ಪಂಚ ಭೂತಗಳ ಮೇಲೆ ಸ್ವಲ್ಪಮಟ್ಟಿನ ಪಾಂಡಿತ್ಯ ಹೊಂದುವುದು ಮುಖ್ಯವೆನ್ನುವ ಸದ್ಗುರುಗಳು, ಸೃಷ್ಟಿಯ ಮೂಲವನ್ನು ತಲುಪುವ ಎರಡು ಮಾರ್ಗಗಳ ಬಗ್ಗೆ ವಿವರಿಸುತ್ತಾರೆ.

ಸದ್ಗುರು: ಸದ್ಗುರು: 15,000 ವರ್ಷಗಳಿಗೂ ಹಿಂದೆ, ಅದಿಯೋಗಿ-ಶಿವನು “ಪಂಚ ಭೂತ” ಗಳ ಬಗ್ಗೆ ಮಾತನಾಡಿ, ಇಡೀ ಬ್ರಹ್ಮಾಂಡವು ಕೇವಲ “ಪಂಚ ಭೂತ”ಗಳನ್ನು ಒಳಗೊಂಡ ನಾಟಕವಾಗಿದೆ, ಅದು ನಮ್ಮ ದೇಹದೊಳಗೆ ಯಾವ ಪ್ರಮಾಣದಲ್ಲಿ ಆಡುತ್ತಿದೆ ಮತ್ತು ಇವುಗಳ ಮೇಲೆ ಪಾಂಡಿತ್ಯವನ್ನು ಗಳಿಸಿದರೆ, ಹೇಗೆ ಒಂದು ರೀತಿ ಸೃಷ್ಟಿಯ ಮೇಲೆ ಹಿಡಿತ ಸಾಧಿಸಬಹುದು ಎಂದು ತಮ್ಮ ಮೊದಲ ಏಳು ಶಿಷ್ಯರಿಗೆ ವಿಶದಪಡಿಸಿದ. ಸೃಷ್ಟಿಯ ಮೇಲಿನ ಹಿಡಿತವನ್ನು ಸ್ವಲ್ಪ ಮಟ್ಟಿಗಾದರೂ ಹೊಂದಿದರೆ, ಸೃಷ್ಟಿಯ ಮೂಲವನ್ನು ನೇರವಾಗಿ ತಲುಪಬಹುದಾದ ಅವಕಾಶವಿರುತ್ತದೆ. ಈ ವಿಜ್ಞಾನವನ್ನು ಬಹಳ ವಿವರವಾಗಿ ಮತ್ತು ಸ್ಪಷ್ಟವಾಗಿ ವಿವರಿಸಿದಾಗ, ಶಿಷ್ಯರಾದ ಸಪ್ತಋಷಿಗಳ ಜೊತೆ ಅಲ್ಲಿಯೇ ಉಪಸ್ಥಿತಳಿದ್ದ ಪತ್ನಿ ಪಾರ್ವತಿ ಕೂಡಾ ಆಶ್ಚರ್ಯಚಕಿತಳಾದಳು. ಅವರು ನಂಬಲಾಗದವರಾಗಿದ್ದರು. ಇಡೀ ಅಸ್ತಿತ್ವವು ಕೇವಲ ಐದು ವಿಷಯಗಳನ್ನಷ್ಟೇ ಒಳಗೊಂಡಿರುವುದು ಎಂಬುದು ಅವರಿಗೆ ಊಹೆಗೂ ಸಿಲುಕದ ವಿಷಯವಾಗಿತ್ತು - ಮತ್ತು ಅದರಲ್ಲಿ ಒಂದು ‘ಏನೂ ಇಲ್ಲದ’ ಅಂಶವಾದ್ದರಿಂದ, ಕೇವಲ ನಾಲ್ಕು ಅಂಶಗಳಷ್ಟೇ ಉಳಿದಂತಾಯಿತು..

ಅದಿಯೋಗಿಯು ಅದರ ಹಿಂದಿನ ವಿಜ್ಞಾನವನ್ನು ವಿವರಿಸುತ್ತಾ, ಇಂದು "ಬ್ರಹ್ಮಾಂಡ" ಎಂದು ಕರೆಯಲ್ಪಡುವಂತದ್ದನ್ನು ಕೇವಲ ನಾಲ್ಕು ಸಾಮಗ್ರಿಗಳೊಂದಿಗೆ ನೀವು ತಯಾರಿಸಬಹುದು ಎಂದು ತಿಳಿಸಿದ.

ಅದಿಯೋಗಿಯು ಅದರ ಹಿಂದಿನ ವಿಜ್ಞಾನವನ್ನು ವಿವರಿಸುತ್ತಾ, ಇಂದು "ಬ್ರಹ್ಮಾಂಡ" ಎಂದು ಕರೆಯಲ್ಪಡುವಂತದ್ದನ್ನು ಕೇವಲ ನಾಲ್ಕು ಸಾಮಗ್ರಿಗಳೊಂದಿಗೆ ನೀವು ತಯಾರಿಸಬಹುದು ಎಂದು ತಿಳಿಸಿದ. ಭೌತಿಕವಾದ ಎಲ್ಲ ವಸ್ತುಗಳೂ ಹೆಚ್ಚಾಗಿ ನಾಲ್ಕು ಅಂಶಗಳನ್ನಷ್ಟೇ ಒಳಗೊಂಡಿದೆ. ಅನೇಕ ಬಾರಿ, ಐದನೆಯ ಅಂಶವು ನಿಮ್ಮ ಅನುಭವಕ್ಕೆ ಬರುವುದಿಲ್ಲ. ನಾನು ನಿಮಗೆ ನಾಲ್ಕು ವಸ್ತುಗಳನ್ನು ನೀಡಿದರೆ, ಅದರಿಂದ ನೀವು ಸಾಧರಾಣವಾದ ಸಾರನ್ನೂ ಮಾಡಲಾಗುವುದಿಲ್ಲ, ಸಾರನ್ನು ತಯಾರಿಸಲೂ ನಿಮಗೆ ಇಪ್ಪತ್ತೈದು ಪದಾರ್ಥಗಳು ಬೇಕು! ಯಾರಾದರೂ ನಾಲ್ಕು ಅಂಶಗಳನ್ನಿಟ್ಟುಕೊಂಡು ಇಡೀ ಬ್ರಹ್ಮಾಂಡವನ್ನು ರಚಿಸಿದರಾದರೆ, ಅದು ಬೆರಗುಗೊಳಿಸುವ ಬುದ್ಧಿವಂತಿಕೆಯಲ್ಲವೇ!!.

ಆದಿಯೋಗಿ ಈ ಅಂಶಗಳ ಮೇಲೆ ಪಾಂಡಿತ್ಯವನ್ನು ಗಳಿಸುವ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ವಿವರಿಸುತ್ತಾ ಹೋದ. ಸಣ್ಣ ಸಣ್ಣ ನಿರೂಪಣೆಗಳೊಂದಿಗೆ ಕೂಡಿದ್ದ ಅವನ ಮಾತುಗಳನ್ನು ಆಲಿಸುತ್ತಿದ್ದ ಈ ಏಳು ಜನ ಶಿಷ್ಯಂದಿರು ಹಾಗೂ ಪಾರ್ವತಿ, ಆ ವಿಚಾರಗಳಲ್ಲಿ ಮಗ್ನರಾದರು. ನಂತರ ಆದಿಯೋಗಿ, "ಒಂದೋ ನೀವು ಈ ಎಲ್ಲ ವಿಷಯಗಳನ್ನು ಕರಗತ ಮಾಡಿಕೊಳ್ಳಬಹುದು ಅಥವಾ ನೀವು ಇದರ ಕುರಿತಾದ ಜ್ಞಾನಕ್ಕೆ ಶರಣಾಗತರಾಗಿ ಅದನ್ನು ನಿಮ್ಮದಾಗಿಸಿಕೊಳ್ಳಬಹುದು." ಎಂದು ವಿವರಿಸಿದ. ಏಳು ಪುರುಷರು ಇದನ್ನು ಕರಗತಗೊಳಿಸಿಕೊಳ್ಳುವ ಬಗ್ಗೆ ಉತ್ಸುಕರಾದರು. ಆದರೆ ಹೆಣ್ಣಾದ ಪಾರ್ವತಿ ಆ ಅಂಶಗಳಿಗೆ ಶರಣಾಗಲು ಹಾಗೂ ಅದನ್ನು ತನ್ನದೇ ಭಾಗವಾನ್ನಾಗಿಸಲು ನಿರ್ಧರಿಸಿದಳು.

ಆದ್ದರಿಂದ ಏಳು ಜನರನ್ನು ಅದರ ಬಗ್ಗೆ ಕಾರ್ಯವೆಸಗಲು ಕಳುಹಿಸಲಾಯಿತು. ಆದರೆ ಪಾರ್ವತಿಯನ್ನು ಅಲ್ಲಿಯೇ ಇರಿಸಿಕೊಳ್ಳಲಾಯಿತು ಏಕೆಂದರೆ ಅವಳು ಜ್ಞಾನಕ್ಕೆ ಶರಣಾಗುವುದರ ಮೂಲಕ ಆ ಜ್ಞಾನವನ್ನು ತನ್ನದೇ ಬಾಗವನ್ನಾಗಿಸಿಕೊಂಡಳು. ಈ ಏಳು ಮಂದಿ ಋಷಿಗಳೆಂದು ಕರೆಸಿಕೊಂಡರು ಮತ್ತು ಪಾರ್ವತಿ ದೇವತೆಯಾದಳು. ನೀವು ಹೇಗೆ ನಿಮ್ಮ ಉನ್ನತಿಯನ್ನು ಆರಿಸಬೇಕೆಂಬುದರ ಬಗ್ಗೆ ನಾನು ಮಾತನಾಡುತಿದ್ದೇನೆ. ಈ ಪ್ರಪಂಚದಲ್ಲಿ ಎಲ್ಲವೂ ಹೇಗೆ ವ್ಯಕ್ತವಾಗಿದೆ ಎಂದು ಅರಿಯುವ ಕ್ಲಿಷ್ಟತೆಯನ್ನು ನೀವು ಪ್ರವೇಶಿಸಿದರೆ, ನೀವು ಇಲ್ಲಿ ಒಂದು ಕೋಟಿ ವರ್ಷಗಳ ಕಾಲ ವಾಸಿಸಿದರೂ, ಮತ್ತೂ ಹೆಚ್ಚು ಹೆಚ್ಚು ಅಧ್ಯಯನ ಮಾಡಿದರೂ, ಇದು ಕೊನೆಯಿಲ್ಲದ ಪ್ರಕ್ರಿಯೆಯಾಗುತ್ತದೆಯಷ್ಟೇ. ಈ ಪ್ರಕ್ರಿಯೆ ರೋಮಾಂಚನಕಾರಿಯಾಗಿ ಇರುತ್ತದೆಯಾದರೂ, ಅದು ಅಂತ್ಯವಿಲ್ಲದ ಪ್ರಕ್ರಿಯೆ. ಎರಡನೆಯ ದಾರಿಯೆಂದರೆ, ನೀವು ಈ ಅಂತ್ಯವಿಲ್ಲದ ಪ್ರಕ್ರಿಯೆಯನ್ನು ಬದಿಗಿರಿಸಿ, ಈ ಎಲ್ಲದರ ಮೂಲವಾಗಿರುವ ಆಯಾಮವನ್ನು ಸ್ಪರ್ಶಿಸಬಹುದು. ನೀವು ಆಟವನ್ನು ಆಡಲು ಬಯಸಿದರೆ, ನೀವು ಸೃಷ್ಟಿಯ ಅಂಶಗಳೊಂದಿಗೆ ನಿಮ್ಮನ್ನು ತೊಡಗಿಸಿಕೊಳ್ಳಬೇಕಾಗುತ್ತದೆ. ನೀವು ಈ ಅಂಶಗಳಿಂದಾದ ಆಟವನ್ನು ಆಡಲು ಬಯಸದಿದ್ದರೆ, ನೀವು ಕೇವಲ ಗೆಲ್ಲಲು ಬಯಸಿದರೆ – ಆಟದ ಕುರಿತು ನೀವು ಆಸಕ್ತಿ ಕಳೆದುಕೊಂಡು, ನೀವು ಅದನ್ನು ಹಾದುಹೋಗಲು ಅಥವಾ ಮುಂದುವರಿಯಲು ಬಯಸುತ್ತೀರಿ - ನಂತರ ನೀವು ಸೃಷ್ಟಿಯ ಮೂಲವನ್ನು ಮಾತ್ರ ಸ್ಪರ್ಶಿಸುತ್ತೀರಿ. ಯಾವುದೇ ಅಂಶಗಳಲ್ಲಿ ಕಳೆದುಹೋಗಬೇಕಾದ ಅವಶ್ಯಕತೆಯಿಲ್ಲ.

ನೀವು ಆಟವನ್ನು ಆಡಬೇಕು ಇಲ್ಲದಿದ್ದರೆ ಆಟವೇ ನಿಮ್ಮನ್ನು ಆಡಿಸುತ್ತದೆ

ಆದರೆ ನೀವು ಆಟವನ್ನು ಆಡದಿದ್ದರೆ, ಆಟವೇ ನಿಮ್ಮನ್ನು ಆಡಿಸುತ್ತದೆ. ಜೀವನದ ಸಂಪೂರ್ಣ ಆಟವನ್ನು ಪಕ್ಕಕ್ಕೆ ಇಡುವುದು ಮತ್ತು ಸೃಷ್ಟಿಯ ಮೂಲದೊಂದಿಗೆ ಒಂದಾಗಿರುವುದರ ಮೇಲೆ ಕೇಂದ್ರೀಕೃತರಾಗುವುದು ಸರಳ ವಿಷಯವೆಂದು ತೋರಬಹುದು. ನಿಮಗೆ “ನೀವು” ಎಂಬ ಅರಿವಿರದೆ ಹೋದರೆ, ನಿಮ್ಮ ಸ್ವಂತ ದೇಹ, ಮನಸ್ಸು, ಆಲೋಚನೆಗಳು, ಭಾವನೆಗಳು ಮುಂತಾದವುಗಳ ಬಗ್ಗೆ ನಿಮಗೆ ಆ ಮಟ್ಟದ ಅನಾಸಕ್ತಿಯಿದ್ದರೆ, ಅದು ಸ್ವಾಭಾವಿಕವಾಗಿ ಬರುತ್ತದೆ. ಇಲ್ಲದಿದ್ದರೆ, ಇದು ಅತ್ಯಂತ ಕಷ್ಟಕರವಾದ ವಿಷಯ. ನೀವೇ ನಿಮ್ಮ ಜೀವನದ ನಾಯಕನಾಗಿದ್ದಾಗ, “ನೀವು” ಎಂಬ ಅರಿವನ್ನು ಪಕ್ಕಕ್ಕೆ ಇರಿಸಲು ಸಾಧ್ಯವೇ? ನೀವು ಮುಖ್ಯ ಪಾತ್ರದಲ್ಲಿರುವಾಗ, “ನೀವು” ಎಂಬ ಅಂಶವನ್ನು ಪಕ್ಕಕ್ಕೆ ಇಡುವುದು ಅಷ್ಟು ಸುಲಭದ ವಿಷಯವಲ್ಲ. ಆದರೆ ಇದುವೇ ಸರಳ ಮತ್ತು ಶ್ರೇಷ್ಠ ಮಾರ್ಗವಾಗಿದೆ. ಇಲ್ಲದಿದ್ದರೆ ಆಡಲು ದೊಡ್ಡ ಆಟವಿದೆ - ಅಂತ್ಯವಿಲ್ಲದ ಆಟ. ಒಂದು ವೇಳೆ ನೀವು ಆಟವನ್ನು ಆಡಲು ಬಯಸಿದರೆ, ನೀವು ಅದನ್ನು ಹೆಚ್ಚು ಕೌಶಲ್ಯದಿಂದ ಆಡಬೇಕಾಗುತ್ತದೆ. ಒಬ್ಬ ಕೆಟ್ಟ ಆಟಗಾರನನ್ನು ಯಾರೂ ಇಷ್ಟಪಡುವುದಿಲ್ಲ.

ಭೂತ ಶುದ್ಧಿ ಅಥವಾ ಪಂಚಭೂತಗಳ ಮೇಲೆ ನಿರ್ದಿಷ್ಟ ಪಾಂಡಿತ್ಯವನ್ನು ಪಡೆಯುವುದು, ‘ಪ್ರಜ್ಞಾಪೂರ್ವಕವಾಗಿ ಗೆಲ್ಲುವ’ ಒಂದು ಮಾರ್ಗವಾಗಿದೆ. ಏಕೆಂದರೆ ನೀವು ಏನು ಮಾಡುತ್ತಿದ್ದೀರಿ ಎಂಬುದರ ಬಗ್ಗೆ ಪಾಂಡಿತ್ಯವಿಲ್ಲದಿದ್ದರೆ, ಗೆಲುವು ಕೇವಲ ಆಕಸ್ಮಿಕವಾಗಿರುತ್ತದೆ.

ಒಂದು ವೇಳೆ ನೀವು ಆಟವನ್ನು ಆಡಲು ಆರಿಸಿದರೆ, ಅಂಶಗಳ ಮೇಲೆ ಸ್ವಲ್ಪ ಪಾಂಡಿತ್ಯವನ್ನು ಹೊಂದಿರುವುದು ಮುಖ್ಯ. ಇಲ್ಲದಿದ್ದರೆ ನೀವು ನಿಮ್ಮ ಜೀವನದೊಂದಿಗೆ ಕೆಟ್ಟದಾದ ಆಟಗಾರರಾಗುತ್ತೀರಿ. ಪ್ರಪಂಚದಲ್ಲಿ ಜನರು ಯಶಸ್ವಿಯಾಗಿದ್ದರೆ, ಇದರರ್ಥ ತಿಳಿದೋ ತಿಳಿಯೆದೆಯೋ, ಅವರು ಒಂದು ರೀತಿ ಅದರಲ್ಲಿ ಪಾಂಡಿತ್ಯ ಹೊಂದಿರುತ್ತಾರೆ. ಇಲ್ಲದಿದ್ದರೆ ಯಾವುದರಲ್ಲೂ ಯಶಸ್ಸು ಸಿಗುವುದಿಲ್ಲ. ಬಹುಶಃ ಅವರು ಆ ಯಶಸ್ಸಿಗಾಗಿ ಮೊದಲೇ ಬೇರೆಡೆ ಕೆಲಸ ಮಾಡಿರಬಹುದು ಅಥವಾ ಅವರು ಇಲ್ಲಿ ಈಗ ಕೆಲಸ ಮಾಡುತ್ತಿರಬಹುದು, ಆದರೆ ಯಾವುದಾದರೂ ವಿಷಯದ ಬಗ್ಗೆ ನಿರ್ಧಿಷ್ಟ ಪಾಂಡಿತ್ಯವಿರದಿದ್ದರೆ, ಜೀವನದಲ್ಲಿ ಯಾವುದೇ ಯಶಸ್ಸು ಕಂಡುಬರುವುದಿಲ್ಲ.

ನಾವು ಚಟುವಟಿಕೆಯನ್ನು ಮಾಡಲು ಆರಿಸಿಕೊಂಡಿದ್ದರೆ, ಯಶಸ್ಸು ಮಾನವ ಜೀವನದಲ್ಲಿ ಅತ್ಯಂತ ಮಧುರವಾದ ವಿಷಯವಾಗಿರುತ್ತದೆ. ಕೆಲವು ಜನರು ತತ್ವ ಚಿಂತನೆಯ ಹೆಸರಲ್ಲಿ - "ನೀವು ಗೆದ್ದರೂ ಸೋತರೂ ಪರವಾಗಿಲ್ಲ, ಅದು ಸರಿಯೇ." ಎಂಬ ಅವಿವೇಕವನ್ನು ಹರಡುತ್ತಾರೆ. ಜೀವನದಲ್ಲಿ ಅಂತಹ ಅವಿವೇಕತೆಗೆ ಜಾಗವಿಲ್ಲ. ನೀವು ಆಟವನ್ನು ಆಡುವಾಗ ನೀವು ಗೆಲ್ಲಲು ಬಯಸಬೇಕು. ಆಟ ಮುಗಿದ ನಂತರ, ಒಂದು ವೇಳೆ ನೀವು ಸೋತರೆ, ಪರವಾಗಿಲ್ಲ ಎನ್ನಬಹುದು. ಆದರೆ ನೀವು ಆಡುವ ಮೊದಲೇ ಸೋಲುವುದು ಸರಿಯೆಂದು ಭಾವಿಸಿದರೆ, ಆಟ ಆಡುವುದು ನಿಮಗೆ ತಿಳಿದಿಲ್ಲ ಎಂದರ್ಥವಷ್ಟೇ. ಒಮ್ಮೆ ನೀವು ಆಟವನ್ನು ಆಡಲು ನಿರ್ಧರಿಸಿದರೆ - ಮಾರುಕಟ್ಟೆ, ಮದುವೆ, ಜೀವನ ಅಥವಾ ಆಧ್ಯಾತ್ಮಿಕ ಪ್ರಕ್ರಿಯೆ - ಯಾವುದೇ ಆಗಿರಬಹುದು, ನೀವು ಗೆಲ್ಲಬೇಕು. ಅನೇಕ ಬಾರಿ ಇದು ತಂಡದ ಕ್ರೀಡೆಯಾಗಿರಬಹುದು. ನೀವು ಗೆಲ್ಲುವುದು ಎಂದರೆ ನಿಮ್ಮ ತಂಡದ ಜನರೂ ಸಹ ಗೆಲ್ಲಬೇಕು ಎಂದರ್ಥ. ನಿಮಗೆ ಮದುವೆಯಾಗಿದ್ದು, ನೀವು ಮಾತ್ರ ಗೆಲ್ಲಬೇಕು ಎಂದು ನೀವು ಭಾವಿಸಿದರೆ, ನಿಮ್ಮ ಸಂಗಾತಿ ನಿಮ್ಮ ಸ್ಥಿತಿಯನ್ನು ಶೋಚನೀಯವಾಗಿಸುತ್ತಾರೆ!

ಭೂತ ಶುದ್ಧಿ ಅಥವಾ ಪಂಚಭೂತಗಳ ಮೇಲೆ ನಿರ್ದಿಷ್ಟ ಪಾಂಡಿತ್ಯವನ್ನು ಪಡೆಯುವುದು, ‘ಪ್ರಜ್ಞಾಪೂರ್ವಕವಾಗಿ ಗೆಲ್ಲುವ’ ಒಂದು ಮಾರ್ಗವಾಗಿದೆ. ಏಕೆಂದರೆ ನೀವು ಏನು ಮಾಡುತ್ತಿದ್ದೀರಿ ಎಂಬುದರ ಬಗ್ಗೆ ಪಾಂಡಿತ್ಯವಿಲ್ಲದಿದ್ದರೆ, ಗೆಲುವು ಕೇವಲ ಆಕಸ್ಮಿಕವಾಗಿರುತ್ತದೆ. ನಿಮ್ಮ ವಿರೋಧಿಗಳು ದುರ್ಬಲವಾಗಿರುವ ಕಾರಣದಿಂದ ನೀವು ಗೆಲ್ಲಬಹುದು. ಅದು ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ನಿಮ್ಮ ಉತ್ತಮ ಸಾಮರ್ಥ್ಯ ಮತ್ತು ಅದಕ್ಕೂ ಮೀರಿ ನೀವು ಆಡುತ್ತೀರಿ. ನಾವು ಹಠ ಯೋಗ ಕಾರ್ಯಕ್ರಮದಲ್ಲಿ ಸೂಚನೆಗಳನ್ನು ನೀಡಿದಾಗಲೆಲ್ಲಾ, “ನಿಮಗೆ ಸಾಧ್ಯವಾದಷ್ಟು ವಿಸ್ತರಿಸಿ ಮತ್ತು ಸ್ವಲ್ಪ ಹೆಚ್ಚು” ಎಂದು ಹೇಳುತ್ತಿರುತ್ತೇವೆ. ಈ “ಸ್ವಲ್ಪ ಹೆಚ್ಚು” ಮುಖ್ಯವಾದ ಅಂಶವಾಗಿದೆ. ಅಲ್ಲಿಯೇ ಜೀವನವಿರುವುದು. ಅದುವೇ ಗೆಲುವು ಮತ್ತು ವೈಫಲ್ಯದ ನಡುವಿನ ವ್ಯತ್ಯಾಸ – ಯಾರೋ ಆ “ಸ್ವಲ್ಪ ಹೆಚ್ಚು” ತಮ್ಮ ಜೀವನದಲ್ಲಿ ಮಾಡುತ್ತಿದ್ದಾರೆ ಹಾಗು ಮತ್ತೊಬ್ಬರು ಅದನ್ನು ಮಾಡುತ್ತಿಲ್ಲ..

ನಿಯಂತ್ರಣದೊಂದಿಗೆ ನಿಯಂತ್ರಣವನ್ನು ಮೀರುವುದು

1970 ರ ದಶಕದಲ್ಲಿ, ಕೆನ್ನಿ ರಾಬರ್ಟ್ಸ್ ಸತತ ಮೂರು ಬಾರಿ ವಿಶ್ವ ಮೋಟಾರ್ಸೈಕಲ್ ಚಾಂಪಿಯನ್‌ಶಿಪ್ ಗೆದ್ದರು. ಅದು ಸುಲಭದ ವಿಷಯವಲ್ಲ. ಏಕೆಂದರೆ ಅತ್ಯುತ್ತಮ ಗುಣಮಟ್ಟದ ಯಂತ್ರಗಳು ಹಾಗು ವಿಶ್ವದ ಅತ್ಯುತ್ತಮ ಶ್ರೆಯಾಂಕದ ಸವಾರರು ಅದರಲ್ಲಿ ಪಾಲ್ಗೊಂಡಿರುತ್ತಾರೆ. ಆದ್ದರಿಂದ ನೀವು ಸೆಕೆಂಡಿನ ನೂರನೇ ಒಂದು ಭಾಗದಷ್ಟು ಸಮಯದಲ್ಲಿ ಗೆಲ್ಲುತ್ತೀರಿ. ನೀವು ಚಾಂಪಿಯನ್‌ಶಿಪ್ ಗೆಲ್ಲಬೇಕಾದರೆ, ನೀವು ಒಂದು ಆವೃತ್ತಿಯಲ್ಲಿ ಸುಮಾರು ಹನ್ನೆರಡು, ಹದಿನೈದು ರೇಸ್‌ಗಳನ್ನು ಗೆಲ್ಲಬೇಕು. ಅದರಲ್ಲೂ ಸತತವಾಗಿ ಮೂರು ಬಾರಿ ಗೆಲ್ಲುವುದು ಅಸಾಧ್ಯವೇ ಸರಿ. "ನೀವು ಇದನ್ನು ಹೇಗೆ ಈ ಸಾಧಿಸಿದಿರಿ?" ಎಂದು ಜನರು ಕೇಳಿದಾಗ, "ನಾನು ನಿಯಂತ್ರಣವನ್ನು ಮೀರಿದಾಗಲೂ ನಿಯಂತ್ರಣದಲ್ಲಿರುತ್ತೇನೆ" ಎಂದು ಅವರು ಹೇಳಿದರು. ಆ ನಿಯಂತ್ರಣದ ರೇಖೆಯನ್ನು ದಾಟಲು ಧೈರ್ಯವನ್ನು ಹೊಂದಿರಬೇಕು, ಅದೇ ಸಮಯ ನಿಯಂತ್ರಣದಿಂದ ಅತಿ ಹೆಚ್ಚು ದೂರ ಹೋಗದಿರುವಷ್ಟು ಬುದ್ಧಿವಂತಿಕೆ ಹೊಂದಿರಬೇಕು.

ಈ ನಿಟ್ಟಿನಲ್ಲಿ ಯಾವುದೇ ಸಾಧನೆ ಮಾಡಲು ಸಿದ್ಧರಿಲ್ಲದ ಜನರಿಗೆ, ನಾವು ಪಂಚ ಭೂತ ಆರಾಧನೆಯನ್ನು ಆಯೋಜಿಸುತ್ತೇವೆ. ಕನಿಷ್ಠ ಪಕ್ಷ ನೀವು ಅಲ್ಲಿ ಇರುವುದರ ಮೂಲಕ ಪ್ರಯೋಜನ ಪಡೆಯುತ್ತೀರಿ.

ನೀವು ಏನನ್ನಾದರೂ ಮಾಡಲು ಧೈರ್ಯವನ್ನು ಹೊಂದಿದ್ದರೆ, ನೀವು ಸ್ವಲ್ಪ ಸಾಮರ್ಥ್ಯವನ್ನೂ ಹೊಂದಿರಬೇಕು. ಇಲ್ಲದಿದ್ದರೆ ಧೈರ್ಯವು ವಿಪತ್ತಾಗಿ ಪರಿವರ್ತನೆಗೊಳ್ಳುತ್ತದೆ. ನೀವು ಅದರಲ್ಲಿ ಯಶಸ್ವಿಯಾದರೆ, ಜನರು ನಿಮ್ಮನ್ನು ಧೈರ್ಯಶಾಲಿ ಎನ್ನುತ್ತಾರೆ. ಅದೇ ಕೆಳಗೆ ಬಿದ್ದರೆ, ಮೂರ್ಖರು ಎನ್ನುತ್ತಾರೆ. ಈ ಎರಡರ ನಡುವಿನ ವ್ಯತ್ಯಾಸ ತುಂಬಾ ಸಣ್ಣದು. ನಿಮ್ಮ ಅಸ್ತಿತ್ವದಲ್ಲಿನ ಮೂಲಭೂತ ವಿಷಯಗಳ ಮೇಲೆ ನೀವು ಹೆಚ್ಚು ಪಾಂಡಿತ್ಯ ಹೊಂದಿದ್ದರೆ ಆ ವ್ಯತ್ಯಾಸವನ್ನು ಮೀರುವ ಸಾಮರ್ಥ್ಯ ಹಾಗು ಆ ನಿಟ್ಟಿನಲ್ಲಿ ಸಾಗುವ ನಿಮ್ಮ ಸಾಮರ್ಥ್ಯವು ಉತ್ತಮಗೊಳ್ಳುತ್ತಾ ಹೋಗುತ್ತದೆ.

ಈ ನಿಟ್ಟಿನಲ್ಲಿ ಯಾವುದೇ ಸಾಧನೆ ಮಾಡಲು ಸಿದ್ಧರಿಲ್ಲದ ಜನರಿಗೆ, ನಾವು ಪಂಚ ಭೂತ ಆರಾಧನೆಯನ್ನು ಆಯೋಜಿಸುತ್ತೇವೆ. ಕನಿಷ್ಠ ಪಕ್ಷ ನೀವು ಅಲ್ಲಿ ಇರುವುದರ ಮೂಲಕ ಪ್ರಯೋಜನ ಪಡೆಯುತ್ತೀರಿ. ಆಚರಣೆಯ ಮಹತ್ವವೇ ಇದು. ಸ್ವತಃ ಸಾಧನೆ ಮಾಡಲು ಯಾರಿಗೆ ಸಾಧ್ಯವಿಲ್ಲವೋ, ಅಂಥವರಿಗಾಗಿಯೇ ಆಚರಣೆ – ಒಂದು ರೀತಿಯ ಸಾಮೂಹಿಕ ಸಾಧನೆ. ಒಂದು ಸಾವಿರ ಜನರು ಕುಳಿತು ಅದರ ಲಾಭ ಪಡೆಯಬಹುದು. ಆದರೆ ನೀವು ಸಾಧನೆ ಮಾಡಿದರೆ, ಅದರಿಂದ ನೀವು ಮಾತ್ರ ಅದರ ಉಪಯೋಗ ಪಡೆದುಕೊಳ್ಳಬಹುದು. ವ್ಯಕ್ತಿಗತ ಸಾಧನೆ ಖಂಡಿತವಾಗಿಯೂ ಉನ್ನತ ಸ್ವಭಾವವನ್ನು ಹೊಂದಿದೆ ಆದರೆ ಆಚರಣೆಯು ದೊಡ್ಡ ಮಟ್ಟದಲ್ಲಿ ತಲುಪುವ ಪ್ರಯೋಜನವನ್ನು ಹೊಂದಿದೆ.

Editor’s Note: Every month, during the Pancha Bhuta Aradhana, Sadhguru opens up a unique opportunity for devotees to benefit from this deep yogic science which would otherwise require intense sadhana.

On the 14th day of every lunar month, known as Shivaratri, and especially on Mahashivarathri , there will be an opportunity to experience the Pancha Bhuta Aradhana at the Dhyanalinga between 5:40 pm and 6:10 pm.

For more information, check the schedule of upcoming events or contact: Tel: 0422-2515345, Email: pba@ishafoundation.org