ಒಬ್ಬ ದಾರ್ಶನಿಕನ ಅಧ್ಯಾತ್ಮದ ಅನ್ವೇಷಣೆಯಲ್ಲಿ ಧರ್ಮಗ್ರಂಥಗಳ ಪಾತ್ರ ಏನು?

ಸದ್ಗುರು : ಜ್ಞಾನ ಎಂದರೆ ಒಂದು ಬೃಹತ್ ಶಕ್ತಿಯ ಭಂಡಾರ, ನೆನಪುಗಳ ಸಂಗ್ರಹ. ಹಾಗೂ ಅರಿವು ಎಂಬುದು ಜೀವನದ ಬಗೆಗಿನ ಗ್ರಹಿಕೆ ಅಷ್ಟೇ. ಜ್ಞಾನವೆಂಬುದು ಜೀವನದ ಬಗ್ಗೆ ನಿಮ್ಮ ತೀರ್ಮಾನವಷ್ಟೇ. ನಿಮ್ಮ ಜ್ಞಾನಭಂಡಾರದ ಅಧಾರದ ಮೇಲೆ ಜೀವನದ ಬಗ್ಗೆ ತೀರ್ಮಾನಿಸಿದರೆ , ಅದು ಪೂರ್ವಾಗ್ರಹವಾಗುತ್ತದೆ. ನೀವು ಹೊಸದಾಗಿ ಏನನ್ನೂ ಅನುಭವಿಸಲು ಬಿಡುವುದಿಲ್ಲ. ಯಾವುದೇ ಹೊಸ ಅನುಭವಗಳು ನಿಮಗೆ ಆಗುವುದೇ ಇಲ್ಲ. ಜ್ಞಾನವು ನಿಮಗೆ ಬದುಕುವುದಕ್ಕೆ ಉಪಯುಕ್ತ ಆದರೆ ನಿಮನ್ನು ಇದು ಮುಕ್ತಿಯತ್ತ ಒಯ್ಯುವುದಿಲ್ಲ.

ನೀವು ಈ ಪುಸ್ತಕವನ್ನೇ ಅಂದರೆ ನಿಮ್ಮನ್ನೇ ಓದಿಕೊಳ್ಳಿರಿ, ಮತ್ಯಾವುದೋ ಪುಸ್ತಕವನ್ನು ಓದುವುದರ ಬದಲು ಎಂದು. ಏಕೆಂದರೆ , ನೀವು ಆ ಸೃಷ್ಟಿಕರ್ತನಿಂದ ರಚಿತವಾದ ಅದ್ಭುತವಾದ ಪುಸ್ತಕ. ಈ ಜೀವನದ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಇದನ್ನು ಓದುವುಡೇ ಅತ್ಯುತ್ತಮ.

ನೀವು ನಿಮ್ಮ ಇರುವಿಕೆಯ ಬಗ್ಗೆ ಸ್ವಲ್ಪವಾದರೂ ಕಾಳಜಿ ಮಾಡಬೇಡವೇ ? ಖಂಡಿತವಾಗಿಯೂ ಮಾಡಬೇಕು. ನಿಮ್ಮ ಮಿದುಳಿನ ಸಣ್ಣ ಕಣದಷ್ಟು ಮಿದುಳನ್ನು ಮಾತ್ರ ಹೊಂದಿರುವ ಒಂದು ಸಣ್ಣ ಕ್ರಿಮಿಯೇ ಸಂತುಷ್ಟವಾಗಿ ಈ ಗ್ರಹದ ಮೇಲೆ ಬದುಕುವಾಗ, ಇಷ್ಟು ದೊಡ್ಡ ಮೆದುಳನ್ನು ಹೊಂದಿರುವ ನೀವು ನಿಮ್ಮ ಸಂಪೂರ್ಣ ಜೀವನವನ್ನು ಬರಿ ಬದುಕುವುದಕ್ಕೆ ಸೀಮಿತಗೊಳಿಸಬೇಕೇ? ಯೋಗ ವ್ಯವಸ್ಥೆಯಲ್ಲಿ ಮನಸ್ಸಿಗೆ ಹದಿನಾರು ಭಾಗಗಳಿವೆ ಎನ್ನುತ್ತೇವೆ. ಭೌತಿಕ ಬದುಕನ್ನು ನಿರ್ವಹಿಸಲು ಇದರಲ್ಲಿ ಒಂದು ಭಾಗವಷ್ಟೇ ಸಾಕಾಗುತ್ತದೆ ಎಂದು ಹೇಳುತ್ತಾರೆ. ಉಳಿದ ಹದಿನೈದು ಭಾಗಗಳನ್ನು ನಾವು ಆಂತಃ ಸೌಂದರ್ಯಕ್ಕಾಗಿ ಕೇಂದ್ರೀಕರಿಸಬೇಕು ಎನ್ನುತ್ತಾರೆ, ಏಕೆಂದರೆ, ಇದು ಭೌತಿಕ ಬದುಕಿಗಿಂತ ಬಹಳ ಹೆಚ್ಚಿನ ಸ್ಥಾನವನ್ನು ಹೊಂದಿದೆ. ಇಂದು ವಿಜ್ಞಾನಿಗಳು ಸಹ ಈ ಬ್ರಹ್ಮಾಂಡದ ನಾಲ್ಕು ಪ್ರತಿಶತ ಭಾಗವಷ್ಟೇ ಸೃಷ್ಟಿಯಿರುವುದು , ಉಳಿದುದೆಲ್ಲಾ ಬರೀ ಕತ್ತಲಿನ ಅಂಶ ಮತ್ತು ಕತ್ತಲಿನ ಶಕ್ತಿಯಿಂದ ಆವೃತವಾಗಿದೆ ಎಂದು ಹೇಳುತ್ತಾರೆ. ಆದ್ದರಿಂದ ನಿಮ್ಮ ಮನಸ್ಸಿನ ಬರೀ ನಾಲ್ಕು ಪ್ರತಿಶತವಷ್ಟೇ ಸಾಕು, ಆದರೆ ನಮ್ಮ ಪುರಾತನ ಯೋಗಿಗಳು ಸ್ವಲ್ಪ ಉದಾರವಾಗಿದ್ದರು. ಅವರು ನೀವು ಯಶಸ್ವಿಯಾಗಿ ನಿಮ್ಮ ಭೌತಿಕ ಬದುಕನ್ನು ನಿಭಾಯಿಸಲು ಆರು ಪ್ರತಿಶತಕ್ಕಿಂತ ಸ್ವಲ್ಪ ಹೆಚ್ಚು ಬೇಕಾಗುತ್ತದೆ ಎಂದು ಹೇಳಿದ್ದಾರೆ.

ಆದ್ದರಿಂದ , ಎಲ್ಲ ಗೌರವದೊಂದಿಗೆ ಹೇಳುವುದೇನೆಂದರೆ , ನಮ್ಮ ಮಹಾ ಗ್ರಂಥಗಳು ಜ್ಞಾನದ ಬೃಹತ್ ಸಂಗ್ರಹ ಎಂದು. ಇದೇನಾದರೂ ಇಂಜಿನಿಯರಿಂಗ್ , ಸಾಹಿತ್ಯ ಅಥವಾ ಚರಿತ್ರೆಯ ಪುಸ್ತಕವಾಗಿದ್ದರೆ , ಓದಿ ಎಂದು ಹೇಳುತ್ತಿದ್ದೆ. ಅಥವಾ ಸ್ವಅರಿವಿನ ಪುಸ್ತಕವಾಗಿದ್ದರೆ, ಮತ್ತು ನೀವು ಇಲ್ಲಿ ಜೀವಂತವಾಗಿ ಇದ್ದೀರೇ ಆದರೆ , ನೀವು ಈ ಪುಸ್ತಕವನ್ನೇ ಅಂದರೆ ನಿಮ್ಮನ್ನೇ ಓದಿಕೊಳ್ಳಿರಿ, ಮತ್ಯಾವುದೋ ಪುಸ್ತಕವನ್ನು ಓದುವುದರ ಬದಲು ಎಂದು. ಏಕೆಂದರೆ , ನೀವು ಆ ಸೃಷ್ಟಿಕರ್ತನಿಂದ ರಚಿತವಾದ ಅದ್ಭುತವಾದ ಪುಸ್ತಕ. ಈ ಜೀವನದ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಇದನ್ನು ಓದುವುಡೇ ಅತ್ಯುತ್ತಮ. ಬೇರೆ ಯಾವುದೇ ಪುಸ್ತಕವನ್ನು ತೆಗೆದುಕೊಳ್ಳಿ , ಅದು ಭಗವಂತನದೇ ಶಬ್ದಗಳನ್ನು ಬಳಸಿದ್ದರೂ, ಅದು ಯಾವುದೇ ಭಾಷೆಯಲ್ಲಿ ಬರೆದಿದ್ದರೂ , ಅದನ್ನು ಬರೆದಿರುವುದು ಒಬ್ಬ ಮನುಷ್ಯನಷ್ಟೇ. ಮಾನವ ಮನಸ್ಸುಗಳಿಗೆ ನಾನಾ ವಿಧವಾದ ಸೆಳೆತಗಳಿರುತ್ತವೆ. ನೀವು ಈ ದಿನ ನಿಮ್ಮ ಕಣ್ಣಾರೆ ನೋಡಿದ ವಿಷಯವನ್ನು ಮತ್ತೊಬ್ಬರಿಗೆ ಹೇಳಿದರೆ, ಅವನು ಹೋಗಿ ಇನ್ನೊಬ್ಬನಿಗೆ ಹೇಳುತ್ತಾನೆ . ಇಪ್ಪತ್ನಾಲ್ಕು ಘಂಟೆಗಳಲ್ಲಿ ಅದು ಇಪತ್ತೈದು ಜನರನ್ನು ದಾಟಿ ಮತ್ತೆ ನಿಮಗೆ ತಲುಪುತ್ತದೆ , ಮತ್ತು ನೀವು ಆಗ ಆ ಕಥೆಯನ್ನು ಗುರುತಿಸಬಲ್ಲಿರಾ ? ಮನುಷ್ಯರು ಬಹಳಷ್ಟು ವಿಚಲಿತ ಮನಸ್ಸಿನವರು ಎಂಬುದು ಸ್ಪಷ್ಟ. ಆದ್ದರಿಂದ ಯಾವುದಾದರು ಸಾವಿರ ವರ್ಷಗಳಿಂದ ಬಂದಿದೆ ಎಂದರೆ ಆ ದಾರಿಯಲ್ಲಿ ಅದಕ್ಕೆ ಏನೆಲ್ಲಾ ಆಗಿರಬಹುದು ಎಂದು ನೀವೇ ಊಹಿಸಿ.

 

ನೀವು ನಿಮ್ಮ ಬಗ್ಗೆಯೇ ತಿಳಿದುಕೊಳ್ಳಬೇಕೆಂದರೆ ಬೇರೆಯವರು ಬರೆದ ಪುಸ್ತಕವನ್ನು ಓದಬೇಡಿ. ನಿಮ್ಮನ್ನು ನೀವು ಪುಸ್ತಕದಲ್ಲಿ ಓದಿಕೊಂಡರೆ, ನೀವು ನಿಜವಲ್ಲ , ನೀವು ಬರೀ ಕಥೆಯಾಗುತ್ತೀರಿ. ನೀವು ನಿಮ್ಮೊಳಗೆ ನೋಡಿಕೊಳ್ಳಬೇಕು. ನೀವು ಹೀಗೆ ತಿರುಗಿನೋಡಲು ನಿಮಗೆ ಸಾಧನಗಳ ಅಗತ್ಯವಿದೆ. ಹಾಗೆಂದು ನಾನು ಎಲ್ಲವೂ ವ್ಯರ್ಥ ಎಂದು ಅವಹೇಳನ ಮಾಡುತ್ತಿಲ್ಲ , ಆದರೆ , ನೀವು ಯಾರು ಎಂಬ ನಿಮ್ಮೊಳಗಿನ ಆಯಾಮವನ್ನು ಆಳವಾಗಿ , ಇನ್ನೂ ನಿಖರವಾಗಿ ಅರ್ಥ ಮಾಡಿಕೊಂಡರೆ , ಆಗ ನಿಮಗೇ ಅರ್ಥವಾಗುತ್ತದೆ, ಈ ಗ್ರಂಥಗಳೆಲ್ಲಾ ನೀರಸವಾದುದು ಎಂದು ಕೃಷ್ಣನು ಅರ್ಜುನನಿಗೆ ಗೀತೆಯ ಬಗ್ಗೆ ಹೇಳುವಾಗ , ಪ್ರತಿ ಬಾರಿ ಕೃಷ್ಣನು ಏನನ್ನಾದರೂ ಹೇಳಿದರೆ, ಆ ದಿನಗಳಲ್ಲಿ ರಾಜಕುಮಾರನಾಗಿದ್ದರಿಂದ ಅರ್ಜುನನು ಒಳ್ಳೆಯ ವಿದ್ಯೆಯನ್ನು ಪಡೆದಿದ್ದುದರಿಂದ , ಅವನು “ ಇಲ್ಲ ಈ ಗ್ರಂಥದಲ್ಲಿ ಬೇರೆಯೇ ಉಲ್ಲೇಖವಿದೆ” ಎಂದು ಹೇಳುತ್ತಿದ್ದನು. ಅವನು ತಾನು ಓದಿದ ಎಲ್ಲಾ ಪುಸ್ತಾಕ್ಗಳನ್ನೂ ಪರಿಗಣಿಸುತ್ತಿದ್ದ.

ಕೃಷ್ಣನು ನಗುತ್ತ ಹೀಗೆ ಹೇಳಿದನು, “ ಮನುಷ್ಯನಲ್ಲಿ ಅಂತಃ ಬೆಳಕು ಬೆಳಗಿದರೆ , ನಿನ್ನ ಎಲ್ಲಾ ಗ್ರಂಥಗಳೂ ಪ್ರವಾಹ ಬಂದಾಗ ಇರುವ ತುಂಬಿದ ಟ್ಯಾಂಕುಗಳಂತೆ” ಎಂದು. ನೀವು ಮರುಭೂಮಿಯಲ್ಲಿದ್ದರೆ , ಒಂದು ಟ್ಯಾಂಕ್ ನೀರೇ ನಿಮಗೆ ಸಮುದ್ರದಂತೆ ಕಾಣಬಹುದು. ಆದರೆ ಪ್ರವಾಹವಾದಾಗ ಒಂದು ಟ್ಯಾಂಕ್ ನೀರಿಗೆ ಅರ್ಥವಾದರೂ ಏನು? ನಿಮ್ಮ ಸೃಷ್ಟಿಕರ್ತನು ಪ್ರತಿಕ್ಷಣವೂ ನಿಮ್ಮಲ್ಲೇ ವಿಜೃಂಭಿಸುತ್ತಿರುವಾಗ ನೀವು ನಿಮ್ಮೊಳಗೇ ನೋಡಬೇಕಾಗುತ್ತದೆ.