ಸೋಮಾರಿತನದಿಂದ ವಕ್ರವಾಗಿ ಕುಳಿತುಕೊಳ್ಳುವ ಅಭ್ಯಾಸವೇ? ಈಗ ನೇರವಾಗಿ ಕುಳಿತು ಹೇಳುವುದನ್ನು ಕೇಳಿ!

ಸದ್ಗುರು:

"ಆರ್ಗನ್ ಕಂಫರ್ಟ್" ಎನ್ನುವುದೊಂದಿದೆ, ಅಂದರೆ ದೇಹದ ಅಂಗಾಂಗಗಳು ಆರಾಮದಿಂದ ಇರುವುದು. ಇದು ಅನೇಕ ಅಂಶಗಳನ್ನು ಹೊಂದಿದೆ. ನಾವು ಪ್ರಸ್ತುತ ಅದರ ಒಂದು ಅಂಶವನ್ನು ಮಾತ್ರ ಪರಿಗಣಿಸುತ್ತಿದ್ದೇವೆ. ದೇಹದ ಪ್ರಮುಖ ಅಂಗಾಂಗಗಳಲ್ಲಿ ಹೆಚ್ಚಿನವು ಎದೆ ಮತ್ತು ಹೊಟ್ಟೆಯ ಭಾಗದಲ್ಲಿವೆ. ಈ ಅಂಗಾಂಗಗಳು ಗಡುಸಾಗಿ ಇರುವುದಿಲ್ಲ, ಅವುಗಳನ್ನು ಬೋಲ್ಟ್ ಮತ್ತು ಕ್ಲ್ಯಾಪ್‍ಗಳನ್ನು ಬಳಸಿ ಕಟ್ಟಿಹಾಕಲಾಗಿಲ್ಲ. ಅವುಗಳೆಲ್ಲವು ಸಡಿಲವಾಗಿ ಬಲೆಯೊಳಗೆ ತೂಗಾಡುತ್ತಿರುತ್ತವೆ. ನಿಮ್ಮ ಬೆನ್ನುಮೂಳೆಯನ್ನು ನೇರವಾಗಿರಿಸಿ ಕುಳಿತುಕೊಂಡಾಗ ಮಾತ್ರ ನಿಮ್ಮ ಅಂಗಾಂಗಳು ಗರಿಷ್ಠ ಆರಾಮದಿಂದ ಇರಲು ಸಾಧ್ಯವಾಗುತ್ತದೆ.

 

IEO offered at 50%

(ಇಲ್ಲಿ ನೋಂದಾಯಿಸಿಕೊಳ್ಳಬಹುದು)

ನೀವು ಒರಗಿಕೊಂಡು ಕುಳಿತುಕೊಳ್ಳುವ ಕುರ್ಚಿಯಲ್ಲಿ 1000 ಕಿ.ಮೀ ಪ್ರಯಾಣಿಸಿದರೆ, ನಿಮ್ಮ ಆಯಸ್ಸು ಕನಿಷ್ಠ ಮೂರರಿಂದ ಐದು ವರ್ಷಗಳವರೆಗೆ ಕಡಿಮೆಯಾಗುತ್ತದೆ ...
ಈಗ, ಆಧುನಿಕ ಕಲ್ಪನೆಯಲ್ಲಿ ಸುಖದಾಯಕವೆಂದರೆ ಹಿಂದಕ್ಕೆ ಒರಗಿಕೊಂಡು ಬಾಗಿ ಕುಳಿತುಕೊಳ್ಳುವುದು. ನೀವು ಅಂತಹ ಭಂಗಿಯಲ್ಲಿ ಕುಳಿತುಕೊಂಡರೆ, ನಿಮ್ಮ ಅಂಗಾಂಗಗಳು ಎಂದಿಗೂ ಆರಾಮದಾಯಕ ಸ್ಥಿತಿಯಲ್ಲಿರುವುದಿಲ್ಲ. ಅವು ಅಗತ್ಯವಿರುವ ರೀತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ. ನೀವು ಹೊಟ್ಟೆ ತುಂಬಾ ತಿಂದು ಒರಗಿಕೊಂಡು ಕುರ್ಚಿಯಲ್ಲಿ ಕುಳಿತುಕೊಳ್ಳುವ ವಿಷಯದಲ್ಲಿ ಇದು ವಿಶೇಷವಾಗಿ ನಿಜ. ಜನ ಒರಗಿಕೊಳ್ಳಬಹುದಾದ ಕುರ್ಚಿಗಳಲ್ಲಿ ಕುಳಿತು ಸಾಕಷ್ಟು ಪ್ರಯಾಣ ಮಾಡುತ್ತಾರೆ. ನನ್ನ ಪ್ರಕಾರ, ನೀವು ಕಾರಿನಲ್ಲಿ ಒರಗಿಕೊಂಡು ಕುಳಿತುಕೊಳ್ಳುವ ಕುರ್ಚಿಯಲ್ಲಿ 1000 ಕಿ.ಮೀ ಪ್ರಯಾಣಿಸಿದರೆ, ನಿಮ್ಮ ಆಯಸ್ಸು ಕನಿಷ್ಠ ಮೂರರಿಂದ ಐದು ವರ್ಷಗಳವರೆಗೆ ಕಡಿಮೆಯಾಗುತ್ತದೆ. ಅಂಗಾಂಗಗಳಿಗೆ ತುಂಬಾ ಪ್ರಯಾಸವಾಗುವ ಕಾರಣ, ಅವುಗಳ ಕಾರ್ಯ ಕ್ಷಮತೆ ಬಹಳವಾಗಿ ಕುಸಿಯುತ್ತದೆ ಅಥವಾ ನೀವು ಯಾವುದಾದರೊಂದು ರೀತಿಯಲ್ಲಿ ದುರ್ಬಲಗೊಳ್ಳುತ್ತೀರಿ.

ದೇಹವನ್ನು ನೇರವಾಗಿಟ್ಟುಕೊಳ್ಳುವುದು ನಮಗೆ ಆರಾಮವಾಗಿರುವುದು ಇಷ್ಟವಿಲ್ಲವೆನ್ನುವ ಕಾರಣಕ್ಕಲ್ಲ. ಅದಕ್ಕೆ ಕಾರಣ ಏನೆಂದರೆ ನಾವು ಆರಾಮವನ್ನು ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ಅರ್ಥಮಾಡಿಕೊಂಡು ಅದನ್ನು ಅನುಭವಿಸುತ್ತೇವೆ. ನಿಮ್ಮ ಬೆನ್ನುಮೂಳೆಯನ್ನು ನೆಟ್ಟಗಿರಿಸಿ ನಿಮ್ಮ ಸ್ನಾಯುಗಳನ್ನು ಆರಾಮದಾಯಕವಾಗಿರಿಸಲು ನೀವು ತರಬೇತಿ ನೀಡಬಹುದು, ಆದರೆ ಬಾಗಿ ಕುಳಿತು ಆರಾಮವಾಗಿರಲು ನಿಮ್ಮ ಅಂಗಾಂಗಳಿಗೆ ತರಬೇತಿ ನೀಡಲು ಸಾಧ್ಯವಿಲ್ಲ. ಅದನ್ನು ಮಾಡಲು ಯಾವುದೇ ಮಾರ್ಗವೂ ಇಲ್ಲ. ಆದ್ದರಿಂದ, ನಾವು ದೇಹಕ್ಕೆ ತರಬೇತಿ ನೀಡಲು ಆಯ್ಕೆ ಮಾಡಿಕೊಂಡೆವು, ಇದರಿಂದಾಗಿ ನಮ್ಮ ಅಸ್ಥಿಪಂಜರದ ವ್ಯವಸ್ಥೆ ಮತ್ತು ಸ್ನಾಯುವಿನ ವ್ಯವಸ್ಥೆಗೆ ನೇರವಾಗಿ ಕುಳಿತುಕೊಳ್ಳಲು ಅನುಕೂಲಕರವಾಗಿರುತ್ತದೆ.

Photo courtesy of Circasassy @Flickr