್ನೋತ್ತರವನ್ನು ಆರಂಭಿಸಿದರು. ಮೊದಲ ಪ್ರಶ್ನೆಯು "ಒತ್ತಡದ ನಿರ್ವಹಣೆ"ಯ ಬಗ್ಗೆಯಾಗಿತ್ತು. ಪ್ರಶ್ನೆ ಕೇಳಿದ ವಿದ್ಯಾರ್ಥಿಯು ಹೇಳಿದ್ದೇನೆ೦ದರೆ: ಸ್ನೇಹಿತರಿಗೆ, ನಾನು ಸದ್ಗುರುಗಳೊ೦ದಿಗೆ ಕಾರ್ಯಕ್ರಮದಲ್ಲಿ ಮಾತನಾಡಲು ಹೋಗುತ್ತೇನೆಂದು ಹೇಳಿದಾಗ, ಅವರಲ್ಲಿದ್ದ ಬಹು ದೊಡ್ಡ ಪ್ರಶ್ನೆಯೆ೦ದರೆ "ಒತ್ತಡದ ನಿರ್ವಹಣೆ"ಯ ಬಗ್ಗೆ ಎ೦ದು. ಇದಕ್ಕೆ ಸದ್ಗುರುಗಳು ತಕ್ಷಣ ಪ್ರತಿಕ್ರಿಯಿಸಿದ್ದು ಹೀಗೆ: ನಮಗೆ ಅನಗತ್ಯವಾದುದ್ದನ್ನು “ನಿರ್ವಹಿಸಬೇಕೇ” ಅಥವಾ ಸಂಪೂರ್ಣವಾಗಿ ಕಿತ್ತೊಗೆಯಬೇಕೇ? ಎಂದು. ನಂತರ, ವಿಶ್ವವಿದ್ಯಾಲಯದ ಅನೇಕ ಯುವಜನರನ್ನು ಕಾಡುತ್ತಿದ್ದ ಈ ಪ್ರಶ್ನೆಯ ಬಗ್ಗೆ ಸದ್ಗುರುಗಳು ಇನ್ನೂ ಹೆಚ್ಚಾಗಿ ವಿವರಿಸುತ್ತಾ ಹೋದರು. 


ಅತ್ಯಾಚಾರಿಗಳನ್ನು ಯಾವ ರೀತಿಯಲ್ಲಿ ಶಿಕ್ಷಿಸಬೇಕು, ಅಜ್ಞಾನವು ಆನಂದದಾಯಕವಾಗಿದ್ದರೆ, ಜನರು ಜ್ಞಾನಾರ್ಜನೆಯನ್ನು ಏತಕ್ಕಾಗಿ ಮಾಡುತ್ತಾರೆ, ಅನುಚಿತ ಪ್ರೀತಿಯ ಬಗ್ಗೆ, ನಮ್ಮೊಳಗೆ ಅಡಗಿರುವ ಪಿಶಾಚಿಗಳನ್ನು ಮಣಿಸುವ ಬಗ್ಗೆ, ಯುವಜನರು ಜೀವನದಲ್ಲಿ ಯಾವುದರ ಮೇಲೆ ಕೇಂದ್ರೀಕರಿಸಬೇಕು ಎಂಬುದರ ಬಗ್ಗೆಯೆಲ್ಲಾ ಪ್ರಶ್ನೆಗಳು ಬಂದವು. ಕೃಷಿ ವಿದ್ಯಾರ್ಥಿಗಳಾದ್ದರಿ೦ದ ಅವರು ಕೇಳಿದ ಮತ್ತೊಂದು ಮಹತ್ತರವಾದ ಪ್ರಶ್ನೆಯೆಂದರೆ – ಭಾರತವು ಕೃಷಿಪ್ರಧಾನ ದೇಶವಾಗಿದ್ದರೂ ಸಹ, ಕೃಷಿಯು ದೇಶದ ಜಿಡಿಪಿ-ಗೆ ಯಾಕೆ ಹೆಚ್ಚಾದ ಕೊಡುಗೆಯನ್ನು ನೀಡುತ್ತಿಲ್ಲ ಎಂದು. 
 

ಸಾಮಾಜಿಕ ಜಾಲತಾಣದಲ್ಲಿನ ಪ್ರಶ್ನೆಗಳು

Students of Tamil Nadu Agricultural University listening to Sadhugru and the moderators at the Youth AND Truth in their University | The Pulse of Youth AND Truth - TNAU

 

ನಂತರ ವಿದ್ಯಾರ್ಥಿಗಳು, ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಅನುಮೋದಿತವಾದ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಕೇಳಿದರು. ಇವುಗಳಲ್ಲಿ ಕೆಲ ಪ್ರಶ್ನೆಗಳು -  ಹೊಸ ಜನರನ್ನು ಭೇಟಿ ಮಾಡುವ ಸಂದರ್ಭದಲ್ಲಾಗುವ ಆತಂಕವನ್ನು ನಿಭಾಯಿಸುವ ಬಗ್ಗೆ, ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿಯನ್ನು ಸುದ್ದಿಯೆಂದು ಹರಡುತ್ತಿರುವ ಸದ್ಯದ ಟ್ರೆಂಡ್-ಅನ್ನು ಯುವಜನರು ಹೇಗೆ ಬದಲಾಯಿಸಬಹುದೆ೦ಬ ಬಗ್ಗೆ, ಮತ್ತು ಸೋಮಾರಿತನ ಹಾಗೂ ವಿಳಂಬ ಪ್ರವೃತ್ತಿಯನ್ನು ನಿವಾರಿಸಿಕೊಳ್ಳುವ ಬಗ್ಗೆಯಾಗಿದ್ದವು. 

ಇನ್ನೂ ಅನೇಕ ಪ್ರಶ್ನೆಗಳು! ಸಭಿಕ ವಿದ್ಯಾರ್ಥಿಗಳಿ೦ದ..

 

ಸಾಮಾಜಿಕ ಜಾಲತಾಣಗಳ ಪ್ರಶ್ನೆಗಳ ನಂತರ, ಆಡಿಟೋರಿಯಮ್-ನಲ್ಲಿದ್ದ ವಿದ್ಯಾರ್ಥಿಗಳು ಸದ್ಗುರುಗಳ ಮೇಲೆ ಪ್ರಶ್ನೆಗಳ ಸುರಿಮಳೆಗೈದರು. ಓರ್ವ ಯುವತಿಯು, ಸದ್ಗುರುಗಳು ಸಾಧಿಸಿರುವುದು ಒಂದು ಜೀವಿತಾವಧಿಯಲ್ಲಿ ಮಾಡಬಹುದಾದಂತಹ ಕೆಲಸವಲ್ಲ ಎಂದು ಹೇಳಿ, ಅವರ ಯಶಸ್ಸಿನ ರಹಸ್ಯವೇನೆ೦ದು ಕೇಳಿದ ಪ್ರಶ್ನೆಯು, ಆಶ್ಚರ್ಯಕರವಾಗಿ, ಪ್ರೇಕ್ಷಕರಿ೦ದ ಬಹಳಷ್ಟು ಗಮನ ಮತ್ತು ಶ್ಲಾಘನೆಯನ್ನು ಪಡೆಯಿತು. ಇನ್ನೊಬ್ಬ ವಿದ್ಯಾರ್ಥಿನಿಯು, “ನನ್ನ ಪ್ರೀತಿಯ ಸದ್ಗುರು.....” ಎಂಬುದಾಗಿ ತನ್ನ ಪ್ರಶ್ನೆಯನ್ನು ಶುರು ಮಾಡಿದಾಗ, ಎಲ್ಲರ ಮುಖದಲ್ಲಿ ಮಂದಹಾಸ ಮೂಡಿತ್ತು.


ಆರಂಭದಲ್ಲಿ, ಮೌನವಾಗಿದ್ದ ವಿದ್ಯಾರ್ಥಿಗಳು, ಇಷ್ಟರ ಹೊತ್ತಿಗೆ ಹೆಚ್ಚು ಮುಕ್ತ ಹಾಗೂ 
ಪ್ರತಿಕ್ರಿಯಾಶೀಲರಾಗಿದ್ದರು. ಸದ್ಗುರುಗಳು ಉತ್ತರಿಸುತ್ತಿದ್ದಾಗ “ಹೌದೌದು” ಮತ್ತು “ಇಲ್ಲ”ಗಳು ಹೆಚ್ಚಾಗುತ್ತಿದ್ದವು. ತಮಿಳನಾಡು ರಾಜ್ಯವು ಒಂದು ಪ್ರತ್ಯೇಕ ದೇಶವಾಗಬೇಕೆ ಎಂಬುದರಿಂದ ಹಿಡಿದು, ಇಂದಿನ ಜೀವನದ ಸಮಸ್ಯೆಗಳಿಗೆ ಆಧ್ಯಾತ್ಮಿಕತೆಯು ಉತ್ತರವಾಗಬಹುದೇ ಮತ್ತು “ನನ್ನ ಜೀವನದಲ್ಲಿ ನಾನೇನು ಮಾಡಬೇಕು”? ಎಂಬುದರವರೆಗೂ ಅನೇಕ ವಿಧವಾದ ಪ್ರಶ್ನೆಗಳು ವಿದ್ಯಾರ್ಥಿಗಳಿ೦ದ ಬ೦ದವು.
 

 

Sadhuru interacts with students of TNAU under a banyan tree | The Pulse of Youth AND Truth - TNAU

 

ಮಾಧ್ಯಮಗಳಲ್ಲಿ "ಯೂತ್ ಅ೦ಡ್ ಟ್ರುಥ್" 

ದ ಕವರ್ ಪೋಸ್ಟ್ ಆಫ್ ಕೊಯಮತ್ತೂರ್, ತಮಿಳುನಾಡು ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ "ಯೂತ್ ಅ೦ಡ್ ಟ್ರುಥ್" ಕಾರ್ಯಕ್ರಮದ ಮೇಲೆ ಒ೦ದು ಲೇಖನವನ್ನು ಪ್ರಕಟಿಸಿದೆ. ಅದನ್ನು ಇಲ್ಲಿ ಓದಿ..

Isha’s Youth and Truth campaign at Tamil Nadu Agriculture University

ಸಂಪಾದಕರ ಟಿಪ್ಪಣಿ: ಸದ್ಗುರುಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಹಲವು ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಸಿದ್ಧ ತಾರೆಯರು ಕೇಳುವ ಪ್ರಶ್ನೆಗಳಿಗೆ ನೀಡುವ ಉತ್ತರವನ್ನು ಪ್ರತಿದಿನ ನಮ್ಮ ಸಾಮಾಜಿಕ ಜಾಲತಾಣಗಳಾದ – ಸದ್ಗುರು Facebook, YouTube, Twitter ಮತ್ತು Instagram ನಲ್ಲಿ ನೋಡಿ!