ಪ್ರಶ್ನೆ: ಭಾರತೀಯರಾಗಿ ನಾವಿನ್ನೂ ಸಹ ಭಾರತದ ಆಧುನಿಕ ವಾಸ್ತುಶಿಲ್ಪ ಹೇಗಿರಬೇಕೆಂದು ಅರ್ಥಮಾಡಿಕೊಂಡಿಲ್ಲ. ಸುಮ್ಮನೆ ನಾವು ಪಾಶ್ಚಿಮಾತ್ಯರ ವಿನ್ಯಾಸವನ್ನು ನಕಲು ಮಾಡುತ್ತೇವೆ. ಭಾರತದ ಆಧುನಿಕ ವಾಸ್ತುಶಿಲ್ಪ ಹೇಗಿರಬೇಕೆಂದು ನಿಮ್ಮ ಅಭಿಪ್ರಾಯ?

ಸದ್ಗುರು: ಕೇವಲ ವಾಸ್ತುಶಿಲ್ಪದಲ್ಲಷ್ಟೇ ಅಲ್ಲ, ನಾವು ಬೇರೆಲ್ಲದರಲ್ಲೂ ಪಾಶ್ಚಿಮಾತ್ಯರನ್ನು ನಕಲು ಮಾಡುತ್ತೇವೆ! ಭಾರತದಲ್ಲಿ ಅನೇಕ ಮಹಿಳೆಯರು ತಮ್ಮ ಕೂದಲನ್ನು ಕಂದು ಬಣ್ಣಕ್ಕೆ ತಿರುಗಿಸಿಕೊಂಡಿರುವುದನ್ನು ನಾನು ನೋಡುತ್ತೇನೆ! ನಿಮ್ಮ ಕೂದಲು ಯಾವ ಬಣ್ಣದ್ದಾಗಿದ್ದರೂ, ಅದರಲ್ಲಿ ಸಮಸ್ಯೆಯಿಲ್ಲ, ನಿಮಗೆ ಬೇಕಾದ ರೀತಿಯಲ್ಲಿ ಅದಕ್ಕೆ ಬಣ್ಣವನ್ನು ಹಚ್ಚಿ, ಆದರೆ ಬೇರೆಯವರನ್ನು ಅನುಕರಿಸಿ ನೀವದನ್ನು ಮಾಡುತ್ತಿರಬಾರದು. ಬ್ರಿಟಿಷರು ನಮ್ಮ ದೇಶವನ್ನು ಬಿಟ್ಟು ಎಪ್ಪತ್ತು ವರ್ಷಗಳಾದರೂ, ಅವರಿನ್ನೂ ಸಹ ನಮ್ಮ ಮನಸ್ಸಿನಲ್ಲಿ ಬದುಕುತ್ತಿದ್ದಾರೆ! ನಿಮ್ಮ ಕೂದಲಿನ ಬಣ್ಣ ಸಮಸ್ಯೆಯಲ್ಲ, ಆದರೆ ಬೇರೊಂದು ಬಣ್ಣ ನಿಮ್ಮ ಬಣ್ಣಕ್ಕಿಂತ ಉನ್ನತವಾದುದ್ದೆಂದು ತಿಳಿದು ನೀವದನ್ನು ಮಾಡುತ್ತಿರಬಾರದು – ಅದು ವರ್ಣಭೇದ ನೀತಿಯಾಗುತ್ತದೆ!

ನೀವು ಪ್ರಾಚೀನ ಭಾರತದ ವಾಸ್ತುಶಿಲ್ಪದತ್ತ ತಿರುಗಿ ನೋಡಿದರೆ, ಅಬ್ಬಾ! ಎಂಥ ಸೊಬಗು, ಸೌಂದರ್ಯ

ಇಂತದ್ದೇ ಗೀಳು ಖಂಡಿತವಾಗಿಯೂ ವಾಸ್ತುಶಿಲ್ಪಕ್ಕೂ ಸಹ ಅಂಟಿಕೊಂಡಿದೆ. ನೀವು ಪ್ರಾಚೀನ ಭಾರತದ ವಾಸ್ತುಶಿಲ್ಪದತ್ತ ತಿರುಗಿ ನೋಡಿದರೆ, ಅಬ್ಬಾ! ಎಂಥ ಸೊಬಗು, ಸೌಂದರ್ಯ. ಇದರ ಒಂದು ಅಂಶವೆಂದರೆ geometry. ಭೌತಿಕ ಜಗತ್ತಿನಲ್ಲಿ, ಅತ್ಯಂತ ಮುಖ್ಯವಾದ ಅಂಶವೆಂದರೆ geometryಯ ನಿಖರತೆ. ಗ್ರಹಗಳು ಸೂರ್ಯನ ಸುತ್ತ ಸುತ್ತುತ್ತಿರುವುದು, ಅವುಗಳನ್ನು ಉಕ್ಕಿನ ತಂತಿಯಿಂದ ಒಟ್ಟಿಗೆ ಬಿಗಿಯಲಾಗಿದೆ ಎಂಬ ಕಾರಣಕ್ಕಲ್ಲ. Geometryಯ ನಿಖರತೆ ಅವುಗಳನ್ನು ಹಾಗೆ ನಡೆಸುತ್ತಿದೆ. ಸೌರಮಂಡಲದಲ್ಲಿ geometryಯು ಇಲ್ಲವಾದರೆ, ಅದು ಹೇಳಹೆಸರಿಲ್ಲದಂತೆ ಮಾಯವಾಗುತ್ತದೆ. 

 

ದೈಹಿಕ ಮಟ್ಟದಲ್ಲಿ, ಇಡೀ ಯೋಗವಿಜ್ಞಾನವು ನಿಮ್ಮ ವ್ಯಕ್ತಿಗತ geometryಯನ್ನು ವಿಶ್ವದ geometryಯೊಂದಿಗೆ ಹೊಂದಿಕೆ ಮಾಡುವುದರ ಬಗ್ಗೆಯಾಗಿದೆ. ಹಾಗಾದಾಗ ನಿಮ್ಮ ಮತ್ತು ವಿಶ್ವದ ನಡುವೆ ಯಾವುದೇ ವ್ಯತ್ಯಾಸವಿರುವುದಿಲ್ಲ. ನೀವೊಂದು ನಿರ್ದಿಷ್ಟ ಮಟ್ಟದ geometryಯ ನಿಖರತೆಯನ್ನು ಹೊಂದುವ ಕಾರಣ, ಎಲ್ಲವೂ ನೀವೇ ಎಂಬ ಅನುಭೂತಿಯನ್ನು ಪಡೆಯುತ್ತೀರ. ಕೇವಲ ನಿಮ್ಮ ಮಾನಸಿಕ ಚೌಕಟ್ಟಿನಲ್ಲದೆ, ನಿಮ್ಮ ರಾಸಾಯಿನಿಕ ಮತ್ತು ಪ್ರಾಣಶಕ್ತಿಯ ಚೌಕಟ್ಟಿನಲ್ಲೂ ಸಹ ನೀವು ದೊಡ್ಡ geometryಯೊಂದಿಗೆ ಹೊಂದಿಕೊಳ್ಳುತ್ತೀರ. ಹೀಗಾದಾಗ ನೀವು ಮತ್ತು ವಿಶ್ವ ಎರಡೂ ಒಂದೇ ಎಂದೆನಿಸುತ್ತದೆ ಏಕೆಂದರೆ ಅವು ಸರಿಯಾಗಿ ಹೊಂದಿಕೆಯಾಗಿರುತ್ತವೆ.

ವಾಸ್ತುಶಿಲ್ಪವು ನಾವು ಕಟ್ಟುವ ವಾಸಸ್ಥಾನಗಳು ಮತ್ತು ಉಪಯೋಗಿಸುವ ಕಟ್ಟಡಗಳ ಬಗ್ಗೆಯಾಗಿದೆ. ಒಂದು ರೀತಿಯಲ್ಲಿ, ಸೃಷ್ಟಿಯ ಉಳಿದ ಭಾಗದ ಜೊತೆ ಅವುಗಳು ತಮ್ಮ ಸ್ಥಳವನ್ನು ಕಂಡುಕೊಳ್ಳಬೇಕು.

ವಾಸ್ತುಶಿಲ್ಪವು ನಾವು ಕಟ್ಟುವ ವಾಸಸ್ಥಾನಗಳು ಮತ್ತು ಉಪಯೋಗಿಸುವ ಕಟ್ಟಡಗಳ ಬಗ್ಗೆಯಾಗಿದೆ. ಒಂದು ರೀತಿಯಲ್ಲಿ, ಸೃಷ್ಟಿಯ ಉಳಿದ ಭಾಗದ ಜೊತೆ ಅವುಗಳು ತಮ್ಮ ಸ್ಥಳವನ್ನು ಕಂಡುಕೊಳ್ಳಬೇಕು. ನಮಗೆ ಕಟ್ಟದ ನಿರ್ಮಾಣದ ವಸ್ತುಗಳ ಮೇಲೆ ಒಂದು ರೀತಿಯಾದ ಸ್ವಾತಂತ್ರ್ಯವಿರುವ ಕಾರಣಕ್ಕೆ, ಇಂದು ನಾವಿದನ್ನು ಸಂಪೂರ್ಣವಾಗಿ ಮರೆತಿದ್ದೇವೆಂದು ನನಗನಿಸುತ್ತದೆ. ಉಕ್ಕು ಮತ್ತು ಕಾಂಕ್ರೀಟ್ ಬಂದ ನಂತರ, ಆ ವಸ್ತುಗಳ ಶಕ್ತಿ, ಸಾಮರ್ಥ್ಯಗಳಿಂದಾಗಿ ನಮಗೆ ಬೇಕಾದ ಯಾವುದೇ ರೀತಿಯಲ್ಲಾದರೂ ಕಟ್ಟಡಗಳನ್ನು ನಿರ್ಮಿಸಬಹುದೆಂದು ನಾವು ಆಲೋಚಿಸಿದೆವು.

 
ಕೇವಲ ಶಕ್ತಿ ಬಲದಿಂದ ಕೆಲಸಗಳನ್ನು ಮಾಡುವುದು ಕೆಲವೊಮ್ಮೆ ಬಳಕೆಯ ದೃಷ್ಟಿಯಿಂದ ಸರಿಯಾದದ್ದೆ, ಆದರೆ ನೀವು ಎಲ್ಲವನ್ನೂ ಸಹ ಅದೇ ರೀತಿಯಲ್ಲಿ ಮಾಡಿದರೆ, ನಿಮ್ಮ ಜೀವನವು ಅವಲಕ್ಷಣವಾಗುತ್ತದೆ. ಇದು ಕೇವಲ ಕಟ್ಟಡದ ಬಗ್ಗೆಯಷ್ಟೇ ಅಲ್ಲ, ನೀವು ಬಲ ಪ್ರಯೋಗದಿಂದ ಕಾರ್ಯನಿರ್ವಹಿಸುವ ಕಾರಣ, ನಿಮ್ಮ ಜೀವನವೂ ವಿಕಾರವಾಗುತ್ತದೆ. ಕೆಲಸಗಳನ್ನು ಕನಿಷ್ಠ ಬಲ ಮತ್ತು ಗರಿಷ್ಠ ಪ್ರಭಾವದಿಂದ ಮಾಡಲು ನಮಗೆ ಸಾಧ್ಯವಾದಾಗ ಜೀವನವು ಸುಂದರವಾಗುತ್ತದೆ. ನೀವು ಗರಿಷ್ಠ ಶಕ್ತಿಯನ್ನು ಕನಿಷ್ಠ ಪ್ರಭಾವದಿಂದ ಬಳಸಿದರೆ, ಬದುಕಲು ಅದೊಂದು ಕ್ರೂರ ಮಾರ್ಗವಾಗುತ್ತದೆ. 
 

ಹೊಸ ವಸ್ತುಗಳನ್ನು ಕಂಡುಹಿಡಿಯುವ ಉತ್ಸಾಹದಿಂದ ನಾವು ಹಿಂದೆಸರಿದು, ಜಗತ್ತಿನಲ್ಲಿ ಹೆಚ್ಚು ಪ್ರಜ್ಞಾವಂತ geometryಯ ಕಡೆಗೆ ಗಮನಹರಿಸಿದರೆ, ಜನರು ದೈಹಿಕವಾಗಿ ಮತ್ತು ಮಾನಸಿಕವಾಗಿ ಹೆಚ್ಚು ಆರೋಗ್ಯವಾಗಿರುವುದನ್ನು ನೀವು ನೋಡುತ್ತೀರ.

ಅಸಂಬದ್ಧವಾದ ಆಕಾರಗಳನ್ನು ಕಟ್ಟಿ ಅವುಗಳನ್ನು ನಿಲ್ಲುವಂತೆ ಮಾಡುವ ವಸ್ತುಗಳನ್ನು ನಾವು ಕಂಡುಹಿಡಿದಿರುವುದರಿಂದಲೇ ನಮ್ಮ ವಾಸ್ತುಶಿಲ್ಪವು ಈ ಸ್ಥಿತಿಗೆ ಬಂದಿರುವುದು. Geometryಯ ಪ್ರಕಾರ ಎದ್ದುನಿಲ್ಲಲು ಸಾಧ್ಯವಿಲ್ಲದಿರುವ ಆಕಾರಗಳು ನಿಂತುಕೊಂಡಿರುವುದು, ಕೇವಲ ನಿರ್ಮಾಣ ವಸ್ತುಗಳ ಶಕ್ತಿ ಬಲದಿಂದ.


ಹೊಸ ವಸ್ತುಗಳನ್ನು ಕಂಡುಹಿಡಿಯುವ ಉತ್ಸಾಹದಿಂದ ನಾವು ಹಿಂದೆಸರಿದು, ಜಗತ್ತಿನಲ್ಲಿ ಹೆಚ್ಚು ಪ್ರಜ್ಞಾವಂತ geometryಯ ಕಡೆಗೆ ಗಮನಹರಿಸಿದರೆ, ಜನರು ದೈಹಿಕವಾಗಿ ಮತ್ತು ಮಾನಸಿಕವಾಗಿ ಹೆಚ್ಚು ಆರೋಗ್ಯವಾಗಿರುವುದನ್ನು ನೀವು ನೋಡುತ್ತೀರ ಮತ್ತು ಜನಗಳು ಆ ರೀತಿಯ ಕಟ್ಟಡಗಳಲ್ಲಿ ಬದುಕುವುದರಿಂದ ಇನ್ನೂ ಅನೇಕ ಪ್ರಯೋಜನಗಳಿರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ, ನಿಮ್ಮ ಸುತ್ತಲಿನ ಪರಿಸರಕ್ಕೆ ನೀವು ಕನಿಷ್ಠ ಅಡಚಣೆಯನ್ನು ಉಂಟುಮಾಡುತ್ತೀರ. 
 

 

ಸಂಪಾದಕರ ಟಿಪ್ಪಣಿ: "Architecture and Spirituality," ಈ ಲೇಖನದಲ್ಲಿ ಸದ್ಗುರುಗಳು geometry ಮತ್ತು ವಾಸ್ತುಶಿಲ್ಪದ ಪ್ರಕೃತಿಯನ್ನು ಅವಲೋಕಿಸುತ್ತಾರೆ ಮತ್ತು ಈಶ ಯೋಗ ಕೇಂದ್ರದಲ್ಲಿನ ಕಟ್ಟಡಗಳ ವಿಶಿಷ್ಟ ಲಕ್ಷಣದ ಬಗ್ಗೆ, ವಿಶೇಷವಾಗಿ ಧ್ಯಾನಲಿಂಗದ ವೈಶಿಷ್ಟ್ಯದ ಬಗ್ಗೆ ವಿವರಿಸುತ್ತಾರೆ. ಲೇಖನವನ್ನು ಇಲ್ಲಿ ಓದಿ Read the article.