ಏಳು ಚಕ್ರಗಳು ಪ್ರತ್ಯೇಕ ಘಟಕಗಳಲ್ಲ ಆದರೆ ವರ್ಗೀಕರಣಗಳು ನಮ್ಮ ತಿಳುವಳಿಕೆಯ ಅಗತ್ಯಕ್ಕಾಗಿ ಎಂದು ಸದ್ಗುರುಗಳು ವಿವರಿಸುತ್ತಾರೆ. ಬುದ್ಧಿಶಕ್ತಿಗೆ ಅಗತ್ಯವಾದ ವಿವೇಚನೆ ಮತ್ತು ಎಲ್ಲ ವ್ಯತ್ಯಾಸಗಳನ್ನು ಮೀರಿರುವ ಜ್ಞಾನೋದಯದ ನಡುವಿನ ವ್ಯತ್ಯಾಸವನ್ನು ಅವರು ಚರ್ಚಿಸುತ್ತಾರೆ.

ಸದ್ಗುರು: ಏಳು ಚಕ್ರಗಳು ಮತ್ತು ಅದರಿಂದ ಯೋಗ ಹೇಗೆ ವಿಕಸನಗೊಂಡಿತು ಎನ್ನುವುದನ್ನು ನಾವು ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ನೋಡಬೇಕು. ನಾವು ಯಾವಾಗಲೂ ಯೋಗವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಎಂದು ಕರೆಯುವುದು ಏಕೆಂದರೆ ನಾವು ಅಸ್ತಿತ್ವದೊಂದಿಗೆ ಕೆಲಸ ಮಾಡುತ್ತಿದ್ದೇವೆ. ಇಂದಿನ ಜಗತ್ತಿನಲ್ಲಿ, ತುಂಬಾ ಜನರು ಯೋಗವನ್ನು ತತ್ತ್ವಶಾಸ್ತ್ರ ಎಂದು ತಪ್ಪಾಗಿ ಉಲ್ಲೇಖಿಸುತ್ತಾರೆ. ಒಂದು ತತ್ತ್ವಶಾಸ್ತ್ರವನ್ನು ಕಲ್ಪಿಸಬಹುದು - ಅದಕ್ಕೆ ವಾಸ್ತವದೊಂದಿಗೆ ಯಾವುದೇ ಸಂಬಂಧವಿರಬೇಕಿಲ್ಲ. ಹೆಚ್ಚಿನ ಸಮಯ, ತತ್ತ್ವ ಚಿಂತನೆಗಳು ನಿಮಗೆ ಏನೂ ತಿಳಿದಿಲ್ಲದ ವಿಷಯಗಳ ಬಗೆಗಿನ ಅದ್ಭುತವಾದ ವಿವರಣೆಗಳಾಗಿವೆ. ಪ್ರತಿಯೊಬ್ಬರೂ ತಮ್ಮದೇ ಆದ ತತ್ತ್ವಶಾಸ್ತ್ರವನ್ನು ಕಲ್ಪಿಸಬಹುದು, ಏಕೆಂದರೆ ಇದರ ಬಗ್ಗೆ ಏನೂ ತಿಳಿದವರು ಹೇಗೂ ಯಾರೂ ಇಲ್ಲವಲ್ಲ. ತತ್ತ್ವಶಾಸ್ತ್ರಗಳು ಅನೇಕ ಸಮಾಜಗಳಲ್ಲಿ ಬಹುಕಾಲ ಉಳಿದುಕೊಂಡಿವೆ.

ಕ್ರೋಢೀಕರಿಸಿರುವಂತಹದ್ದು, ಸೆರೆಹಿಡಿದುರುವಂತಹುದ್ದಲ್ಲ

ಯೋಗ ಸಂಸ್ಕೃತಿಯ ವಿಶಿಷ್ಟತೆಯೆಂದರೆ, ಅದರಲ್ಲಿ ಯಾವುದೇ ರೀತಿಯ ತತ್ತ್ವಶಾಸ್ತ್ರವಿಲ್ಲ - ತತ್ತ್ವಚಿಂತನೆಗಳು ಅಪಹಾಸ್ಯಕ್ಕೊಳಗಾಗುತ್ತವೆ. ಕೆಲವರು ಚರ್ಚೆಯನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದಾರೆ, “ನಿಮಗೆ ಧರ್ಮಗ್ರಂಥದ ದೃಢೀಕರಣವಿದೆಯೇ? ನಿಮಗೆ ತಿಳಿದಿರುವುದನ್ನು ಯಾವ ಗ್ರಂಥ ದೃಢೀಕರಿಸುತ್ತದೆ? ” ಹೆಚ್ಚಿನವರಿಗೆ ಅರ್ಥವಾಗದ ಸಂಗತಿಯೆಂದರೆ, ಧರ್ಮಗ್ರಂಥಗಳು ಯೋಗಿಗಳು ಮತ್ತು ಋಷಿಮುನಿಗಳಲ್ಲಾದ ಸಾಕ್ಷಾತ್ಕಾರದ ಒಂದು ಫಲಿತಾಂಶ. ಯೋಗಿಗಳು ಮತ್ತು ಋಷಿಮುನಿಗಳು ಎಂದಿಗೂ ಧರ್ಮಗ್ರಂಥದಿಂದ ಉತ್ಪನ್ನವಾದವರಲ್ಲ. ಮನುಷ್ಯನು ವ್ಯಕ್ತಿಗತವಾಗಿ ತಿಳಿದಿಕೊಂಡಿದ್ದನ್ನು, ಅವನು ಮಾತನಾಡಿದ್ದನ್ನು, ವ್ಯಕ್ತಪಡಿಸಿದ್ದನ್ನು ಅಥವಾ ಯಾವುದಾದರೂ ರೀತಿಯಲ್ಲಿ ಪ್ರಸರಿಸಿದ್ದನೋ, ಇದನ್ನು ತಿಳಿದಿರದ ಅವನ ಸುತ್ತಲಿದ್ದ ಜನರು, ಪುಸ್ತಕದಲ್ಲಿ ದಾಖಲಿಸಲು ಮತ್ತು ಕ್ರೋಢೀಕರಿಸಲು ಪ್ರಯತ್ನಿಸಿದರು. ಇಲ್ಲಿ ಅಲ್ಲಿ ಕೆಲವು ರತ್ನಗಳಿರರಬಹುದು; ಉಳಿದವುಗಳೆಲ್ಲ ಅಜ್ಞಾನ - ಪವಿತ್ರ ಅಜ್ಞಾನ.

ಗೌತಮ ಮತ್ತು ಆನಂದತೀರ್ಥರು ಇದಕ್ಕೊಂದು ಶ್ರೇಷ್ಠ ಉದಾಹರಣೆ - ಗೌತಮರ ಬಗ್ಗೆ ನಮಗೆ ತಿಳಿದಿರುವುದು ಆನಂದತೀರ್ಥರು ಗೌತಮನ ಬಗ್ಗೆ ಟಿಪ್ಪಣಿಸಿದ್ದ ಕಾರಣದಿಂದಾಗಿ ಮಾತ್ರ. ಯೂಟ್ಯೂಬ್ ಮೂಲಕ ನನ್ನ ಬಗ್ಗೆ ನಿಮಗೆ ತಿಳಿದಿರುವ ಎಲ್ಲವೂ ವೀಡಿಯೊಗ್ರಾಫರ್‌ಗಳ ರೆಕಾರ್ಡಿಂಗ್‌ನಿಂದ ಮಾತ್ರ. ಅವರು ಕ್ಯಾಮೆರಾದಲ್ಲಿ ತಮ್ಮ ಮೆದುಳನ್ನು ತೂರಿಸಿ ಅದನ್ನು ಅವರು ಬಯಸಿದ ರೀತಿಯಲ್ಲಿ ರೆಕಾರ್ಡ್ ಮಾಡಲು ಸಾಧ್ಯವಿಲ್ಲದ ಕಾರಣ ನಾನು ಅವರನ್ನು ನಂಬುತ್ತೇನೆ. ಆದರೆ ಅವರು ಅದನ್ನು ಬರೆದುಕೊಂಡರೆ, ಅವರು ಅದರಲ್ಲಿ ತಮ್ಮ ಬುದ್ಧಿಯನ್ನು ಸೇರಿಸುತ್ತಾರೆ. ಅವರು ಹೆಚ್ಚು ಆತ್ಮವಿಶ್ವಾಸವನ್ನು ಬೆಳೆಸಿಕೊಂಡಂತೆ, ಅವರು ಅದರಲ್ಲಿ ತಮ್ಮನ್ನು ತಾವು ಹೆಚ್ಚು ಹೆಚ್ಚು ವ್ಯಕ್ತಪಡಿಸುತ್ತಾರೆ, ಏಕೆಂದರೆ ಜ್ಞಾನೋದಯವಾದ ಪ್ರಬುದ್ಧ ಜೀವಿ ಹೇಳುವ ಬಹಳಷ್ಟು ವಿಷಯಗಳು ತುಂಬಾ ಜನರಿಗೆ ಅರ್ಥವಾಗುವುದಿಲ್ಲ. ಆದ್ದರಿಂದ ಜನರು ಇಷ್ಟಪಡುವ ರೀತಿಯಲ್ಲಿ ಅವರು ಹೇಳಿದ್ದನ್ನು ಯಾರೋ ಕ್ರೋಢೀಕರಿಸಿದರು.

ಬೇರೆಯವರ ಅನುಭವದ ಸ್ವರೂಪ ಏನೇ ಇರಲಿ, ಅದು ಹುಣ್ಣಿಮೆಯನ್ನು ನೋಡುವಷ್ಟು ಸರಳವಾದ ಅನುಭವವಾದರೂ, ಅದನ್ನು ಬೇರೆ ಯಾರಿಗೂ ಸೆರೆಹಿಡಿಯಲು ಸಾಧ್ಯವಿಲ್ಲ. ಮೂಲಭೂತ ಅನುಭವವನ್ನೂ ಸೆರೆಹಿಡಿಯಲಾಗದಿದ್ದಾಗ, ಅಸಾಧಾರಣವಾದ ಅನುಭವವನ್ನು ನೀವು ಹೇಗೆ ಸೆರೆಹಿಡಿಯುತ್ತೀರಿ? ಅದನ್ನು ಸೆರೆಹಿಡಿಯಲು ಸಾಧ್ಯವಿಲ್ಲ - ಆದ್ದರಿಂದ ಜನ ಅದನ್ನು ಕ್ರೋಡೀಕರಿಸುತ್ತಾರೆ. ಚಂದ್ರ ಎಂದರೆ ನೀವು ನೋಡುವ ದುಂಡಗಿನ ವಸ್ತು, ಅದನ್ನು ನೋಡಿ ನಿಮಗೆ ಆನಂದವಾಗುತ್ತದೆಯೆಂದು ಜನ ಹೇಳುತ್ತಾರೆ. ಇದನ್ನು ಓದುವುದರಿಂದ, ವಿಭಿನ್ನ ಜನರು ತಮ್ಮ ಸ್ವ ಪ್ರಜ್ಞೆಯನ್ನು ಅವಲಂಬಿಸಿ ವಿಭಿನ್ನ ವಿಷಯಗಳನ್ನು ಕಂಡುಕೊಳ್ಳುತ್ತಾರೆ. ಫುಟ್ಬಾಲ್ ಆಟಗಾರರು ಅಲ್ಲಿ ದೊಡ್ಡ ಚೆಂಡನ್ನು ನೋಡುತ್ತಾರೆ. ಹಸಿವಿನಿಂದ ಬಳಲುತ್ತಿರುವವರು ಬೆಣ್ಣೆಯ ಚೆಂಡನ್ನು ನೋಡುತ್ತಾರೆ - ಹೀಗೆ ಭಾರತೀಯ ಮಕ್ಕಳಿಗೆ ಯಾವಾಗಲೂ ಹೇಳಲಾಗುತ್ತಿತ್ತು.

ವಿವೇಚನೆ ಮತ್ತು ಬುದ್ಧಿಶಕ್ತಿ

ಈ ಏಳು ಆಯಾಮಗಳು ತತ್ತ್ವಶಾಸ್ತ್ರವಲ್ಲ, ಆದರೆ ಒಂದು ರೀತಿಯ ವರ್ಗೀಕರಣವಾಗಿದೆ. ಮೂಲಭೂತವಾಗಿ, ಜೀವನದ ಯಾವುದೇ ವರ್ಗೀಕರಣವು ತಪ್ಪು, ಆದರೆ ಈ ವರ್ಗೀಕರಣವನ್ನು ತಿಳುವಳಿಕೆಯ ಸಲುವಾಗಿ ಮಾಡಲಾಗಿದೆ. ಏಳು ಚಕ್ರಗಳನ್ನು ಏಳು ಭಾಗಗಳಾಗಿ ಅರ್ಥೈಸಬಾರದು. ಜೀವನವು ಒಂದು ಸಮಗ್ರವಾಗಿ ನಡೆಯುತ್ತಿದೆ. ಆದರೆ ಬುದ್ಧಿಗೆ ವರ್ಗೀಕರಣ ಬೇಕು. ವರ್ಗೀಕರಣವಿಲ್ಲದೆ, ನಿಮ್ಮ ಬುದ್ಧಿಶಕ್ತಿ ಗ್ರಹಿಸಲು ಸಾಧ್ಯವಿಲ್ಲ. ಬುದ್ಧಿಯ ಸ್ವರೂಪವಿರುವುದು ಗ್ರಹಿಸುವುದರಲ್ಲಿ. ಗ್ರಹಿಸುವ ಸಾಮರ್ಥ್ಯವಿಲ್ಲದೆ, ನಿಮ್ಮ ಬುದ್ಧಿಶಕ್ತಿ ನಿಷ್ಪ್ರಯೋಜಕ ಯಂತ್ರವಷ್ಟೆ.

ವಿವೇಚನೆಯು ಜಗತ್ತಿನಲ್ಲಿ ಬದುಕಲು ಬಹಳ ಮುಖ್ಯವಾದ ಸಾಧನ, ಆದರೆ ಅದು ಒಳ್ಳೆಯದಲ್ಲ -ನೀವು ಬ್ರಹ್ಮಾಂಡವನ್ನು ಅರಗಿಸಿಕೊಳ್ಳಲು ಬಯಸಿದರೆ. ಅರಗಿಸಿಕೊಳ್ಳುವುದೆಂದರೆ ಬ್ರಹ್ಮಾಂಡವು ನಿಮ್ಮ ಭಾಗವಾಗಬೇಕೆಂದು ಅಥವಾ ಅದು ನಿಮ್ಮೊಳಗೆ ಲೀನವಾಗಬೇಕೆಂದು ನೀವು ಬಯಸುತ್ತೀರಿ. ನೀವು ವಿವೇಚಿಸುತ್ತಿದ್ದರೆ, ಯಾವ ಗ್ರಹವನ್ನು ಬಿಡಲು ನೀವು ಬಯಸುತ್ತೀರಿ? ವಿವೇಚನೆಯಿರುವುದು ನಿಮಗೆ ಯಾವುದು ಬೇಕು, ಯಾವುದು ಬೇಡವೆನ್ನುವುದರ ಬಗ್ಗೆ, ನಿಮ್ಮ ಇಷ್ಟಾನಿಷ್ಟಗಳ ಕುರಿತು, ಯಾವುದು ಒಳ್ಳೆಯದು ಯಾವುದು ಕೆಟ್ಟದು, ಯಾವುದು ಉತ್ತಮ ಯಾವುದು ಕನಿಷ್ಠದ್ದು, ಯಾವುದು ದೇವರು ಯಾವುದು ದೆವ್ವವೆನ್ನುವುದರ ಕುರಿತು.

ನೀವು ಎಲ್ಲವನ್ನೂ ಒಂದೇ ರೀತಿ ಕಾಣುವ ರೀತಿಯಲ್ಲಿ ನೀವು ಎಲ್ಲವನ್ನೂ ಬೆಳಗಿಸಿದಾಗಲೇ ಜ್ಞಾನೋದಯ. ನಿಮಗೆ ಏನನ್ನೂ ಗ್ರಹಿಸುವುದು ಬೇಡವಾಗಿರುತ್ತದೆ. ಬೆಳಕು ಮತ್ತು ಕತ್ತಲೆ ನಿಮಗೆ ಒಂದೇ ಅನುಭವ. ನಿಮಗೆ ಯಾವುದೇ ಭಿನ್ನತೆ ಕಾಣುವುದಿಲ್ಲ. ಜ್ಞಾನೋದಯವೆಂದರೆ ನೀವು ಆಂತರ್ಯದಿಂದ ಬೆಳಗುತ್ತಿದ್ದೀರಿ, ಹಾಗಾಗಿ ನೀವು ಎಲ್ಲಿಯೂ ಕತ್ತಲೆಯನ್ನು ನೋಡಲಾಗದು.

ಬಣ್ಣದಿಂದಾಚೆ

ನಾವು ಆಯಾಮರಹಿತ ಆಯಾಮದ ಬಗ್ಗೆ ಮಾತನಾಡುತ್ತಿದ್ದೇವೆ, ಆದರೆ ಬುದ್ಧಿಯ ಸಲುವಾಗಿ ನಾವು ವರ್ಗೀಕರಿಸುತ್ತಿದ್ದೇವೆ. ಜನರು ಹೇಳಿಕೊಳ್ಳುವ ಹಾಗೆ "ನಾನು ಕಾಫಿ ವ್ಯಕ್ತಿ" ಅಥವಾ " ನಾನು ಚಹಾ ವ್ಯಕ್ತಿ. " ಅಥವಾ ಅವರು ಬೆಳಿಗ್ಗೆ ಎದ್ದಾಗ, “ನಾನು ಮುಂಜಾನೆ ವ್ಯಕ್ತಿ” ಎಂದು ಹೇಳುವಂತೆ, "ನಾನು ಅನಾಹತಾ ರೀತಿಯವನು" ಅಥವಾ "ನಾನು ವಿಶುದ್ಧಿ ರೀತಿಯವನು" ಎಂಬ ಅರ್ಥದಲ್ಲಿ ನೀವು ಸ್ಥಾನಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಬಾರದು, ಇದು ಗುರುತಿಸಿಕೊಳ್ಳುವುದರ ಬಗ್ಗೆಯಲ್ಲ. ನೀವು ನಿರ್ದಿಷ್ಟ ಕೆಲಸಗಳನ್ನು ಮಾಡಲು ಬಯಸಿದರೆ, ನೀವು ವಿಭಿನ್ನ ಗುಣಗಳನ್ನು ಕಂಡುಕೊಳ್ಳಬಹುದು. ಆದರೆ ನೀವು ಅಸ್ತಿತ್ವದ ಸ್ವರೂಪವನ್ನೇ ತಿಳಿದುಕೊಳ್ಳಲು ಬಯಸಿದರೆ, ವೈರಾಗ್ಯ ಅಥವಾ ವೈರಾಗ ಎಂಬ ಆಯಾಮವಿದೆ. “ವೈ” ಎಂದರೆ ಮೀರಿದ್ದು, ಮತ್ತು “ರಾಗ” ಎಂದರೆ ಬಣ್ಣ. ಬಣ್ಣವನ್ನು ಮೀರಿದ್ದು ಬಣ್ಣರಹಿತವಾಗಿರುತ್ತದೆ. ಇಂಗ್ಲಿಷ್ನಲ್ಲಿ "ಬಣ್ಣರಹಿತ" ಪದವು ನಿರ್ಜೀವ ಅಥವಾ ಹುರುಪಿನ ಕೊರತೆಯಂತಹ ನಕಾರಾತ್ಮಕ ಅರ್ಥಗಳನ್ನು ಹೊಂದಿದೆ, ಆದರೆ ವೈರಾಗ್ಯವು ಆ ಅರ್ಥದಲ್ಲಿ ಬಣ್ಣರಹಿತವಾಗಿರುವುದಿಲ್ಲ.

ನಾವು ಬಣ್ಣರಹಿತವೆಂದರೆ ಬಣ್ಣವನ್ನು ಮೀರಿರುವುದರ ಬಗ್ಗೆ ಮಾತನಾಡುತ್ತಿದ್ದೇವೆ. ಬಣ್ಣವಿಲ್ಲದ್ದು ಪಾರದರ್ಶಕವಾಗಿರುತ್ತದೆ. ಪಾರದರ್ಶಕತೆ ನಿಮಗೆ ನೋಡಲು ಅನುವು ಮಾಡಿಕೊಡುತ್ತದೆ. ಬಣ್ಣರಹಿತ ಗಾಳಿಯು ನಿಮ್ಮನ್ನು ಜೀವಂತದಿಂದಿರಿಸುವುದು. ಗಾಳಿಯು ನೀಲಿ ಬಣ್ಣಕ್ಕೆ ತಿರುಗಿತು ಎಂದು ಭಾವಿಸೋಣ, ಆಗ ನಿಮಗೆ ನೋಡಲು ಸಾಧ್ಯವಾಗುವುದಿಲ್ಲ. ಸ್ವಲ್ಪ ಸಮಯದವರೆಗೆ ನೀವು ಗಾಳಿಯಲ್ಲಿ ನೀಲಿ ಬಣ್ಣವನ್ನು ಇಷ್ಟಪಡಬಹುದು, ಆದರೆ ನಂತರ ನೀಲಿ ಬಣ್ಣವನ್ನು ಸ್ವಚ್ಛಗೊಳಿಸಿ ಮತ್ತೆ ನೋಡಲು ಬಯಸುತ್ತೀರಿ. ಬಣ್ಣರಹಿತವಾಗುವುದು ಅಥವಾ ಬಣ್ಣವನ್ನು ಮೀರಿರುವುದು ಎಂದರೆ ಸ್ಪಷ್ಟ ದೃಷ್ಟಿ ಹೊಂದಿರುವುದೆಂದು. ನಿಮ್ಮ ದೃಷ್ಟಿ ಬಣ್ಣಗಳಿಂದ ಅಸ್ಪಷ್ಟವಾಗಿಲ್ಲವೆಂದು. ಅವುಗಳ ಬಣ್ಣದಿಂದ ಉಲ್ಲೇಖಿಸಲ್ಪಟ್ಟ ಅನೇಕ ವಿಷಯಗಳಿವೆ - ಉದಾಹರಣೆಗೆ ನದಿಗಳು, ಉದಾಹರಣೆಗೆ ನೀಲಿ ನೈಲ್, ಹಳದಿ ನದಿ ಅಥವಾ ಕೆಂಪು ನದಿ. ಇದರರ್ಥ ನೀರು ನೀಲಿ, ಹಳದಿ ಅಥವಾ ಕೆಂಪು ಎಂದು ಅರ್ಥವಲ್ಲ - ಅದರಲ್ಲಿರುವ ಮಣ್ಣು, ನದಿಯನ್ನು ಒಂದು ನಿರ್ದಿಷ್ಟ ಬಣ್ಣದಂತೆ ಗೋಚರಿಸುವಂತೆ ಮಾಡುತ್ತದೆ.

ನೀವು ಬಣ್ಣದಿಂದಾಚೆಯಿದ್ದರೆ, ಯಾವುದೇ ಸ್ಥಳವಾಗಿರಲಿ ನೀವು ಅದಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತೀರಿ, ಏಕೆಂದರೆ ನೀವೇ ಬಣ್ಣರಹಿತರು, ಗುಣಲಕ್ಷಣರಹಿತರು, ನೀಲಿ ಬಣ್ಣದ ಹಿನ್ನೆಲೆ ಇದ್ದರೆ, ನೀವು ನೀಲಿ ಬಣ್ಣಕ್ಕೆ ತಿರುಗುತ್ತೀರಿ; ಕೆಂಪು ಬಣ್ಣದ ಹಿನ್ನೆಲೆ ಇದ್ದರೆ, ನೀವು ಕೆಂಪು ಬಣ್ಣಕ್ಕೆ ತಿರುಗುತ್ತೀರಿ. ನಿಮ್ಮನ್ನು ಪ್ರತಿರೋಧವಾಗಿ ಎಲ್ಲಿಯೂ ಅನುಭವಿಸಲಾಗುವುದಿಲ್ಲ. ಯಾವುದೇ ಕ್ಷಣದಲ್ಲಿ ಏನಿರುತ್ತದೆಯೋ, ಅದರಲ್ಲಿ ನೀವು ಸಂಪೂರ್ಣವಾಗಿ ವಿಲೀನಗೊಳ್ಳುತ್ತಿದ್ದೀರಿ. ಆದ್ದರಿಂದ ನಾವು ಏಳು ಬಣ್ಣಗಳಂತೆ ಏಳು ಆಯಾಮಗಳ ಬಗ್ಗೆ ಮಾತನಾಡುತ್ತಿದ್ದೇವೆ. ಬೆಳಕನ್ನು ವಕ್ರೀಭವಿಸುವುದರಲ್ಲಿ ಯಾವುದೇ ತಪ್ಪಿಲ್ಲ, ಆದರೆ ನೀವು ಯಾವಾಗಲೂ ವಕ್ರೀಭವನದ ಬೆಳಕಿನಲ್ಲಿದ್ದರೆ, ನಿಮಗೆ ಜೀವನದ ತಿರುಚಿತ ದೃಷ್ಟಿಕೋನವಿರುತ್ತದೆ.