ಆನಂದದಿಂದ ತುಂಬಿರುವ, ಒತ್ತಡರಹಿತ ಮತ್ತು ಆಧ್ಯಾತ್ಮ ಸಾಧನೆಯಲ್ಲಿ ನೆಲೆಗೊಂಡಿರುವ ಹೊಸ ಜೀವನಕ್ಕಾಗಿ ತಯಾರಿಮಾಡಿಕೊಳ್ಳಲು, 32 ದೇಶಗಳಿಂದ 800 ಕ್ಕೂ ಹೆಚ್ಚು ಭಾಗಿಗಳು ಕೊಯಮತ್ತೂರಿನ ಈಶ ಯೋಗ ಕೇಂದ್ರದ ಪ್ರತಿಷ್ಠಾಪಿಸಿದ ಸ್ಥಳದಲ್ಲಿ 7 ತಿಂಗಳು ಕಳೆಯಲು ಒಟ್ಟಾಗಿದ್ದಾರೆ. ಸಾಧನಪಾದದಲ್ಲಿ ಭಾಗವಹಿಸುವವರು ತೀವ್ರ ಮತ್ತು ಶಿಸ್ತುಬದ್ಧ ಸಾಧನಾ ಕಾರ್ಯಕ್ರಮವನ್ನು ಅನುಸರಿಸುತ್ತಾ, ತಮ್ಮ ಕೌಶಲ್ಯವನ್ನು ಈಶದ ಚಟುವಟಿಕೆಗಳಿಗಾಗಿ ಯೋಗದಾನವಾಗಿ ನೀಡಿ ಆಶ್ರಮದಲ್ಲಿನ ವಿವಿಧ ಕಾರ್ಯಕ್ರಮಗಳು ಮತ್ತು ಆಚರಣೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಈ ಬ್ಲಾಗ್ ಸರಣಿಯಲ್ಲಿ, ಅವರ ಪಯಣದ ಏಳುಬೀಳುಗಳ ಮೂಲಕ ನಾವು ನಿಮ್ಮನ್ನು ಕಾರ್ಯಕ್ರಮದ ನೇಪಥ್ಯಕ್ಕೆ ಕರೆದೊಯ್ಯುತ್ತೇವೆ.

 

ಕಾರ್ಯಕ್ರಮಕ್ಕೆ ಪ್ರವೇಶ ದೊರಕಿದ ಹರ್ಷೋಲ್ಲಾಸ

ಈಗಷ್ಟೆ ಕಾಲೇಜು ವ್ಯಾಸಂಗ ಮುಗಿಸಿದ ವಿದ್ಯಾರ್ಥಿಗಳಿಂದ ಹಿಡಿದು ವ್ಯಾಪಾರೋದ್ಯಮಿಗಳು, ವೃತ್ತಿಪರರು, ವೈದ್ಯರು, ಎಂಜಿನಿಯರ್‌ಗಳು, ಸಂಗೀತಗಾರರು, ನಾಗರಿಕ ಸಿಬ್ಬಂದಿಗಳು, ವಿಜ್ಞಾನಿಗಳು ಮತ್ತು ಇನ್ನೂ ಅನೇಕರವರೆಗೂ, ಕಾರ್ಯಕ್ರಮದಲ್ಲಿ ಭಾಗವಹಿಸುವವರ ಹಿನ್ನೆಲೆಗಳು ಸಾಧನಾಪಾದ ಒದಗಿಸುವ ಸಾಧ್ಯತೆಗಳಷ್ಟೇ ವೈವಿಧ್ಯಮಯವಾಗಿವೆ.

life-in-sadhanapada-from-home-to-ashram-vol-in-q

life-in-sadhanapada-from-home-to-ashram-orientation

“ನಾನು ಅಲ್ಲಿಗೆ ಹೋಗುತ್ತಿದ್ದೇನೆಂದು ನನಗೆ ನಂಬುವುದಕ್ಕಾಗುತ್ತಿಲ್ಲ!”

“ನಾನು ಬರುವ ಮೊದಲು, ನನಗೆ ಕಾರ್ಯಕ್ರಮಕ್ಕೆ ಪ್ರವೇಶ ದೊರಕಿದೆಯೆಂದು ನನಗೆ ಇನ್ನೂ ಸಂಪೂರ್ಣವಾಗಿ ನಂಬುವುದಕ್ಕಾಗಿರಲಿಲ್ಲ. ಇಲ್ಲಿನ ಜನರು ತುಂಬಾ ಕಟ್ಟುನಿಟ್ಟಾಗಿರುತ್ತಾರೆ ಮತ್ತು ಈ ಹಿಂದೆ ಆಶ್ರಮದಲ್ಲಿ ನಾನು ಸ್ವಯಂ-ಸೇವೆಯನ್ನ ಮಾಡಿಲ್ಲದ ಕಾರಣ, ಅವರು ನನ್ನನ್ನು ವಾಪಾಸು ಕಳುಹಿಸಬಹುದು ಎಂದು ನಾನು ಭಾವಿಸಿದ್ದೆ. ಆದರೆ ನಾನು ಭೇಟಿಯಾದ ಮೊದಲ ಸ್ವಯಂಸೇವಕಿಯು ನನಗೆ ನಮಸ್ಕಾರ ಮಾಡಿ, ಬಹಳ ಪ್ರಾಮಾಣಿಕವಾಗಿ ಮುಗುಳ್ನಕ್ಕ ಆ ಕ್ಷಣದಿಂದ ಎಲ್ಲವೂ ಬದಲಾಯಿತು. ನನ್ನ ಅಸಂಬದ್ಧ ಭಯಗಳು ದೂರವಾಗಿದ್ದವು. ಅಲ್ಲಿರುವುದು ನಂಬಲಸಾಧ್ಯವಾಗಿತ್ತು. ಆಶ್ರಮಕ್ಕೆ ಹೋಗುವ ದಾರಿಯಲ್ಲೂ, ಜಾಹೀರಾತು ಫಲಕಗಳಲ್ಲಿ ಸದ್ಗುರುಗಳ ಫೋಟೋಗಳನ್ನು ನೋಡುತ್ತಾ, ‘ನಾನು ಅಲ್ಲಿಗೆ ಹೋಗುತ್ತಿರುವುದು ನಿಜ!’ ಎಂದು ಹೇಳಿಕೊಳ್ಳುತ್ತಲೇ ಇದ್ದೆ. ” - ಭೀಮ್, 18, ಜಾರ್ಖಂಡ್, ಭಾರತ

"ನನಗೆ ಕಾರ್ಯಕ್ರಮಕ್ಕೆ ಪ್ರವೇಶ ದೊರಕಿದಾಗ ಬಹಳ ಸಂತೋಷಿತಳಾಗಿದ್ದೆ..."

ನನಗೆ ಕಾರ್ಯಕ್ರಮಕ್ಕೆ ಪ್ರವೇಶ ದೊರಕಿದಾಗ ಬಹಳ ಸಂತೋಷಿತಳಾಗಿದ್ದೆ! ಆಂತರಿಕ ಆಧ್ಯಾತ್ಮಿಕ ರೂಪಾಂತರಕ್ಕೆ ಅಗತ್ಯವಾದ ಮೂಲಸೌಕರ್ಯ ಮತ್ತು ಬೆಂಬಲವನ್ನು ಹೊಂದಿರುವ ಅಂತಹ ರಚನಾತ್ಮಕ ಕಾರ್ಯಕ್ರಮವಿರುವುದನ್ನ ಕಂಡು ಎಂದು ನಾನು ಭಾವಪರವಶಳಾಗಿದ್ದೆ. ತಮ್ಮ ಮನೆಯ ಹೆಣ್ಣುಮಕ್ಕಳನ್ನು ಇಷ್ಟೊಂದು ಸಮಯದವರೆಗೆ ಹಿಂಜರಿಕೆಯಿಲ್ಲದೆ ಮತ್ತು ಪೂರ್ಣ ವಿಶ್ವಾಸದಿಂದ ಕಳುಹಿಸಬಹುದಾದಂತಹ ಒಂದು ಸ್ಥಳವಿದು. ” - ಸ್ವಾತಿ, 42, ಲಂಡನ್, ಯುಕೆ

ಮೊದಲ ಅಡೆತಡೆಗಳನ್ನು ದಾಟುವುದು

ಕಾರ್ಯಕ್ರಮಕ್ಕೆ ಪ್ರವೇಶ ಸಿಕ್ಕ ಸಂತೋಷವು ಹಲವರಿಗೆ ಕೆಲವು ಅಡೆತಡೆಗಳಿಲ್ಲದೆ ಬಂದಿದ್ದಲ್ಲ. ಆಶ್ರಮದಲ್ಲಿ ವಾಸ ಮಾಡುವುದು ಒಂದು ಅಸಾಂಪ್ರದಾಯಿಕ ಹೆಜ್ಜೆಯಾಗಿದ್ದು, ಇದನ್ನು ಬೇರೆಯವರಿಗೆ ಅರ್ಥ ಮಾಡಿಸುವುದು ಕಷ್ಟವಾಗಬಹುದು. ಕಾರ್ಯಕ್ರಮದಲ್ಲಿ ಭಾಗವಹಿಸುವವರು ತಮ್ಮ ಬಾಸ್-ಅನ್ನು ಒಪ್ಪಿಸಬೇಕಿತ್ತು, ವೈಯಕ್ತಿಕ ಹಣಕಾಸನ್ನು ನಿರ್ವಹಿಸಿಬೇಕಿತ್ತು ಮತ್ತು ಕಾರ್ಯಕ್ರಮದ ಮೌಲ್ಯದ ಬಗ್ಗೆ ಕುಟುಂಬದವರಿಗೆ ಮನಗಾಣಿಸಬೇಕಿತ್ತು.

"ನಾನು ಹೋಗುತ್ತಿದ್ದೇನೆಂಬ ವಿಚಾರದಿಂದ ನನ್ನ ವ್ಯಾಪಾರ ಪಾರ್ಟ್ನರ್-ಗಳಿಗೆ ಸಂತೋಷವಾಗಿರಲಿಲ್ಲ."

"ನಾನು ಈಶದಲ್ಲಿ ಸ್ವಲ್ಪ ಸಮಯದಿಂದ ಸ್ವಯಂ-ಸೇವೆ ಮಾಡುತ್ತಿದ್ದೇನೆ. ನಾನು ಸಾಧನಾಪಾದದ ಬಗ್ಗೆ ಕೇಳಿದ್ದೆಯಾದರೂ ಅದು ನನಗಲ್ಲ ಎಂದು ನನಗೆ ಯಾವಾಗಲೂ ಅನಿಸಿತ್ತು. ಅನೇಕ ವ್ಯವಹಾರಗಳನ್ನು ನಡೆಸುತ್ತಿರುವ ಮತ್ತು ಮನೆಯಲ್ಲಿ ವಯಸ್ಸಾದ ತಾಯಿಯಿರುವ ನನ್ನಂತವರಿಗೆ, 7 ತಿಂಗಳುಗಳು ಮನೆ ಮತ್ತು ಕೆಲಸದಿಂದ ದೂರವಿರುವುದು ಬಹಳ ದೀರ್ಘವಾದ ಸಮಯವಾಗಿದೆ."

“ನಾನು ಹೋಗುತ್ತಿದ್ದೇನೆಂಬ ವಿಚಾರದಿಂದ ನನ್ನ ವ್ಯಾಪಾರ ಪಾರ್ಟ್ನರ್-ಗಳಿಗೆ ಸಂತೋಷವಾಗಿರಲಿಲ್ಲ, ಆದರೆ ನಾನು ‘ನನ್ನ ಮೇಲೆಯೇ’ ಕೆಲಸ ಮಾಡಿಕೊಂಡು, ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಕ್ಷಮತೆಯಿಂದ ವ್ಯಾಪಾರವನ್ನು ನಿಭಾಯಿಸುತ್ತೇನೆ ಎಂದು ನಾನು ಅವರಿಗೆ ಮನವರಿಕೆ ಮಾಡಿಕೊಟ್ಟಾಗ ಅವರು ಒಪ್ಪಿದರು. ಮತ್ತು ನನ್ನ ತಾಯಿಯನ್ನು ನೋಡಿಕೊಳ್ಳಲು ನನಗೆ ವ್ಯವಸ್ಥೆಗಳನ್ನು ಮಾಡಲು ಸಾಧ್ಯವಾಯಿತು".

“ ಅಲ್ಲದೆ, ಮನೆಯಲ್ಲಿ ನನ್ನ ಯೋಗ ಸಾಧನೆ ಅಗತ್ಯವಿರುವ ರೀತಿಯಲ್ಲಿ ನಡೆಯುತ್ತಿರಲಿಲ್ಲ. ಹಾಗಾಗಿ ಇಲ್ಲಿಗೆ ಬಂದಿರುವುದು ನನಗೆ ತುಂಬಾ ಸಂತೋಷವಾಗಿದೆ ಮತ್ತು ಆಗಲೇ ಪರಿವರ್ತನೆಯು ಆಗುತ್ತಿದೆ ಎಂದು ನನಗನಿಸುತ್ತಿದೆ.” - ಶ್ರೀಕುಮಾರ್, 48, ಕೇರಳ, ಭಾರತ

  “ಎಲ್ಲರೂ ನನಗೆ ಹುಚ್ಚು ಹಿಡಿದಿದೆ ಎಂದೆಣಿಸಿದರು.”

"ನಾನು 7 ತಿಂಗಳು ಆಶ್ರಮಕ್ಕೆ ಹೋಗುತ್ತಿದ್ದೇನೆ ಎಂದು ಜನರಿಗೆ ಹೇಳಿದಾಗ, ಯಾರೂ ಒಪ್ಪಲಿಲ್ಲ. ಎಲ್ಲರೂ ನನಗೆ ಹುಚ್ಚು ಹಿಡಿದಿದೆ ಎಂದೆಣಿಸಿದರು. ಅವರ ಇನ್ನೊಂದು ಚಿಂತೆ ಇದ್ದಿದ್ದು 7 ತಿಂಗಳ ಅಂತರದ ನಂತರ ನನ್ನ ಉದ್ಯೋಗದ ಭವಿಷ್ಯದ ಬಗ್ಗೆ. ಆಶ್ರಮದಲ್ಲಿ ನನ್ನ ಸಮಯವು ನನ್ನ ಸಿವಿಯ (CV) ಮೌಲ್ಯವನ್ನು ಹೆಚ್ಚಿಸುತ್ತದೆ ಎಂದು ನಾನು ನನ್ನ ತಂದೆತಾಯಿಗಳಿಗೆ ಭರವಸೆ ನೀಡಿದೆ."

“ ನನಗೆ ಕೆಲವು ಕೆಟ್ಟ ಅಭ್ಯಾಸಗಳಿದ್ದವು, ಅದನ್ನು ನನ್ನ ತಂದೆ ಗಮನಿಸುತ್ತಿದ್ದರು. ನಾನು ನನ್ನನ್ನು ತಿದ್ದಿಕೊಳ್ಳಬೇಕು, ನನ್ನ ನಿದ್ರೆಯನ್ನು ಕಡಿಮೆ ಮಾಡಬೇಕು ಎಂದಿದ್ದೇನೆ, ನಾನು ಹೆಚ್ಚು ಏಕಾಗ್ರಮತಿ, ತೀವ್ರವಾಗಿ ಮತ್ತು ಸಮತೋಲನದಲ್ಲಿರಬೇಕು ಎಂದಿದ್ದೇನೆ ಎಂದು ಅವರಿಗೆ ಹೇಳಿದೆ. ನನ್ನ ಉದ್ದೇಶ ಮತ್ತು ದೃಢ ನಿಶ್ಚಯ ನೋಡಿ ಅವರು, "ನೀನು ಅಲ್ಲಿಗೆ ಹೋಗು, ನಿನಗೆ ಒಳ್ಳೆಯದಾಗಲಿ" ಎಂದು ಹೇಳಿದರು ” - ಶಾಂತ್ನು, 29, ಕಾಶ್ಮೀರ, ಭಾರತ 

“ನಾನು 7 ತಿಂಗಳು ದೂರವಿರುತ್ತೇನೆ ಎಂದು ಹೇಳಿದಾಗ ನನ್ನ ಕುಟುಂಬದವರು ನಿಜವಾಗಿಯೂ ಒಪ್ಪಲೇ ಇಲ್ಲ.”

“ ನಾನು ಈ ಮೊದಲು ಅನೇಕ ಬಾರಿ ಆಶ್ರಮಕ್ಕೆ ಭೇಟಿ ನೀಡಿದ್ದೆ ಮತ್ತು ಇಲ್ಲಿಗೆ ಬರುವುದು ಯಾವಾಗಲೂ ಒಂದು ಅದ್ಭುತವಾದ ಅವಕಾಶವೇ ಹೌದು, ಆದರೆ ನಾನು ಈ ಬಾರಿ 7 ತಿಂಗಳು ಆಶ್ರಮದಲ್ಲಿರುತ್ತೇನೆ ಎಂದು ಹೇಳಿದಾಗ ನನ್ನ ಕುಟುಂಬದವರು ನಿಜವಾಗಿಯೂ ಒಪ್ಪಲೇ ಇಲ್ಲ. ನನ್ನ ವೃತ್ತಿಜೀವನಕ್ಕೆ ಹೆಜ್ಜೆ ಹಾಕುವ ಮೊದಲು ನನ್ನ ಮೇಲೆ ಸ್ವಲ್ಪ ಸಮಯವನ್ನು ಹೂಡಿಕೆ ಮಾಡುವುದು ಎಷ್ಟು ಮುಖ್ಯ ಎಂದು ಅವರಿಗೆ ಮನವರಿಕೆ ಮಾಡಿಕೊಡಲು ಬಹಳ ಶ್ರಮಿಸಬೇಕಾಯಿತು."

“ನಾನು ಈ ವರ್ಷವೇ ಪದವಿ ಮಗಿಸಿ ಅನೇಕ ಉದ್ಯೋಗಾವಕಾಶಗಳನ್ನು ಪಡೆದಿದ್ದರಿಂದ, ನನ್ನ ಕುಟುಂಬಕ್ಕೆ ನಾನು ಅವುಗಳನ್ನು ತಿರಸ್ಕರಿಸುವುದು ಇಷ್ಟವಿರಲಿಲ್ಲ. ಮುಂದೆ ನನ್ನ ಜೀವನದಲ್ಲಿ ನಾನು ಏನೇ ಮಾಡುವುದಕ್ಕೂ ಸಿದ್ಧವಾಗಿರಲು ಒಂದು ಸ್ಥಿರವಾದ ಅಡಿಪಾಯವನ್ನು ನಿರ್ಮಿಸಿಕೊಳ್ಳಲು, ನನ್ನ ಮೇಲೆಯೇ ಕೆಲಸ ಮಾಡಿಕೊಳ್ಳುವುದು ನನ್ನ ಅಭಿಲಾಷೆಯಾಗಿತ್ತು.” - ಶುಭಾಂಗಿ, 22, ಜೋಧಪುರ, ಭಾರತ

ಗುರು ಪೌರ್ಣಿಮೆ ಮತ್ತು "ಲ್ಯಾಪ್ ಆಫ್ ದಿ ಮಾಸ್ಟರ್" ಕಾರ್ಯಕ್ರಮದ ತೆರೆಮರೆಯಲ್ಲಿ

life-in-sadhanapada-from-home-to-ashram-lom-sadhgurupic

life-in-sadhanapada-from-home-to-ashram-lom-sadhguru-with-participants

ಜುಲೈ 16, 2019 ರಂದು ಸಾಧನಪಾದ ಅಧಿಕೃತವಾಗಿ ಗುರು ಪೌರ್ಣಮಿಯ ಶುಭ ಸಂದರ್ಭದಲ್ಲಿ ಪ್ರಾರಂಭವಾಯಿತು, ಆದರೆ ಅದರಲ್ಲಿ ಭಾಗವಹಿಸುವವರು “ಇನ್ ದಿ ಲ್ಯಾಪ್ ಆಫ್ ದಿ ಮಾಸ್ಟರ್” ನ ಭಾಗವಾಗಿರಲು ಕೆಲ ದಿನಗಳ ಹಿಂದೆಯೇ ಬಂದಿಳಿದಿದ್ದರು. ಇದು 2 ದಿನಗಳ ಕಾರ್ಯಕ್ರಮವಾಗಿದ್ದು, ಸಾವಿರಾರು ಈಶ ಧ್ಯಾನಸ್ಥರು ಸದ್ಗುರುಗಳ ಸನ್ನಿಧಿಯಲ್ಲಿರಲು ಆಶ್ರಮದಲ್ಲಿ ಸೇರುತ್ತಾರೆ. ಈ ಪ್ರಮಾಣದ ಕಾರ್ಯಕ್ರಮವನ್ನು ನಡೆಸಲು ಹೆಚ್ಚಿನ ಕೆಲಸ ಮಾಡಬೇಕಾಗಿತ್ತು. ಆದರೆ ಸಾಧನಾಪಾದದಲ್ಲಿ ಭಾಗವಹಿಸಲು ಸೇರಿದ್ದ ನೂರಾರು ಜನರು ಕೆಲಸಕ್ಕೆ ಧುಮುಕಿ ತಮ್ಮನ್ನು ಚಟುವಟಿಕೆಯಲ್ಲಿ (ಸೇವೆಯಲ್ಲಿ) ತೊಡಗಿಸಿಕೊಳ್ಳುತ್ತಿದ್ದಂತೆ, ವಿಷಯಗಳು ಯಾವುದೇ ತೊಂದರೆಯಿಲ್ಲದೆ ನಡೆದವು. ನಂತರ ಗುರು ಪೌರ್ಣಮಿಯೆ ರಾತ್ರಿಯಂದು ಅವರು ಸದ್ಗುರುಗಳೊಂದಿಗೆ ಆತ್ಮೀಯ ಸತ್ಸಂಗದಲ್ಲಿ ಭಾಗವಹಿಸಿದರು.

life-in-sadhanapada-from-home-to-ashram-lom-vol-pic1

life-in-sadhanapada-from-home-to-ashram-lom-vol-pic2

life-in-sadhanapada-from-home-to-ashram-lom-vol-pic3

"ಆಶ್ರಮದಲ್ಲಿರುವ ಪ್ರತಿಯೊಬ್ಬರೂ ದಣಿವಿಲ್ಲದೆ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದರ ಬಗ್ಗೆ ಇದು ನನಗೆ ಒಂದು ಇಣುಕುನೋಟವನ್ನು ನೀಡಿತು."

“ನಾನು ‘ಇನ್ ದಿ ಲ್ಯಾಪ್ ಆಫ್ ಮಾಸ್ಟರ್’ ಕಾರ್ಯಕ್ರಮಕ್ಕಾಗಿ ಸ್ವಯಂಸೇವಕನಾಗಿ ಪ್ರಾರಂಭಿಸಿದೆ. ಆಶ್ರಮದಲ್ಲಿರುವ ಪ್ರತಿಯೊಬ್ಬರೂ ದಣಿವಿಲ್ಲದೆ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದರ ಬಗ್ಗೆ ಇದು ನನಗೆ ಒಂದು ಇಣುಕುನೋಟವನ್ನು ನೀಡಿತು. ಅವರು ತಮ್ಮ ಸೇವೆಯನ್ನು ಮಾಡುವುದರಲ್ಲಿ ಅಸಾಧಾರಣವಾಗಿ ಕಾಣುತ್ತಿದ್ದರು ಮತ್ತು ಅವರನ್ನು ನೋಡುವಾಗ, ನಮ್ಮ ಕಾರ್ಯಕ್ರಮವು ಆರಂಭವಾಗುವುದಕ್ಕೆ ನಾನು ಉತ್ಸುಕನಾಗಿದ್ದೆ. ಆಶ್ರಮದಲ್ಲಿ ಕಳೆದ ಕೆಲವು ದಿನಗಳು ನನ್ನೊಳಗೆ ಒಂದು ಅರಿವನ್ನು ಮೂಡಿಸಿದೆ. ಪ್ರತಿದಿನ ನನ್ನ ಅರಿವು ಬೆಳೆಯುತ್ತಿದೆ ಎಂದನಿಸುತ್ತಿದೆ. ಈ ಸ್ಥಳದಲ್ಲಿರುವುದು ಅತ್ಯದ್ಭುತವಾಗಿದೆ ಮತ್ತು ನಿರಂತರವಾಗಿ ನಾನು ರೋಮಾಂಚಕ ಶಕ್ತಿಯನ್ನು ಪ್ರತಿಕ್ಷಣವೂ ಅನುಭವಿಸುತ್ತಿದ್ದೇನೆ. ” - ಕ್ಷಿತಿಜ್, 28, ಬೆಂಗಳೂರು, ಭಾರತ

ಅತ್ಯುತ್ಸಾಹಭರಿತ ಆರಂಭ

ಗುರು ಪೌರ್ಣಮಿಯ ನಂತರ, ಸಾಧನಪಾದ ಕಾರ್ಯಕ್ರಮದಲ್ಲಿ ಭಾಗವಹಿಸುವವರು ತೀವ್ರವಾದ ಪ್ರಾರಂಭಿಕ ಶಿಕ್ಷಣ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಅಲ್ಲಿ ಅವರು ಹಠ ಯೋಗದ ಅಭ್ಯಾಸಗಳನ್ನು ಕಲಿತಿದ್ದು ಮಾತ್ರವಲ್ಲದೆ ಇನ್ನರ್ ಇಂಜಿನಿಯರಿಂಗ್ ಅನ್ನು ಮರುಪರಿಶೀಲಿಸಿದರು ಮತ್ತು ಮುಂಬರುವ 7 ತಿಂಗಳ ಸಾಧನೆಗೆ ಆಧಾರವನ್ನು ನೀಡುವ ಮೂಲಭೂತ ಅಂಶಗಳ ಬಗ್ಗೆ ಮತ್ತೊಮ್ಮೆ ಆಳವಾಗಿ ಗಮನವಿತ್ತರು. ಸದ್ಗುರುಗಳ ಹಿಂದೆಂದೂ ನೋಡಿರದ ವೀಡಿಯೊಗಳೊಂದಿಗೆ, ಗುರು ಪೂಜೆಯನ್ನು ನೇರ ಪ್ರಕ್ರಿಯೆಯಾಗಿ ಅನುಭವಿಸುವುದು ಮತ್ತು ಆದಿಯೋಗಿ ಪ್ರದಕ್ಷಿಣೆ ಮತ್ತು ಇತರ ಹಲವಾರು ಪ್ರಕ್ರಿಯೆಗಳ ಮೂಲಕ ತೀವ್ರತೆಯನ್ನು ಒಳಗೂಡಿಸಿಕೊಳ್ಳುವುದರೊಂದಿಗೆ ಶಿಕ್ಷಣವು ಅತ್ಯುತ್ಸಾಹಭರಿತವಾಗಿತ್ತು. ಈ ಸಮಯದಲ್ಲಿ, ಅವರ ನಿಶ್ಚಯಿಸಿದ ವೇಳಾಪಟ್ಟಿಯ ಮಧ್ಯೆ, ಮುಂಬರುವ ಕಾರ್ಯಕ್ರಮದಲ್ಲಿ ಭಾಗವಹಿಸುವವರನ್ನು ಸಜ್ಜುಗೊಳಿಸಲು ಸದ್ಗುರುಗಳು ಅನಿರೀಕ್ಷಿತವಾಗಿ ಅವರನ್ನು ಸಂಕ್ಷಿಪ್ತವಾಗಿ ಭೇಟಿಯಾದರು.

"ಕಾರ್ಯಕ್ರಮದ ಆರಂಭದಲ್ಲಿಯೇ ಸದ್ಗುರುಗಳೊಂದಿಗೆ ತರಗತಿ ನಡೆದಿದ್ದು ಒಂದು ಆಶೀರ್ವಾದವೇ ಆಗಿತ್ತು."

"ತರಬೇತಿಯ ಸಮಯದಲ್ಲಿ ನಡೆದ ಇನ್ನರ್ ಇಂಜಿನಿಯರಿಂಗ್ ರಿಫ್ರೆಶರ್ ಹೆಚ್ಚು ಅಗತ್ಯವಾಗಿತ್ತು. ಇದು ನನ್ನ ಶಾಂಭವಿ ಅಭ್ಯಾಸವನ್ನು ಆಳವಾಗಿಸಲು ಸಹಾಯ ಮಾಡಿದ್ದಲ್ಲದೆ ಈ ಸರಳ ಸಾಧನಗಳು ಎಷ್ಟು ದೊಡ್ಡ ವ್ಯತ್ಯಾಸವನ್ನುಂಟುಮಾಡುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹ ನನಗೆ ಸಹಾಯ ಮಾಡಿತು."

ಹಠ ಯೋಗದ ಅಭ್ಯಾಸಗಳನ್ನು ಮಾಡುವುದು ನನ್ನ ಆಸನಗಳನ್ನು ಪರಿಷ್ಕರಿಸಲು ಮತ್ತು ಪ್ರತಿ ಆಸನದಲ್ಲಿ ನನ್ನನ್ನು ಹೆಚ್ಚು ತೊಡಗಿಸಿಕೊಳ್ಳಲು ಸಹಾಯ ಮಾಡಿತು. ಗುರು ಪೂಜೆಯನ್ನು ಎರಡನೇ ಬಾರಿಗೆ ಕಲಿಯುವುದು ಉಪಯುಕ್ತವಾಗಿತ್ತು, ಏಕೆಂದರೆ ನಾನು ಅದರ ಮಹತ್ವವನ್ನು ಮೊದಲು ಅರ್ಥಮಾಡಿಕೊಂಡಿರಲಿಲ್ಲ. ಅಂತಿಮವಾಗಿ, ಕಾರ್ಯಕ್ರಮದ ಆರಂಭದಲ್ಲಿಯೇ ಸದ್ಗುರುಗಳೊಂದಿಗೆ ಸೆಶನ್ ನಡೆದಿದ್ದು ಒಂದು ಆಶೀರ್ವಾದವೇ ಆಗಿತ್ತು.  - ನೇಹಾ, 26, ಜೈಪುರ, ಭಾರತ

"ಸದ್ಗುರುಗಳು ನನಗೆ ಏನು ನೀಡಿದ್ದಾರೋ, ಅದಕ್ಕೆ ಯೋಗ್ಯಳಾಗಲು ನಾನು ನಿರ್ಧರಿಸಿದ್ದೇನೆ."

ಸದ್ಗುರುಗಳಂತಹವರು ತಮ್ಮ ಅಮೂಲ್ಯ ಸಮಯ ಮತ್ತು ಶಕ್ತಿಯನ್ನು ನನಗಾಗಿ ವಿನಿಯೋಗಿಸುವುದು ನನಗೆ ಬಹಳ ಮಹತ್ವಪೂರ್ಣವಾದುದು. ಅವರ ಕರುಣೆ ಮತ್ತು ಕಾಳಜಿ, ಇದನ್ನು ನಮಗೆ ನೀಡಲು ಅವರ ಕೇಂದ್ರೀಕೃತವಾದ ಗಮನ, ಈ ರೂಪಾಂತರದ ಮೂಲಕ ನಾವು ಹಾದು ಹೋಗಬೇಕೆಂಬ ಅವರ ತೀವ್ರ ಅಭಿಲಾಷೆ ನನ್ನನ್ನು ಕರಗಿಸಿಬಿಟ್ಟಿತು. ಸದ್ಗುರುಗಳು ನನಗೆ ಏನು ನೀಡಿದ್ದಾರೋ, ಅದಕ್ಕೆ ಯೋಗ್ಯಳಾಗಲು ನಾನು ನಿರ್ಧರಿಸಿದ್ದೇನೆ. ಏನೇ ನಡೆದರೂ. ”- ಅಶ್ವಿನಿ, 27, ಹೈದರಾಬಾದ್, ಭಾರತ  – Ashwini, 27, Hyderabad, India

life-in-sadhanapada-from-home-to-ashram-practice-session

life-in-sadhanapada-from-home-to-ashram-adiyogi-prathakshana

life-in-sadhanapada-from-home-to-ashram-adiyogi-prathakshana2

ಸಾಧನಪಾದದಲ್ಲಿ ಭಾಗವಹಿಸುವವರಿಗೆ ಸದ್ಗುರುಗಳು ಏನನ್ನು ಹೇಳಿದರು?

“ಯೋಗ ಸಾಧನೆಯ ಮೂಲ ತತ್ವ ಇದು - ನಾನು ಸ್ಪರ್ಶಿಸುವ ಪ್ರತಿಯೊಂದರಲ್ಲೂ ಸಂಪೂರ್ಣ ತೀವ್ರಾನುರಾಗದ ಒಳಗೊಳ್ಳುವಿಕೆ, ಆದರೆ ನನ್ನ ಬಗ್ಗೆ ನಿರ್ಲಿಪ್ತತೆ. ಆಗ ಮಾತ್ರ ನೀವು ಜೀವನದ ಸಾಧನಗಳನ್ನು ನಿರ್ದಿಷ್ಟ ರೀತಿಯಲ್ಲಿ ಬಳಸಲು ಸಾಧ್ಯವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ನಿಮ್ಮ ದೇಹ ಮತ್ತು ಮನಸ್ಸು ನಿಮ್ಮ ಸಾಧನಗಳಾಗಿರಬೇಕು, ಅದು ಯೋಗಸಾಧನೆ ಮಾಡುವುದರ ಹಿಂದಿರುವ ವಿಚಾರ. ಈಗ, ಯಾರಾದರೂ ನಿಮ್ಮ ವಸ್ತು / ವಿಷಯಗಳೊಂದಿಗೆ ಏನು ಬೇಕಾದರೂ ಮಾಡುತ್ತಿದ್ದಾರೆ. ನಿಮ್ಮ ದೇಹ ಮತ್ತು ಮನಸ್ಸು ಏನು ಮಾಡಬೇಕೆಂದು ಸಂದರ್ಭಗಳು ನಿರ್ಧರಿಸುತ್ತಿವೆ. ಸಾಧನಾ ಎಂದರೆ ನನ್ನ ದೇಹ ಏನು ಮಾಡಬೇಕು ಮತ್ತು ನನ್ನ ಮನಸ್ಸು ಏನು ಮಾಡಬೇಕೆಂದು ನಾನು ನಿರ್ಧರಿಸುತ್ತೇನೆ ಎಂದು.”

ಮುಂದಿನ ಭಾಗದಲ್ಲಿ....

ನೋಡುನೋಡುತ್ತಿದ್ದಂತೆ, ಸಾಧನಾಪಾದ 2019 ರ ಮೊದಲ ಎರಡು ವಾರಗಳು ಮುಕ್ತಾಯಗೊಂಡವು. ಪರಿವರ್ತನೆಯ ಶಕ್ತಿಯುತ ಉಪಕರಣಗಳನ್ನು ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ನೀಡಲಾಯಿತು. ಉಸಿರಾಡಲು ಸ್ವಲ್ಪ ಸಮಯ ಸಿಕ್ಕಿತು ಎಂದು ಅವರು ಯೋಚಿಸುವಷ್ಟರಲ್ಲಿಯೇ ಯೋಗಾಭ್ಯಾಸಗಳು ಮತ್ತು ಸೇವೆಗಳನ್ನು ಒಳಗೊಂಡಿರುವ ಪುರುಸೊತ್ತಿಲ್ಲದ ವೇಳಾಪಟ್ಟಿಯು ಅವರಿಗಾಗಿ ಕಾಯುತ್ತಿದೆ. ಈ ಸರಣಿಯ ಮುಂದಿನ ಭಾಗದಲ್ಲಿ, ಅವರು ಆಶ್ರಮ ಸೇವೆಯ ತೀವ್ರತೆಗೆ (ವಾರಾಂತ್ಯಗಳಿಲ್ಲದ!) ಹೇಗೆ ಹೊಂದಿಕೊಂಡಿದ್ದಾರೆಂದು ಮತ್ತು ಸಾಧನಾಪಾದದ ರೂಪದಲ್ಲಿ ಸದ್ಗುರುಗಳು ನೀಡಿರುವದನ್ನು ಪೂರ್ಣವಾಗಿ ಬಳಸಿಕೊಳ್ಳಲು ಅವರು ತಮ್ಮ ಇಷ್ಟಾನಿಷ್ಟಗಳನ್ನು ಮೀರಿ ಹೇಗೆ ಮನ್ನಡೆಯುತ್ತಾರೆ ಎಂಬುದನ್ನು ನಾವು ನೋಡುತ್ತೇವೆ.

Editor’s Note: Find out more about Sadhanapada and pre-register for the upcoming batch here.