1. Home/
  2. Wisdom/
  3. Video/
  4. ಅಸಾಧಾರಣ ಜ್ಞಾನಕ್ಕೆ ಕೀಲಿಕೈ!
Also in:
English
Deutsch

ಅಸಾಧಾರಣ ಜ್ಞಾನಕ್ಕೆ ಕೀಲಿಕೈ!

ಅನೇಕ ಯೋಗಿಗಳು ಸರ್ವಸ್ವವನ್ನೂ ಭೇದಿಸಿದವರೂ, ಅರಿತುಕೊಂಡವರೂ ಆಗಿರುತ್ತಾರೆ. ಪ್ರಪಂಚದ ಒಳಹೊರಗನ್ನೂ, ಸೃಷ್ಟಿಯ ಸೂಕ್ಷ್ಮಗಳನ್ನೂ ತಿಳಿದುಕೊಂಡಿರುತ್ತಾರೆ. ಪ್ರಾಣಿ-ಪಕ್ಷಿ ಸಂಕುಲ ಮತ್ತು ನಿರ್ಜೀವ ವಸ್ತುಗಳ ಭಾಷೆಯನ್ನೂ ಅರ್ಥಮಾಡಿಕೊಳ್ಳುತ್ತಾರೆ. ಇವರಿಗೆ ಇದನ್ನೆಲ್ಲ ಯಾರಾದರೂ ಕಲಿಸಿದರೇ? ಅಥವಾ ಎಲ್ಲೋ ಓದಿ ತಿಳಿದುಕೊಂಡರೇ? ಅಲ್ಲ ಅನ್ನುತ್ತಾರೆ ಸದ್ಗುರು! ಸೃಷ್ಟಿಯ ಆಯಾಮಗಳನ್ನು ತಿಳಿದುಕೊಳ್ಳಲು ಅದರದೇ ಆದ ವಿಧಾನಗಳಿವೆ. ವಿಶಿಷ್ಟ ಸಂಗತಿಗಳಿವೆ. ಈ ಕುತೂಹಲಕಾರಿ ವಿಷಯಗಳನ್ನು ತಿಳಿದುಕೊಳ್ಳಲು ವಿಡಿಯೋ ನೋಡಿ!

video

Jun 6, 2022


Subscribe

Get weekly updates on the latest blogs via newsletters right in your mailbox.

Related Tags

ಗ್ರಹಣಶಕ್ತಿ
ಅತೀಂದ್ರಿಯಜ್ಞಾನ
ಶರೀರ
ಉಸಿರು
ಬ್ರಹ್ಮಾಂಡ
ದೇವರು
Related Content
video  
ನೀರು ಕುಡಿಯುವಾಗ ನೀವು ಮಾಡುವ 2 ತಪ್ಪುಗಳು | Are You Drinking Water the Right Way? | Sadhguru Kannada
ನೀರನ್ನು ಕುಡಿಯುವುದರಲ್ಲೂ ವಿಜ್ಞಾನವಿದೆಯೇ ಅನ್ನಿಸಬಹುದು. ಖಂಡಿತವಾಗಿಯೂ ಇದೆ! ಅಷ್ಟಕ್ಕೂ ನಮ್ಮ ದೇಹದ ಶೇಕಡ 70 ಭಾಗ ನೀರೇ ಅಲ್ಲವೇನು? ಆದ್ದರಿಂದ ನೀರನ್ನು ಕುಡಿಯುವುದರ ಹಿಂದೆ ಅಪಾರ ವಿಜ್ಞಾನವಿದೆ! ಎಂತಹ ನೀರನ್ನು ಕುಡಿದರೆ ಒಳ್ಳೆಯದು? ’ಚಿಲ್’ ಮಾಡಲು ಐಸ್ ಹಾಕಿದ ತಂಪನೆಯ ನೀರನ್ನು ಸೇವಿಸಬಹುದೇ? ತುಂಬಾ ಬಿಸಿಯಾದ ನೀರನ್ನು ಕುಡಿದರೆ ಒಳ್ಳೆಯದೇ? ಆಗಾಗ ನೀರು ಕುಡಿಯುತ್ತಿರಬೇಕೆ? ದಿನಕ್ಕೆ ಎಷ್ಟು ನೀರು ಕುಡಿಯಬೇಕು? ನೀರು ಹೆಚ್ಚು ಅಥವಾ ಕಡಿಮೆ ಕುಡಿಯುವುದರಿಂದ ಆಗುವ ಅಪಾಯಗಳೇನು?
Dec 7, 2022
video  
ಶಿವ 'ಕಾಮ'ವನ್ನು ಮೆಟ್ಟಿನಿಂತಿದ್ದು ಹೇಗೆ? | How Shiva Overcame Lust | Sadhguru Kannada
’ಕಾಮ’ - ಮನುಷ್ಯನ ಈ ಗುಣದ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಅದು ಒಳ್ಳೆಯದೇ? ಕೆಟ್ಟದ್ದೇ? ಎಷ್ಟಿದ್ದರೆ ಚೆನ್ನ? ಮುಂತಾದವುಗಳ ಬಗ್ಗೆ ಮಾತುಗಳನ್ನು ಕೇಳಿರುತ್ತೇವೆ. ಆದರಿಲ್ಲಿ ನಾವು ಒಂದು ಅತ್ಯಂತ ವಿಶಿಷ್ಟ ಕಥೆಯನ್ನು ಪ್ರಸ್ತುತಪಡಿಸುತ್ತಿದ್ದೇವೆ. ಶಿವ ’ಕಾಮ’ನನ್ನು ಸುಟ್ಟ ಕಥೆ! ಇನ್ನೇನು ಮಹಾಶಿವರಾತ್ರಿ ಸನಿಹ ಬಂತು. ಫೆಬ್ರುವರಿ 21, 2019 ಮಹಾಶಿವರಾತ್ರಿಯ ದಿನ. ಈಶಾ ಯೋಗ ಕೇಂದ್ರದಲ್ಲಿ ಅಂದು ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಇದರ ಆಚರಣೆಯ ಅಂಗವಾಗಿ ಬೃಹತ್ ಕಾರ್ಯಕ್ರಮ ನಡೆಯುತ್ತದೆ. ನೀವೂ ಬಂದು ಈ ಅಮೋಘ ಕಾರ್ಯಕ್ರಮಕ್ಕೆ ಸಾಕ್ಷಿಯಾಗಬಹುದು, ಅಥವಾ ವಿವಿಧ ಟಿವಿ ವಾಹಿನಿಗಳಲ್ಲಿ, ಯುಟ್ಯೂಬ್ ಮತ್ತು ಫೇಸ್ಬುಕ್ ನಲ್ಲಿ ನೇರಪ್ರಸಾವನ್ನು ವೀಕ್ಷಿಸಬಹುದು. ಈ ಹಿನ್ನಲೆಯಲ್ಲಿ ಶಿವನ ಕುರಿತಾದ ‘ಶಿವನೆಂಬ ಜೀವಂತ ಸಾವು’ ಹೆಸರಿನ ಅತ್ಯಂತ ರೋಚಕ ವೆಬ್ ಸರಣಿಯನ್ನು ಪ್ರಸ್ತುತಪಡಿಸುತ್ತಿದ್ದೇವೆ! ಇದು ಆ ಸರಣಿಯ ಮೊದಲ ಕಂತು. ಅದ್ಭುತ ಕಥೆಗಳನ್ನು ಕೇಳಲು ನಿರೀಕ್ಷೆಯಲ್ಲಿರಿ!
Jul 24, 2022
video  
ವಿಶೇಷ ತುಪ್ಪದ ಚಮತ್ಕಾರಿ ಪ್ರಯೋಜನಗಳು | ಆಯುರ್ವೇದ, Ayurveda | Ancient Ghee | Sadhguru Kannada | ಸದ್ಗುರು
ಆಯುರ್ವೇದದಲ್ಲಿ (Ayurveda) ನೂರು ವರ್ಷಗಳ ಕಾಲ ನೆಲದಲ್ಲಿ ಹೂತಿಟ್ಟ ತುಪ್ಪಕ್ಕೆ ಬಹಳ ಮಹತ್ವವಿದೆ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸುತ್ತದೆ. ಓಜಸ್, ತೇಜಸ್, ಪ್ರಾಣ ಮುಂತಾದವುಗಳನ್ನು ಉಂಟುಮಾಡುತ್ತದೆ ಎಂಬುದರ ಕುರಿತು ಚರ್ಚಿಸಲಾಗುತ್ತದೆ. ಸದ್ಗುರುಗಳು ಓಜಸ್ ಎಂಬ ಅಭೌತಿಕ ಆಯಾಮದ ಕುರಿತೂ ಮಾತನಾಡುತ್ತಾರೆ.
Jul 23, 2022