ಪ್ರಶ್ನೆ: ಸದ್ಗುರುಗಳೇ, ಪ್ರಪಂಚದಲ್ಲಿ ಎಷ್ಟೊಂದು ಜನ ಪ್ರತಿ ದಿನ ನೋವಿನಿಂದ ನರಳುತ್ತಿದ್ದಾರೆ. ಈ ನೋವನ್ನು ಹೇಗೆ ಸಂಭಾಳಿಸುವುದು.?

ಸದ್ಗುರು: ನೋವು ದೈಹಿಕವಾದದ್ದು. ನೋವು ದೇಹಕ್ಕೆ ಸಂಬಂಧಿಸಿದ್ದು ಮತ್ತು ಅದು ಒಳ್ಳೆಯದು. ನಾನು "ನೋವು ಒಳ್ಳೆಯದು ಎಂದಾಗ". ನಾನು ನಿಮಗೆ ನೋವು ಇರಬೇಕೆಂದು ಆಶೀರ್ವದಿಸುತ್ತಿಲ್ಲ. ಸಧ್ಯಕ್ಕೆ ನೋವು ನಿಮಗೆ ಒಳ್ಳೆಯದು ಏಕೆಂದರೆ ನಿಮ್ಮ ದೇಹವನ್ನು ನೋವಿಲ್ಲದೆ ನಿಮ್ಮನ್ನು ರಕ್ಷಿಸಿಕೊಳ್ಳಲು ನಿಮಗೆ ಬೇಕಾದ ಬುದ್ದಿವಂತಿಕೆ ಇಲ್ಲ. ನಿಮ್ಮ ದೇಹದಲ್ಲಿ ಎಲ್ಲೆಲ್ಲಿ ನೋವಿಲ್ಲವೋ ಉದಾಹರಣೆಗೆ ಕೂದಲು ಮತ್ತೆ ಉಗುರು. ನೀವೇ ನೋಡಿ ಅವನ್ನು ಎಷ್ಟು ರೀತಿಯಲ್ಲಿ ಅದನ್ನು ಕತ್ತರಿಸುತ್ತಿದ್ದೀರಿ.

ಒಂದು ವೇಳೆ ನಿಮ್ಮ ದೇಹದಲ್ಲಿ ಪೂರ್ಣವಾಗಿ ನೋವೇ ಇಲ್ಲವೆಂದುಕೊಳ್ಳೋಣ, ಫ್ಯಾಶನ್ ಹೆಸರಿನಲ್ಲಿ ನಿಮ್ಮನ್ನು ನೀವೇ ಅತೀ ಕಡಿಮೆ ಸಮಯದಲ್ಲಿ ನಾಶ ಮಾಡಿಕೊಳ್ಳುತ್ತೀರಿ. ಆದರೆ ಈಗ, ನೀವು ರಸ್ತೆಯಲ್ಲಿ ನಡೆಯುತ್ತಿದ್ದರೆ ಒಂದು ಸೈಕಲ್ ಅಡ್ಡ ಬಂದರೂ, ನೀವು ಹಿಂದಕ್ಕೆ ಹೋಗುವಿರಿ. ಇದು ನೀವು ನಮ್ರತೆಯಿಂದ ಮಾಡುತ್ತಿರುವುದಲ್ಲ, ನಿಮಗೆ ಗೊತ್ತು ನೋವಿನ ಪರಿಣಾಮವೇನೆಂದು. ನಿಮ್ಮ ದೇಹದಲ್ಲಿ ನೋವೇ ಇಲ್ಲವೆಂದಾದರೆ, ಒಂದು ದೊಡ್ಡ ಟ್ರಕ್ ನಿಮ್ಮ ಕಡೆಗೆ ಬಂದರೂ, ನೀವು ಕದಲುತ್ತಿರಲಿಲ್ಲ.

ನರಳುವಿಕೆ ಸ್ವಯಂಕೃತವಾದದ್ದು

ಆದರೆ ನರಳುವಿಕೆ ಸ್ವಯಂಕೃತವಾದದ್ದು. ನೋವಿದ್ದು ನರಳುವಿಕೆ ಹೇಗೆ ಇರುವುದಿಲ್ಲ? ನನ್ನ ಸ್ವಂತ ಜೀವನದಲ್ಲಿ ಬಹಳ ವರ್ಷಗಳ ಹಿಂದೆ ನನ್ನ ಮೋಟಾರ್ ಸೈಕಲ್ ದಿನಗಳಲ್ಲಿ, ನಾನು ಇಡೀ ದೇಶ ಸುತ್ತುತ್ತಿದ್ದೆ. ಒಂದು ಬಾರಿ ಒಂದು ಭಯಾನಕ ಅಪಘಾತ ನಡೆದಿತ್ತು. ಒಂದು ಗಾಡಿ ಹಿಂದಿನಿಂದ ಬಂದು ನನ್ನ ಕಾಲನ್ನು ನಿಲ್ಲಿಸಿದ್ದ ಗಾಡಿಯ ಕಾಲೂರುವ ಸ್ಥಳಕ್ಕೆ ಒತ್ತಿ ಹಾಕಿತು. ಆ ಜಾಗ ಮೊಂಡಾಗಿದ್ದರೂ, ನನ್ನ ಕಾಲಿನ ಮಾಂಸ ಮೂಳೆಯವರೆಗೆ ಕಿತ್ತುಕೊಂಡು ಹೋಯಿತು.

ನಾನು ಒಂದು ದೂರದ ಸ್ಥಳದಲ್ಲಿದ್ದೆ, ಅಲ್ಲೇ ಒಂದು ಸಣ್ಣ ಚಿಕಿತ್ಸಾಲಯಕ್ಕೆ ಹೋದೆ. ಅಲ್ಲಿ ಅನಸ್ತೇಷಿಯಾ ವ್ಯವಸ್ಥೆ ಇರಲಿಲ್ಲ. ಆ ಡಾಕ್ಟರ್ ನೋಡಿ ಹೇಳಿದರು, "ಇದನ್ನು ಅನಸ್ತೇಷಿಯಾ ಇಲ್ಲದೆ ಮಾಡಲು ಸಾಧ್ಯವೇ ಇಲ್ಲ, ನೀವು ಇದನ್ನು ಸರಿಮಾಡಬೇಕೆಂದರೆ ಒಡನೆಯೇ ದೊಡ್ಡ ಆಸ್ಪತ್ರೆಗೆ ಹೋಗಬೇಕು, ಏಕೆಂದರೆ ನಿಮಗೆ ಅನಸ್ತೇಷಿಯಾ ಬೇಕು" ಎಂದರು. ಆ ಆಸ್ಪತ್ರೆ ಸ್ವಲ್ಪ ದೂರದಲ್ಲಿತ್ತು. ಮತ್ತು ಅದು ನಾನು ಹೋಗಬೇಕೆಂದಿರುವ ಸ್ಥಳಕ್ಕೆ ವಿರುದ್ಧ ದಾರಿಯಲ್ಲಿತ್ತು.ನನಗೆ ನನ್ನ ಜೀವನದಲ್ಲಿ ಹಿಂದಕ್ಕೆ ಹೋಗುವ ಅಭ್ಯಾಸವಿರಲಿಲ್ಲ, ಅದು ನನ್ನ ಸಮಸ್ಯೆ. ಅದೇನೇ ಆಗಲಿ ನಾನು ಸುಮ್ಮನೆ ಮುಂದಕ್ಕೆ ಹೋಗುವೆ. ಅವರು ಹೇಳಿದರು "ನೀನು ಹೀಗೆ ಎಲ್ಲಿಗೂ ಹೋಗಲಾರೆ", ಈ ವಾಗ್ವಾದದಲ್ಲಿ, ಅವರ ಕ್ಲಿನಿಕ್ ನಲ್ಲಿ ರಕ್ತದ ಪ್ರವಾಹವಾಯಿತು, ಕಡೆಗೆ ಅವರು ಒಪ್ಪಿಕೊಂಡರು, ನನ್ನ ವಾಗ್ವಾದ ಗೆಲ್ಲಲಿಲ್ಲ ರಕ್ತ ಗೆದ್ದಿತು!

ಅವರು ನನಗೆ ಹೊಲಿಗೆ ಹಾಕಿದರು - ಅನಸ್ತೇಷಿಯಾ ಇಲ್ಲದೆ ನನ್ನ ಕಾಲಿನ ಮಾಂಸವನ್ನು ಜೊತೆಗೂಡಿಸಲು 54 ಹೊಲಿಗೆಗಳು ಮೂರು ಹಂತಗಳಲ್ಲಿ ಬಿದ್ದವು. ಈ ಇಡೀ ಸಮಯದಲ್ಲಿ, ನಾನು ಡಾಕ್ಟರ್ ಜೊತೆ ಮಾತನಾಡುತ್ತಲೇ ಇದ್ದೆ, ಅವರು ಬೆವರುತ್ತ ಮೇಲುಸಿರು ತೆಗೆದುಕೊಳ್ಳುತ್ತಿದ್ದರು. ಅದು ಮುಗಿದಮೇಲೆ, ಅವರು ಕೇಳಿದರು, ‘ನಿನ್ನ ಕಾಲಿನಲ್ಲಿ ನೋವೇ ಇಲ್ಲವೇ, ನೀನು ನನ್ನೊಂದಿಗೆ ಮಾತನಾಡುತ್ತಲೇ ಇರುವೆ.’ ಬಹಳ ನೋವಿತ್ತು, ಆದರೆ ಅದನ್ನು ನರಳುವಿಕೆಯಾಗಿ ಮಾಡಿಕೊಳ್ಳಬೇಕಿಲ್ಲ. ನರಳುವಿಕೆ ಸ್ವಯಂಕೃತ. ನೋವು ದೇಹಕ್ಕೆ ಮಾತ್ರ ಇದೆ; ಅದು ಸಹಜ. ನೋವಿಲ್ಲದಿದ್ದರೆ, ನಿಮ್ಮ ಕಾಲನ್ನು ಕತ್ತರಿಸಿ ಹಾಕಿದರೂ ನಿಮಗೆ ತಿಳಿಯುವುದಿಲ್ಲ.

 

IEO

ದೇಹವಿಲ್ಲದ ಯೋಗಿ

ನೀವು ನರಳುವುದಕ್ಕೆ ಮತ್ತು ನಿಮ್ಮ ಸುತ್ತ ಇರುವವವರನ್ನು ನರಳಿಸುವುದಕ್ಕೆ ಇರುವುದು ಒಂದೇ ಕಾರಣ ಏಕೆಂದರೆ ನಿಮಗೆ ಅರಿವಿಲ್ಲದೇ ಇರುವುದು.

ಹೇಗೆ ದೈಹಿಕ ಶರೀರವಿದೆಯೋ ಹಾಗೆ ಮಾನಸಿಕ ಶರೀರವಿದೆ ಮತ್ತು ಪ್ರಾಣಶಕ್ತಿಯ ಶರೀರವಿದೆ. ಪ್ರಾಣ ಶಕಿಯನ್ನು ನಾವು ಪ್ರಾಣಮಯ ಕೋಶವೆಂದು ಕರೆಯುತ್ತೇವೆ. ಈ ಪ್ರಾಣಮಯಕೋಶದಲ್ಲಿ 72,000 ನಾಡಿಗಳಿವೆ. ಅದರ ಮೂಲಕ ಪ್ರಾಣ ಶಕ್ತಿ ಹರಿಯುತ್ತದೆ.

ನೀವು ಬದುಕಿರಲು ಎಲ್ಲ 72,000 ನಾಡಿಗಳು ಸಕ್ರಿಯವಾಗಿರಬೇಕಾಗಿಲ್ಲ, ನೀವು ಸಂಪೂರ್ಣ ಭೌತಿಕ ಜೀವನವನ್ನು ನಡೆಸಲು ಕೆಲವು ಮೂಲಭೂತವಾದ ನಾಡಿಗಳಿದ್ದರೆ ಸಾಕು. 72,000 ನಾಡಿಗಳೂ ಸಕ್ರಿಯವಾಗಿದ್ದರೆ ನಿಮಗೆ ದೇಹದ ಭಾವನೆಯೇ ಇರುವುದಿಲ್ಲ. ಅದು ನಿಮ್ಮ ಅನುಭವಕ್ಕೆ ಬರುವುದಿಲ್ಲ. ನೀವು ಇಲ್ಲಿ ಕುಳಿತು ನಿಮ್ಮ ದೇಹದ ಭಾವನೆಯಿಂದ ವಿಮುಕ್ತರಾಗಿರುವ ಸ್ವತಂತ್ರವನ್ನು ಊಹಿಸಬಲ್ಲಿರಾ. ಉದಾಹರಣೆಗೆ ನೀವು ಇಲ್ಲಿ ಕುಳಿತು ಧ್ಯಾನ ಮಾಡಬೇಕೆಂದುಕೊಳ್ಳುವಿರಿ ಆದರೆ ಸ್ವಲ್ಪ ಸಮಯವಾದ ಮೇಲೆ ನಿಮ್ಮ ಕಾಲುಗಳು ನೋಯುತ್ತವೆ, ನಿಮ್ಮಲ್ಲಿ ಬರೀ ಕಾಲು ನೋವೇ ಉಳಿಯುತ್ತದೆ. ಬೇರೆ ಎಲ್ಲ ಮಾನವ ಲಕ್ಷಣಗಳು ಮಾಯವಾಗುತ್ತವೆ. ಆದರೆ ನೀವು 72,000 ನಾಡಿಗಳನ್ನು ಸಕ್ರಿಯೆಯಾಗಿಸಿದರೆ ನೀವು ಇಲ್ಲಿ ಕುಳಿತರೆ ದೇಹದ ಭಾವನೆಯೇ ಇರುವುದಿಲ್ಲ. ನೀವು ನಿಮ್ಮ ದೇಹವನ್ನು ಹೇಗಾದರೂ ಉಪಯೋಗಿಸಬಹುದು. ದೇಹಕ್ಕೆ ನಿಮ್ಮ ಮೇಲೆ ಅಧಿಕಾರವಿರುವುದಿಲ್ಲ.

ಸದಾಶಿವರವರು ನಿರ್ಕಾಯರಾಗಿದ್ದರು. ಅವರಿಗೆ ದೇಹದ ಭಾವನೆಯೇ ಇಲ್ಲದಿದ್ದರಿಂದ ಬಟ್ಟೆ ಹಾಕಿಕೊಳ್ಳುವ ಪ್ರಶ್ನೆಯೇ ಇರಲಿಲ್ಲ. ಅವರು ನಗ್ನ ಯೋಗಿ ಅವರು ಹೇಗಿದ್ದರೋ ಹಾಗೆಯೇ ಓಡಾಡುತ್ತಿದ್ದರು. ಒಂದು ದಿನ ಅವರು ರಾಜನ ತೋಟದಲ್ಲಿ ನಡೆದು ಹೋಗುತ್ತಿದ್ದರು, ರಾಜನು ಅವನ ರಾಣಿಯರೊಂದಿಗೆ ನದಿ ತೀರದಲ್ಲಿ ವಿಹರಿಸುತ್ತಿದ್ದ. ಸದಾಶಿವರವರು ಆ ಹೆಂಗಸರ ಮುಂದೆ ನಗ್ನವಾಗಿಯೇ ನಡೆದುಕೊಂಡು ಹೋದರು.

ನೀವು ಈಗ ಇರುವುದನ್ನು ವಿರೋಧಿಸಿದರೆ, ನೋವು ನರಳುವಿಕೆಯಾಗಿ ದ್ವಿಗುಣಿಸುತ್ತದೆ.

ಆ ರಾಜನಿಗೆ ಬಹಳ ಕೋಪ ಬಂದಿತು. “ಈ ಹುಚ್ಚ ಯಾರು ಹೀಗೆ ನನ್ನ ಹೆಂಗಸರ ಮುಂದೆ ಬರುತ್ತಿರುವನು?” ಅವನು ಅವನ ಸೈನಿಕರಿಗೆ ಅದು ಯಾರೆಂದು ತಿಳಿದುಕೊಂಡು ಬರಲು ಆದೇಶಿಸಿದ. ಅವರು ಸದಾಶಿವರನ್ನು ಕರೆದರು, ಆದರೆ ಸದಾಶಿವರು ಹಿಂದಕ್ಕೆ ನೋಡದೆ ಮುಂದಕ್ಕೆ ನಡೆಯುತ್ತಲೇ ಇದ್ದರು. ಅವರಿಗೆ ಕೋಪ ಬಂದು ಹಿಂದಿನಿಂದ ಇವರ ಮೇಲೆ ಕತ್ತಿಯನ್ನು ಬೀಸಿದರು, ಸದಾಶಿವರವರ ಬಲದ ಕೈ ಕತ್ತರಿಸಿ ಹೋಯಿತು, ಆದರೂ ಅವರು ನಡೆದುಕೊಂಡು ಹೋಗುತ್ತಲೇ ಇದ್ದರು. ಸೈನಿಕರಿಗೆ ಗಾಭರಿಯಾಯಿತು ಈ ಮನುಷ್ಯನ ಕೈ ಕತ್ತರಿಸಿ ಹೋಗಿದೆ ಆದರೂ ಅವನು ನಿಲ್ಲದೆ ಮುಂದಕ್ಕೆ ಹೋಗುತ್ತಿದ್ದಾನೆ ಎಂದು. ಅವರಿಗೆ ಅರ್ಥವಾಯಿತು ಇವರು ಸಾಧಾರಣ ಮನುಷ್ಯರಲ್ಲವೆಂದು. ಅವರೆಲ್ಲ ಸದಾಶಿವರ ಹಿಂದೆ ಓಡಿ ಹೋದರು, ಮತ್ತು ಅವರ ರಾಜನೂ ಬಂದು ಇವರ ಕಾಲಿಗೆ ಬಿದ್ದು, ಇವರನ್ನು ತೋಟಕ್ಕೆ ಕರೆತಂದರು ಮತ್ತು ಅಲ್ಲಿಯೇ ಇರಿಸಿದರು. ಈ ದಿನಕ್ಕೂ, ಅವರ ಸಮಾಧಿಯನ್ನು ನೆರೂರಿನಲ್ಲಿ ನೋಡುವಿರಿ. ಅದೊಂದು ಶಕ್ತಿಯುತವಾದ ಸ್ಥಳ.

ನೋವು ದೇಹದಲ್ಲಿ ಮಾತ್ರ ಇರುತ್ತದೆ. ಆದರೆ ನರಳುವಿಕೆ ನೀವು ಸೃಷ್ಟಿಸಿಕೊಳ್ಳುತ್ತೀರಿ. ನೀವು ಅದನ್ನು ಸೃಷ್ಟಿಸಬೇಕಾಗಿಲ್ಲ. ನಿಮಗೆ ಪ್ರಜ್ಞೆಯಿದ್ದರೆ, ನೀವು ನರಳುವುದಿಲ್ಲ. ಯಾರಾದರೂ ನರಳುವುದಕ್ಕೆ ಒಂದೇ ಕಾರಣವೇನೆಂದರೆ ಅವರಿಗೆ ಪ್ರಜ್ಞೆ ಇಲ್ಲ. ಉದ್ದೇಶಪೂರ್ವಕವಾಗಿ ನೀವು ನರಳುವಿರಾ? ಇಲ್ಲ

ಪ್ರಪಂಚದಲ್ಲಿ ಇನ್ನೊಂದು ಪ್ರಖ್ಯಾತವಾದ ಉದಾಹರಣೆ ಜೀಸಸ್ ಅವರದ್ದು. ಅವರ ಎರಡು ಕೈ ಮತ್ತು ಕಾಲುಗಳಿಗೆ ಮೊಳೆ ಹೊಡೆದರು. ನಿಮ್ಮ ಕೈಕಾಲುಗಳಿಗೆ ಮೊಳೆ ಹೊಡೆದರೆ ನೀವು ಏನು ಮಾಡುತ್ತೀರಿ? ನೀವು ಕಿರುಚಾಡಿ, ಇಡೀ ಪ್ರಪಂಚಕ್ಕೆ ಶಾಪ ಹಾಕುತ್ತೀರಿ. ಆದರೆ ಜೀಸಸ್ ಹೀಗೆ ಹೇಳಿದರಂತೆ, "ಅವರನ್ನು ಕ್ಷಮಿಸು ಏಕೆಂದರೆ ಅವರು ಏನು ಮಾಡುತ್ತಿದ್ದಾರೆಂದು ಅವರಿಗೇ ತಿಳಿದಿಲ್ಲ." ಯಾವ ಮನುಷ್ಯನಾದರೂ ಇದನ್ನು ಹೇಳಬಲ್ಲನೇ, ಅದೂ ಅವನು ನರಳುತಿರುವಾಗ? ಅದರ ಅರ್ಥ ನೋವು ಇಲ್ಲವೆಂದಲ್ಲ. ನೋವು ಇದೆ , ಬಹುಷಃ ಅವರ ದೇಹ ನಿಮ್ಮ ದೇಹಕ್ಕಿಂತ ಸೂಕ್ಷ್ಮವಾಗಿದ್ದೀತು, ಖಂಡಿತವಾಗಿಯೂ ನೋವು ಇತ್ತು. ಆದರೆ ನರಳುವಿಕೆ ಇರಲಿಲ್ಲ. ಅವರು ಏನು ಮಾಡುತ್ತಿರುವರೋ ಅವರಿಗೆ ತಿಳಿದಿಲ್ಲವೆಂದು ಜೀಸಸ್ ಹೇಳಿದಾಗ ಅದರ ಅರ್ಥ ಅವರಿಗೆ ಪ್ರಜ್ಞೆ ಇರಲಿಲ್ಲವೆಂದು.

ನಿಮ್ಮ ಪ್ರಜ್ಞೆಯನ್ನು ವಿಸ್ತರಿಸುವುದು.

ನೀವು ನರಳುವುದು ಅಥವಾ ನಿಮ್ಮ ಜೊತೆಯವರನ್ನೂ ನರಳಿಸುವುದಕ್ಕೆ ಒಂದೇ ಕಾರಣ ನಿಮಗೆ ಸಾಕಷ್ಟು ಪ್ರಜ್ಞೆ ಇಲ್ಲದಿರುವುದು. ಯಾವುದು ನಿಮ್ಮ ಪ್ರಜ್ಞೆಯಲ್ಲಿರುವುದೋ, ಅದೇ ನಿಮ್ಮ ಅನುಭವಕ್ಕೆ ಬರುವುದು. ನಿಮ್ಮ ಪ್ರಜ್ಞೆಯಲ್ಲಿ ಇಲ್ಲದಿರುವುದು ನಿಮ್ಮ ಪ್ರಕಾರ ಅಸ್ತಿತ್ವದಲ್ಲಿಲ್ಲ. ಆ ಸನ್ನಿವೇಶ ಬದಲಾಗಬೇಕು. ನಿಮ್ಮ ಪ್ರಜ್ಞೆ ಸೀಮಿತವಾದ ಚೌಕಟ್ಟಿನಿಂದ, ವಿಸ್ತಾರವಾದ ಅನುಭವಕ್ಕೆ ಬದಲಾಗಬೇಕು.

ನೀವು ಈಗ ಇರುವುದನ್ನು ವಿರೋಧಿಸಿದರೆ, ನೋವು ನರಳುವಿಕೆಯಾಗಿ ದ್ವಿಗುಣಿಸುತ್ತದೆ. ಈಗಾಗಲೇ ನೋವು ಇದೆ. ನೀವು ಅದನ್ನು ನಿಮಲ್ಲಿ ಹೆಚ್ಚಿಸಬೇಕಾಗಿಲ್ಲ ಮತ್ತು ಅದರಿಂದ ಇನ್ನೇನೋ ಮಾಡಬೇಕಾಗಿಲ್ಲ. ಪರಿಸ್ಥಿತಿ ಕೆಟ್ಟದಾಗಿರುವಾಗ ಅದನ್ನು ಹಿತವಾಗಿ ದಾಟಲು ನೋಡಬೇಕು

Editor’s Note: Check out the “5-minute Yoga Tools for Transformation” – simple upa-yoga practices for joy, peace, wellbeing, success and more. You can also download the app for android and iOS.

A version of this article was originally published in Isha Forest Flower April 2010.