'ಕಾವೇರಿ ಕೂಗು’ ನಿಮಗೆಲ್ಲರಿಗೂ ಗೊತ್ತು. ಕಾವೇರಿ ಜಲಾನಯನ ಪ್ರದೇಶದಲ್ಲಿ 242 ಕೋಟಿ ಮರಗಳನ್ನು ಬೆಳೆಸುವ ಮಹತ್ತರ ಯೋಜನೆಯಿದು. ಇದಕ್ಕೆ 2019ರ ಸೆಪ್ಟೆಂಬರ್ ನಲ್ಲಿ ಚಾಲನೆ ನೀಡಿದ್ದ ಸದ್ಗುರುಗಳು ಕಾವೇರಿಯ ಉಗಮ ಕರ್ನಾಟಕದ ತಲಕಾವೇರಿಯಿಂದ, ಅದು ಸಮುದ್ರವನ್ನು ಸೇರಿಕೊಳ್ಳುವ ತಮಿಳುನಾಡಿನ ತಿರುವಾವೂರ್ ವರೆಗೂ ಬೈಕ್ ರ‍್ಯಾಲಿ ಮಾಡಿ, ದಾರಿಯುದ್ದಕ್ಕೂ ಅನೇಕ ನಗರಗಳಲ್ಲಿ ಕಾರ್ಯಕ್ರಮಗಳನ್ನು ಮಾಡಿ ಈ ಬಗ್ಗೆ ಜಾಗೃತಿಯನ್ನು ಮೂಡಿಸಿದ್ದರು. ಈ ಪ್ರಯತ್ನಕ್ಕೆ ಜನರಿಂದ ಅಭೂತಪೂರ್ವ ಸ್ವಾಗತ ಮತ್ತು ಪ್ರತಿಕ್ರಿಯೆ ದೊರಕಿತ್ತು. ಕರ್ನಾಟಕ ಸರ್ಕಾರ ಈ ‘ಕಾವೇರಿ ಕೂಗನ್ನು’ ಮನಃಪೂರ್ವಕವಾಗಿ ಬೆಂಬಲಿಸಿತ್ತು. ಇದು ಅದ್ಭುತ ಯಶಸ್ಸನ್ನೇ ಕಂಡಿತು. ಆದರೆ ಇದು ಅಲ್ಲಿಗೇ ಮುಗಿಯಲಿಲ್ಲ. ಸದ್ಗುರುಗಳು ಎಲ್ಲಾ ಕಡೆಗಳಲ್ಲಿ ಹೇಳುವಂತೆ ಇದು ‘12 ವರ್ಷದ’ ಯೋಜನೆ. ನಂತರ ಈ ನಿಟ್ಟಿನಲ್ಲಿ ಏನೇನಾಯಿತು? ಯಾವ ಬೆಳವಣಿಗೆಗಳಾದವು? ಈ ಯೋಜನೆ ಯಾವ ದಿಕ್ಕಿನಲ್ಲಿ ಸಾಗುತ್ತದೆ?
Subscribe