ಪ್ರಶ್ನೆ: ನನಗೆ ಏನನ್ನಾದರೂ ನೆನಪಿಟ್ಟುಕೊಳ್ಳುವುದು ಕಷ್ಟಸಾಧ್ಯ. ಮೌಖಿಕ ಪ್ರಸರಣಕ್ಕೆ ಗ್ರಹಣಶೀಲನಾಗಿರುವುದು ನನಗೆ ಸವಾಲಿನ ವಿಷಯವಾಗಿದೆ. ಇದರ ಬಗ್ಗೆ ನೀವೇನಾದರೂ ಹೇಳುತ್ತೀರಾ?

ಸದ್ಗುರು: ನೀವು ನೋಡುವ, ಕೇಳುವ, ಆಘ್ರಾಣಿಸುವ, ಮತ್ತು ಸ್ಪರ್ಶಿಸುವ ಪ್ರತಿಯೊಂದು ಸಂಗತಿಯೂ ದಾಖಲಿಸಲ್ಪಡುತ್ತದೆ. ಅದಕ್ಕೇನೂ ಸಮಸ್ಯೆಯಿಲ್ಲ. ನಾನು ಈಗ ನಿಮ್ಮನ್ನು ಅತ್ಯಂತ ಕೆಟ್ಟದಾಗಿ ಬೈದೆ ಅಂದುಕೊಳ್ಳೋಣ, ನೀವು ಅದನ್ನು ನಿಮ್ಮ ಜೀವನವಿಡೀ ನೆನಪಿಟ್ಟುಕೊಳ್ಳುತ್ತೀರಿ. ನಿಮಗೆ ಆಗ ಅದ್ಭುತವಾದ ನೆನಪಿನ ಶಕ್ತಿಯಿರುತ್ತದೆ. ನೀವು ಕೇವಲ ಕೆಟ್ಟಪದಗಳನ್ನು ನೆನಪಿಟ್ಟುಕೊಳ್ಳುತ್ತೀರಿ, ಅಷ್ಟೆ. ಈಗ ನಿಮ್ಮ ಸಮಸ್ಯೆಯೇನೆಂದರೆ ನಿಮ್ಮ ನೆನಪಿನ ನಿರ್ದಿಷ್ಟ ಭಾಗಗಳನ್ನು ಬೇಕಾದಾಗ ನೆನಪಿಗೆ ತಂದುಕೊಳ್ಳಲಾಗದ ನಿಮ್ಮ ಅಸಾಮರ್ಥ್ಯ. ನಿಮಗೇನುಬೇಕೋ ಅದನ್ನು ನೀವು ಎತ್ತಿಕೊಳ್ಳಲಾಗುತ್ತಿಲ್ಲ. ಇದು ಸ್ಪಷ್ಟತೆಯ ಪ್ರಶ್ನೆ, ನೆನಪಿನದ್ದಲ್ಲ. ಒಂದು ಫೋನಿಗೆ ಕಡಿಮೆ ನೆನಪಿನ ಶಕ್ತಿ ಇದೆ ಎಂದು ನೀವು ಹೇಳಿದಾಗ, ಅದರ ದಾಖಲಿಸುವ ಸಾಮರ್ಥ್ಯ ಸೀಮಿತ ಎಂದರ್ಥ. ಮತ್ತೊಂದು ವಿಷಯವೆಂದರೆ, ನಾನು ಒಂದನ್ನು ಒತ್ತಿದಾಗ ಅದು ಐದನ್ನು ತೋರಿಸಿದರೆ ಅದು ಕೆಟ್ಟ ನೆನಪಿನ ಸಮಸ್ಯೆಯಲ್ಲ, ಬದಲಾಗಿ ಕೆಟ್ಟ ಕೀಬೋರ್ಡಿನ ಸಮಸ್ಯೆಯಾಗಿದೆ. ನಿಮ್ಮದೂ ಒಂದು ಕೆಟ್ಟ ಕೀಬೋರ್ಡಿನ ಸಮಸ್ಯೆಯಷ್ಟೆ. ನೆನಪಿನ ಶಕ್ತಿಯನ್ನು ಸರಿಪಡಿಸುವ ಅವಶ್ಯಕತೆಯಿಲ್ಲ – ನೀವು ಅನುಭವಿಸುವ ಪ್ರತಿಯೊಂದೂ ದಾಖಲಾಗುತ್ತದೆ. ನಿಮಗೆ ಸರಿಯಾದ ಮಾಹಿತಿಯನ್ನು ಹಿಂಪಡೆಯಲಾಗುತ್ತಿಲ್ಲ – ಅದೇ ಇಡೀ ಸಮಸ್ಯೆ.

ಜೀವನದಲ್ಲಿ ನಿಖರತೆಯನ್ನು ತರುವುದು

ನಾವು ಸ್ಪಷ್ಟತೆಯ ಕುರಿತಾಗಿ ಶ್ರಮಿಸಬೇಕು. ಮನಸ್ಸಿಗೆ ಸ್ಪಷ್ಟತೆಯನ್ನು ನೀಡುವುದು ಯಾವುದು? ಸ್ಪಷ್ಟತೆಯನ್ನು ಉತ್ತಮ ಪಡಿಸಿಕೊಳ್ಳಲು ನೀವು ಮಾಡಬಹುದಾದ ಒಂದು ಸರಳ ಸಂಗತಿಯೆಂದರೆ ಪ್ರತಿಯೊಂದು ವಿಷಯವನ್ನೂ ಒಂದು ನಿರ್ದಿಷ್ಟ ನಿಖರತೆಯಿಂದ ಮಾಡುವುದು. ಹಠಯೋಗ ಎನ್ನುವುದು ನಿಖರತೆಯ ಕುರಿತಾದದ್ದಾಗಿದೆ- ನಿಮ್ಮ ಪಾದಗಳನ್ನು ಹೇಗೆ ಊರಬೇಕು, ಕೈಗಳು ಎಲ್ಲಿರಬೇಕು, ನಿಮ್ಮ ತಲೆಯನ್ನು ಹೇಗೆ ಇರಿಸಬೇಕು, ನೀವು ಹೇಗೆ ಚಲಿಸಬೇಕು, ನೀವು ನಿಮ್ಮೊಂದಿಗೆ ತಂದಿರುವ ವಸ್ತುಗಳನ್ನು ಹೇಗೆ ಇಟ್ಟುಕೊಳ್ಳಬೇಕು ಮತ್ತಿತರ ಸಂಗತಿಗಳು. ನೀವು ನಿಮ್ಮ ಚಟುವಟಿಕೆಯಲ್ಲಿ ನಿಖರತೆಯನ್ನು ತಂದುಕೊಂಡರೆ, ನಿಮ್ಮ ಮನಸ್ಸಿನಲ್ಲಿಯೂ ನಿಖರತೆ ಮೂಡುತ್ತದೆ. ಜೀವನದ ಪ್ರತಿಯೊಂದು ಅಂಶದಲ್ಲೂ ನೀವು ನಿಖರತೆಯನ್ನು ಅಭ್ಯಾಸ ಮಾಡಬೇಕು. ನಿಮ್ಮ ಕೋಣೆ ಹೇಗಿರಬೇಕು, ನೀವು ಹೇಗೆ ಹಾಸಿಗೆಗೆ ಹೋಗುತ್ತೀರಿ – ಎಲ್ಲದರಲ್ಲೂ ನಿಖರತೆಬೇಕು. ಒಂದು ಆಸನವನ್ನು ಮಾಡುವಾಗ ನೀವು ಅನ್ವಯಿಸುವ ಸೂಕ್ಷ್ಮತೆಯನ್ನು ನಿಮ್ಮ ಜೀವನದಲ್ಲಿ ತರಬೇಕು. ನಿಧಾನವಾಗಿ, ನಿಮ್ಮ ಮನಸ್ಸು ಅತ್ಯಂತ ಸ್ಪಷ್ಟವಾಗುವುದನ್ನು ನೀವು ಕಾಣುತ್ತೀರಿ. ಅದು ಎಲ್ಲ ವಿಷಯಗಳಲ್ಲೂ ಸೂಕ್ಷ್ಮತೆಯನ್ನು ಪಡೆದಕೊಳ್ಳುತ್ತದೆ.

ಹಠಯೋಗ ಎನ್ನುವುದು ನಿಖರತೆಯ ಕುರಿತಾದದ್ದಾಗಿದೆ.ನೀವು ನಿಮ್ಮ ಚಟುವಟಿಕೆಯಲ್ಲಿ ನಿಖರತೆಯನ್ನು ತಂದುಕೊಂಡರೆ, ನಿಮ್ಮ ಮನಸ್ಸಿನಲ್ಲಿಯೂ ನಿಖರತೆ ಮೂಡುತ್ತದೆ.

ಈ ಕ್ಷಣದಿಂದ, ನೀವು ಮಾಡಬಹುದಾದ ಒಂದು ಸರಳ ಅಭ್ಯಾಸವೆಂದರೆ, ನೀವು ಎದ್ದು ನಿಲ್ಲುವಾಗ, ಕುಳಿತುಕೊಳ್ಳುವಾಗ, ನಡೆದಾಡುವಾಗ, ಏನೇ ಮಾಡಿದರೂ ಅದನ್ನು ನಿಖರತೆ ಮತ್ತು ಶ್ರದ್ಧೆಯಿಂದ ಮಾಡಿರಿ. ನಿಮ್ಮ ಸುತ್ತಲಿರುವ ಪ್ರತಿಯೊಂದನ್ನೂ ಪ್ರಜ್ಞಾಪೂರ್ವಕವಾಗಿ ನೆನಪಿನಲ್ಲಿ ದಾಖಲಿಸಿಕೊಳ್ಳಿ. ಉದಾಹರಣೆಗೆ, ಇಲ್ಲಿ ಐದು ಕಂಬಗಳಿವೆ, ಒಂದು ಪಾತ್ರೆಯಿದೆ, ಒಂದು ದೊಡ್ಡ ಕಲ್ಲಿದೆ, ಒಂದು ಕೆರೆಯಿದೆ, ಮತ್ತೊಂದು ನಾಲ್ಕು ಕಂಬಗಳಿವೆ, ಒಂದು ಬಾಗಿಲಿದೆ. ಎಷ್ಟು ಎತ್ತರದ್ದು? ಸುಮಾರು ಹನ್ನೆರಡು ಅಡಿಗಳಿರಬಹುದು. ಇದನ್ನು ಎಲ್ಲದರೊಂದಿಗೆ ಅಭ್ಯಾಸ ಮಾಡಿ. ಇಲ್ಲಿಂದ ಅಲ್ಲಿಗೆ ಎಷ್ಟು ಹೆಜ್ಜೆಗಳಿವೆ? ಒಂದು, ಎರಡು ಎಂದು ಎಣಿಸದಿರಿ, ನಡೆಯುತ್ತಾ ಹೋಗಿ “ಸರಿ, ಇದು ಮೂರು ಎನಿಸುತ್ತದೆ,” ಎಂದುಕೊಳ್ಳಿ, ಮತ್ತೊಂದು ಮೂರು, ಮತ್ತು ಇನ್ನೊಂದು ಮೂರನ್ನು ಗಮನಿಸಿ. ಕೆಲ ದಿನಗಳ ನಂತರ ನಾಲ್ಕು, ಐದು, ಅಥವಾ ಹನ್ನೊಂದರ ಅಂತರಗಳಲ್ಲಿ ಏನನ್ನೂ ಯೋಚಿಸದೇ ಗಮನಿಸಲು ಪ್ರಯತ್ನಿಸಿ, ನೀವು ಹನ್ನೆರಡು ಹೆಜ್ಜೆಗಳನ್ನು ಯಾವಾಗ ನಡೆದಿರಿ ಎನ್ನುವುದನ್ನು ನೀವು ನಿಧಾನವಾಗಿ ತಿಳಿಯಬೇಕು. ಇದೇ ಯೋಗ. ಈ ಪರಿಣಾಮವು ಸ್ವಲ್ಪ ಸಮಯದಲ್ಲಿ ತಾನಾಗಿಯೇ ನಿಮಗೆ ತಿಳಿಯುತ್ತದೆ.

ನೀವು ನಿಮ್ಮ ಶರೀರದಲ್ಲಿ ತರಲು ಪ್ರಯತ್ನಿಸುತ್ತಿರುವ ನಿಖರತೆಯನ್ನು ನಿಮ್ಮ ಮನಸ್ಸಿನಲ್ಲೂ ತನ್ನಿ. ಮನಸ್ಸು ಶರೀರವನ್ನು ಅನುಕರಿಸಲಿ. ಸಹಜವಾಗಿಯೇ ನಿಮ್ಮಲ್ಲಿ ಸ್ಪಷ್ಟತೆ ಬರುವುದನ್ನು ನೀವು ಕಾಣುತ್ತೀರಿ.

Editor’s Note: Isha Hatha Yoga programs are an extensive exploration of classical hatha yoga, which revive various dimensions of this ancient science that are largely absent in the world today. These programs offer an unparalleled opportunity to explore Upa-yoga, Angamardana, Surya Kriya, Surya Shakti, Yogasanas and Bhuta Shuddhi, among other potent yogic practices.

Find Hatha Yoga Program Near You

This article is based on an excerpt from the February 2015 issue of Forest Flower. Pay what you want and download. (set ‘0’ for free). Print subscriptions are also available.