ಸದ್ಗುರು ಮತ್ತು ಡಾ: ಕಿರಣ್ ಮಝುಮ್‍ದಾರ್ ಷಾ, ಭಾರತದ ಒಬ್ಬ ಯಶಸ್ವಿ ಮಹಿಳೆ ಮತ್ತು ಭಾರತದ ಪ್ರಸಿದ್ಧ ಜೈವಿಕ ತಂತ್ರಜ್ಞಾನ ಉದ್ಯಮ, ಬೈಯೋಕಾನ್ ನ ಸ್ಥಾಪಕ ಅಧ್ಯಕ್ಷೆ, 22 ಏಪ್ರಿಲ್ 2017ನಂದು ಬೆಂಗಳೂರಿನಲ್ಲಿ ಭೇಟಿಯಾದರು, ಮತ್ತು ಈ ದಿನದ ಮಾನವನ ಅತ್ಯವಶ್ಯಕ ಅಂಶಗಳ ಬಗ್ಗೆ ಒಂದು ಸಂವಾದಾತ್ಮಕ ಚರ್ಚೆಯಲ್ಲಿ ತೊಡಗಿದರು. ಈ ಆಯ್ದಭಾಗಗಳಲ್ಲಿ ಪರಿಸರದ ಅವನತಿಯ ಬಗ್ಗೆ, ಜನಸಂಖ್ಯೆಯ ಬೆಳವಣಿಗೆಯ ಬಗ್ಗೆ, ಗ್ರಾಹಕೀಕರಣ ಮತ್ತು ಪ್ರಜ್ಞೆಯ ಬಗ್ಗೆ ಚರ್ಚಿಸಿದರು.

ನಮ್ಮ ನಾಗರಿಕ ಪ್ರಜ್ಞೆ ಎಲ್ಲಿ?

ಡಾ: ಕಿರಣ್ ಮಝುಮದಾರ್ ಷಾ: ಇಲ್ಲಿರುವವರೆಲ್ಲ ಬೆಂಗಳೂರಿನವರಲ್ಲವೇ, ನಾನು ಒಂದು ವಿಷಯಕ್ಕೆ ಬರಬೇಕೆಂದಿದ್ದೇನೆ ಅದು ನಮ್ಮನ್ನು ಪ್ರತಿ ದಿವಸ ಪೀಡಿಸುತ್ತಿದೆ. ಅದು ನಾವು ಎಲ್ಲ ಕಡೆ ಕಸವನ್ನು ನೋಡುತ್ತಿದ್ದೇವೆ, ನಾವು ಕಲುಷಿತವಾದ ಕೊಳಗಳನ್ನು ನೋಡುತ್ತಿದ್ದೇವೆ. ಈ ನಗರದಲ್ಲಿ ನಮಗೆ ಬಹಳ ಸಮಸ್ಯೆಗಳಿವೆ. ಇವೆಲ್ಲವೂ ನಮನ್ನು ಕುರಿತು ಇರುವ ಸಮಸ್ಯೆಗಳೆ. ನಾವು ಸದಾ ಸರ್ಕಾರವನ್ನು ಎಲ್ಲವನ್ನೂ ಮಾಡಬೇಕೆಂದು ಕೇಳಲು ಸಾಧ್ಯವಿಲ್ಲ. - ಹೇಗಾದರೂ ಇವೆಲ್ಲ ಸ್ವಚ್ಛ ಭಾರತ (ಭಾರತವನ್ನು ಸ್ವಚ್ಛ ಮಾಡಿ ಆಂದೋಲನ)

ನಾವು 2020ರಲ್ಲಿ ನಮ್ಮ ಭಾರತ ಸ್ವಚ್ಛವಾಗಿರಬೇಕೆಂದುಕೊಂಡೆವು(2014ರಲ್ಲಿ), ಆದರೆ 3 ವರ್ಷ ಕಳೆದಮೇಲೆ ನಾವು ಏನು ಮಾಡುತ್ತಿರುತ್ತೇವೆ ಎಂದು ನೋಡಿದರೆ ನಮ್ಮ ಅಭ್ಯಾಸಗಳನ್ನು ನಾವು ಬದಲಾಯಿಸಿಕೊಂಡಿಲ್ಲ. ನಾವು ಇನ್ನೂ ಕಸವನ್ನು ಅಲ್ಲಲ್ಲಿ ಹಾಕುತ್ತಿರುತ್ತೇವೆ; ಕೊಳಗಳನ್ನು ಕಲುಷಿತ ಮಾಡುತ್ತಿದ್ದೇವೆ. ಈ ದೇಶದಲ್ಲಿ ಯಾರಿಗೂ ನಾಗರಿಕ ಪ್ರಜ್ಞೆ ಇಲ್ಲವೆಂದು ತೋರುತ್ತದೆ.

ಹಾಗಾದರೆ ನಾವು ನಮಲ್ಲಿ ನಾಗರಿಕ ಪ್ರಜ್ಞೆಯನ್ನು ಹೇಗೆ ಅಳವಡಿಸುವುದು? ಬಹಳಷ್ಟು ಜನ ಅದನ್ನು ಮಾಡಲು ಪ್ರಯತ್ನಿಸುತ್ತೇವೆ ಆದರೆ ಕಡೆಗೆ ಬಿಟ್ಟು ಬಿಡುತ್ತೇವೆ. ಈ ಎಲ್ಲ ವಿಷಯಗಳನ್ನು ನಾವು ಹೇಗೆ ವ್ಯವಹರಿಸುವುದು?

ಸದ್ಗುರು: ಈ ಮಧ್ಯೆ ವಾಟ್ಸಾಪ್ ನಲ್ಲಿ ಒಂದು ಛಾಯಾಚಿತ್ರ ಚಲಾವಣೆಯಾಗಿತ್ತು ಹನುಮಾನ್ ಜಯಂತಿಯಂದು ಮುಂಬೈ ಪುಣೆ ರಸ್ತೆಯಲ್ಲಿ ಯಾರೋ ನೂರು ಕೋತಿಗಳಿಗೆ ಊಟ ಬಡಿಸಿದರೆಂದು. ಆ ಕೋತಿಗಳು ಒಂದು ಸಾಲಿನಲ್ಲಿ ಕುಳಿತು ಬಾಳೆ ಎಳೆಯಲ್ಲಿ ಊಟ ಮಾಡಿದವು ಎಂದು. ಯಾರೋ ಕೇಳಿದರು ಸದ್ಗುರು ಇದು ಹೇಗೆ ಸಾಧ್ಯ ಎಂದು? ಅವರು ಇದನ್ನು ಫೋಟೋಶಾಪ್ ಮಾಡಿರುವರೇ ಎಂದು. ನಾನು ಹೇಳಿದೆ ಇಲ್ಲ ಇದು ಫೋಟೋಶಾಪ್ ಅಲ್ಲ, ಇದು ಇಷ್ಟೇ , ಎಲ್ಲರಿಗೂ ಏನು ಅವಶ್ಯಕತೆ ಇದೆಯೋ ಅದು ಕೊಟ್ಟರೆ ಎಲ್ಲರೂ ಸುಸಂಸ್ಕೃತರಾಗುತ್ತಾರೆ. ಸದ್ಯಕ್ಕೆ ಎಲ್ಲವೂ ವಿರಳವಾಗಿದೆ, ಈ ಪರಿಸ್ಥಿತಿಯಲ್ಲಿ ಜನರು ಇತರರೊಂದಿಗೆ ಹೊಡೆದಾಡುತ್ತಾರೆ ಮತ್ತು ಏನಾದರು ಕಿರುಕುಳ ಮಾಡುತ್ತಿರುತ್ತಾರೆ. ಮನುಷ್ಯರಿಗೆ ಇನ್ನು ಸ್ವಲ್ಪ ಜಾಸ್ತಿ ಸ್ಥಳ ಬೇಕು, ನಾವು ಒಳ್ಳೆಯವರೇ ಆದರೆ ನಮ್ಮ ಸಂಖ್ಯೆ ತುಂಬ ಜಾಸ್ತಿಯಾಗಿದೆ ಅಷ್ಟೆ.

20ನೇ ಶತಮಾನ ಶುರುವಿನಲ್ಲಿ ಭೂಮಿಯಲ್ಲಿ ನಮ್ಮ ಜನಸಂಖ್ಯೆ 1.6 ಬಿಲಿಯನ್ ಇತ್ತು. ಈ ದಿನ ನಾವು 7.5 ಬಿಲಿಯನ್. 1947 ನಲ್ಲಿ ಭಾರತದಲ್ಲಿ ನಮ್ಮ ಜನಸಂಖ್ಯೆ 33 ಕೋಟಿ ಈಗ 134 ಕೋಟಿ. ಎಪ್ಪತ್ತು ವರ್ಷಗಳಲ್ಲಿ ನಾಲ್ಕು ಪಟ್ಟು ಹೆಚ್ಚು ಸಂತಾನೋತ್ಪತ್ತಿ ಎಷ್ಟು ಬೇಜವಾಬ್ದಾರಿತನ. ಆದರೆ ಇದು ಬರಿ ಹೆಚ್ಚು ಸಂತಾನೋತ್ಪತ್ತಿಯಿಂದಲ್ಲ. ಇದು ನಮ್ಮ ಆಯಸ್ಸು ಹೆಚ್ಚಾಗಿರುವುದರಿಂದಲೂ ಹೌದು. 1947 ನಲ್ಲಿ ನಮ್ಮ ಆಯುರ್ನಿರೀಕ್ಷೆ 28ವರ್ಷ. 28ವರ್ಷ ನೀವು ಕೇಳಿದ್ದು ನಿಜ.

ಡಾ: ಕಿರಣ್ ಮಝುಮದಾರ್ ಷಾ: ಈಗ ಅದು 68

ಸದ್ಗುರು: ಅದು ನಡೆದದ್ದು ಒಂದು ಅದ್ಭುತ ಸರಿಯೇ. ಅದರ ಅರ್ಥ ನಾವು ನಮ್ಮ ಸಾವನ್ನು ಮುಂದುಹಾಕಿದ್ದೇವೆಂದು. ಹಾಗಾದರೆ ನಾವು ನಮ್ಮ ಹುಟ್ಟನ್ನು ಕೂಡ ಮುಂದಕ್ಕೆ ಹಾಕಬೇಕಲ್ಲವೇ? ಈ ದೇಶದಲ್ಲಿ ಒಂದು ಕಾಲವಿತ್ತು ಆಗ ಬಹಳಷ್ಟು ಹೆಣ್ಣು ಮಕ್ಕಳು 15 ಅಥವಾ 16 ವರ್ಷಗಳಿಗೆ ಗರ್ಭವತಿಯಾಗುತ್ತಿದ್ದರು. ಈಗ ಅದನ್ನು ಸುಮಾರು 20 ವರ್ಷಕ್ಕೆ ತಳ್ಳಿ ಹಾಕಿದ್ದಾರೆ. ನಾವು ಅದನ್ನು 35ಕ್ಕೆ ತಳ್ಳಿ ಹಾಕಬೇಕು. ಈಗ ನೀವು ಲಿಂಗದ ಬಗ್ಗೆ ವಿಚಾರ ಮಾಡುತ್ತಿದ್ದೀರಿ- ಒಬ್ಬ ಮಹಿಳೆ 35ವರ್ಷದ ವರೆಗೆ ಮಗುವನ್ನು ಪಡೆಯದಿದ್ದರೆ - ಬಹಳಷ್ಟು ಸಾರಿ ಅವರು ಚೆನ್ನಾಗಿ ಓದುತ್ತಾರೆ. ವೃತ್ತಿಪರವಾಗಿ ಸ್ಥಾಪಿಸಿಕೊಳ್ಳುತ್ತಾರೆ ಮತ್ತು ಅವರಿಗೆ ಪ್ರಜ್ಞೆ ಬಂದು ಅವಳು ಮಕ್ಕಳೇ ಬೇಡವೆಂದುಕೊಳ್ಳಬಹುದು.

ಮಕ್ಕಳನ್ನು ಹೆರುವುದರಲ್ಲಿ ಏನೂ ತಪ್ಪಿಲ್ಲ - ನಾವೆಲ್ಲರೂ ಹಾಗೇ ಹುಟ್ಟಿದ್ದು. ಆದರೆ ಅದು ಇಷ್ಟೇ - ನಾವೇನು ಅಳಿವಿನಂಚಿನಲ್ಲಿರುವ ಪ್ರಭೇದವಲ್ಲ.

ಮಕ್ಕಳನ್ನು ಹೆರುವುದರಲ್ಲಿ ಏನೂ ತಪ್ಪಿಲ್ಲ - ನಾವೆಲ್ಲರೂ ಹಾಗೇ ಹುಟ್ಟಿದ್ದು. ಆದರೆ ಅದು ಇಷ್ಟೇ - ನಾವೇನು ಅಳಿವಿನಂಚಿನಲ್ಲಿರುವ ಪ್ರಭೇದವಲ್ಲ. ನೀವು ಒಂದು ಹುಲಿಯಾಗಿದ್ದರೆ, ನಾನೇ ಹೇಳುತ್ತಿದ್ದೆ, ‘ಫಲವತ್ತತೆಯ ಚಿಕಿತ್ಸಾಲಯವನ್ನು ನಿರ್ಮಾಣ ಮಾಡಿ’ ಎಂದು. ಆದರೆ ನಾವು ಮನುಷ್ಯರು ನಾವು ಬಹಳ ಚೆನ್ನಾಗಿಯೇ ಸಂತಾನೋತ್ಪತ್ತಿಯನ್ನು ಮಾಡುತ್ತಿದ್ದೇವೆ. ನಾನು ಫಲವತ್ತತೆಯ ಚಿಕಿತ್ಸಾಲಯವನ್ನು ನೋಡಿದಾಗ ನನ್ನ ಹೃದಯ ಕರಗುತ್ತದೆ, ಏಕೆಂದರೆ ನನ್ನಿಂದ ಬರುವುದೇ ನನ್ನದು ಎಂಬ ಅಂಧಾಭಿಮಾನದಿಂದ ಬರುವ ಆಲೋಚನೆ. ಬೇರೆಯವರು ಯಾಕೆ ನಿಮ್ಮವರಾಗಿರಲು ಸಾಧ್ಯವಿಲ್ಲ? ಅದೇ ಮಾನವೀಯತೆ ಎನ್ನುವುದು. ನೀವು ಸಿದ್ದರಾಗಿದ್ದಾರೆ ನೀವು ಯಾವ ಚೌಕಟ್ಟಿನ ಭಾವವಿಲ್ಲದೆ ಬದುಕಬಹುದು. ಪ್ರಕೃತಿಯು ನಿಮಗೆ ಚೌಕಟ್ಟನ್ನು ಹಾಕಿಲ್ಲ. ನೀವು ಅರಿವಿಲ್ಲದೆ ಬಲವಂತವಾಗಿ ನಿಮಗೆ ನೀವೇ ಚೌಕಟ್ಟನ್ನು ಹಾಕಿಕೊಂಡಿದ್ದೀರಿ. ಅದರ ಅರ್ಥ ನೀವು ಮನುಷ್ಯರಾಗಿರುವ ಅಂಶವನ್ನು ಅನ್ವೇಷಿಸಿಲ್ಲವೆಂದಾಯಿತು. ನೀವು ಇನ್ನು ಬೇರೆ ಎಲ್ಲಾ ಪ್ರಾಣಿಗಳ ಹಾಗೆ ಇರಲು ಬಯಸುತ್ತಿದ್ದೀರಿ.

 

 

IEO

ನೀವು ಮನುಷ್ಯರಾಗಿರುವುದು ಹೇಗೆ ಎಂದು ಅನ್ವೇಷಿಸಿದರೆ ನೀವು ಗಮನಿಸಬಹುದು, ‘ಒಳಗೂಡಿವಿಕೆಯು ನಮ್ಮ ದೇಹದಿಂದ ಬಂದರೇ ಆಗಬೇಕಿಲ್ಲವೆಂದು’. ಒಳಗೂಡುವಿಕೆಯೆಂದರೆ ಪ್ರಜ್ಞೆ. ಪ್ರಜ್ಞೆ ಹೆಚ್ಚಾದರೆ ನೀವು ಬೇರೆ ಆಯ್ಕೆಗಳನ್ನು ಮಾಡುತ್ತೀರಿ. ನಮ್ಮ ಹತ್ತಿರ ನೂರಾರು ಜೋಡಿಗಳು ಪೂರ್ಣ ಮತ್ತು ಅರೆಕಾಲಿಕ ಸ್ವಯಂ ಸೇವಕರಿದ್ದಾರೆ ಅವರಲ್ಲಿ ಯಾರಿಗೂ ಮಕ್ಕಳಿಲ್ಲ. ಅವರು ಉದ್ದೇಶಪೂರ್ವಕವಾಗಿ ಸ್ವಂತ ಮಕ್ಕಳು ಬೇಡವೆಂದುಕೊಂಡರು. ಏಕೆಂದರೆ ನಾನು ಅವರಿಗೆ ಸಾವಿರಾರು ಮಕ್ಕಳನ್ನು ಕೊಟ್ಟಿದ್ದೇನೆ - ಲಕ್ಷಾಂತರ ಕೊಡಬಲ್ಲೆ, ಅವರು ಸಿದ್ಧರಿದ್ದರೆ. ಒಂದು ಮಗುವಿನ ಜೊತೆ ವಂಶದೊಡನೆ ಗುರುತಿಸ ಬೇಕಾದ ಅವಶ್ಯಕತೆ ಏನಿದೆ? ನಾನು ಒಂದು ಕೆಟ್ಟ-ಧೈರ್ಯದ ವಿಷಯವನ್ನು ಯೋಚಿಸುತ್ತಿದ್ದೇನೆ - ಅದಕ್ಕೆ ನಾನು ತೀರ ಅಪ್ರಿಯನಾಗುತ್ತೇನೆ. ಯಾವ ಹೆಣ್ಣು ಮಕ್ಕಳು ಮಗುವನ್ನು ಹೆರುವ ಅರ್ಹತೆಯಿದ್ದೂ ಅದು ಬೇಡವೆಂದುಕೊಳ್ಳುವರೋ ಅವರಿಗೆ ನಾನು ಒಂದು ಬಹುಮಾನವನ್ನು ಕೊಡಬೇಕೆಂದು ಯೋಚಿಸುತ್ತಿದ್ದೇನೆ.

ಡಾ: ಕಿರಣ್ ಮಝುಮದಾರ್ ಷಾ: ಒಳ್ಳೆಯದು, ಅದಕ್ಕಾಗಿ ನಿಮಗೆ ಉತ್ತಮ ಅನುಮೋದನೆ ಸಿಕ್ಕಿದೆ.

ಸದ್ಗುರು: ನೀವಿದನ್ನು ಅರ್ಥಮಾಡಿಕೊಂಡರೋ ಇಲ್ಲವೋ, ನೀವು ಯೋಚಿಸುತ್ತಿರುವ ಸಮಸ್ಯೆ ಪಾರ್ಕಿಂಗ್ ಆಗಲಿ, ಅಥವಾ ಕಸವಾಗಲೀ, ಅಥವಾ ಆರೋಗ್ಯ್ ರಕ್ಷಣೆಯಾಗಲೀ ಅಲ್ಲ. ಸಮಸ್ಯೆ ಜನಸಂಖ್ಯೆಯದು.

ಗ್ರಾಹಕೀಕರಣಕ್ಕೆ ಮದ್ದು ಇದೆಯೇ?

ಪ್ರಶ್ನೆ: ನಮಸ್ಕಾರ ಸದ್ಗುರು, ಹಿಂದುಸ್ಥಾನವು ಸದಾ ಸ್ವಾವಲಂಬಿ. ಆದರೆ ಈ ದಿನ ಎಲ್ಲರೂ ಗ್ರಹಕರಾಗಿದ್ದರೆ. ಗ್ರಾಹಕೀಕರಣ ದಿನೇ ದಿನೇ ಹೆಚ್ಚುತ್ತಿದೆ ಅದರ ಜೊತೆಗೆ ಕಸ, ನದಿಗಳ ಮಾಲಿನ್ಯವೂ ಹೆಚ್ಚುತ್ತಿದೆ. ನೀವು ನಮಗೆ ಸಲಹೆ ಕೊಡಬಲ್ಲಿರಾ, ಈ ಪರಿಸ್ಥಿತಿಯಲ್ಲಿ ನಾವು ಮತ್ತೆ ಹೇಗೆ ಸ್ವಾವಲಂಬಿಗಳಾಗಬಹುದೆಂದು?

ಸದ್ಗುರು: ನೀವು ಇಂದಿಗೂ ಮಾನವನ ಆಸೆಗಳನ್ನುಕಟ್ಟು ಹಿಡಿಯಲು ಸಾಧ್ಯವಿಲ್ಲ, ಆದರೆ ನಾವು ಮಾನವ ಜನಸಂಖ್ಯೆಯನ್ನು ಹಿಡಿತದಲ್ಲಿರಬಹುದು. ಈಗ ಯುನೈಟೆಡ್ ನೇಷನ್ಸ್ ಮತ್ತು ಇತರತು ಭವಿಷ್ಯವಾಣಿ ಹೇಳುತ್ತಿದ್ದಾರೆ 2050 ರಷ್ಟರಲ್ಲಿ ಭೂಮಿಯಲ್ಲಿ ಜನಸಂಖ್ಯೆ 9.7 ಬಿಲಿಯನ್ ಆಗುತ್ತದೆ. ಬೆಂಗಳೂರು ನಗರದಲ್ಲಿ ನಿಮ್ಮ ಜೀವನವನ್ನು ಊಹಿಸಿಕೊಳ್ಳಿ. ನಾವು 40%ಕಡಿಮೆ ಸಂಪನ್ಮೂಲಗಳೊಡನೆ ಜೀವಿಸಬೇಕು. ನಾನು ಸಂಪನ್ಮೂಲಗಳೆಂದು ಹೇಳಿದಾಗ ನಾನು ಎಣ್ಣೆ, ಬಂಗಾರ, ವಜ್ರಗಳು ಮತ್ತು ಅಂತಹ ವಸ್ತುಗಳ ಬಗ್ಗೆ ಮಾತನಾಡುತ್ತಿಲ್ಲ. ನಾನು ಮಾತನಾಡುತ್ತಿರುವುದು ಆಹಾರ, ಗಾಳಿ ಮತ್ತು ನೀರು. ಒಂದು ನಿಮಿಷದಲ್ಲಿ ನೀವು 12ರಿಂದ 15 ಸಾರಿ ಉಸಿರಾಡುತ್ತೀರಿ. ಇದನ್ನು 10ಸಾರಿ ಮಾತ್ರ ಮಾಡಿ ನೋಡಿ ನಿಮಗೆ ಹೇಗನಿಸುತ್ತದೆ.

2050 ರಲ್ಲಿ ನೀವು ಇದನ್ನೇ ಅನುಭವಿಸುವಿರಿ, ಜನಸಂಖ್ಯೆಯನ್ನು ನಾವು ಪ್ರಜ್ಞೆಯಿಂದ ಹಿಡಿದಿಡದಿದ್ದರೆ. ಇದನ್ನು ನಾವು ಮಡದಿದ್ದರೆ ಪ್ರಕೃತಿಯೇ ಮಾಡುತ್ತದೆ ಆದರೆ ಬಹಳ ಕ್ರೂರವಾಗಿ ಮತ್ತು ಆಗ ಸರಿಯಾಗಬಹುದು. ಆದರೆ ನಾವು ಸರಿಪಡಿಸುವ ಕ್ರಮ ತೆಗೆದುಕೊಳ್ಳದಿದ್ದರೆ, ನಾವು ಪ್ರಜ್ಞಾಪೂರ್ವಕ ತಿದ್ದುಪಡಿ ಮಾಡುವ ಬದಲು ಪ್ರಕೃತಿಯನ್ನು ಕ್ರೂರವಾಗಿ ತಿದ್ದಲು ಬಿಟ್ಟರೆ ಅದು ನಮ್ಮ ಮಾನವೀಯತೆ ಮತ್ತು ನಮ್ಮ ಬುದ್ಧಿವಂತಿಕೆಗೆ ಆದ ಅವಮಾನವಲ್ಲವೇ?

ಎಲ್ಲದಕ್ಕಿಂತ ಮುಖ್ಯವಾದುದು, ಇದನ್ನು ಸರಿಪಡಿಸಲು ಒಂದು ವಿಷಯ ಬಹಳ ಮುಖ್ಯ - ಮನುಷ್ಯರು ಇವೆರಡಕ್ಕೂ ಸಂಬಂಧವಿಲ್ಲ ಎಂದುಕೊಂಡರೂ - ನೀವು ನಿಮ್ಮ ಸ್ವಂತ ಸ್ವಭಾವದಿಂದ ಧ್ಯಾನಸ್ಥರಾದರೆ ನೀವು ಇಲ್ಲಿ ಕುಳಿತು, ನಿಮ್ಮಲ್ಲಿ ನೀವೇ ಸಂಪೂರ್ಣವೆನಿಸಿಕೊಂಡರೆ; ಹೊರಗೆ ನೀವು ಏನು ಬೇಕೋ ಅದನ್ನೇ ಮಾಡುವಿರಿ, ಅದಕ್ಕಿಂತ ಹೆಚ್ಚಲ್ಲ ಕಡಿಮೆಯಲ್ಲ. ಈಗ ನೀವು ಬಲವಂತವದ ಸ್ಥಿತಿಯಲ್ಲಿರುವಿರಿ. ಈ ಪರಿಸ್ಥಿತಿಯಲ್ಲಿ, ಗ್ರಾಹಕೀಕರಣವನ್ನು ನೀವು ನಿಲ್ಲಿಸಲಾರಿರಿ.

ನಾನು ಹೇಳುವುದೇನೆಂದರೆ ನೀವು ನಿಮ್ಮ ಮನೆಗೆ ಹೋಗಿ ನೋಡಿ, ಕಳೆದ ಒಂದು ವರ್ಷದಲ್ಲಿ ನೀವು ಉಪಯೋಗಿಸದೆ ಇರುವ ವಸ್ತುಗಳು ಎಷ್ಟಿವೆ ಎಂದು?

ಮನುಷ್ಯರ ಆಸೆಯನ್ನು ಹಿಡಿದಿಡಲು ನೋಡಬೇಡಿ, ಇಲ್ಲದಿದ್ದರೆ ಮನುಷ್ಯರು ಮೋಸಹೋಗುತ್ತಾರೆ. ನಾವು ಮನುಷ್ಯರ ಜನಸಂಖ್ಯೆಯನ್ನು ನಿಯಂತ್ರಿಸಿದರೆ ಮತ್ತು ಮನುಷ್ಯರನ್ನು ತನ್ನಲ್ಲಿಯೇ ಆನಂದವಾಗಿರುವುದನ್ನು ತಿಳಿಸಿಕೊಟ್ಟರೆ, ಆಗ ಅವರು ಅವರಿಗೆ ಏನು ಬೇಕೋ ಅದನ್ನೇ ಮಾಡುವರು. ಅವರು ಅದನ್ನು ಬಲವಂತದಿಂದ ಮಾಡುವುದಿಲ್ಲ, ಈಗ ಅವರು ಸಂತೋಷವಾಗಿರಬೇಕೆಂದರೆ, ಅವರು ಏನೇನೋ ಮಾಡಬೇಕು.

ನೀವು ಮನುಷ್ಯರಲ್ಲಿ ಅವರ ಒಳಗಿನಿಂದ ಒಂದು ಯೋಗಕ್ಷೇಮವನ್ನು ನಿರ್ಮಾಣ ಮಾಡಬೇಕು. ಆಗ ಅವನು ಅಥವಾ ಅವಳು ಸುಮ್ಮನೆ ಕುಳಿತರೆ ಬದುಕು ಸಂಪೂರ್ಣವಾಗಿರಬೇಕು. ಈಗ ನಾವೆಲ್ಲರೂ ಒಂದೇ ಸಭಾಗಣದಲ್ಲಿ ಕುಳಿತು ಅದೇ ಗಾಳಿಯನ್ನು ಉಸಿರಾಡುತ್ತಾ ಬಹುಷಃ ನಾವು ಒಂದೇ ರೀತಿಯ ಆಹಾರವನ್ನೂ ಸೇವಿಸುತ್ತಿದ್ದೇವೆ. ಆದರೆ ಈ ಕ್ಷಣದಲ್ಲಿ ನಾನು ನನ್ನೊಳಗೆ ಹೇಗೆ ಇರುವೆನೋ ಅದನ್ನು ಈ ಪ್ರಪಂಚದಲ್ಲಿ ನಾನು ಯಾವುದಕ್ಕೂ ಬದಲಾಯಿಸಿಕೊಳ್ಳಲಾರೆ. ನೀವು ಇಡೀ ಬ್ರಹ್ಮಾಂಡವನ್ನು ಕೊಡುತ್ತೇನೆಂದರೂ ನಾನು "ಸಾಧ್ಯವಿಲ್ಲ ಎನ್ನುವೆ". ನೀವು ಹೀಗೆ ಇದ್ದರೆ ನಾವು ಗ್ರಾಹಕೀಕರಣದ ಬಗ್ಗೆ ಮಾತನಾಡ ಬೇಕಾಗಿ ಬರುತ್ತಿತ್ತೇ? ನೀವು ಏನು ಬೇಕೋ ಅದನ್ನೇ ಮಾಡುತ್ತಿದ್ದಿರಿ. ನೀವು ಏನು ಬೇಡವೋ ಅದನ್ನು ಮಾಡುವುದಿಲ್ಲ.

ನಾನು ಹೇಳುವುದೇನೆಂದರೆ ನೀವು ನಿಮ್ಮ ಮನೆಗೆ ಹೋಗಿ ನೋಡಿ, ಕಳೆದ ಒಂದು ವರ್ಷದಲ್ಲಿ ನೀವು ಉಪಯೋಗಿಸದೆ ಇರುವ ವಸ್ತುಗಳು ಎಷ್ಟಿವೆ ಎಂದು? ಬಹುಷಃ ನೀವು ಅದಾವುದನ್ನೂ ಮತ್ತೆ ಉಪಯೋಗಿಸುವುದಿಲ್ಲ. ಆದರೆ ಅದು ನಿಮ್ಮೊಡನೆ ಇರುವುದು. ನೀವು ಸತ್ತ ಮೇಲೆ ಯಾರೋ ಒಬ್ಬರು ಅದನ್ನು ಎಸೆಯುವ ಕಷ್ಟ ತೆಗೆದುಕೊಳ್ಳುವರು. ನೀವು ಕಳೆದ ಒಂದು ವರ್ಷದಿಂದ ಉಪಯೋಗಿಸದೆ ಇರುವ ವಸ್ತುಗಳನ್ನು ದಯವಿಟ್ಟು ಕೊಟ್ಟು ಬಿಡಿ. ಸುಮ್ಮನೆ ಕೊಟ್ಟು ಬಿಡಿ.

ಸಂಪಾದಕ ಟಿಪ್ಪಣಿ: ‘ಇನ್ನರ್ ಇಂಜಿನಿಯರಿಂಗ್ ಆನ್ ಲೈನ್’ ಅನ್ನು ಸವಾಲಿನ ಸಮಯಕ್ಕಾಗಿ 50% ಗೆ ಅರ್ಪಿಸುತ್ತಿದ್ದೇವೆ. ಇದು ಪ್ರಜ್ಞಾಪೂರ್ವಕ ಬದುಕನ್ನು ನಿರ್ಮಿಸಿಕೊಳ್ಳಲು ಸಹಾಯವಾಗಬಲ್ಲದು. ನೋಂದಾಯಿಸಲು: kannada.sadhguru.org/ieo ಗೆ ಭೇಟಿ ನೀಡಿ. COVID ಯೋಧರಿಗೆ ಉಚಿತ

A version of this article was originally published in Isha Forest Flower June 2017.