ಅಬ್ದುಲ್ ಕಲಾಂ ಎಂದರೆ ಚಿಕ್ಕವರಿಂದ ಹಿರಿಯರವರೆಗೂ, ಎಲ್ಲರಿಗೂ ಒಂದು ವಿಶಿಷ್ಟ ಸ್ಫೂರ್ತಿ. ಹಳ್ಳಿಯ ಹುಡಗನೊಬ್ಬನನ್ನು ದೇಶದ ರಾಷ್ಟ್ರಪತಿ ಮಾಡಿದ ಆ ಗುಣ ಯಾವುದು? ಅಬ್ದುಲ್ ಕಲಾಮ್ ಅಂತರಾಷ್ಟ್ರೀಯ ಮಟ್ಟದ ವಿಜ್ಞಾನಿಯಾಗಿದ್ದು, ’ಭಾರತರತ್ನ’, ಪದ್ಮ ವಿಭೂಷಣ ಮುಂತಾದ ಅತ್ಯುನ್ನತ ಗೌರವಗಳನ್ನು ಮುಡಿಗೇರಿಸಿಕೊಂಡವರು. ರಾಮೇಶ್ವರದಲ್ಲಿ ಹುಟ್ಟಿ, ಬಡ ಕುಟುಂಬದಿಂದ ಬಂದ ಅವರು ಸ್ವಂತ ಪರಿಶ್ರಮದಿಂದ ವಿದ್ಯಾಭ್ಯಾಸ ಮುಗಿಸಿದರು. ಇಸ್ರೋ ಮುಂತಾದ ಸಂಸ್ಥೆಗಳಲ್ಲೂ ಕೆಲಸ ಮಾಡಿ, ದೇಶಕ್ಕೆ ಅಪಾರ ಕೊಡುಗೆ ನೀಡಿದವರು. ಶಿಕ್ಷಕ ವೃತ್ತಿಯಲ್ಲೂ ದೊಡ್ಡ ಹೆಸರುಗಳಿಸಿ, ಯುವಜನರಿಗೆ, ವಿದ್ಯಾರ್ಥಿಗಳಿಗೆ ಪ್ರೀತಿಪಾತ್ರರಾದವರು. ತಮ್ಮ ಸ್ಫೂರ್ತಿದಾಯಕ ಮಾತುಗಳು, ನುಡಿಮುತ್ತುಗಳಿಂದ ಹುರಿದುಂಬಿಸಿದವರು. ಅವರನ್ನು ನೆನೆಯುತ್ತಾ, ಈ ವಿಡಿಯೋ.
Subscribe