ಕಾರ್ಯಕ್ರಮದ ವಿವರಗಳು
ಸಹಸ್ರಾರು ವರ್ಷಗಳಿಂದ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ನಡೆಸಿಕೊಂಡು ಬಂದಿರುವ ಪವಿತ್ರ ಸಪ್ತಋಷಿ ಆವಾಹನಂಯಲ್ಲಿ ಪಾಲ್ಗೊಳ್ಳುವ ಒಂದು ಅಪರೂಪದ ಅವಕಾಶ.
ಈ ವರ್ಷ ಆರತಿಯು 25 ಮಾರ್ಚ್ 2024 ರಂದು ಸಂಜೆ 6 ರಿಂದ - ರಾತ್ರಿ 08:15 ರವರೆಗೆ ನಡೆಯಲಿದೆ.
Online registration has closed
Spot registration is available
ಆಸನ ವರ್ಗಗಳು
Online registration has closed
Spot registration is available
ಭಾಗವಹಿಸಲು ಇತರ ಮಾರ್ಗಗಳು
ಸಪ್ತಋಷಿ ಆವಾಹನಂಯ ಭಾಗವಾಗಿ ಏಳು ವಿವಿಧ ಹೂವುಗಳನ್ನು ಅರ್ಪಿಸುವ ಮೂಲಕ ಸಪ್ತಋಷಿಗಳಿಗೆ ನಿಮ್ಮ ಕೃತಜ್ಞತೆಯನ್ನು ಸಲ್ಲಿಸಿ. (ಭಾರತದಲ್ಲಿರುವವರಿಗೆ ಮಾತ್ರ ಲಭ್ಯವಿದೆ)
Offer a vastram and flowers to Shiva and receive his grace. (Online offering available only for Indian citizens)
ಪ್ರಶ್ನೆಗಳು
ಕಾರ್ಯಕ್ರಮಕ್ಕೆ ಹಾಜರಾಗಲು ನೋಂದಣಿ ಕಡ್ಡಾಯವಾಗಿದೆ. 8 ವರ್ಷ ಮೇಲ್ಪಟ್ಟ ಯಾರಾದರೂ ನೋಂದಾಯಿಸಿಕೊಳ್ಳಬಹುದು. ಯಾವುದೇ ಈಶ ಕಾರ್ಯಕ್ರಮಗಳಿಗೆ ಹಾಜರಾಗದೇ ಇದ್ದವರೂ ಭಾಗವಹಿಸಬಹುದು.
ಹೌದು, ಭಾರತದ ಹೊರಗಿನವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ನೋಂದಾಯಿಸುವಾಗ ನಿಮ್ಮ ಬಳಿ ಚಾಲ್ತಿಯಲ್ಲಿರುವ ಪಾಸ್ಪೋರ್ಟ್ ಇರಬೇಕು. ನೀವು ಯಶಸ್ವಿಯಾಗಿ ನೋಂದಾಯಿಸಿ, ನಿಮ್ಮ ಇ-ರಶೀದಿಯನ್ನು ಸ್ವೀಕರಿಸಿದ ನಂತರವೇ ದಯವಿಟ್ಟು ನಿಮ್ಮ ವಿಮಾನ ಟಿಕೆಟ್ಗಳನ್ನು ಕಾಯ್ದಿರಿಸಿ.
ದಯವಿಟ್ಟು sadhgurusannidhi.blr@ishafoundation.org ಗೆ ಬರೆಯಿರಿ. ನಿಮ್ಮ ಈ-ಮೇಲ್ಗೆ ಪ್ರತಿಕ್ರಿಯಿಸಲು ದಯವಿಟ್ಟು ನಮಗೆ ಕನಿಷ್ಠ 24 ಗಂಟೆಗಳ ಕಾಲಾವಕಾಶ ನೀಡಿ.
ಹೌದು, ಅವರೂ ಹಾಜರಾಗಬಹುದು. ದಯವಿಟ್ಟು ಸಾಕಷ್ಟು ವೈದ್ಯಕೀಯ ಆರೈಕೆಯನ್ನು ಖಚಿತಪಡಿಸಿಕೊಳ್ಳಿ ಮತ್ತು ನೀವು ಯಾವುದೇ ವಿಶೇಷ ಸ್ಥಿತಿಯನ್ನು ಹೊಂದಿದ್ದರೆ ನಿಮ್ಮ ಹತ್ತಿರದ ಸ್ವಯಂಸೇವಕರಿಗೆ ತಿಳಿಸಿ.
ನೋಂದಾಯಿಸಲು ಮೊಬೈಲ್ ಫೋನ್ ಬಳಸುವಾಗ ನಿಮಗೆ ಪಾವತಿಯಲ್ಲಿ ತೊಂದರೆ ಉಂಟಾದರೆ, ಕಂಪ್ಯೂಟರ್ ಮತ್ತು ಗೂಗಲ್ ಕ್ರೋಮ್ ಬ್ರೌಸರ್ ಅನ್ನು ಬಳಸಲು ಪ್ರಯತ್ನಿಸಿ. ಅದು ಕೆಲಸ ಮಾಡದಿದ್ದರೆ, ದಯವಿಟ್ಟು ಬೇರೆ ಪಾವತಿ ವಿಧಾನವನ್ನು ಬಳಸಿಕೊಂಡು ಮರುಪ್ರಯತ್ನಿಸಿ. ನೀವು ಇನ್ನೂ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ದಯವಿಟ್ಟು ಗೋಚರಿಸುವ URL ನೊಂದಿಗೆ ಸಮಸ್ಯೆಯ ಸ್ಕ್ರೀನ್ಶಾಟ್ ಅನ್ನು ತೆಗೆದು ಅದನ್ನು sadhgurusannidhi.blr@ishafoundation.org ಗೆ : 'ಪೇಮೆಂಟ್ ಸಂಬಂಧಿತ ಪ್ರಶ್ನೆ' ಎಂಬ ವಿಷಯವಿಟ್ಟು ನಮ್ಮೊಂದಿಗೆ ಹಂಚಿಕೊಳ್ಳಿ.
ಹೌದು, ನೀವು ಮುಂಚಿತವಾಗಿ ನೋಂದಾಯಿಸಿಕೊಳ್ಳುವ ಮೂಲಕ ಸಪ್ತಋಷಿ ಆವಾಹನಂಯ ನೇರಪ್ರಸಾರದಲ್ಲಿ ಭಾಗವಹಿಸಬಹುದು. ಕಾರ್ಯಕ್ರಮವನ್ನು ಉಚಿತವಾಗಿ ನೀಡಲಾಗುತ್ತದೆ ಮತ್ತು ನೀವು ನಿಮ್ಮ ಕೈಲಾಗುವಷ್ಟು ದೇಣಿಗೆಯನ್ನು ನೀಡುವ ಆಯ್ಕೆಯನ್ನು ಹೊಂದಿರುತ್ತೀರಿ.
ಕಾರ್ಯಕ್ರಮವನ್ನು ಇಂಗ್ಲಿಷ್ನಲ್ಲಿ ನಡೆಸಲಾಗುವುದು ಮತ್ತು ಕನ್ನಡ, ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ನೇರ ಅನುವಾದ ಲಭ್ಯವಿರುತ್ತದೆ. ಇಂಗ್ಲಿಷ್ ಮಾತನಾಡದಿದ್ದರೂ, ಅರ್ಥಮಾಡಿಕೊಳ್ಳಲು ಸಾಧ್ಯವಿದ್ದರೆ ನೀವು ಭಾಗವಹಿಸಬಹುದು.
ಕಾರ್ಯಕ್ರಮದ ಸಮಯದಲ್ಲಿ ನಿಮಗೆ ನೇರ ಅನುವಾದದ ಅಗತ್ಯವಿದ್ದರೆ, ದಯವಿಟ್ಟು FM ರೇಡಿಯೋ ಲಭ್ಯವಿರುವ ಮೊಬೈಲ್ ಫೋನ್ ಮತ್ತು ವೈಯರ್ಡ್ ಹೆಡ್ಸೆಟ್ ಅನ್ನು ತನ್ನಿ.
ಕಾರ್ಯಕ್ರಮವು 18 ಮಾರ್ಚ್ 2023 ರಂದು ಸಂಜೆ 6 ರಿಂದ - ರಾತ್ರಿ 10 ರವರೆಗೆ ನಡೆಯಲಿರುವುದು. ದಯವಿಟ್ಟು ನಿಗದಿತ ಸಮಯಕ್ಕಿಂತ ಕನಿಷ್ಠ 4 ಗಂಟೆಗಳ ಮುಂಚಿತವಾಗಿ ಸ್ಥಳಕ್ಕೆ ಆಗಮಿಸಲು ಯೋಜಿಸಿ. ಇದರಿಂದ ನೀವು ಚೆಕ್ ಇನ್ ಮಾಡಿ ಅದಕ್ಕೆ ಅನುಗುಣವಾಗಿ ಕುಳಿತುಕೊಳ್ಳಬಹುದು. ನೀವು ಹೊರದೇಶದಿಂದ ಅಥವಾ ಬೆಂಗಳೂರಿನ ಹೊರಗಿದ್ದರೆ, ದಯವಿಟ್ಟು ಮಾರ್ಚ್ 18 ರ ಬೆಳಿಗ್ಗೆ ನಗರಕ್ಕೆ ಆಗಮಿಸಲು ಯೋಜಿಸಿ. ನೀವು ಮಾರ್ಚ್ 19 ರಂದು ನಿಮ್ಮ ಹಿಂದಿರುಗುವ ಪ್ರಯಾಣವನ್ನು ಯೋಜಿಸಬಹುದು. ಚೆಕ್-ಇನ್ ಸಮಯವನ್ನು ಕಾರ್ಯಕ್ರಮ ಸಮೀಪಿಸುತ್ತಿದ್ದಂತೆ ಈ-ಮೇಲ್ ನ ಮೂಲಕ ತಿಳಿಸಲಾಗುತ್ತದೆ.
ಈ ಕಾರ್ಯಕ್ರಮಕ್ಕೆ ಯಾವುದೇ ಡ್ರೆಸ್ ಕೋಡ್ ಇಲ್ಲ. ಭಾರತದ ಸಂಪ್ರದಾಯಿಕ ಉಡುಗೆಗೆ ಆದ್ಯತೆ ನೀಡಲಾಗುತ್ತದೆ.
ಹೌದು, ನಿಮಗೆ ನೆಲದ ಮೇಲೆ ಕುಳಿತುಕೊಳ್ಳಲು ಸಾಧ್ಯವಾಗದಿದ್ದರೆ ಕುರ್ಚಿಗಳನ್ನು ಒದಗಿಸಲಾಗುತ್ತದೆ. ನಿಮ್ಮ ಆಸನ ಸ್ಥಳಕ್ಕೆ ನೀವು ತಲುಪಿದಾಗ, ದಯವಿಟ್ಟು ಸ್ವಯಂಸೇವಕರಿಂದ ಕುರ್ಚಿಯನ್ನು ವಿನಂತಿಸಿ.
ದುರದೃಷ್ಟವಶಾತ್, ಕಾರ್ಯಕ್ರಮದ ಸಮಯದಲ್ಲಿ ಮಕ್ಕಳ ಆರೈಕೆಯನ್ನು ಒದಗಿಸಲು ನಮಗೆ ಸಾಧ್ಯವಿಲ್ಲ. 8 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕರೆತರದಂತೆ ನಾವು ನಿಮಗೆ ಸಲಹೆ ನೀಡುತ್ತೇವೆ.
ಹೌದು, ಆಸನ ಪ್ರತ್ಯೇಕವಾಗಿದೆ.
ಒಂದೇ ಲಾಗಿನ್ ಅನ್ನು ಬಳಸಿಕೊಂಡು ನೀವು ಅನೇಕ ಜನರನ್ನು ನೋಂದಾಯಿಸಿಕೊಳ್ಳಬಹುದು. ಈಶ ಪ್ರೊಫೈಲ್ ಹೊಂದಿರುವ ಯಾರಾದರೂ ಸ್ನೇಹಿತರು ಮತ್ತು ಕುಟುಂಬದ ಪರವಾಗಿ ನೋಂದಾಯಿಸಿಕೊಳ್ಳಬಹುದು.
ಸಪ್ತ ಪುಷ್ಪಾಂಜಲಿಯು ಸಪ್ತಋಷಿಗಳಿಗೆ ಕೃತಜ್ಞತೆಯ ಸಂಕೇತವಾಗಿ ಏಳು ವಿವಿಧ ಹೂವುಗಳ ಅರ್ಪಣೆಯಾಗಿದ್ದು, ಭಾಗವಹಿಸುವವರು ಸಪ್ತಋಷಿ ಆವಾಹನಂಯ ಭಾಗವಾಗಿ ಮಾಡಬಹುದು. ನೀವು ಇದನ್ನು ಆನ್ಲೈನ್ನಲ್ಲಿ ಬುಕ್ ಮಾಡಬಹುದು. ಈ ಅರ್ಪಣೆಯು ದಿನವಿಡೀ ಲಭ್ಯವಿದ್ದು ಸಂಜೆ 4 ರವರೆಗಿರುತ್ತದೆ.
ಬೆಂಗಳೂರಿನ ಸದ್ಗುರು ಸನ್ನಿಧಿಯಲ್ಲಿ ರಾತ್ರಿಯ ವಸತಿ ಸೌಕರ್ಯವು ಪ್ರಸ್ತುತ ಲಭ್ಯವಿಲ್ಲ. ಹತ್ತಿರದ ಹೋಟೆಲ್ಗಳಲ್ಲಿ ನಿಮ್ಮ ಸ್ವಂತ ಬುಕಿಂಗ್ ಮಾಡಬಹುದು. ವಸತಿಯನ್ನು ಕಾಯ್ದಿರಿಸುವ ಮೊದಲು ಸಪ್ತಋಷಿ ಆವಾಹನಂಯ ನೋಂದಣಿಯನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.
ಶೇಖರಣೆಗಾಗಿ ನಿಗದಿಪಡಿಸಿದ ಸ್ಥಳಾವಕಾಶವಿಲ್ಲದ ಕಾರಣ ಸಾಧ್ಯವಾದಷ್ಟು ಕಡಿಮೆ ಸಾಮಾನುಗಳೊಂದಿಗೆ ಬರುವುದು ಉತ್ತಮ. ಸ್ಥಳದ ಒಳಗೆ ಆಹಾರವನ್ನು ತರಲು ಅನುಮತಿ ಇಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ನಿಗದಿತ ಪ್ರದೇಶಗಳಲ್ಲಿ ನೀರು ಮತ್ತು ಆಹಾರ ಲಭ್ಯವಿರುತ್ತದೆ.
ಬೆಂಗಳೂರು ಭಾರತದ ಪ್ರಮುಖ ಐಟಿ ಕೇಂದ್ರವಾಗಿದೆ ಮತ್ತು ಇದು ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ವಿಮಾನಯಾನ ಸಂಸ್ಥೆಗಳು ಭಾರತ ಮತ್ತು ಸಾಗರೋತ್ತರ ಎಲ್ಲಾ ಪ್ರಮುಖ ನಗರಗಳಿಂದ ಬೆಂಗಳೂರಿಗೆ ನಿಯಮಿತ ವಿಮಾನಗಳನ್ನು ನಿರ್ವಹಿಸುತ್ತವೆ. ಭಾರತದ ಎಲ್ಲಾ ಪ್ರಮುಖ ನಗರಗಳಿಂದ ರೈಲು ಸೇವೆಗಳು ಲಭ್ಯವಿದೆ. ಬೆಂಗಳೂರು ನಗರದಿಂದ ಚಿಕ್ಕಬಳ್ಳಾಪುರ ಪಟ್ಟಣಕ್ಕೆ ನಿಯಮಿತ ಬಸ್ ಮತ್ತು ಟ್ಯಾಕ್ಸಿ ಸೇವೆಗಳು ಲಭ್ಯವಿವೆ, ಇದು ಬೆಂಗಳೂರಿನ ಸದ್ಗುರು ಸನ್ನಿಧಿಗೆ ಹತ್ತಿರದ ಪಟ್ಟಣವಾಗಿದೆ. ಚಿಕ್ಕಬಳ್ಳಾಪುರ ಪಟ್ಟಣದಿಂದ ಕೇಂದ್ರಕ್ಕೆ ನಿತ್ಯ ಬಸ್ ಸಂಚಾರವೂ ಆರಂಭವಾಗಿದೆ.
ನೀವು ಈ ಗೂಗಲ್ ಮ್ಯಾಪ್ ನ ಲಿಂಕ್ ಅನ್ನು ಸಹ ಬಳಸಬಹುದು : bit.ly/sd-snb
ಹೌದು, ಸ್ಥಳದಲ್ಲಿ ಪಾವತಿಸಬೇಕಾದ ಪಾರ್ಕಿಂಗ್ ಲಭ್ಯವಿರುತ್ತದೆ ಆದರೆ ಅದು ಸೀಮಿತವಾಗಿರುತ್ತದೆ. ಸ್ಥಳದ ಬಳಿ ಸಂಚಾರ ದಟ್ಟಣೆ ಇರಬಹುದು. ದಯವಿಟ್ಟು ಅದಕ್ಕೆ ತಕ್ಕಂತೆ ಯೋಜನೆ ಮಾಡಿ. ಕಾರ್ಯಕ್ರಮದ ದಿನಾಂಕ ಹತ್ತಿರ ಬರುತ್ತಿರುವಂತೆ ಪಾರ್ಕಿಂಗ್ ಸೌಲಭ್ಯದ ಸ್ಥಳವನ್ನು ಘೋಷಿಸಲಾಗುತ್ತದೆ.
ಹೆಸರು, ವಯಸ್ಸು, ಈ-ಮೇಲ್, ಫೋನ್, ಪರಿಣಿತಿ/ಕೌಶಲ್ಯದ ಕ್ಷೇತ್ರಗಳು, ಶೈಕ್ಷಣಿಕ ಅರ್ಹತೆ, ಇದುವರೆಗೆ ಭಾಗವಹಿಸಿದ ಈಶ ಕಾರ್ಯಕ್ರಮಗಳು ಮತ್ತು ಸ್ವಯಂಸೇವೆಯ ಅನುಭವ (ಯಾವುದಾದರೂ ಇದ್ದರೆ) ಮತ್ತು ಬೆಂಗಳೂರಿನ ಸದ್ಗುರು ಸನ್ನಿಧಿಯಲ್ಲಿ ಸ್ವಯಂಸೇವಕರಾಗಿ ನಿಮ್ಮ ಲಭ್ಯತೆ (ದಿನಗಳು ಮತ್ತು ಗಂಟೆಗಳು) ಮುಂತಾದ ನಿಮ್ಮ ವಿವರಗಳೊಂದಿಗೆ, ನಿಮ್ಮ ಆಸಕ್ತಿಯನ್ನು ವ್ಯಕ್ತಪಡಿಸಿ volunteering.karnataka@ishafoundation.org ಈ-ಮೇಲ್ ಗೆ ನೀವು ಬರೆಯಬಹುದು.
ನಮ್ಮನ್ನು ಸಂಪರ್ಕಿಸಿರಿ