ಒಣ ಕಣ್ಣುಗಳಿಗೆ ನೈಸರ್ಗಿಕ ಪರಿಹಾರ
ಒಣಗಿದ ಕಣ್ಣುಗಳ ಸಮಸ್ಯೆಯೇ? ಸದ್ಗುರುಗಳು ಒಂದು ಅನಿರೀಕ್ಷಿತವಾದ ಸಾಮಗ್ರಿಯನ್ನು ಬಳಸುವ ಮೂಲಕ ಸರಳ ನೈಸರ್ಗಿಕ ಪರಿಹಾರವೊಂದನ್ನು ನೀಡುತ್ತಾರೆ!
ಪ್ರಶ್ನೆ: ಒಣಗಿದ ಕಣ್ಣುಗಳ ಸಮಸ್ಯೆಯನ್ನು ನಿವಾರಿಸಲು ಯೋಗದ ಜೀವನ ವಿಧಾನದಲ್ಲಿ ಏನಾದರೂ ಪರಿಹಾರವಿದೆಯೇ?
ಸದ್ಗುರು: ನಾವು ನಿಮ್ಮನ್ನು ಅಳುವಂತೆ ಮಾಡಬೇಕಷ್ಟೆ! ಸಾಮಾನ್ಯವಾಗಿ, ಹೆಚ್ಚಿನ ಜನರು ಒಣಗಿದ ಕಣ್ಣುಗಳ ಬಗ್ಗೆ ದೂರಿದಾಗ, ಅವರ ಕಣ್ಣುಗಳು ಸಂಪೂರ್ಣವಾಗಿ ಒಣಗಿರುವುದಿಲ್ಲ, ಅವು ಕೇವಲ ಒಂದು ನಿರ್ದಿಷ್ಟ ಪ್ರಮಾಣದ ಶುಷ್ಕತೆಯನ್ನು ಹೊಂದಿರುತ್ತವೆಯಷ್ಟೆ. ಶಸ್ತ್ರಚಿಕಿತ್ಸೆ ಅಥವಾ ಕೆಲವು ಗಂಭೀರವಾದ ಹಾನಿಯನ್ನು ಸರಿಪಡಿಸಲಾಗದಿದ್ದಲ್ಲಿ ಮಾತ್ರ, ಔಷಧಾಲಯದಲ್ಲಿ ಲಭ್ಯವಿರುವ ಕಣ್ಣಿನ ಡ್ರಾಪ್ಸ್ ಅಂತಹದನ್ನು ನೀವು ಬಳಸಬಹುದು.ಹಾಗಿಲ್ಲದಿದ್ದರೆ ಮತ್ತು ನಿಮ್ಮ ಕಣ್ಣುಗಳು ಗಂಭೀರವಾದ ಹಾನಿಗೊಳಗಾಗದೇ ಇದ್ದರೆ, ಅವನ್ನು ಸರಿಪಡಿಸಲು ಇತರ ಮಾರ್ಗಗಳಿವೆ.
ಯೋಗದ ಕೆಲವು ಕ್ರಿಯಾಗಳ ಮೂಲಕ ನೀವು ನಿಮ್ಮ ಕಣ್ಣೀರಿನ ಗ್ರಂಥಿಗಳನ್ನು ಸಕ್ರಿಯಗೊಳಿಸಬಹುದಾಗಿದೆ, ಆದರೆ ನೀವು ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ ಬೂದುಗುಂಬಳಕಾಯಿಯನ್ನು ಬಳಸುವುದು. ಇದು ಹಸಿರು-ಬೂದು ಬಣ್ಣವನ್ನು ಹೊಂದಿದ ತರಕಾರಿಯಾಗಿದ್ದು, ಅದರ ಮೇಲೆ ಧೂಳಿನಂತಹ ಬೂದಿ ಬಣ್ಣವಿದೆ. ನೀವದನ್ನು ಒರೆಸಿದರೆ, ಅದು ನಿಮ್ಮ ಕೈಗೆ ಅಂಟಿಕೊಳ್ಳುತ್ತದೆ, ಅದಕ್ಕಾಗಿಯೇ ಇದನ್ನು ಬೂದುಗುಂಬಳಕಾಯಿ ಎಂದು ಕರೆಯಲಾಗುತ್ತದೆ. ನೀವು ಅದನ್ನು ತುರಿದರೆ, ಅದು ತುಂಬಾ ರಸಭರಿತವಾಗಿರುತ್ತದೆ. ಅದರಿಂದ ನೀರು ಸೋರುತ್ತಿರುತ್ತದೆ. ಅದು ರಸದಿಂದ ತೊಟ್ಟಿಕ್ಕುವಾಗ ನೀವು ಆ ತುರಿಯನ್ನು ತೆಗೆದುಕೊಂಡು, ನಿಮ್ಮ ಕಣ್ಣುಗಳ ಮೇಲಿರಿಸಿ 10 ನಿಮಿಷಗಳ ಕಾಲ ಮಲಗಿ. ನಂತರ ಅದನ್ನು ತೆಗೆದು ತಣ್ಣೀರಿನಿಂದ ಕಣ್ಣು ತೊಳೆಯಿರಿ. ಇದು ಸಹಾಯ ಮಾಡುತ್ತದೆ.
ಸಂಪಾದಕರ ಟಿಪ್ಪಣಿ: ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಸದ್ಗುರುಗಳ ಹೆಚ್ಚಿನ ಜಾಣ್ನುಡಿಗಳನ್ನು ಇಲ್ಲಿಕಾಣಬಹುದು.