ನಿದ್ದೆ ಮಾಡಿದ್ದೂ ಜಾಗೃತರಾಗಿರುವುದು ಮತ್ತು ಪ್ರಜ್ಞೆಯಿಂದಿರುವುದಕ್ಕೆ ಸಾಧ್ಯವೇ? ಸದ್ಗುರುಗಳು ಶೂನ್ಯ ಮತ್ತು ಸುಷುಪ್ತಿಯ ಸ್ಥಿತಿಯನ್ನು ಅನುಭವಿಸಲು ಏನು ಬೇಕೆಂದು ಮಾತನಾಡುತ್ತಾರೆ.

ಪ್ರಶ್ನೆ: ನಮಸ್ಕಾರಮ್, ಸದ್ಗುರು. ನಿದ್ರೆಯ ಸಮಯದಲ್ಲಿ, ಸಾಮಾನ್ಯವಾಗಿ ನಮಗೆ ಪ್ರಜ್ಞೆಯಿರುವುದಿಲ್ಲ. ಮಲಗಿದ್ದಾಗ ನಾವು ಅರಿವಿಂದಿರಲು ಯಾವುದಾದರೊಂದು ಮಾರ್ಗವಿದೆಯೇ?

ಸದ್ಗುರು: ನೀವು ನಿದ್ದೆ ಮಾಡುವಾಗ ಸುಮ್ಮನೆ ಮಲಗಿ ಅಷ್ಟೆ. ಬೇರೇನೂ ಮಾಡಲು ಪ್ರಯತ್ನಿಸಬೇಡಿ. ಒಂದು ಸುಂದರವಾದ ಕಥೆ ಇದೆ. ಅನೇಕಾನೇಕ ವರ್ಷಗಳವರೆಗೆ ಸಪ್ತರ್ಷಿಗಳು ಸಾಧನೆ ಮಾಡುತ್ತಾ, ಕಲಿಯುತ್ತಾ ಮತ್ತು ಆದಿಯೋಗಿಯೊಂದಿಗೆ ಪ್ರೀತಿ ವಿಶ್ವಾಸದ ಬಾಂಧವ್ಯವನ್ನು ಬೆಳೆಸಿಕೊಂಡು ಅವನೊಂದಿಗಿದ್ದರು. ಅವರ ಬಾಂಧವ್ಯ ಎಷ್ಟು ಗಾಢವಾಗಿತ್ತೆಂದರೆ, ಅವನನ್ನು ಬಿಟ್ಟು ಅವರಿಗೆ ಬೇರೇನೂ ತಿಳಿದಿರಲಿಲ್ಲ. ಆದರೆ ಒಂದು ದಿನ, "ಇನ್ನು ನೀವು ಹೊರಡುವ ಸಮಯ. ನೀವು ಇದನ್ನು ಜಗತ್ತಿಗೆ ಕೊಂಡೊಯ್ಯಬೇಕು." ಎಂದು ಅವನು ಹೇಳಿದನು. ಅವರು ಬಹುದೂರದ ಸ್ಥಳಕ್ಕೆ ತೆರಳಲು ಹೇಳಿದನು. ಒಬ್ಬರು ಮಧ್ಯ ಏಷ್ಯಾಕ್ಕೆ, ಒಬ್ಬರು ಉತ್ತರ ಆಫ್ರಿಕಾಕ್ಕೆ, ಒಬ್ಬರು ದಕ್ಷಿಣ ಅಮೆರಿಕಾಕ್ಕೆ, ಒಬ್ಬರು ಆಗ್ನೇಯ ಏಷ್ಯಾಕ್ಕೆ, ಒಬ್ಬರು ದಕ್ಷಿಣ ಭಾರತಕ್ಕೆ ಮತ್ತು ಒಬ್ಬರು ಇಂದು ಭಾರತದ ಭಾಗವಾಗಿರು ಹಿಮಾಲಯಕ್ಕೆ ಹೋಗಲು ಹೇಳಿದನು. ಒಬ್ಬನು ಮಾತ್ರವೇ ಅವನೊಂದಿಗೆ ಅಲ್ಲಿಯೇ ಉಳಿದುಕೊಂಡನು

ನೀವು ನಿಮ್ಮನ್ನು ನಿಮ್ಮ ದೇಹದೊಂದಿಗೆ ಗುರುತಿಸಿಕೊಂಡಿರದಿದ್ದರೆ ಮಾತ್ರ, ಮಲಗಿದ್ದಾಗ ಅರಿವಿನಿಂದಿರುವುದು ಒಂದು ಸಾಧ್ಯತೆಯಾಗುತ್ತದೆ.

15,000 ವರ್ಷಗಳ ಹಿಂದೆ ನೀವು ಒಬ್ಬ ವ್ಯಕ್ತಿಗೆ ದಕ್ಷಿಣ ಅಮೆರಿಕಾಕ್ಕೆ ಹೋಗಿ ಎಂದು ಹೇಳಿದ್ದರೆ, ನೀವು ಇನ್ನೊಂದು ನಕ್ಷತ್ರಪುಂಜಕ್ಕೆ ಹೋಗಿ ಎಂದು ಅವನಿಗೆ ಹೇಳುವುದಕ್ಕೆ ಸಮನಾಗಿರುತ್ತಿತ್ತು. ಸಪ್ತರ್ಷಿಗಳು, “ನಾವು ಎಲ್ಲಿಗೆ ಹೋಗುತ್ತಿದ್ದೇವೆ, ಅಲ್ಲಿ ಯಾವ ರೀತಿಯ ಜನರಿದ್ದಾರೆ, ಅವರು ನಮ್ಮನ್ನು ಹೇಗೆ ಸ್ವೀಕರಿಸುತ್ತಾರೆ ಮತ್ತು ಅವರು ಇದಕ್ಕೆ ಸಿದ್ಧರಿದ್ದಾರೋ ಇಲ್ಲವೋ ನಮಗೆ ತಿಳಿದಿಲ್ಲ. ನಾವು ಅಪಾಯದಲ್ಲಿದ್ದರೆ ಅಥವಾ ನೀನು ಹೇಳಿದಂತೆ ನಮಗೆ ಇದನ್ನು ಪ್ರಸರಿಸಲು ಸಾಧ್ಯವಾಗದಿದ್ದರೆ, ನೀನು ನಮ್ಮನ್ನು ಕಾಪಾಡುತ್ತೀಯಾ?” ಎಂದು ಆದಿಯೋಗಿಯನ್ನು ಕೇಳಿದರು. ಅವರು ಹೀಗೆ ಹೇಳುತ್ತಿರುವುದನ್ನು ಕೇಳಿ ಆದಿಯೋಗಿಗೆ ಆಶ್ಚರ್ಯವಾಗಿ, "ನೀವು ತೊಂದರೆಯಲ್ಲಿದ್ದರೆ, ನೀವು ಅಥವಾ ನಿಮ್ಮ ಕೆಲಸ ಅಪಾಯದಲ್ಲಿದ್ದರೆ, ನಾನು ನಿದ್ರೆ ಮಾಡುತ್ತೇನೆ." ಎಂದು ಹೇಳಿದ. ಅವರಿಗೆ ಅವನ ಮಾತು ಅರ್ಥವಾಯಿತು. ಆದರೆ ಇದನ್ನೇ ನಾನು ನಿಮಗೆ ಹೇಳಿದರೆ, ನಿಮಗೆ ಅತೀವ ಅಭದ್ರತೆ ಭಾವನೆ ಉಂಟಾಗಿ, ಅವಮಾನವಾಗುತ್ತದೆ. " ನನ್ನ ಕಷ್ಟಗಳನ್ನು ನಾನು ಇವರ ಬಳಿ ತೋಡಿಕೊಂಡರೆ, ಅದನ್ನು ಯೋಚಿಸುತ್ತಾ ಮಲಗುತ್ತೇನೆ ಎನ್ನುತ್ತಾರಲ್ಲ!"

ಮಲಗಿದ್ದಾಗ ಅರಿವಿನಿಂದ ಇರುವುದಕ್ಕೆ, ನಿಮಗೆ ದೇಹದ ಪ್ರಜ್ಞೆ ಇರಬಾರದು. ದೇಹದೊಂದಿಗಿನ ನಿಮ್ಮ ಗುರುತಿಸುವಿಕೆಯು ಸಂಪೂರ್ಣವಾಗಿ ಮುರಿದರೆ ಮಾತ್ರ, ಮಲಗಿದ್ದಾಗ ನಿಮಗೆ ಅರಿವಿರುತ್ತದೆ. ನಾವು ಎಚ್ಚರವಿರುವಾಗ ನಮಗೆ ಅರಿವಿರುತ್ತದೆ, ಆದರೆ ನಿಮ್ಮ ಪ್ರಾಣಶಕ್ತಿಯು ಅನೇಕ ವಿಷಯಗಳಲ್ಲಿ ತೊಡಗಿರುತ್ತದೆ. ನಾವು ಎದ್ದು ಕುಳಿತುಕೊಳ್ಳಬೇಕು, ಮಾತನಾಡಬೇಕು, ಒಂದಷ್ಟು ಕೆಲಸ ಮಾಡಬೇಕು, ಇನ್ನೇನೋ ಮಾಡಬೇಕು. ಆದರೆ ನಾನು ಅರಿವಿನಿಂದ ಮಲಗಿದರೆ, ನಮ್ಮ ಪ್ರಾಣಶಕ್ತಿಯೆಲ್ಲಾ ಕ್ರೋಢಿಕರಿಸಲ್ಪಡುತ್ತದೆ ಮತ್ತು ನಾನಿನ್ನೂ ಪ್ರಜ್ಞಾವಸ್ಥೆಯಲ್ಲಿರುತ್ತೇನೆ. ಇದರರ್ಥ ನಾನು ನನ್ನ ಗರಿಷ್ಠ ಕಾರ್ಯಕ್ಷಮತೆಯ ಮಟ್ಟದಲ್ಲಿದ್ದೇನೆ ಎಂದು. ಆದ್ದರಿಂದ, ಶಿವ, "ನೀವು ತೊಂದರೆಯಲ್ಲಿದ್ದಾಗ ನಾನು ಮಲಗುತ್ತೇನೆ." ಎಂದಾಗ, ಅವನು ತನ್ನ ಅತ್ಯುತ್ತಮವಾದ ಸ್ಥಿತಿಯಲ್ಲಿದ್ದು, "ನನ್ನಿಂದ ಸಾಧ್ಯವಾದದ್ದನ್ನೆಲ್ಲ ಮಾಡುತ್ತೇನೆ" ಎಂದು ಅದರರ್ಥ.

ನಿಮ್ಮಲ್ಲಿ ಶೂನ್ಯ ಧ್ಯಾನಕ್ಕೆ ದೀಕ್ಷೆ ಪಡೆದವರು, ಯೋಗದಲ್ಲಿ ಸುಷುಪ್ತಿ ಎಂದು ಕರೆಯಲ್ಪಡುವ ಕೆಲವು ಕ್ಷಣಗಳನ್ನು ಇಲ್ಲಿ ಅಲ್ಲಿ ಅನುಭವಿಸಿರಬಹುದು. ಸುಷುಪ್ತಿ ಎಂದರೆ ನಿದ್ರಾವಸ್ಥೆಯಲ್ಲಿದ್ದರೂ ಸಂಪೂರ್ಣವಾಗಿ ಎಚ್ಚರವಾಗಿರುವಿರಿ ಎಂದು. ಈ ಸುಷುಪ್ತಿಯ ಸ್ಥಿತಿ ಕೇವಲ ಎರಡು ಮೂರು ಸೆಕೆಂಡುಗಳವರೆಗೆ ಮಾತ್ರ ಇದ್ದಂತಹ ದಿನ, ನಿಮಗೆ ಆ ರಾತ್ರಿಯಲ್ಲಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ನೀವು ಚುರುಕಾಗಿರುತ್ತೀರಿ ಮತ್ತು ಜಾಗೃತರಾಗಿರುತ್ತಿರಿ.

ನೀವು ನಿಮ್ಮನ್ನು ನಿಮ್ಮ ದೇಹದೊಂದಿಗೆ ಗುರುತಿಸಿಕೊಂಡಿರದಿದ್ದರೆ ಮಾತ್ರ, ಮಲಗಿದ್ದಾಗ ಅರಿವಿನಿಂದಿರುವುದು ಒಂದು ಸಾಧ್ಯತೆಯಾಗುತ್ತದೆ. ಒಂದು ದಿನ ಒಂದು ಆಮೆ, ಬಹಳ ಶ್ರಮಪಡುತ್ತಾ, ಬಹಳ ಎಚ್ಚರಿಕೆಯಿಂದ ನಿಧಾನವಾಗಿ, 24 ಗಂಟೆಗಳನ್ನು ತೆಗೆದುಕೊಂಡು ಒಂದು ಮರದ ಮೇಲೆ ಹತ್ತಿ, ಕೊಂಬೆಯಿಂದ ಹಾರಿ, ಕೆಳಗೆ ಬಿದ್ದಿತು. ಮತ್ತೆ, ನಿಧಾನವಾಗಿ, ಇನ್ನೊಂದು 24 ಗಂಟೆಗಳನ್ನು ತೆಗೆದುಕೊಂಡು, ತೆವಳುತ್ತಾ ಮೆಲೆ ಹತ್ತಿ, ಹಾರಿ, ಕೆಳಗೆ ಬಿದ್ದಿತು. ಇದನ್ನೆ ಮತ್ತೆ ಮತ್ತೆ ಮಾಡಿತು. ನಾಲ್ಕು ದಿನಗಳ ನಂತರ, ಎದುರುಗಡೆಯ ಮರದಲ್ಲಿ ಕುಳಿತಿದ್ದ ಎರಡು ಪಕ್ಷಿಗಳಲ್ಲಿ ಒಂದು ಪಕ್ಷಿ ಇನ್ನೊಂದು ಪಕ್ಷಿಗೆ, "ಅವನನ್ನು ದತ್ತು ತೆಗೆದುಕೊಂಡಿದ್ದು ಎಂದು ಹೇಳುವ ಸಮಯ ಬಂದಿದೆ ಎಂದು ನನಗಿಸುತ್ತದೆ" ಎಂದು ಹೇಳಿತು. ಆದ್ದರಿಂದ ನಿಮಗೆ ಹೇಳುವ ಸಮಯ ಬಂದಿದೆ ಎಂದು ನನಗಿನಿಸಿತು, ಮಲಗಿದ್ದಾಗ ಅರಿವಿನಿಂದಿರಲು ಶ್ರಮ ಅಗತ್ಯವಾದರೂ ಅದೇ ಸಾಲದು. ನಿಮ್ಮ ಭೌತಿಕ ಸ್ವರೂಪದಿಂದ ನಿಮ್ಮನ್ನು ದೂರ ಮಾಡಿಕೊಳ್ಳುವುದು ಅತ್ಯಂತ ಮುಖ್ಯವಾದ ವಿಷಯ.

ಸಂಪಾದಕರ ಟಿಪ್ಪಣಿ: ಸದ್ಗುರುಗಳ ಅಂತದೃಷ್ಟಿಯ ಬಗ್ಗೆ ಇನ್ನು ಹೆಚ್ಚು ತಿಳಿಯಲು ಈಶ ಡೌನ್‍ಲೋಡ್‍ನಲ್ಲಿ ಲಭ್ಯವಿರುವ ಇ-ಬುಕ್ ಆದ “ಆಫ್ ಮಿಸ್ಟಿಕ್ಸ್ ಆಂಡ್ ಮಿಸ್ಟೇಕ್ಸ್” ನಲ್ಲಿ ಹುಡುಕಿ

ಈ ಲೇಖನದ ಆವೃತ್ತಿಯನ್ನು ಮೂಲತಃ ’ಇಶಾ ಫಾರೆಸ್ಟ್ ಫ್ಲವರ್‌’ನಲ್ಲಿ ಪ್ರಕಟಿಸಲಾಗಿತ್ತು.