ಉತ್ತಮ ಭಂಗಿಯ ಪ್ರಾಮುಖ್ಯತೆ
ಸೋಮಾರಿತನದಿಂದ ವಕ್ರವಾಗಿ ಕುಳಿತುಕೊಳ್ಳುವ ಅಭ್ಯಾಸವೇ? ಈಗ ನೇರವಾಗಿ ಕುಳಿತು ಹೇಳುವುದನ್ನು ಕೇಳಿ!
ಸೋಮಾರಿತನದಿಂದ ವಕ್ರವಾಗಿ ಕುಳಿತುಕೊಳ್ಳುವ ಅಭ್ಯಾಸವೇ? ಈಗ ನೇರವಾಗಿ ಕುಳಿತು ಹೇಳುವುದನ್ನು ಕೇಳಿ!
ಸದ್ಗುರು:
"ಆರ್ಗನ್ ಕಂಫರ್ಟ್" ಎನ್ನುವುದೊಂದಿದೆ, ಅಂದರೆ ದೇಹದ ಅಂಗಾಂಗಗಳು ಆರಾಮದಿಂದ ಇರುವುದು. ಇದು ಅನೇಕ ಅಂಶಗಳನ್ನು ಹೊಂದಿದೆ. ನಾವು ಪ್ರಸ್ತುತ ಅದರ ಒಂದು ಅಂಶವನ್ನು ಮಾತ್ರ ಪರಿಗಣಿಸುತ್ತಿದ್ದೇವೆ. ದೇಹದ ಪ್ರಮುಖ ಅಂಗಾಂಗಗಳಲ್ಲಿ ಹೆಚ್ಚಿನವು ಎದೆ ಮತ್ತು ಹೊಟ್ಟೆಯ ಭಾಗದಲ್ಲಿವೆ. ಈ ಅಂಗಾಂಗಗಳು ಗಡುಸಾಗಿ ಇರುವುದಿಲ್ಲ, ಅವುಗಳನ್ನು ಬೋಲ್ಟ್ ಮತ್ತು ಕ್ಲ್ಯಾಪ್‍ಗಳನ್ನು ಬಳಸಿ ಕಟ್ಟಿಹಾಕಲಾಗಿಲ್ಲ. ಅವುಗಳೆಲ್ಲವು ಸಡಿಲವಾಗಿ ಬಲೆಯೊಳಗೆ ತೂಗಾಡುತ್ತಿರುತ್ತವೆ. ನಿಮ್ಮ ಬೆನ್ನುಮೂಳೆಯನ್ನು ನೇರವಾಗಿರಿಸಿ ಕುಳಿತುಕೊಂಡಾಗ ಮಾತ್ರ ನಿಮ್ಮ ಅಂಗಾಂಗಳು ಗರಿಷ್ಠ ಆರಾಮದಿಂದ ಇರಲು ಸಾಧ್ಯವಾಗುತ್ತದೆ.
ದೇಹವನ್ನು ನೇರವಾಗಿಟ್ಟುಕೊಳ್ಳುವುದು ನಮಗೆ ಆರಾಮವಾಗಿರುವುದು ಇಷ್ಟವಿಲ್ಲವೆನ್ನುವ ಕಾರಣಕ್ಕಲ್ಲ. ಅದಕ್ಕೆ ಕಾರಣ ಏನೆಂದರೆ ನಾವು ಆರಾಮವನ್ನು ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ಅರ್ಥಮಾಡಿಕೊಂಡು ಅದನ್ನು ಅನುಭವಿಸುತ್ತೇವೆ. ನಿಮ್ಮ ಬೆನ್ನುಮೂಳೆಯನ್ನು ನೆಟ್ಟಗಿರಿಸಿ ನಿಮ್ಮ ಸ್ನಾಯುಗಳನ್ನು ಆರಾಮದಾಯಕವಾಗಿರಿಸಲು ನೀವು ತರಬೇತಿ ನೀಡಬಹುದು, ಆದರೆ ಬಾಗಿ ಕುಳಿತು ಆರಾಮವಾಗಿರಲು ನಿಮ್ಮ ಅಂಗಾಂಗಳಿಗೆ ತರಬೇತಿ ನೀಡಲು ಸಾಧ್ಯವಿಲ್ಲ. ಅದನ್ನು ಮಾಡಲು ಯಾವುದೇ ಮಾರ್ಗವೂ ಇಲ್ಲ. ಆದ್ದರಿಂದ, ನಾವು ದೇಹಕ್ಕೆ ತರಬೇತಿ ನೀಡಲು ಆಯ್ಕೆ ಮಾಡಿಕೊಂಡೆವು, ಇದರಿಂದಾಗಿ ನಮ್ಮ ಅಸ್ಥಿಪಂಜರದ ವ್ಯವಸ್ಥೆ ಮತ್ತು ಸ್ನಾಯುವಿನ ವ್ಯವಸ್ಥೆಗೆ ನೇರವಾಗಿ ಕುಳಿತುಕೊಳ್ಳಲು ಅನುಕೂಲಕರವಾಗಿರುತ್ತದೆ.