ಇಂದಿನ ದಿನಗಳಲ್ಲಿ ಯೋಗವನ್ನು ಜನಪ್ರಿಯಗೊಳಿಸಿರುವುದೇನು ಮತ್ತು ಯೋಗ ಹೇಗೆ ಸಮಯದ ಪರೀಕ್ಷೆಯನ್ನು ಎದುರಿಸಿ ನಿಂತಿರುವ ಮಾನವ ಶ್ರೇಯಸ್ಸಿನ ಏಕೈಕ ಪ್ರಕ್ರಿಯೆ ಎಂಬುದರ ಬಗ್ಗೆ ಸದ್ಗುರುಗಳು ಇಲ್ಲಿ ಮಾತನಾಡುತ್ತಾರೆ.

ಸದ್ಗುರು: ಯೋಗ ಜನಪ್ರಿಯವಾಗುತ್ತಿರುವುದಕ್ಕೆ ಹಲವಾರು ಕಾರಣಗಳಿವೆ. ಒಂದು ವಿಷಯವೆಂದರೆ, ಅದು ನಿಮ್ಮ ಬಗ್ಗೆ ಕೆಲ ಮೂಲಭೂತ ಸಂಗತಿಗಳನ್ನು ನಿಮಗೆ ಮನದಟ್ಟಾಗಿಸುತ್ತದೆ. ಒಂದು ಶಿಶುವಿಹಾರದಲ್ಲಿ, ಅಲ್ಲಿನ ಶಿಕ್ಷಕನು ಮಕ್ಕಳನ್ನು, "ನಾನು ನನ್ನ ತಲೆಯ ಮೇಲೆ ನಿಂತರೆ, ತಲೆಗೆ ರಕ್ತ ಹರಿಯುವುದರಿಂದ ನನ್ನ ಮುಖ ಕೆಂಪಾಗುತ್ತದೆ. ಆದರೆ ನಾನು ಕಾಲಿನ ಮೇಲೆ ನಿಂತಲ್ಲಿ, ಹೀಗಾಗುವುದಿಲ್ಲ. ಏಕೆ?" ಎಂದು ಕೇಳಿದರು. ಒಬ್ಬ ಚಿಕ್ಕ ಹುಡುಗನು ಕೊಟ್ಟ ಉತ್ತರವಿದು: "ಯಾಕಂದ್ರೆ ಕಾಲುಗಳು ಖಾಲಿಯಾಗಿಲ್ಲ."

ಯೋಗ, ಯಾವುದೇ ಧರ್ಮಗುರುಗಳ ಪ್ರಭುತ್ವವಿಲ್ಲದೆ ಅಥವಾ ಬಲವಂತಾಗಿ ಹೇರಲ್ಪಡದೆ 15,000 ವರ್ಷಗಳಿಗಿಂತಲೂ ಜೀವಂತವಾಗಿರುವ ಏಕೈಕ ವ್ಯವಸ್ಥೆ.

ನಿಮ್ಮ ದೇಹವು ಒಂದು ಮಾಪಕ ಯಂತ್ರದಂತೆ. ಅದನ್ನು ಹೇಗೆ ನೋಡಬೇಕೆಂದು ನಿಮಗೆ ತಿಳಿದಿದ್ದರೆ, ಅದು ನಿಮ್ಮ ಬಗ್ಗೆ ಎಲ್ಲವನ್ನೂ ಹೇಳುತ್ತದೆ. ನಿಮ್ಮ ಬಗ್ಗೆ ನಿಮಗಿರುವ ಶೋಕಿ ಆಲೋಚನೆಗಳಲ್ಲ, ಅದು ನಿಮ್ಮ ಬಗೆಗಿನ ನಿಜವಾದ ಸಂಗತಿಗಳನ್ನು ತಿಳಿಸುತ್ತದೆ. ನಿಮ್ಮ ಮನಸ್ಸು ನಿಮ್ಮನ್ನು ತುಂಬಾ ಸುಲಭವಾಗಿ ಮೋಸಗೊಳಿಸುತ್ತದೆ. ಪ್ರತಿದಿನ ಅದು ನಿಮ್ಮ ಬಗ್ಗೆ ಬೇರೆ ಬೇರೆ ವಿಷಯಗಳನ್ನು ಹೇಳುತ್ತಿರುತ್ತದೆ. ಶರೀರವನ್ನು ಹೇಗೆ ಓದಬೇಕೆಂದು ನಿಮಗೆ ತಿಳಿದಿದ್ದರೆ ಅದು ಒಂದು ರೀತಿಯಲ್ಲಿ ಎಲ್ಲವನ್ನೂ ಅದಿರುವ ಹಾಗೆಯೇ ಹೇಳುತ್ತದೆ - ಹಿಂದೆ ನಡೆದಿದ್ದು, ಈಗಿನದ್ದು ಮತ್ತು ಭವಿಷ್ಯದ್ದು. ಅದಕ್ಕಾಗಿಯೇ ಮೂಲಭೂತ ಯೋಗ ಪ್ರಾರಂಭವಾಗುವುದು ದೇಹದಿಂದ.

ಕಾಲ ಬದಲಾದಂತೆ ಹಲವಾರು ವಿಷಯಗಳು ಬಂದು ಹೋದವು. ಆದರೆ ಯೋಗ, ಸಾವಿರಾರು ವರ್ಷಗಳ ಕಾಲದಿಂದ ಉಳಿದುಕೊಂಡು ಬಂದಿದೆಯಲ್ಲದೆ, ಇನ್ನೂ ಅದರ ಜನಪ್ರಿಯತೆ ಹೆಚ್ಚುತ್ತಲೇ ಇದೆ. ಇದನ್ನು ಬಹಳ ಪ್ರಾಥಮಿಕವಾಗಿ ಬೋಧಿಸಲಾಗಿದ್ದರೂ ಹಾಗೂ ಹಲವು ಬಾರಿ ಅದು ತಿರುಚಿ ಹೋಗಿದ್ದರೂ, ಅದು ಉಳಿದುಕೊಂಡು ಬಂದಿದೆ. ಯೋಗ, ಯಾವುದೇ ಧರ್ಮಗುರುಗಳ ಪ್ರಭುತ್ವವಿಲ್ಲದೆ ಅಥವಾ ಬಲವಂತಾಗಿ ಹೇರಲ್ಪಡದೆ 15,000 ವರ್ಷಗಳಿಗಿಂತಲೂ ಜೀವಂತವಾಗಿರುವ ಏಕೈಕ ವ್ಯವಸ್ಥೆ. ಮಾನವತೆಯ ಇತಿಹಾಸದಲ್ಲೆಲ್ಲೂ ಯಾರೂ ಮತ್ತೊಬ್ಬರ ಕುತ್ತಿಗೆಗೆ ಕತ್ತಿ ಹಿಡಿದು, "ನೀವು ಯೋಗ ಮಾಡಲೇ ಬೇಕು." ಎಂದಿದ್ದಿಲ್ಲ. ಇದು ಉಳಿದುಕೊಂಡು ಬಂದಿದೆ ಮತ್ತು ಜೀವಂತವಾಗಿಯೂ ಇದೆ, ಏಕೆಂದರೆ ಮಾನವ ಶ್ರೇಯಸ್ಸಿಗೆ ಇದು ಸಾಟಿಯಲ್ಲದ ಪ್ರಕ್ರಿಯೆಯಾಗಿ ಕೆಲಸ ಮಾಡಿದೆ.

ಬುದ್ಧಿಶಕ್ತಿಯ ಚಟುವಟಿಕೆಯು ಜಗತ್ತಿನಲ್ಲಿ ಪ್ರಬಲವಾದಂತೆಲ್ಲ, ಕಾಲಾಂತರದಲ್ಲಿ ಹೆಚ್ಚಿನ ಜನರು ಯೋಗವನ್ನು ತಮ್ಮದಾಗಿಸಿಕೊಳ್ಳುತ್ತಾರೆ ಮತ್ತು ಅದು ಶ್ರೇಯಸ್ಸನ್ನು ಅರಸುವ ಅತಿ ಹೆಚ್ಚು ಜನಪ್ರಿಯ ವಿಧಾನವಾಗುತ್ತದೆ.

ಮತ್ತೊಂದು ವಿಷಯವೆಂದರೆ, ಜಗತ್ತಿನಲ್ಲಿ ಜನರು - ಯುವಕರು ಅಥವಾ ವಯಸ್ಸಾದವರು - ಹಿಂದೆಂದೂ ಇದ್ದಿಲ್ಲದ ರೀತಿಯಲ್ಲಿ ಒತ್ತಡದಲ್ಲಿದ್ದಾರೆ. ಜನರಿಗೆ ಆತಂಕ ಮತ್ತು ಮಾನಸಿಕ ಅಸ್ವಸ್ಥತೆ ಇದೆ. ಈ ಆಂತರಿಕ ಪ್ರಕ್ಷುಬ್ಧತೆಯನ್ನು ನಿಭಾಯಿಸಲು ಅವರು ಬಳಸಿಕೊಳ್ಳುವ ಯಾವುದೇ ವಿಧಾನಗಳು - ಡಿಸ್ಕೋಗೆ ಹೋಗುವುದು ಅಥವಾ ಡ್ರೈವಿಗೆ ಹೋಗುವುದು ಅಥವಾ ಪರ್ವತವನ್ನು ಹತ್ತುವುದು - ಸ್ವಲ್ಪ ಮಟ್ಟಿಗೆ ಕೆಲಸ ಮಾಡಿದೆಯಷ್ಟೆ. ಆದರೆ ಅದು ಅವರಿಗೆ ಪರಿಹಾರವನ್ನು ನೀಡಿಲ್ಲ. ಆದ್ದರಿಂದ, ಯೋಗದ ಕಡೆ ಮುಖ ಮಾಡುವುದು ಬಹಳ ಸಹಜವೇ.

ಯೋಗದ ವರ್ಧಿಸುತ್ತಿರುವ ಜನಪ್ರಿಯತೆಯ ಕಾರಣ ಶಿಕ್ಷಣವು ಭಾರೀ ಪ್ರಮಾಣದಲ್ಲಿ ಆಗುತ್ತಿರುವುದ. ಭೂಮಿಯಲ್ಲಿ ಈಗ ಹಿಂದೆಂದಿಗಿಂತಲೂ ಹೆಚ್ಚು ಬುದ್ಧಿಮತ್ತೆಯಿದೆ. ಆದ್ದರಿಂದ, ಬುದ್ಧಿಶಕ್ತಿ ಪ್ರಬಲವಾದಂತೆ ಸಹಜವಾಗಿ ಜನರು ಎಲ್ಲದಕ್ಕೂ ತಾರ್ಕಿಕ ಪರಿಹಾರಗಳನ್ನು ಹುಡುಕುತ್ತಾರೆ. ಹೆಚ್ಚು ತಾರ್ಕಿಕರಾದಂತೆ, ಜನರು ವಿಜ್ಞಾನದ ಮೇಲೆ ಅವಲಂಬಿತವಾಗುತ್ತಾರೆ. ವಿಜ್ಞಾನದ ಫಲಿತಾಂಶ ತಂತ್ರಜ್ಞಾನ. ಬುದ್ಧಿಶಕ್ತಿಯ ಚಟುವಟಿಕೆಯು ಜಗತ್ತಿನಲ್ಲಿ ಪ್ರಬಲವಾದಂತೆಲ್ಲ, ಕಾಲಾಂತರದಲ್ಲಿ ಹೆಚ್ಚಿನ ಜನರು ಯೋಗವನ್ನು ತಮ್ಮದಾಗಿಸಿಕೊಳ್ಳುತ್ತಾರೆ ಮತ್ತು ಅದು ಶ್ರೇಯಸ್ಸನ್ನು ಅರಸುವ ಅತಿ ಹೆಚ್ಚು ಜನಪ್ರಿಯ ವಿಧಾನವಾಗುತ್ತದೆ.

ಯೋಗವೊಂದು ವ್ಯಾಯಾಮವಲ್ಲ

ಇಂದು, ಜಗತ್ತಿನಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಯೋಗವನ್ನು ಹೇಗೆ ಮಾಡಲಾಗುತ್ತದೆಯೆಂದರೆ, ಅದು ಮೃತಶಿಶುವಿನ ಜನನದ ಹಾಗಿದೆ. ಮೃತಶಿಶುವಿಗೆ ಜನನ ನೀಡುವುದಕ್ಕಿಂತ ಗರ್ಭಣಿಯಾಗದಿರುವುದು ಒಳ್ಳೆಯದು, ಅಲ್ಲವೇ? ನಿಮಗೆ ಉತ್ತಮ ದೇಹದಾರ್ಢ್ಯ ಹೊಂದಬೇಕು ಎಂದಿದ್ದರೆ ಟೆನ್ನಿಸ್ ಆಟ ಆಡಿ, ಬೆಟ್ಟ ಹತ್ತಿ. ಯೋಗ ಒಂದು ವ್ಯಾಯಾಮವಲ್ಲ; ಅದು ಬೇರೆ ಆಯಾಮಗಳನ್ನು ಹೊಂದಿದೆ. ದೈಹಿಕ ಫಿಟ್‌ನೆಸ್ ನ ಇನ್ನೊಂದು ಆಯಾಮವನ್ನು ನೀವು ಯೋಗದಿಂದ ಪಡೆಯುವಿರಿ. ಅದರಿಂದ ನೀವು ಆರೋಗ್ಯವನ್ನು ಪಡೆಯಬಹುದು, ಆದರೆ ದೇಹದಾರ್ಢ್ಯವನ್ನಲ್ಲ.

ಯೋಗವನ್ನು ಅಭ್ಯಾಸ ಮಾಡಬೇಕಾದದ್ದು ಒಂದು ಸೂಕ್ಷ್ಮವಾದ, ಸೌಮ್ಯವಾದ ರೀತಿಯಲ್ಲಿ,  ಮಾಂಸಖಂಡಗಳನ್ನು ವರ್ಧಿಸುವ ಬಲಪೂರ್ವಕವಾದ ರೀತಿಯಲ್ಲಲ್ಲ, ಏಕೆಂದರೆ ಯೋಗವು ವ್ಯಾಯಾಮದ ಬಗ್ಗೆಯಾಗಿಲ್ಲ.

ಯೋಗ ಪಾಶ್ಚಿಮಾತ್ಯ ದೇಶಗಳನ್ನು ಪ್ರವೇಶಿಸಿ ಇಪ್ಪತ್ತು ವರ್ಷಗಳಾಗಿ, ಅದು ಜನಪ್ರಿಯವಾದ ನಂತರ, ವೈದ್ಯಕೀಯ ಪರಿಣತರು ಮುಂದೆ ಬಂದು, ಇದರ ಬಗ್ಗೆ ಅಧ್ಯಯನ ನಡೆಸಿ, "ಯೋಗದಿಂದ ಪ್ರಯೋಜನಗಳಿವೆ" ಎನ್ನುತ್ತಿದ್ದಾರೆ. ಇದನ್ನು ಕ್ಷುಲ್ಲಕ ರೀತಿಯಲ್ಲಿ ಕಲಿಸುತ್ತಿದ್ದರೂ ಕೂಡ, ಜಗತ್ತಿನಾದ್ಯಂತ ಯೋಗದಿಂದಾಗುವ ಲಾಭಗಳನ್ನು ಅಲ್ಲೆಗೆಳೆಯಲಾಗದು. ಆದರೆ ಯೋಗದ ಅನುಚಿತ ಮತ್ತು ವಿಕೃತ ರೂಪಗಳು ಜಗತ್ತಿನಲ್ಲಿ ಹರಡಿದರೆ, ಹತ್ತು ಹದಿನೈದು ವರ್ಷಗಳಲ್ಲಿ, ಈ ರೀತಿಯಾದ ಯೋಗವು ಮಾನವರಿಗೆ ಎಷ್ಟು ಹಾನಿಕಾರಕವಾಗಿದೆ ಎಂದು ಹೇಳುವಂತಹ ವೈಜ್ಞಾನಿಕ ಅಧ್ಯಯನಗಳು ಹೊರಬರುತ್ತವೆ, ಮತ್ತದು ಯೋಗದ ಅವನತಿಯನ್ನು ತರುತ್ತದೆ.

ಯೋಗವನ್ನು ಅಭ್ಯಾಸ ಮಾಡಬೇಕಾದದ್ದು ಒಂದು ಸೂಕ್ಷ್ಮವಾದ, ಸೌಮ್ಯವಾದ ರೀತಿಯಲ್ಲಿ,  ಮಾಂಸಖಂಡಗಳನ್ನು ವರ್ಧಿಸುವ ಬಲಪೂರ್ವಕವಾದ ರೀತಿಯಲ್ಲಲ್ಲ, ಏಕೆಂದರೆ ಯೋಗವು ವ್ಯಾಯಾಮದ ಬಗ್ಗೆಯಾಗಿಲ್ಲ. ಈ ಭೌತಿಕ ಶರೀರವನ್ನು ನೀವು ಓದಲು ಸಿದ್ಧರಿದ್ದರೆ, ಎಲ್ಲವನ್ನೂ - ಈ ಬ್ರಹ್ಮಾಂಡವು ಶೂನ್ಯತೆಯಿಂದ ಈ ಹಂತಕ್ಕೆ ಹೇಗೆ ವಿಕಸನಗೊಂಡಿತು ಎನ್ನುವ ಎಲ್ಲವನ್ನೂ ಈ ಶರೀರದೊಳಗೆ ಬರೆಯಲಾಗಿದೆ. ಯೋಗ, ಆ ನೆನಪನ್ನು ತೆರೆಯುವ, ಮತ್ತು ಈ ಜೀವನವನ್ನು ಪರಮ ಸಾಧ್ಯತೆಯೆಡೆಗೆ ಪುನರ್ವ್ಯವಸ್ಥಿತಗೊಳಿಸುವ ಮಾರ್ಗವಾಗಿದೆ. ಇದೊಂದು ಅತ್ಯಂತ ಸೂಕ್ಷ್ಮ ಮತ್ತು ವೈಜ್ಞಾನಿಕ ಪ್ರಕ್ರಿಯೆ.

ಸಂಪಾದಕರ ಟಿಪ್ಪಣಿ: ವೀಕ್ಷಿಸಿ "ಸ್ವಪರಿವರ್ತನೆಗಾಗಿ 5 ನಿಮಿಷಗಳ ಯೋಗ ಸಾಧನಗಳು" - ಸಂತೋಷ, ಶಾಂತಿ, ಕ್ಷೇಮ, ಯಶಸ್ಸುಗಳಿಗಾಗಿ ಸರಳ ಉಪ-ಯೋಗ ಅಭ್ಯಾಸಗಳು “5-minute Yoga Tools for Transformation” ಇವುಗಳು ಸದ್ಗುರು ಆಪ್ ನಲ್ಲೂ ಲಭ್ಯ download the app,ಉಪ-ಯೋಗವನ್ನು ಕಲಿಸಲು ನೀವೂ ತರಬೇತಿಯನ್ನು ಪಡೆದು ತರಗತಿಗಳನ್ನು ನಡೆಸಬಹುದು.