ಇದೀಗ ತಾನೆ ರಷ್ಯಾದಲ್ಲಿ ನಡೆದ FIFA World Cup-ನಿಂದ ವಾಪಾಸಾದೆ. ಸೆಮಿಫೈನಲ್ಸ್ ಮತ್ತು ಫೈನಲ್-ನ ವಾತಾವರಣ, ತೀವ್ರತೆ ಹಾಗೂ ಸಂಭ್ರಮ ವಿಸ್ಮಯಕಾರಿಯಾಗಿತ್ತು. ಪಂದ್ಯಾವಳಿಯಲ್ಲಿ, Messi ಯಂತಹ ಪ್ರತಿಷ್ಠಿತ ಆಟಗಾರರು ಗೋಲು ಗಳಿಸಲು ಅಸಫಲರಾದರು; Mbappe-ಯಂತಹ ಆಟಗಾರರು ಪ್ರಸಿದ್ಧರಾದರು. ಪ್ರಸಿದ್ಧ ತಂಡಗಳು ಸೋತು, ನೆಲ ಕಚ್ಚಿದವು, ಬೇರೆ ಚಿಕ್ಕ-ಪುಟ್ಟ ತಂಡಗಳು ಮಿಂಚಿದವು. ತರಬೇತಿಯನ್ನು ಪ್ರಾರಂಭಿಸಲು ಸರಿಯಾದ ವಯಸ್ಸಿನಲ್ಲಿರುವ ಲಕ್ಷಾಂತರ ಹುಡುಗರನ್ನು ಹೊಂದಿರುವ ಭಾರತದಂತಹ ದೇಶವು ಭವಿಷ್ಯದಲ್ಲಿ ನಡೆಯುವ ಫುಟ್ಬಾಲ್ ವಿಶ್ವ ಕಪ್-ಗಳಲ್ಲಿ ಭಾಗವಹಿಸವುದು ಸಾಧ್ಯವೆಂದು ನನ್ನ ಅನಿಸಿಕೆ. ಹಾಗಾಗಿ, ಯಶಸ್ವಿಯಾಗಲು ಏನು ಬೇಕಾಗುತ್ತದೆ? ಒಂದು, ಪ್ರತಿಭೆ; ಇನ್ನೊಂದು, ಶ್ರಮ. 

ಸಂಪೂರ್ಣವಾಗಿ ಮುಕ್ತ ಹೃದಯದಿಂದ ನೀವು ಶ್ರಮಿಸಲು ಸಿದ್ಧರಿದ್ದರೆ, ನೀವು ಏನು ಅಪೇಕ್ಷಿಸಿದ್ದನ್ನು ಸಾಧಿಸಬಹುದು.

ಯಾವುದೇ ಕ್ಷೇತ್ರದಲ್ಲಿ – ಅವರು ಮಹಾನ್ ಫುಟ್ಬಾಲ್ ಆಟಗಾರ, ಶ್ರೇಷ್ಠ ಕಲಾವಿದ, ಶ್ರೇಷ್ಠ ನಟ, ಶ್ರೇಷ್ಠ ಸಂಗೀತಗಾರ, ಅಥವಾ ಇನ್ನೇನಾದರೂ ಆಗಿರಬಹುದು – ನನ್ನ ಪ್ರಕಾರ, ಅವರ ಯಶಸ್ಸಿಗೆ ಕಾರಣ - ಶೇ. ೮೦%ರಷ್ಟು ಶ್ರಮ ಹಾಗೂ ಶೇ. ೨೦%ರಷ್ಟು ಪ್ರತಿಭೆ. ಅಪ್ಪಟ ಅಸಾಮಾನ್ಯ ಪ್ರತಿಭೆಯನ್ನು ಹೊಂದಿರುವ ಕೆಲವರಿದ್ದಾರೆ – ಆದರೆ, ಬೇರೆಯವರೆಲ್ಲರೂ ಗಂಟೆಗಟ್ಟಲೆಗಳ ಅಭ್ಯಾಸವನ್ನು ಮಾಡಬೇಕು. ವಿಶ್ವದರ್ಜೆಯ ಫುಟ್ಬಾಲ್ ಆಟಗಾರನಿಗೆ ಹಲವು ಸಾವಿರ ಗಂಟೆಗಳ ತರಬೇತಿ ಬೇಕಾಗುತ್ತದೆ. ವಿಶ್ವ ಕಪ್-ನಲ್ಲಿ ಒಂದು ಗೋಲನ್ನು ಹೊಡೆಯಲು, ಅವರು ಹಲವು ವರ್ಷಗಳಿಂದ ದಿನಕ್ಕೆ ನಾಲ್ಕರಿಂದ ಆರು ಗಂಟೆಗಳವರೆಗೆ ಚೆಂಡನ್ನು ಒದೆಯುತ್ತ ಅಭ್ಯಾಸವನ್ನು ಮಾಡಿರುತ್ತಾರೆ. 

ಉತ್ತಮ ಕಲಾವಿದರನ್ನು ನೋಡಿದರೆ - ವೇದಿಕೆಯ ಮೇಲೆ ಎರಡು ಗಂಟೆಗಳ ಕಾಲ ಪ್ರದರ್ಶನವನ್ನು ನೀಡಲು, ಅವರು, ದಿನದಲ್ಲಿ ಹನ್ನೆರಡು, ಹದಿನೈದು ಗಂಟೆಗಳ ಅಭ್ಯಾಸವನ್ನು ಮಾಡಿರಬಹುದು – ಅದು ಪ್ರತಿಫಲ ನೀಡುತ್ತದೆ. 

ಯಾವುದಕ್ಕೂ ಅಸಾಮಾನ್ಯ ಪ್ರತಿಭೆಯನ್ನು ಹೊಂದಿರುವುದು ಕಡ್ಡಾಯವಲ್ಲ. ಸಂಪೂರ್ಣವಾಗಿ ತೆರೆದ ಹೃದಯದಿಂದ ನೀವು ಶ್ರಮಿಸಲು ಸಿದ್ಧರಿದ್ದರೆ, ನೀವು ಅಪೇಕ್ಷಿಸಿದಂತೆ ಆಗಬಹುದು. ನಾನು ಶಾಲೆಯಲ್ಲಿದ್ದಾಗ, ಒಮ್ಮೆ, ನಮಗೇನು ಮಾಡಲಿಕ್ಕಾಗುವುದು, ಏನನ್ನು ಮಾಡಲಿಕ್ಕಾಗುವುದಿಲ್ಲವೆಂಬ ಪ್ರಶ್ನೆ ಉದ್ಭವಿಸಿತು. ನನಗೆ ಸಾಕಷ್ಟು ಕೆಲಸವಿದ್ದಿದ್ದರಿಂದ ಇದರಲ್ಲೇನು ಆಸಕ್ತಿಯಿರಲಿಲ್ಲ – ಆದರೆ, ಅವರುಗಳು ಏನು ಮಾಡಬಹುದೆನ್ನುವುದರ ಬಗ್ಗೆ ಬರೀ ಮಾತನಾಡುತ್ತಿದ್ದರು. ಕೊನೆಗೆ, ನಾನು ಹೇಳಿದೆ, “ಸಾಕಷ್ಟು ಹಣ ಮತ್ತು ಸಮಯವನ್ನು ನೀಡಿದರೆ, ನಾನು ಚಂದ್ರನವರೆಗೂ ಮೆಟ್ಟಿಲನ್ನು ಕಟ್ಟುತ್ತೇನೆ" ಎಂದು. ಸೊಕ್ಕು ಎಂದುಕೊಂಡರು. ನಾನೆಂದೆ, “ಬಹುಶಃ, ಇದನ್ನು ಇನ್ನೂ ಮಾಡಿಲ್ಲ, ಆದರೆ, ಸಾಕಷ್ಟು ಹಣ ಮತ್ತು ಸಮಯವಿದ್ದರೆ, ಇದನ್ನು ಮಾಡಬಹುದು.” ಅವಕಾಶ ಬರುತ್ತದೆಯೋ ಇಲ್ಲವೋ ಎನ್ನುವದೇ ಪ್ರಶ್ನೆ. ಇಲ್ಲದಿದ್ದರೆ, ಮಾನವನಿಗೆ ಅಸಾಧ್ಯವಾದದ್ದೇನಿದೆ?  

ಯಶಸ್ಸು ಎನ್ನುವುದು ಒಂದು ನಿರ್ದಿಷ್ಟ ಅಂತ್ಯವನ್ನು ಸಾಧಿಸುವುದಲ್ಲ. ನೀವೇನನ್ನು ನಿಜವಾಗಿಯೂ ಆಶಿಸುತ್ತೀರೋ, ಅದನ್ನು ಸಂತೋಷಪೂರ್ವಕ ಹಾಗೂ ನಿರಂತರ ಶ್ರಮದಿಂದ ಸಾಧಿಸುವುದು.

ಅವಕಾಶವು ಒದಗುತ್ತದೆಯೋ ಇಲ್ಲವೋ, ಅದು, ಜಗತ್ತಿನ ವಿವಿಧ ವಾಸ್ತಾವಾಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಅವಕಾಶವು ಒದಗಿ ಬಂದಾಗ, ಅದಕ್ಕಾಗಿ ಸಿದ್ಧರಿರುತ್ತೀರಾ?ಅದೇ ಯಶಸ್ಸು ಮತ್ತು ವೈಫಲ್ಯದ ನಡುವಿನ ವ್ಯತ್ಯಾಸ. ನೀವು ಯಶಸ್ವಿಯಾಗಲು ಬಯಸಿದರೆ, ನಿಮಗೆ ಉತ್ಸಾಹ ಹಾಗೂ ಪ್ರಯತ್ನಿಸುವ  ಇಚ್ಛೆ ಬೇಕಾಗುತ್ತದೆ. ಯಾರಿಗಾದರೂ ಜೀವನದ ಬಗ್ಗೆ ಅತ್ಯೋತ್ಸಾಹವಿದ್ದರೆ, ಅಂತಹವರಿಗೆ ಬಿಡುವಿನ ಸಮಯವಿರುವುದಿಲ್ಲ. ನೀವೇನನ್ನು ಆಶಿಸುತ್ತೀರೋ, ಅದನ್ನು ಮಾಡಿದರೆ, ಅದು ಕೆಲಸವಂತೆ ಭಾಸವಾಗುವುದಿಲ್ಲ, ಭಾರವೆನಿಸುವುದಿಲ್ಲ. ಆ ಕೆಲಸವು ಆನಂದದಾಯಕವಾಗಿದ್ದಲ್ಲಿ, ದಿನದ ಇಪ್ಪತ್ತನಾಲ್ಕು ಗಂಟೆಗಳನ್ನು ಅದಕ್ಕಾಗಿ ಸಮರ್ಪಿಸಲು ಸಿದ್ಧರಿರುತ್ತೀರಿ. ನೀವು ಬೇರೆ ಏನನ್ನಾದರೂ ಮಾಡಲು ಬಯಸಿದರೆ- ಓದುವುದು, ಹಾಡುವುದು, ನೃತ್ಯ, ನಾಟಕ, ಏನಾದರನ್ನು ರಚಿಸುವುದು ಅಥವಾ ಹೊಸದನ್ನು ಅನ್ವೇಷಿಸುವುದು– ಅದು ಪರವಾಗಿಲ್ಲ. ಆದರೆ, ಹಾಗೆ ಸುಮ್ಮನೆ ಬದುಕುವುದೆಂದರೆ? ನಿಮ್ಮ ಮೆದುಳು ಹಾಗೂ ನಿಮ್ಮ ದೇಹವು ತನ್ನ ಗರಿಷ್ಠ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುವ ರೀತಿಯಲ್ಲಿ ಏನಾದರು ಮಾಡಬೇಕು. 

ಸಪ್ರೇಮ ಆಶೀರ್ವಾದಗಳು